ಫುಟ್‌ಬಾಲ್: ಸುನಿಲ್ ಚೆಟ್ರಿ ಕಾಲ್ಚಳಕಕ್ಕೆ ಮಣಿದ ಮುಂಬೈ ಸಿಟಿ

Posted By:
Bengaluru Football club won against Mumbai city

ಮುಂಬೈ, ಜನವರಿ 19: ಇಂಡಿಯನ್ ಸೂಪರ್ ಲೀಗ್ ಫುಟ್‌ಬಾಲ್ ಟೂರ್ನಿಯಲ್ಲಿ ಬೆಂಗಳೂರು ಫುಟ್‌ಬಾಲ್ ಕ್ಲಬ್ (ಬಿಎಫ್‌ಸಿ) ಪ್ರಬಲ ಎದುರಾಳಿ ಮುಂಬೈ ಸಿಟಿ ವಿರುದ್ಧ ಭರ್ಜರಿ ಜಯ ಗಳಿಸಿತು. ನಾಯಕ ಚೆಟ್ರಿ ಅವರ ಕಾಲ್ಚಳಕದ ಮುಂದೆ ಮುಂಬೈ ಸಿಟಿ ತಂಡದ ಆಟ ನಡೆಯಲಿಲ್ಲ.

ಗುರುವಾರ ರಾತ್ರಿ ಪ್ರಬಲ ಮುಂಬೈ ತಂಡವನ್ನು ಎದುರಿಸಿದ ಬೆಂಗಳೂರು ಫುಟ್‌ಬಾಲ್ ಕ್ಲಬ್ ತಂಡವು 3-1 ಅಂತರದಲ್ಲಿ ಜಯಗಳಿ, ಟೂರ್ನಿಯಲ್ಲಿ ತನ್ನ ಪ್ರಥಮ ಸ್ಥಾನವನ್ನು ಇನ್ನಷ್ಟು ಗಟ್ಟಿ ಪಡಿಸಿಕೊಂಡಿತು.
ಮುಂಬೈನ ಫುಟ್‌ಬಾಲ್ ಅರೆನಾ ಅಂಗಳದಲ್ಲಿ ಮೋಡಿ ಮಾಡಿದ ಬಿಎಫ್‌ಸಿ ತಂಡದ ನಾಯಕ ಸುನಿಲ್ ಚೆಟ್ರಿ ಅವರು ತಮ್ಮ ಅದ್ಭುತ ಆಟದ ಮೂಲಕ ಎದುರಾಳಿ ತಂಡದ ಪ್ರೇಕ್ಷಕರ ಮನಸ್ಸನ್ನೂ ಗೆದ್ದರು, ಕಠಿಣ ಪೈಪೋಟಿ ಮೂಡಿಬಂದ ಪಂದ್ಯದಲ್ಲಿ ಎರಡು ಆಕರ್ಷಕ ಗೋಲು ದಾಖಲಿಸಿದ ಚೆಟ್ರಿ ಬೆಂಗಳೂರಿಗೆ ಗೆಲುವಿನ ಕದ ತೆರೆದರು.

ಸಂತೋಷ್ ಫುಟ್‌ಬಾಲ್ ಟ್ರೋಫಿ ರಾಜ್ಯಕ್ಕೆ ಭರ್ಜರಿ ಗೆಲುವು

ತವರಿನ ಪ್ರೇಕ್ಷಕರ ಬಲದೊಂದಿಗೆ ಅಂಗಳಕ್ಕಿಳಿದ ಮುಂಬೈ ತಂಡ ಆರಂಭದಿಂದಲೇ ಪ್ರಬಲ ಪೈಪೋಟಿ ನೀಡಿತು, ಆಟದ 42ನೇ ನಿಮಿಷದ ವರೆಗೆ ಇತ್ತಂಡಗಳೂ ಒಂದೂ ಗೋಲು ಗಳಿಸಿರಲಿಲ್ಲ. ಆದರೆ ಬಿಎಫ್‌ಸಿ ತಂಡದ ಸಮತೋಲನ ಭರಿತ ಆಟದ ಮುಂದೆ ಮುಂಬೈ ಮಣಿಯಲೇ ಬೇಕಾಯಿತು.

