ಮೆಸ್ಸಿ ಸಮಕ್ಕೆ ನಿಂತ ರೊನಾಲ್ಡೋ, ಟ್ವಿಟ್ಟರ್ ನಲ್ಲಿ ಪ್ರಶಂಸೆಯ ಮಳೆ

Posted By:

ಪ್ಯಾರೀಸ್, ಡಿಸೆಂಬರ್ 08: ರಿಯಲ್ ಮ್ಯಾಡ್ರಿಡ್‌ ಹಾಗೂ ಪೋರ್ಚುಗಲ್ ಪರ ಆಡುವ ಸ್ಟಾರ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಈ ಬಾರಿಯ ಬಾಲಾನ್ ಡಿ ಓರ್ ಪ್ರಶಸ್ತಿಯನ್ನು ಬಾಚಿಕೊಂಡಿದ್ದಾರೆ.

ಮತ್ತೊಮ್ಮೆ ಮೆಸ್ಸಿ ಹಿಂದಿಕ್ಕಿ ಬ್ಯಾಲನ್ ಡಿ'ಒರ್ ಪ್ರಶಸ್ತಿ ಗೆದ್ದ ರೊನಾಲ್ಡೊ

ಒಟ್ಟು ಐದು ಬಾರಿ ವರ್ಷದ ಫುಟ್ಬಾಲ್ ಆಟಗಾರ ಪ್ರಶಸ್ತಿ ಪಡೆಯುವ ಮೂಲಕ ವಿಶ್ವದಾಖಲೆ ಸಮಕ್ಕೆ ನಿಂತಿದ್ದಾರೆ. ರೊನಾಲ್ಡೊಗೂ ಮುನ್ನ. ಬಾರ್ಸಿಲೋನಾದ ತಾರೆ ಲಿಯೊನೆಲ್ ಮೆಸ್ಸಿ ಅವರು ಐದು ಬಾರಿ ಪ್ರಶಸ್ತಿ ಗೆದ್ದುಕೊಂಡಿದ್ದರು. ರೊನಾಲ್ಡೊಗೆ ಶುಭಹಾರೈಸಿ ಫುಟ್ಬಾಲ್ ದಿಗ್ಗಜರು, ಅಭಿಮಾನಿಗಳು ಟ್ವೀಟ್ ಮಾಡಿದ್ದಾರೆ.

ಐಫೆಲ್ ಟವರ್ ನಲ್ಲಿ ನಡೆದ ವರ್ಣರಂಜಿತ ಸಮಾರಂಭದಲ್ಲಿ ಫ್ರಾನ್ಸಿನ ಫುಟ್ಬಾಲ್ ನಿಯತಕಾಲಿಕ ನೀಡುವ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.

ಮೆಸ್ಸಿ ಹಾಗೂ ನೇಮಾರ್ ಅವರು ರೊನಾಲ್ಡೊ ನಂತರದ ಸ್ಥಾನದಲ್ಲಿದ್ದಾರೆ. ನೇಮಾರ್ ಈ ವರ್ಷ ಬಾರ್ಸಿಲೋನಾ ತಂಡದಿಂದ 222 ದಶಲಕ್ಷ ಯೂರೊ ಮೌಲ್ಯ ಪಡೆದು ಪ್ಯಾರೀಸ್ ಸೈಂಟ್ ಜರ್ಮೆನ್‌ಗೆ ಸೇರ್ಪಡೆಯಾಗಿದ್ದಾರೆ.

ರೊನಾಲ್ಡೊ ಪ್ರತಿಕ್ರಿಯೆ ಹೀಗಿದೆ

ರೊನಾಲ್ಡೊ ಪ್ರತಿಕ್ರಿಯೆ ಹೀಗಿದೆ

"ನನಗೆ ಅತೀವ ಸಂತಸವಾಗಿದೆ. ಇದು ನನ್ನ ವೃತ್ತಿಜೀವನದ ಮಹತ್ವದ ಕ್ಷಣ. ಬಹುಶಃ ಇದನ್ನು ಪ್ರತಿ ವರ್ಷ ಗೆಲ್ಲಬೇಕೆಂಬ ಅಭಿಲಾಷೆ ನನ್ನದು" ಎಂದು 32 ವರ್ಷದ ಪೋರ್ಚ್‌ಗಲ್ ಆಟಗಾರ ರೊನಾಲ್ಡೊ ಪ್ರತಿಕ್ರಿಯಿಸಿದ್ದಾರೆ.

ಪ್ರಶಸ್ತಿ ಪಡೆದ ವರ್ಷಗಳು

32 ವರ್ಷದ ಪೋರ್ಚ್‌ಗಲ್ ಆಟಗಾರ ಇದಕ್ಕೂ ಮುನ್ನ2016, 2013, 2014 ಮತ್ತು 2008ರಲ್ಲಿ ಕೂಡಾ ಪ್ರಶಸ್ತಿ ಪಡೆದಿದ್ದರು. ಕಳೆದ ವರ್ಷ ಪೋರ್ಚ್‌ಗಲ್ ತಂಡ ಯೂರೋಪಿಯನ್ ಕಪ್ ಪ್ರಶಸ್ತಿ ಪಡೆಯಲು ಮಹತ್ವದ ಪಾತ್ರ ವಹಿಸಿ, ಮತ್ತೆ ಶ್ರೇಷ್ಠ ಆಟಗಾರ ಪ್ರಶಸ್ತಿ ಪಡೆದಿದ್ದರು.

ಆಯ್ಕೆ ಹೇಗೆ?

ಬ್ಯಾಲನ್ ಡಿ'ಒರ್ ಪ್ರಶಸ್ತಿ ವಿಜೇತರನ್ನು ವಿಶ್ವದ 173 ಪತ್ರಕರ್ತರು ಆಯ್ಕೆ ಮಾಡುತ್ತಾರೆ. 1956ರಿಂದ ಈ ಪ್ರಶಸ್ತಿ ನೀಡಲಾಗುತ್ತಿದೆ.ಐಫೆಲ್ ಟವರ್ ನಲ್ಲಿ ನಡೆದ ವರ್ಣರಂಜಿತ ಸಮಾರಂಭದಲ್ಲಿ ಫ್ರಾನ್ಸಿನ ಫುಟ್ಬಾಲ್ ನಿಯತಕಾಲಿಕ ನೀಡುವ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.

ಬ್ರೆಜಿಲ್ಲಿನ ದಿಗ್ಗಜನ ಮಾತುಗಳು

ಬ್ರೆಜಿಲ್ಲಿನ ಫುಟ್ಬಾಲ್ ತಾರೆ ಕಾಕಾ ಹಾಸ್ಯಮಯವಾಗಿ ಪ್ರತಿಕ್ರಿಯಿಸಿ, ಮೆಸ್ಸಿ ಹಾಗೂ ರೊನಾಲ್ಡೋಗೂ ಮುಂಚಿತವಾಗಿ ನಾನು ಈ ಪ್ರಶಸ್ತಿ ಗೆದ್ದಿದ್ದೀನಿ ಎಂದಿದ್ದಾರೆ.

ವರ್ಷದ ಆಟಗಾರ

ರೊನಾಲ್ಡೊ ವರ್ಷದ ಆಟಗಾರ, ಪೋರ್ಚುಗಲ್ ವರ್ಷದ ತಂಡ ಎಂದು ಹೆಮ್ಮೆಯಿಂದ ಹೇಳಬಹುದು.

Story first published: Friday, December 8, 2017, 12:31 [IST]
Other articles published on Dec 8, 2017
+ ಇನ್ನಷ್ಟು
POLLS

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