ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ನೀವು ಈ ಸರಣಿಯಲ್ಲಿ ಹೆಚ್ಚು ಆತ್ಮವಿಶ್ವಾಸಿ ಯುಜಿಯನ್ನ ನೋಡ್ತೀರಿ: ಚಾಹಲ್

You will see a more confident Yuzi in this series, says Yuzvendra Chahal
ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ವಿಭಿನ್ನ ಚಾಹಲ್ ರನ್ನು ನೋಡ್ತೀರ | Oneindia Kannada

ಕೊಲಂಬೋ: ಮತ್ತೆ ಭಾರತದ ಏಕದಿನ ತಂಡಕ್ಕೆ ಮರಳಿರುವ ಲೆಗ್‌ ಸ್ಪಿನ್ನರ್ ಯುಜುವೇಂದ್ರ ಚಾಹಲ್ ತಾನು ಬೌಲಿಂಗ್‌ನಲ್ಲಿ ವ್ಯತ್ಯಾಸ ಮತ್ತು ಬೌಲಿಂಗ್ ಕೋನದಲ್ಲಿ ಬದಲಾವಣೆ ತರಲು ಪ್ರಯತ್ನಿಸುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಈ ಪ್ರಯತ್ನ ತನ್ನಲ್ಲಿ ಆತ್ಮವಿಶ್ವಾಸ ಹೆಚ್ಚಿಸಿದೆ ಎಂದವರು ಹೇಳಿದ್ದಾರೆ.

ಭಾರತ vs ಇಂಗ್ಲೆಂಡ್: ಗಾಯಾಳು ಶುಬ್ಮನ್ ಗಿಲ್‌ಗೆ ಬದಲಿ ಆಟಗಾರನೇಕಿಲ್ಲ?ಭಾರತ vs ಇಂಗ್ಲೆಂಡ್: ಗಾಯಾಳು ಶುಬ್ಮನ್ ಗಿಲ್‌ಗೆ ಬದಲಿ ಆಟಗಾರನೇಕಿಲ್ಲ?

ಶ್ರೀಲಂಕಾ ಪ್ರವಾಸದಲ್ಲಿರುವ ಭಾರತೀಯ ತಂಡ ಜುಲೈ 13ರಿಂದ ಆತಿಥೇಯರ ವಿರುದ್ಧ ಮೂರು ಏಕದಿನ ಮತ್ತು ಮೂರು ಟಿ20ಐ ಪಂದ್ಯಗಳನ್ನಾಡಲಿದೆ. ಈ ತಂಡಕ್ಕೆ ಅನುಭವಿ ಬ್ಯಾಟ್ಸ್‌ಮನ್‌ ಶಿಖರ್ ಧವನ್ ನಾಯಕರಾಗಿರಲಿದ್ದಾರೆ. ಜುಲೈ 13ರಿಂದ ಜುಲೈ 25ರ ವರೆಗೆ ಈ ಪ್ರವಾಸ ಸರಣಿ ನಡೆಯಲಿದೆ.

'ನನ್ನಲ್ಲಿ ಕೆಲವು ವೇರಿಯೇಶನ್‌ಗಳಿವೆ. ನಾನು ಅತ್ತಲೇ ಹೆಚ್ಚು ಗಮನ ಹರಿಸುತ್ತಿದ್ದೇನೆ, ಬೇರೆ ರೀತಿಯ ಬೌಲಿಂಗ್ ಮಾಡುತ್ತಿಲ್ಲ. ಈ ಸರಣಿಯಲ್ಲಿ ನೀವು ಹೆಚ್ಚು ಆತ್ಮವಿಶ್ವಾಸಿ ಯುಜುವನ್ನು ನೋಡಲಿದ್ದೀರಿ," ಎಂದು ವರ್ಚುಯಲ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಚಾಹಲ್ ಹೇಳಿದ್ದಾರೆ.

ICC T20I rankings: ವಿರಾಟ್ ಕೊಹ್ಲಿ ಬೆನ್ನಲ್ಲೇ ಇದ್ದಾರೆ ಕೆಎಲ್ ರಾಹುಲ್!ICC T20I rankings: ವಿರಾಟ್ ಕೊಹ್ಲಿ ಬೆನ್ನಲ್ಲೇ ಇದ್ದಾರೆ ಕೆಎಲ್ ರಾಹುಲ್!

'ನಾನು ನನ್ನ ಆ್ಯಂಗಲ್‌ಗಳತ್ತ ಗಮನ ಹರಿಸುತ್ತಿದ್ದೇನೆ ಮತ್ತು ಸಾಮಾನ್ಯವಾಗೇ ಬೌಲಿಂಗ್ ಮಾಡಲು ಪ್ರಯತ್ನಸುತ್ತಿದ್ದೇನೆ,' ಎಂದು ಚಾಹಲ್ ತಿಳಿಸಿದ್ದಾರೆ. ಏಕದಿನ ಸರಣಿಯೊಂದಿಗೆ ಭಾರತ-ಶ್ರೀಲಂಕಾ ಸರಣಿ ಶುರುವಾಗಲಿದ್ದು ಭಾರತದ ಪ್ರದರ್ಶನ ಕುತೂಹಲ ಮೂಡಿಸಿದೆ.

Story first published: Thursday, July 8, 2021, 21:23 [IST]
Other articles published on Jul 8, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X