ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

Year Ender 2022 ರಲ್ಲಿ ಟೀಂ ಇಂಡಿಯಾವನ್ನು ಕಾಡಿದ ಪ್ರಮುಖ ಸಮಸ್ಯೆಗಳು, ವಿವಾದಗಳ ನಡುವೆ ತಂಡದ ಸಾಧನೆಗಳು

Year End 2022 : Know About The Team Indias Major Recods, Biggest Upsets In 2022

2022 ರ ವರ್ಷದಲ್ಲಿ ಟೀಂ ಇಂಡಿಯಾ ಸಾಕಷ್ಟು ಏಳು ಬೀಳುಗಳನ್ನು ಕಂಡಿದೆ. ಪ್ರಮುಖ ಆಟಗಾರರ ಗಾಯದ ಸಮಸ್ಯೆ, ಏಷ್ಯಾಕಪ್‌ನಲ್ಲಿ ಮುಖಭಂಗ, ಟಿ20 ವಿಶ್ವಕಪ್‌ನಲ್ಲಿ ಸೆಮಿಫೈನಲ್‌ನಲ್ಲಿ ಸೋಲು, ನ್ಯೂಜಿಲೆಂಡ್ ವಿರುದ್ಧ ಏಕದಿನ ಸರಣಿ ಸೋಲು, ಬಾಂಗ್ಲಾದೇಶದ ವಿರುದ್ಧ ಏಕದಿನ ಸರಣಿ ಸೋಲು ಈ ವರ್ಷದಲ್ಲಿ ಟೀಂ ಇಂಡಿಯಾ ಮರೆಯಬೇಕಾದ ಅಂಶಗಳು.

ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿಯ ಸೋಲಿನೊಂದಿಗೆ ಟೀಂ ಇಂಡಿಯಾ 2022ರ ವರ್ಷವನ್ನು ಆರಂಭಿಸಿತು. 2021ರ ಡಿಸೆಂಬರ್ ತಿಂಗಳಿನಲ್ಲಿ ಭಾರತ ತಂಡ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಂಡಿತ್ತು, ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ 1-2 ಅಂತರದಲ್ಲಿ ಸೋಲುವ ಮೂಲಕ ನಿರಾಸೆ ಅನುಭವಿಸಿತು. ಟೆಸ್ಟ್ ಸರಣಿ ನಂತರ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ ಮೂರೂ ಪಂದ್ಯಗಳನ್ನು ಸೋಲುವ ಮೂಲಕ ಮುಖಭಂಗ ಅನುಭವಿಸಿತು.

WTC Points Table: ಇಂಗ್ಲೆಂಡ್ ವಿರುದ್ಧ ಪಾಕಿಸ್ತಾನ ಸೋಲು; ಭಾರತಕ್ಕಿದೆ ಫೈನಲ್‌ಗೇರುವ ಚಾನ್ಸ್!WTC Points Table: ಇಂಗ್ಲೆಂಡ್ ವಿರುದ್ಧ ಪಾಕಿಸ್ತಾನ ಸೋಲು; ಭಾರತಕ್ಕಿದೆ ಫೈನಲ್‌ಗೇರುವ ಚಾನ್ಸ್!

ನಂತರ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಮತ್ತು ಟಿ20 ಸರಣಿಯಲ್ಲಿ ಅಮೋಘ ಜಯ ದಾಖಲಿಸುವ ಮೂಲಕ ಸತತ ಸೋಲುಗಳ ನಂತರ ಭಾರತ ತಂಡ ಗೆಲುವಿನ ಹಾದಿಗೆ ಮರಳಿತು. 2022ರಲ್ಲಿ ಟೀಂ ಇಂಡಿಯಾವನ್ನು ಕಾಡಿದ ಪ್ರಮುಖ ಸಮಸ್ಯೆಗಳು, ಅಚ್ಚರಿಯ ಫಲಿತಾಂಶಗಳು, ಸಾಧನೆಗಳು ಹೀಗಿವೆ.