43ನೇ ನಿಮಿಷದಲ್ಲಿ ಬಿಎಫ್‌ಸಿಗೆ ಪೆನಾಲ್ಟಿ ಕಾರ್ನರ್ ದೊರಕಿತು, ಆ ಅವಕಾಶವನ್ನು ಸುನಿಲ್ ಚೆಟ್ರಿ ಅವರು ಗೋಲಾಗಿ ಬದಲಾಯಿಸಿದರು. ಮೊದಲ ಗೋಲು ದಾಖಲಿಸಿ ಉತ್ಸಾಹ ಇಮ್ಮಡಿಸಿಕೊಂಡ ಬಿಎಫ್‌ಸಿ ತಂಡ 52 ನೇ ನಿಮಿಷದಲ್ಲಿ ಮತ್ತೊಂದು ಗೋಲು ಗಳಿಸಿರು. ಚೆಟ್ರಿ ಕಾಲ್ಚಳಕದಿಂದ ಬಂದ ಈ ಗೋಲು ಅಂಗಳದಲ್ಲಿ ಹೊನಲು ಹರಿಸಿದರು.

ಆಟದ ಅವಧಿ ಮುಗಿಯುತ್ತಾ ಬಂದಂತೆ ಮುಂಬೈ ಆಟಗಾರರಿಗೆ ಗೆಲುವು ದೂರವಾಗುತ್ತಿದುದು ಅನುಭವಕ್ಕೆ ಬರುತ್ತಾ ಮೊದಲಿನ ಉತ್ಸಾಹ ಕಾಣೆಯಾದವರಂತೆ ಆಡಿದರು, 63ನೇ ನಿಮಿಷದಲ್ಲಿ ಬಿಎಫ್‌ಸಿಯ ವೆನಿಜುವೆಲಾದ ಆಟಗಾರ ಮಿಕು ಅಮೋಘ ಗೋಲು ಗಳಿಸುವ ಮೂಲಕ ಬೆಂಗಳೂರು ತಂಡಕ್ಕೆ 3-0 ಮುನ್ನಡೆ ದೊರಕಿಸಿದರು. ಅಲ್ಲಿಗೆ ಮುಂಬೈ ತಂಡ ಗೆಲುವಿನ ಆಸೆಯನ್ನು ಸಂಪೂರ್ಣ ಕೈಚೆಲ್ಲಿತು.

ಆಟದ ಕೊನೆಗೆ ಒಂದು ಗೋಲು ಗಳಿಸಿ ಸಮಾಧಾನ ಮಾಡಿಕೊಂಡ ಮುಂಬೈ ತಂಡ 3-1ರಲ್ಲಿ ಪಂದ್ಯವನ್ನು ಸೋತಿತು. ಮುಂಬೈ ಪರ ಲಿಯೊ ಕೋಸ್ಟಾ 76ನೇ ನಿಮಿಷದಲ್ಲಿ ಗೋಲು ಗಳಿಸಿದರು.
ಆಡಿದ 11 ಪಂದ್ಯಗಳಲ್ಲಿ 7 ಪಂದ್ಯಗಳನ್ನು ಗೆದ್ದು 21 ಅಂಕ ಗಳಿಸಿರುವ ಬೆಂಗಳೂರು ತಂಡ ಟೂರ್ನಿಯಲ್ಲಿ ಮೊದಲ ಸ್ಥಾನ ಕಾಯ್ದುಕೊಂಡಿದೆ, 11 ಪಂದ್ಯದಲ್ಲಿ 4ನ್ನು ಮಾತ್ರ ಗೆದ್ದಿರುವ ಮುಂಬೈ 5 ನೇ ಸ್ಥಾನದಲ್ಲಿದೆ.

Story first published: Friday, January 19, 2018, 13:37 [IST]
Other articles published on Jan 19, 2018
+ ಇನ್ನಷ್ಟು
POLLS

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