ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

Zim vs BD 2nd ODI: 1 ಪಂದ್ಯ ಬಾಕಿ ಇರುವಂತೆಯೇ ಏಕದಿನ ಸರಣಿಯನ್ನೂ ಗೆದ್ದು ಬೀಗಿದ ಜಿಂಬಾಬ್ವೆ

Zim vs Bangla

ಬಾಂಗ್ಲಾದೇಶ ವಿರುದ್ಧ ಟಿ20 ಸರಣಿಯನ್ನು 2-1 ಅಂತರದಲ್ಲಿ ಗೆದ್ದು ಬೀಗಿದ್ದ ಆತಿಥೇಯ ಜಿಂಬಾಬ್ವೆ ತಂಡವು, ಇದೀಗ ಒಂದು ಪಂದ್ಯ ಬಾಕಿ ಇರುವಂತೆಯೇ ಏಕದಿನ ಸರಣಿಯನ್ನೂ ತನ್ನದಾಗಿಸಿಕೊಂಡಿದೆ. ಸಿಕಂದರ್ ರಾಜಾ ಭರ್ಜರಿ ಶತಕದ ಜೊತೆಗೆ ರೆಗಿಸ್ ಚಕಬ್ವಾ ಶತಕದ ನೆರವಿನಿಂದ 291ರನ್ ಟಾರ್ಗೆಟ್ ಅನ್ನು ಯಶಸ್ವಿಯಾಗಿ ಬೆನ್ನತ್ತಿದೆ.

ಹರಾರೆ ಸ್ಪೋರ್ಟ್ಸ್‌ ಕ್ಲಬ್‌ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ಜಿಂಬಾಬ್ವೆ ಪ್ರವಾಸಿಗರನ್ನ 290ರನ್‌ಗಳಿಗೆ ಕಟ್ಟಿಹಾಕಿತು. ಬಾಂಗ್ಲಾದೇಶ ಪರ ನಾಯಕ ತಮೀಮ್ ಇಕ್ಬಾಲ್ 50, ಅನಮುಲ್ 20, ಶಾಂಟೊ 38, ಮುಷ್ಫೀಕರ್ ರಹೀಮ್ 25, ಮಹಮುದುಲ್ಲ ಅಜೇಯ 80ರನ್‌ಗಳ ನೆರವಿನಿಂದ ಜೊತೆಗೆ ಅಫಿಫ್ ಹೊಸೈನ್‌ 41 ರನ್‌ಗಳ ಕೊಡುಗೆಯಿಂದ 9 ವಿಕೆಟ್ ನಷ್ಟಕ್ಕೆ 290 ರನ್ ಕಲೆಹಾಕಿತು.

ಆತ 23ನೇ ವಯಸ್ಸಿಗೆ ವಿಶ್ವದ ಬೆಸ್ಟ್ ಡೆತ್ ಓವರ್‌ ಬೌಲರ್‌ಗಳಲ್ಲಿ ಒಬ್ಬಾತ: ವೆಂಕಟೇಶ್‌ ಪ್ರಸಾದ್ಆತ 23ನೇ ವಯಸ್ಸಿಗೆ ವಿಶ್ವದ ಬೆಸ್ಟ್ ಡೆತ್ ಓವರ್‌ ಬೌಲರ್‌ಗಳಲ್ಲಿ ಒಬ್ಬಾತ: ವೆಂಕಟೇಶ್‌ ಪ್ರಸಾದ್

ಇದಕ್ಕುತ್ತರವಾಗಿ ಬ್ಯಾಟಿಂಗ್ ಮಾಡಿದ ಜಿಂಬಾಬ್ವೆ ಮೊದಲ ಓವರ್‌ನಲ್ಲೇ ವಿಕೆಟ್ ಕಳೆದುಕೊಂಡಿತು 50 ರನ್‌ಗಳಿಸುವಷ್ಟರಲ್ಲಿ ಅದಾಗಲೇ ನಾಲ್ಕು ಪ್ರಮುಖ ವಿಕೆಟ್ ಕಳೆದುಕೊಂಡಿತು ಸೋಲಿನ ಭೀತಿಗೆ ಒಳಗಾಗಿತ್ತು.