ಬಿಟ್ಟೂ ಬಿಡದೆ ಕಾಡಿದ ಗಾಯದ ಸಮಸ್ಯೆ

ಬಿಟ್ಟೂ ಬಿಡದೆ ಕಾಡಿದ ಗಾಯದ ಸಮಸ್ಯೆ

2022ರಲ್ಲಿ ಭಾರತ ತಂಡವನ್ನು ಬಿಟ್ಟೂ ಬಿಡದೆ ಕಾಡಿದ್ದು ಗಾಯದ ಸಮಸ್ಯೆ, ಹಾರ್ದಿಕ್ ಪಾಂಡ್ಯ, ಜಸ್ಪ್ರೀತ್ ಬುಮ್ರಾ, ಹರ್ಷಲ್ ಪಟೇಲ್, ಮೊಹಮ್ಮದ್ ಶಮಿ, ರವೀಂದ್ರ ಜಡೇಜಾ, ರೋಹಿತ್ ಶರ್ಮಾ, ಕೆಎಲ್ ರಾಹುಲ್‌, ರಿಷಬ್ ಪಂತ್ ಸೇರಿದಂತೆ ಹಲವು ಆಟಗಾರರು ಗಾಯಗೊಂಡದ್ದು ತಂಡಕ್ಕೆ ಭಾರಿ ಹಿನ್ನಡೆಯಾಗಲು ಕಾರಣವಾಯಿತು.

ಜಸ್ಪ್ರೀತ್ ಬುಮ್ರಾ ಮತ್ತು ಹರ್ಷಲ್ ಪಟೇಲ್ ಗಾಯಗೊಂಡ ಪರಿಣಾಮ ಏಷ್ಯಾಕಪ್‌ನಲ್ಲಿ ಭಾರತ ತಂಡ ಕಳಪೆ ಪ್ರದರ್ಶನ ನೀಡಿತು. ಕಪ್ ಗೆಲ್ಲುವ ನೆಚ್ಚಿನ ತಂಡವಾಗಿದ್ದ ಭಾರತ ಫೈನಲ್ ಕೂಡಾ ತಲುಪದೆ ಟೂರ್ನಿಯಿಂದ ಹೊರಬೀಳಬೇಕಾಯಿತು. ಟಿ20 ವಿಶ್ವಕಪ್‌ಗೆ ಮುನ್ನ ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ಬುಮ್ರಾ ತಂಡಕ್ಕೆ ವಾಪಸಾದರು, ಎರಡು ಪಂದ್ಯಗಳ ಬಳಿಕ ಅವರು ಮತ್ತೆ ಗಾಯಗೊಂಡು ಟಿ20 ವಿಶ್ವಕಪ್‌ನಿಂದ ಹೊರಗುಳಿದರು.

ಏಷ್ಯಾಕಪ್‌ ಪಂದ್ಯಾವಳಿ ವೇಳೆ ಸಾಹಸ ಮಾಡಲು ಹೋಗಿ ರವೀಂದ್ರ ಜಡೇಜಾ ಗಾಯಗೊಂಡಿದ್ದು, ಟಿ20 ವಿಶ್ವಕಪ್‌ನಲ್ಲಿ ಭಾರತಕ್ಕೆ ಹಿನ್ನಡೆಯಾಗಲು ಕಾರಣವಾಯಿತು. ಪ್ರಮುಖ ಟೂರ್ನಿಗಳಲ್ಲೇ ಪ್ರಮುಖ ಆಟಗಾರರು ಗಾಯದ ಸಮಸ್ಯೆಯಿಂದ ಹೊರಗುಳಿದರು. ಬಾಂಗ್ಲಾದೇಶದ ವಿರುದ್ಧದ ಏಕದಿನ ಸರಣಿಯಲ್ಲಿ ನಾಯಕ ರೋಹಿತ್ ಶರ್ಮಾ ಗಾಯಗೊಂಡು ಹೊರಗುಳಿದಿದ್ದಾರೆ.

'ಬಾಬರ್ ಅಜಂಗಿಂತ ಹೆಚ್ಚು ನಿಮ್ಮನ್ನು ಪ್ರೀತಿಸುತ್ತೇವೆ'; ಕೊಹ್ಲಿಗೆ ಪಾಕ್ ಅಭಿಮಾನಿಗಳ ವಿಶೇಷ ಸಂದೇಶ

