ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಚಿಕಿತ್ಸೆಗೆ ಸ್ಪಂದಿಸುತ್ತಿರುವ ಪೀಲೆ; ಆಸ್ಪತ್ರೆಯಿಂದಲೇ ಸಂದೇಶ ರವಾನಿಸಿದ ಬ್ರೆಜಿಲ್ ದಂತಕಥೆ

I Am in Strong: Brazil Football Legend Pele Posts Instagram Message From The Hospital

ಬ್ರೆಜಿಲ್‌ನ ಶ್ರೇಷ್ಠ ಮಾಜಿ ಫುಟ್ಬಾಲ್ ಆಟಗಾರ ಪೀಲೆ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಮತ್ತು ಉಸಿರಾಟದ ಸೋಂಕಿನ ಚಿಕಿತ್ಸೆಗೆ ಉತ್ತಮವಾಗಿ ಪ್ರತಿಕ್ರಿಯಿಸುತ್ತಿದ್ದಾರೆ ಎಂದು ಸಾವೊ ಪಾಲೊ ಆಲ್ಬರ್ಟ್ ಐನ್‌ಸ್ಟಿನ್ ಆಸ್ಪತ್ರೆ ಭಾನುವಾರದ ಹೊಸ ಅಪ್‌ಡೇಟ್ ನೀಡಿದೆ.

ಬ್ರೆಜಿಲಿಯನ್ ಫುಟ್ಬಾಲ್ ದಂತಕಥೆ ಪೀಲೆ ಅವರು ಕೀಮೋಥೆರಪಿಗೆ ಸ್ಪಂದಿಸುವುದನ್ನು ನಿಲ್ಲಿಸಿದರು ಮತ್ತು ಕ್ಯಾನ್ಸರ್ ವಿರುದ್ಧದ ಹೋರಾಟದ ಮಧ್ಯೆ ತೀವ್ರ ನಿಗಾ ಘಟಕಕ್ಕೆ ಸ್ಥಳಾಂತರಿಸಲಾಗಿದೆ ಎಂದು ಸಾವೊ ಪಾಲೊದಲ್ಲಿನ ವೃತ್ತಪತ್ರಿಕೆ ವರದಿ ಮಾಡಿತ್ತು.

ಫಿಫಾ ವಿಶ್ವಕಪ್ 2022: ಯುಎಸ್ಎ ಮಣಿಸಿ ಕ್ವಾರ್ಟರ್ ಫೈನಲ್‌ಗೆ ಅರ್ಹತೆ ಪಡೆದ ನೆದರ್ಲ್ಯಾಂಡ್ಸ್ಫಿಫಾ ವಿಶ್ವಕಪ್ 2022: ಯುಎಸ್ಎ ಮಣಿಸಿ ಕ್ವಾರ್ಟರ್ ಫೈನಲ್‌ಗೆ ಅರ್ಹತೆ ಪಡೆದ ನೆದರ್ಲ್ಯಾಂಡ್ಸ್

ಕೆಲವೇ ಕ್ಷಣಗಳ ನಂತರ, ಪೀಲೆ ಅವರು ತಾವು 'ಬಲಶಾಲಿ' ಎಂದು ತಿಳಿಸಲು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದರು ಮತ್ತು ತಾವು ಚಿಕಿತ್ಸೆಯನ್ನು 'ಬಹಳ ಭರವಸೆಯೊಂದಿಗೆ' ಅನುಸರಿಸುತ್ತಿರುವುದಾಗಿ ಹೇಳಿಕೊಂಡಿದ್ದಾರೆ.

I Am in Strong: Brazil Football Legend Pele Posts Instagram Message From The Hospital

ಕತಾರ್‌ನಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್‌ನಲ್ಲಿ ಬ್ರೆಜಿಲ್ ತಂಡಕ್ಕೆ ಬೆಂಬಲ ನೀಡುವಂತೆ ಲೆಜೆಂಡರಿ ಫುಟ್ಬಾಲ್ ಆಟಗಾರ ತಮ್ಮ ಅಭಿಮಾನಿಗಳನ್ನು ಒತ್ತಾಯಿಸಿದರು.

"ನನ್ನ ಸ್ನೇಹಿತರೇ, ನಾನು ಎಲ್ಲರನ್ನು ಶಾಂತವಾಗಿ ಮತ್ತು ಸಕಾರಾತ್ಮಕವಾಗಿ ಇರಿಸಲು ಬಯಸುತ್ತೇನೆ. ನಾನು ಬಲಶಾಲಿಯಾಗಿದ್ದೇನೆ, ಬಹಳಷ್ಟು ಭರವಸೆಯೊಂದಿಗೆ ಮತ್ತು ನಾನು ಎಂದಿನಂತೆ ನನ್ನ ಚಿಕಿತ್ಸೆಯನ್ನು ಅನುಸರಿಸುತ್ತಿದ್ದೇನೆ. ನನ್ನ ಆರೈಕೆ ಮಾಡುತ್ತಿರುವ ಸಂಪೂರ್ಣ ವೈದ್ಯಕೀಯ ಮತ್ತು ನರ್ಸಿಂಗ್ ತಂಡಕ್ಕೆ ಧನ್ಯವಾದ ಹೇಳಲು ಬಯಸುತ್ತೇನೆ," ಎಂದು ಇನ್‌ಸ್ಟಾಗ್ರಾಮ್‌ನಲ್ಲಿ ಪೀಲೆ ತಿಳಿಸಿದ್ದಾರೆ.

