ಬೆಂಗಳೂರಿನ ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯಲ್ಲಿ ಫೀಲ್ಡಿಂಗ್ ‌ಅಭ್ಯಾಸ ನಡೆಸಿದ ಫುಟ್‌ಬಾಲ್‌ ಸ್ಟಾರ್ ಸುನಿಲ್ ಚೆಟ್ರಿ

ಬೆಂಗಳೂರಿನಲ್ಲಿರುವ ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯಲ್ಲಿ ಭಾರತ ಫುಟ್ಬಾಲ್ ತಂಡದ ನಾಯಕ ಸುನಿಲ್ ಚೆಟ್ರಿ ಫೀಲ್ಡಿಂಗ್ ಅಭ್ಯಾಸ ನಡೆಸಿರುವ ಚಿತ್ರಗಳು ಹಾಗೂ ವಿಡಿಯೋಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

ಭಾನುವಾರ ಸಂಜೆ ನ್ಯಾಷನಲ್ ಕ್ರಿಕೆಟ್ ಅಕಾಡೆಮಿಗೆ ಭೇಟಿ ನೀಡಿದ ಸುನಿಲ್ ಚೆಟ್ರಿ ಕೆಲ ಸಮಯ ಫೀಲ್ಡಿಂಗ್ ಅಭ್ಯಾಸ ನಡೆಸಿ ಬೆವರಿಳಿಸಿದರು. ಸುನಿಲ್ ಛೇತ್ರಿ ಫೀಲ್ಡಿಂಗ್ ಅಭ್ಯಾಸ ನಡೆಸುತ್ತಿರುವ ವಿಡಿಯೋವನ್ನು ಬಿಸಿಸಿಐ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ' ಸುನಿಲ್ ಚೆಟ್ರಿ ಸಂತೋಷಕರ ಫೀಲ್ಡಿಂಗ್ ಸ್ಪರ್ಧೆಯನ್ನು ನಡೆಸಿದರು ಮತ್ತು ಈಶಾನ್ಯ ಮತ್ತು ಪ್ಲೇಟ್ ತಂಡಗಳ ಹುಡುಗರೊಂದಿಗೆ ಫುಟ್‌ಬಾಲ್‌ನಲ್ಲಿ ತಮ್ಮದೇ ಆದ ಅದ್ಭುತ ಪ್ರಯಾಣದಿಂದ ಕೆಲವು ಕಲಿಕೆಗಳನ್ನು ಹಂಚಿಕೊಂಡರು' ಎಂದು ಬರೆದುಕೊಂಡಿದೆ.

ಪಾಕ್ ಮತ್ತು ನೆದರ್ಲೆಂಡ್ಸ್ ಪ್ರವಾಸಕ್ಕೆ ವೆಸ್ಟ್ ಇಂಡೀಸ್ ಏಕದಿನ ತಂಡ ಪ್ರಕಟ; ಫಾರ್ಮ್‌ನಲ್ಲಿರುವ ಆಟಗಾರನಿಗಿಲ್ಲ ಸ್ಥಾನ!ಪಾಕ್ ಮತ್ತು ನೆದರ್ಲೆಂಡ್ಸ್ ಪ್ರವಾಸಕ್ಕೆ ವೆಸ್ಟ್ ಇಂಡೀಸ್ ಏಕದಿನ ತಂಡ ಪ್ರಕಟ; ಫಾರ್ಮ್‌ನಲ್ಲಿರುವ ಆಟಗಾರನಿಗಿಲ್ಲ ಸ್ಥಾನ!

ಸದ್ಯ ನ್ಯಾಶನಲ್ ಕ್ರಿಕೆಟ್ ಅಕಾಡೆಮಿಯಲ್ಲಿ ಈಶಾನ್ಯ ರಾಜ್ಯಗಳು ಮತ್ತು ಪ್ಲೇಟ್ ಗ್ರೂಪ್‌ಗಳ ಕ್ಯಾಂಪ್ ಆಯೋಜನೆಯಾಗಿದ್ದು, ಫೀಲ್ಡಿಂಗ್ ಅಭ್ಯಾಸ ನಡೆಸಿದ ನಂತರ ವಿವಿಎಸ್ ಲಕ್ಷ್ಮಣ್ ಜತೆಗೂಡಿ ಈಶಾನ್ಯ ರಾಜ್ಯಗಳ ಆಟಗಾರರು ಮತ್ತು ಪ್ಲೇಟ್ ಟೀಮ್ಸ್ ಆಟಗಾರರ ಜತೆ ಸುನಿಲ್ ಚೆಟ್ರಿ ಕೆಲಕಾಲ ಮಾತುಕತೆಯಲ್ಲಿ ತೊಡಗಿಕೊಂಡಿದ್ದರು. ಈ ಚಿತ್ರಗಳನ್ನು ಸಹ ಬಿಸಿಸಿಐ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ.

ಇನ್ನು ಸುನಿಲ್ ಚೆಟ್ರಿ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿಗೆ ಆಪ್ತ ಸ್ನೇಹಿತನಾಗಿದ್ದು, ಈ ಹಿಂದೆ ಈ ಇಬ್ಬರು ಸಹ ಇನ್ಸ್ಟಾಗ್ರಾಮ್ ಲೈವ್ ಬಂದು ತಮ್ಮ ಬಾಲ್ಯದ ಕುರಿತಾದ ಹಲವಾರು ನೆನಪುಗಳನ್ನು ತಮ್ಮ ಅನುಯಾಯಿಗಳ ಜತೆ ಹಂಚಿಕೊಂಡಿದ್ದರು.

ಇನ್ನು ಕಳೆದ ತಿಂಗಳು ಈ ಕ್ಯಾಂಪ್ ಕುರಿತು ಮಾಹಿತಿ ನೀಡಿದ್ದ ಬಿಸಿಸಿಐ ಕಾರ್ಯಾಧ್ಯಕ್ಷ ಜಯ್ ಶಾ ಮಿಜೋರಾಂ, ಮಣಿಪುರ, ಮೇಘಾಲಯ, ಅರುಣಾಚಲ ಪ್ರದೇಶ ಮತ್ತು ಸಿಕ್ಕಿಂನ ಯುವ ಕ್ರಿಕೆಟಿಗರಿಗೆ ಅವಕಾಶಗಳ ಹೆಬ್ಬಾಗಿಲು ಎಂದಿದ್ದರು.

For Quick Alerts
ALLOW NOTIFICATIONS
For Daily Alerts
ಪೂರ್ವಭಾವಿಗಳು
VS
Story first published: Monday, May 9, 2022, 23:33 [IST]
Other articles published on May 9, 2022
+ ಇನ್ನಷ್ಟು
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X