ಆದ್ರೆ ಐದನೇ ವಿಕೆಟ್‌ಗೆ ಅಮೋಘ ದ್ವಿಶತಕದ ಜೊತೆಯಾಟವಾಡಿದ ಸಿಕಂದರ್ ರಾಜಾ ಮತ್ತು ರೆಗಿಸ್ ಚಕಬ್ವಾ ದಾಖಲೆಯ ಜೊತೆಯಾಟದ ಜೊತೆಗೆ ವೈಯಕ್ತಿಕ ಶತಕ ದಾಖಲಿಸಿ ತಂಡವನ್ನು ಗೆಲುವಿನ ದಡ ತಲುಪಿಸಿದರು.

Sikandar raza

ಚಕಬ್ವಾ 75 ಎಸೆತಗಳಲ್ಲಿ 102 ರನ್ ಸಿಡಿಸಿ ಅಬ್ಬರಿಸಿದ್ರು, ಈತನ ಇನ್ನಿಂಗ್ಸ್‌ನಲ್ಲಿ 10 ಬೌಂಡರಿ ಮತ್ತು 2 ಸಿಕ್ಸರ್ ಒಳಗೊಂಡಿತ್ತು. ಮತ್ತೊಂದೆಡೆ ಕೊನೆಯವರೆಗೂ ಅಜೇಯರಾಗಿ ಉಳಿದು ತಂಡವನ್ನು ಗೆಲುವಿನ ದಡ ತಲುಪಿಸಿದ ಸಿಕಂದರ್ ರಾಜಾ 127 ಎಸೆತಗಳಲ್ಲಿ ಅಜೇಯ 117 ರನ್ ಕಲೆಹಾಕಿದರು. ಇವರ ಇನ್ನಿಂಗ್ಸ್‌ನಲ್ಲಿ 8 ಬೌಂಡರಿ ಮತ್ತು 4 ಅಮೋಘ ಸಿಕ್ಸರ್‌ಗಳು ಒಳಗೊಂಡಿದ್ದವು.

ಸಿಕಂದರ್‌ಗೆ ಉತ್ತಮ ಸಾಥ್ ಕೊಟ್ಟ ಟೋನಿ ಮುನ್ಯೋಂಗ 16 ಎಸೆತಗಳಲ್ಲಿ 2 ಬೌಂಡರಿ ಮತ್ತು 2 ಸಿಕ್ಸರ್ ಸಹಿತ ಅಜೇಯ 30 ರನ್ ಕಲೆಹಾಕಿದರು. ಈ ಮೂಲಕ ಜಿಂಬಾಬ್ವೆ 47.3 ಓವರ್‌ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ ಗೆಲುವಿನ ದಡ ತಲುಪಿತು. ಜೊತೆಗೆ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 2-0 ಅಂತರದಲ್ಲಿ ಗೆಲುವು ಸಾಧಿಸಿದೆ.