ಫಿಫಾ ವಿಶ್ವಕಪ್: ಮೆಸ್ಸಿಯ ಚೊಚ್ಚಲ ನಾಕೌಟ್ ಗೋಲು; ಆಸೀಸ್ ವಿರುದ್ಧ ಗೆದ್ದು 8ರ ಘಟ್ಟ ಪ್ರವೇಶಿಸಿದ ಅರ್ಜೆಂಟೀನಾಫಿಫಾ ವಿಶ್ವಕಪ್: ಮೆಸ್ಸಿಯ ಚೊಚ್ಚಲ ನಾಕೌಟ್ ಗೋಲು; ಆಸೀಸ್ ವಿರುದ್ಧ ಗೆದ್ದು 8ರ ಘಟ್ಟ ಪ್ರವೇಶಿಸಿದ ಅರ್ಜೆಂಟೀನಾ

"ನಾನು ದೇವರಲ್ಲಿ ಬಹಳಷ್ಟು ನಂಬಿಕೆ ಹೊಂದಿದ್ದೇನೆ ಮತ್ತು ಪ್ರಪಂಚದಾದ್ಯಂತ ನಾನು ನಿಮ್ಮಿಂದ ಸ್ವೀಕರಿಸುವ ಪ್ರೀತಿಯ ಪ್ರತಿಯೊಂದು ಸಂದೇಶವು ನನಗೆ ಶಕ್ತಿ ನೀಡುತ್ತದೆ ಮತ್ತು ವಿಶ್ವಕಪ್‌ನಲ್ಲಿ ಬ್ರೆಜಿಲ್ ತಂಡವನ್ನು ಬೆಂಬಲಿಸಿ," ಎಂದು ಬರೆದುಕೊಂಡಿದ್ದಾರೆ.

ಕೊನೆಯಲ್ಲಿ 'ಎಲ್ಲರಿಗೂ ತುಂಬಾ ಧನ್ಯವಾದಗಳು,' ಎಂದು ಬ್ರೆಜಿಲ್ ಮಾಜಿ ಫುಟ್ಬಾಲ್ ಆಟಗಾರ ಪೀಲೆ ಹೇಳಿದ್ದಾರೆ.

ಪೀಲೆ ಅವರು ಸೆಪ್ಟೆಂಬರ್ 2021ರಲ್ಲಿ ತಮ್ಮ ಕರುಳಿನಿಂದ ಗೆಡ್ಡೆಯನ್ನು ಶಸ್ತ್ರಚಿಕಿತ್ಸೆಯ ಮೂಲಕ ತೆಗೆಸಿಕೊಂಡಿದ್ದರು ಮತ್ತು ನಿಯಮಿತವಾಗಿ ಆಸ್ಪತ್ರೆಯ ಆರೈಕೆಯನ್ನು ಪಡೆಯುತ್ತಿದ್ದಾರೆ. ಪೀಲೆ ಇನ್ನೂ ಚಿಕಿತ್ಸೆ ಪಡೆಯುತ್ತಿದ್ದು, ಸ್ಥಿರ ಸ್ಥಿತಿಯಲ್ಲಿದ್ದಾರೆ ಎಂದು ವೈದ್ಯಕೀಯ ಸಿಬ್ಬಂದಿ ತಿಳಿಸಿದ್ದಾರೆ.

ಕ್ಯಾಮರೂನ್ ವಿರುದ್ಧ ಬ್ರೆಜಿಲ್ ತಂಡ 1-0 ಅಂತರದಲ್ಲಿ ಸೋಲಿಗೂ ಮುನ್ನ ಶುಕ್ರವಾರ ಲುಸೈಲ್ ಸ್ಟೇಡಿಯಂನಲ್ಲಿ ಬ್ರೆಜಿಲ್ ಅಭಿಮಾನಿಗಳು 'ಬೇಗ ಗುಣಮುಖರಾಗಿ' ಎಂಬ ಸಂದೇಶವನ್ನು ಪ್ರದರ್ಶಿಸಿದರು.

IND vs BAN: ಭಾರತ ಏಕದಿನ ತಂಡದಿಂದ ರಿಷಭ್ ಪಂತ್ ಕೊನೆಗೂ ಬಿಡುಗಡೆ; ಬದಲಿ ಆಟಗಾರನ ಹೆಸರಿಲ್ಲIND vs BAN: ಭಾರತ ಏಕದಿನ ತಂಡದಿಂದ ರಿಷಭ್ ಪಂತ್ ಕೊನೆಗೂ ಬಿಡುಗಡೆ; ಬದಲಿ ಆಟಗಾರನ ಹೆಸರಿಲ್ಲ

ಗಮನಾರ್ಹ ವಿಷಯವೆಂದರೆ, ಪೀಲೆ ಅವರು ಫಿಫಾ ವಿಶ್ವಕಪ್‌ನಲ್ಲಿ ಇತರ ಫುಟ್ಬಾಲ್ ಸ್ಟಾರ್‌ಗಳಿಂದ ಬೆಂಬಲದ ಸಂದೇಶ ಪಡೆದಿದ್ದು, ಸೆನೆಗಲ್ ವಿರುದ್ಧದ ಅಂತಿಮ 16ರ ಸುತ್ತಿನ ಮುನ್ನಾದಿನದಂದು ಇಂಗ್ಲೆಂಡ್ ನಾಯಕ ಹ್ಯಾರಿ ಕೇನ್ ಅವರು ಇಡೀ ಇಂಗ್ಲೆಂಡ್ ತಂಡದ ಪರವಾಗಿ ಖ್ಯಾತ ಮಾಜಿ ಫುಟ್ಬಾಲ್ ಆಟಗಾರನಿಗೆ ಶುಭ ಹಾರೈಸಿದರು.

Story first published: Sunday, December 4, 2022, 13:41 [IST]
Other articles published on Dec 4, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X