ದ್ವಿಪಕ್ಷೀಯ ಸರಣಿಯಲ್ಲಿ ಮಿಂಚಿದ ಟೀಂ ಇಂಡಿಯಾ

ದ್ವಿಪಕ್ಷೀಯ ಸರಣಿಯಲ್ಲಿ ಮಿಂಚಿದ ಟೀಂ ಇಂಡಿಯಾ


2022ರಲ್ಲಿ ಭಾರತ ತಂಡ ದ್ವಿಪಕ್ಷೀಯ ಸರಣಿಗಳಲ್ಲಿ ಉತ್ತಮ ಪ್ರದರ್ಶನ ನೀಡಿತು. ದಕ್ಷಿಣ ಆಫ್ರಿಕಾ ವಿರುದ್ಧ ಏಕದಿನ ಸರಣಿಯಲ್ಲಿ ಸೋತ ಬಳಿಕ, ಭಾರತ ಸತತವಾಗಿ ಐದು ಏಕದಿನ ಸರಣಿಯನ್ನು ಗೆದ್ದುಕೊಂಡಿತು. ವೆಸ್ಟ್ ಇಂಡೀಸ್ ವಿರುದ್ಧ 2 ಸರಣಿ, ಇಂಗ್ಲೆಂಡ್, ಜಿಂಬಾಬ್ವೆ, ದಕ್ಷಿಣ ಆಫ್ರಿಕಾ ವಿರುದ್ಧದ ದ್ವಿಪಕ್ಷೀಯ ಸರಣಿಯಲ್ಲಿ ಗೆಲುವು ಸಾಧಿಸಿತು. ನಂತರ ನ್ಯೂಜಿಲೆಂಡ್ ಮತ್ತು ಬಾಂಗ್ಲಾದೇಶದ ವಿರುದ್ಧದ ಏಕದಿನ ಸರಣಿಯಲ್ಲಿ ಸೋಲುವ ಮೂಲಕ ವರ್ಷಾಂತ್ಯದಲ್ಲಿ ನಿರಾಸೆ ಅನುಭವಿಸಿದೆ.

ಟಿ20 ದ್ವಿಪಕ್ಷೀಯ ಸರಣಿಯಲ್ಲಿ ಭಾರತ ಈ ಬಾರಿ ಅಮೋಘ ಸಾಧನೆ ಮಾಡಿದೆ, 2022ರಲ್ಲಿ ಭಾರತ ಒಂದೇ ಒಂದು ಟಿ20 ಸರಣಿಯನ್ನು ಸೋತಿಲ್ಲ. ಸತತವಾಗಿ 8 ಟಿ20 ಸರಣಿಯಲ್ಲಿ ಜಯ ಸಾಧಿಸಿದೆ.

ಟೆಸ್ಟ್ ಮಾದರಿಯಲ್ಲಿ ಟೀಂ ಇಂಡಿಯಾ 2022ರಲ್ಲಿ ಹೆಚ್ಚಿನ ಪಂದ್ಯಗಳಲ್ಲಿ ಆಡಲಿಲ್ಲ. ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯನ್ನು 1-2 ರಲ್ಲಿ ಸೋತ ನಂತರ, ಶ್ರೀಲಂಕಾ ವಿರುದ್ಧ 2 ಪಂದ್ಯಗಳ ಟೆಸ್ಟ್ ಸರಣಿಯನ್ನಿ ಕ್ಲೀನ್ ಸ್ವೀಪ್ ಮಾಡಿತು. ಇಂಗ್ಲೆಂಡ್ ವಿರುದ್ಧ 2021ರಲ್ಲಿ ನಡೆದ 5 ಪಂದ್ಯಗಳ ಟೆಸ್ಟ್ ಸರಣಿಯ ಕೊನೆಯ ಪಂದ್ಯ ಕೋವಿಡ್ ಕಾರಣದಿಂದ ರದ್ದುಪಡಿಸಲಾಗಿತ್ತು. 2022ರಲ್ಲಿ ಈ ಟೆಸ್ಟ್ ಪಂದ್ಯವನ್ನು ಆಡಿತು, ಈ ಪಂದ್ಯದಲ್ಲಿ ಸೋಲುವ ಮೂಲಕ ಸರಣಿಯನ್ನು 2-2 ರಲ್ಲಿ ಡ್ರಾ ಮಾಡಿಕೊಂಡಿತು. ಈಗ ಬಾಂಗ್ಲಾದೇಶದ ವಿರುದ್ಧ 2 ಪಂದ್ಯಗಳ ಸರಣಿಯನ್ನು ಆಡಲು ಸಕಲ ಸಿದ್ಧತೆ ನಡೆಸಿದೆ.