ಅದಾಗಲೇ ಟಿ20 ಸರಣಿ ಸೋತಿದ್ದ ಪ್ರವಾಸಿ ಬಾಂಗ್ಲಾದೇಶ ಏಕದಿನ ಸರಣಿಯಲ್ಲಿ ಸತತ ಸೋಲಿನಿಂದ ಕಂಗೆಟ್ಟಿದ್ದು, ಬುಧವಾರ ನಡೆಯಲಿರುವ ಅಂತಿಮ ಏಕದಿನ ಪಂದ್ಯದಲ್ಲಿ ಗೆದ್ದು ಮರ್ಯಾದೆ ಉಳಿಸಿಕೊಳ್ಳುವ ಸವಾಲಿದೆ. ಜಿಂಬಾಬ್ವೆ ಗೆಲುವಿನಲ್ಲಿ ಪ್ರಮುಖ ಕಾರಣಕರ್ತ ಪಾಕ್ ಮೂಲದ ಜಿಂಬಾಬ್ವೆ ಬ್ಯಾಟರ್ ಸಿಕಂದರ್ ರಾಜಾಗೆ ಪಂದ್ಯ ಪುರುಷೋತ್ತಮ ಪ್ರಶಸ್ತಿ ಲಭಿಸಿದೆ.
ಏಕದಿನ ಕ್ರಿಕೆಟ್‌ನಲ್ಲಿ ಚೊಚ್ಚಲ ಶತಕದೊಂದಿಗೆ ತಂಡದ ಗೆಲುವಿನಲ್ಲಿ ಸಿಕಂದರ್ ಮಹತ್ವದ ಪಾತ್ರವಹಿಸಿದ್ದಾರೆ.

ಬಾಂಗ್ಲಾದೇಶ ಪ್ಲೇಯಿಂಗ್ ಇಲೆವೆನ್
ತಮೀಮ್ ಇಕ್ಬಾಲ್ (ನಾಯಕ), ಅನಾಮುಲ್ ಹಕ್, ನಜ್ಮುಲ್ ಹೊಸೈನ್ ಶಾಂಟೊ, ಮುಶ್ಫಿಕರ್ ರಹೀಮ್ (ವಿಕೆಟ್ ಕೀಪರ್), ಮಹಮ್ಮದುಲ್ಲಾ, ಅಫೀಫ್ ಹೊಸೈನ್, ಮೆಹಿದಿ ಹಸನ್ ಮಿರಾಜ್, ತೈಜುಲ್ ಇಸ್ಲಾಂ, ತಸ್ಕಿನ್ ಅಹ್ಮದ್, ಹಸನ್ ಮಹಮೂದ್, ಶೋರಿಫುಲ್ ಇಸ್ಲಾಂ

ಬೆಂಚ್: ಮೊಹಮ್ಮದ್ ನಯಿಮ್, ನಸುಮ್ ಅಹ್ಮದ್, ಮೊಸದ್ದೆಕ್ ಹೊಸೈನ್

ಜಿಂಬಾಬ್ವೆ ಪ್ಲೇಯಿಂಗ್ ಇಲೆವೆನ್
ತಕುಡ್ಜ್ವಾನಾಶೆ ಕೈಟಾನೊ, ತಡಿವಾನಾಶೆ ಮರುಮಣಿ, ಇನೊಸೆಂಟ್ ಕೈಯಾ, ವೆಸ್ಲಿ ಮಾಧೆವೆರೆ, ಸಿಕಂದರ್ ರಜಾ, ರೆಗಿಸ್ ಚಕಬ್ವಾ (ಸಿ & ಡಬ್ಲ್ಯೂಕೆ), ಟೋನಿ ಮುನ್ಯೊಂಗಾ, ಲ್ಯೂಕ್ ಜೊಂಗ್ವೆ, ಬ್ರಾಡ್ ಇವಾನ್ಸ್, ವಿಕ್ಟರ್ ನ್ಯೌಚಿ, ತನಕಾ ಚಿವಂಗಾ

ಕೆ‌. ಎಲ್ ರಾಹುಲ್ ಗೆ ಅದೃಷ್ಟ ಕೈ ಹಿಡಿಯುತ್ತಾ..? | Oneindia Kannada

ಬೆಂಚ್: ತಾರಿಸೈ ಮುಸಕಂಡ, ಮಿಲ್ಟನ್ ಶುಂಬಾ, ರಿಯಾನ್ ಬರ್ಲ್, ರಿಚರ್ಡ್ ನಾಗರವಾ, ವೆಲ್ಲಿಂಗ್ಟನ್ ಮಸಕಡ್ಜಾ

Story first published: Sunday, August 7, 2022, 23:25 [IST]
Other articles published on Aug 7, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X