ಅಪರೂಪದ ವಿಶ್ವದಾಖಲೆ ನಿರ್ಮಿಸಿದ ಕ್ರಿಸ್ಚಿಯಾನೊ ರೊನಾಲ್ಡೋ

ಸ್ಟಾಕ್ಹೋಮ್: ಪೋರ್ಚುಗಲ್ ಸ್ಟಾರ್ ಫುಟ್ಬಾಲರ್ ಕ್ರಿಸ್ಚಿಯಾನೊ ರೊನಾಲ್ಡೋ ಅಪರೂಪದ ವಿಶ್ವದಾಖಲೆ ನಿರ್ಮಿಸಿದ್ದಾರೆ. ಅಂತಾರಾಷ್ಟ್ರೀಯ ಫುಟ್ಬಾಲ್‌ನಲ್ಲಿ 100+ ಗೋಲ್ ಬಾರಿಸಿದ ವಿಶ್ವದ ಎರಡನೇ ಆಟಗಾರನಾಗಿ ರೊನಾಲ್ಡೋ ಗುರುತಿಸಿಕೊಂಡಿದ್ದಾರೆ. ಯುಇಎಫ್‌ಎ ನೇಷನ್ಸ್ ಲೀಗ್‌ನಲ್ಲಿ ರೊನಾಲ್ಡೋ ಈ ಸಾಧನೆ ತೋರಿದ್ದಾರೆ.

ಐಪಿಎಲ್: ಎಲ್ಲಾ ಆವೃತ್ತಿಗಳಲ್ಲಿ ಆರೆಂಜ್‌ ಕ್ಯಾಪ್ ಗೆದ್ದವರ ಸಂಪೂರ್ಣ ಪಟ್ಟಿ

ಮಂಗಳವಾರ (ಸೆಪ್ಟೆಂಬರ್ 8) ನಡೆದ ಯುಇಎಫ್‌ಎ ನೇಷನ್ಸ್ ಲೀಗ್‌ನಲ್ಲಿ ಸ್ವೀಡನ್ ವಿರುದ್ಧ ಪೋರ್ಚುಗಲ್ 2-0ಯ ಗೆಲುವು ದಾಖಲಿಸಿತು. ಈ ಪಂದ್ಯದಲ್ಲಿ ಪೋರ್ಚುಗಲ್ ಪರ ಕ್ರಿಸ್ಚಿಯಾನೊ ರೊನಾಲ್ಡೋ (45, 72ನೇ ನಿಮಿಷದಲ್ಲಿ) ಎರಡು ಗೋಲುಗಳನ್ನು ಬಾರಿಸಿ ತಂಡದ ಗೆಲುವಿಗೆ ಕಾರಣರಾದರು.

ಐಪಿಎಲ್ 2020: ಎಲ್ಲಾ ಪಂದ್ಯಗಳ ಸಂಪೂರ್ಣ ವೇಳಾಪಟ್ಟಿ ಪ್ರಕಟ!

35ರ ಹರೆಯದ ಯುವೆಂಟಸ್ ಆಟಗಾರ ರೊನಾಲ್ಡೋ 100+ ಅಂತಾರಾಷ್ಟ್ರೀಯ ಗೋಲ್ ಬಾರಿಸಿದ ವಿಶ್ವದ 2ನೇ ಆಟಗಾರನಾಗಿ, 100+ ಗೋಲ್ ಬಾರಿಸಿದ ಯುರೋಪ್‌ನ ಮೊದಲ ಆಟಗಾರನಾಗಿ ಗುರುತಿಸಿಕೊಂಡಿದ್ದಾರೆ. 165 ಪಂದ್ಯಗಳಲ್ಲಿ ರೊನಾಲ್ಡೋ ಈ ಮೈಲಿಗಲ್ಲು ಸ್ಥಾಪಿಸಿದ್ದಾರೆ.

ಐಪಿಎಲ್ ವೀಕ್ಷಿಸಬೇಕಾದ್ರೆ ನೀವು ಡಿಸ್ನಿ+ಹಾಟ್‌ಸ್ಟಾರ್ ಸಬ್ಸ್ಕ್ರೈಬ್ ಮಾಡಿರಬೇಕು!

100+ ಅಂತಾರಾಷ್ಟ್ರೀಯ ಗೋಲ್ ಬಾರಿಸಿದ ಮೊದಲ ಆಟಗಾರನೆಂಬ ಹಿರಿಮೆ ಇರಾನ್‌ನ ಅಲಿ ಡೇಯಿ ಅವರಿಗೆ ಸಲ್ಲುತ್ತದೆ. ಅಲಿ ಒಟ್ಟು 109 ಅಂತಾರಾಷ್ಟ್ರೀಯ ಗೋಲುಗಳ ದಾಖಲೆ ಹೊಂದಿದ್ದಾರೆ. ರೊನಾಲ್ಡೋ ಖಾತೆಯಲ್ಲಿ ಈವರೆಗೆ ಒಟ್ಟು 101 ಗೋಲುಗಳು ಸೇರಿವೆ.

For Quick Alerts
ALLOW NOTIFICATIONS
For Daily Alerts
Story first published: Wednesday, September 9, 2020, 10:07 [IST]
Other articles published on Sep 9, 2020
+ ಇನ್ನಷ್ಟು
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X