ಟೀಂ ಇಂಡಿಯಾವನ್ನು ಕಾಡಿದ ಪ್ರಮುಖ ವಿವಾದ

ಟೀಂ ಇಂಡಿಯಾವನ್ನು ಕಾಡಿದ ಪ್ರಮುಖ ವಿವಾದ

ಹಲವು ವಿವಾದಗಳು 2022 ರಲ್ಲಿ ಟೀಂ ಇಂಡಿಯಾವನ್ನು ಕಾಡಿದವು. ಸತತ ವೈಫಲ್ಯ ಅನುಭವಿಸಿದರು ಹಲವು ಆಟಗಾರರಿಗೆ ಸತತವಾಗಿ ಅವಕಾಶ ನೀಡಿದ್ದು ಸಾಕಷ್ಟು ವಿವಾದಕ್ಕೆ ಕಾರಣವಾಯಿತು. ರಿಷಬ್ ಪಂತ್‌ಗೆ ಸತತವಾಗಿ ಅವಕಾಶ ಸಿಕ್ಕರೆ, ಸಂಜು ಸ್ಯಾಮ್ಸನ್ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾದರು. ಪ್ರತಿಭಾವಂತ ಆಟಗಾರರನ್ನು ಕೂರಿಸಿ ಕೆಲವರಿಗೆ ಮಾತ್ರ ಅವಕಾಶ ನೀಡಲಾಯಿತು ಎಂದು ಹಲವರು ಆರೋಪಿಸಿದ್ದಾರೆ.

ಟಿ20 ವಿಶ್ವಕಪ್‌ನಲ್ಲಿ ಸೆಮಿಫೈನಲ್‌ನಲ್ಲಿ ಸೋತ ಬಳಿಕ ನ್ಯೂಜಿಲೆಂಡ್ ವಿರುದ್ಧದ ಸರಣಿಗೆ ಕೋಚ್ ದ್ರಾವಿಡ್ ಸೇರಿ ಪ್ರಮುಖ ಆಟಗಾರರಿಗೆ ವಿಶ್ರಾಂತಿ ನೀಡಿದ್ದಕ್ಕೆ ಟೀಕೆ ವ್ಯಕ್ತವಾಯಿತು.

ಪಾಕ್ ವಿರುದ್ಧ ಗೆದ್ದರು ವಿಶ್ವಕಪ್‌ನಲ್ಲಿ ನಿರಾಸೆ

ಪಾಕ್ ವಿರುದ್ಧ ಗೆದ್ದರು ವಿಶ್ವಕಪ್‌ನಲ್ಲಿ ನಿರಾಸೆ

ದ್ವಿಪಕ್ಷೀಯ ಸರಣಿಯಲ್ಲಿ ಭಾರತ ತಂಡ ಉತ್ತಮ ಪ್ರದರ್ಶನ ನೀಡಿದರೂ, ಏಷ್ಯಾಕಪ್‌ನಲ್ಲಿ ಫೈನಲ್ ತಲುಪುವಲ್ಲಿ ವಿಫಲವಾಯಿತು. ಇದು ಭಾರತಕ್ಕೆ ಈ ವರ್ಷದ ದೊಡ್ಡ ಆಘಾತ. ನಂತರ, ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನದ ವಿರುದ್ಧ ರೋಚಕವಾದ ಜಯ ಸಾಧಿಸಿತು. ಇದು ಟಿ20 ಇತಿಹಾಸದಲ್ಲಿ ಶ್ರೇಷ್ಟ ಪಂದ್ಯಗಳಲ್ಲಿ ಒಂದೆನಿಸಿಕೊಂಡಿದೆ.

ಗುಂಪು ಹಂತದ ಪಂದ್ಯಗಳಲ್ಲಿ ಉತ್ತಮವಾಗಿ ಆಡಿ ಟಿ20 ವಿಶ್ವಕಪ್‌ನಲ್ಲಿ ಸೆಮಿಫೈನಲ್ ತಲುಪಿದರೂ, ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಸೋಲನುಭವಿಸುವ ಮೂಲಕ ನಿರಾಸೆ ಮೂಡಿಸಿತು.

Story first published: Tuesday, December 13, 2022, 13:10 [IST]
Other articles published on Dec 13, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X