ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್ 2018: ನಾರ್ತ್‌ಈಸ್ಟ್ ಯುನೈಟೆಡ್‌ಗೆ ಜೆಮ್ಷೆಡ್ಪುರ ಸವಾಲು

Isl 2018: NorthEast United FC vs Jamshedpur FC Preview

ಗುವಾಹಟಿ, ಅಕ್ಟೋಬರ್ 24: ಎಲ್ಕೋ ಷಟೋರಿ ಅವರಲ್ಲಿ ಪಳಗಿರುವ ನಾರ್ತ್‌ಈಸ್ಟ್ ಯುನೈಟೆಡ್ ತಂಡ ಇದುವರೆಗೂ ಉತ್ತಮ ಪ್ರದರ್ಶನ ತೋರುತ್ತಿದ್ದು, ಇಂಡಿಯನ್ ಸೂಪರ್ ಲೀಗ್‌ನ ಮತ್ತೊಂದು ಹೋರಾಟದಲ್ಲಿ ಚುರುಕಿನ ಜೆಮ್ಷೆಡ್ಪುರ ತಂಡದ ವಿರುದ್ಧ ಹೋರಾಟಕ್ಕೆ ಸಜ್ಜಾಗಿದೆ.

ಗುರುವಾರ (ಅ.25) ನಡೆಯುವ ಪಂದ್ಯದಲ್ಲಿ ಇಂಡಿಯನ್ ಸೂಪರ್ ಲೀಗ್‌ನ 18ನೇ ಪಂದ್ಯಕ್ಕೆ ಗುವಾಹಟಿಯ ಇಂದಿರಾ ಗಾಂಧಿ ಅಥ್ಲೆಟಿಕ್ಸ್ ಕ್ರೀಡಾಂಗಣ ಆತಿಥ್ಯ ನೀಡಲಿದೆ.

ಐಎಸ್‌ಎಲ್ 2018: ಮುಂಬೈ ಸಿಟಿ ವಿರುದ್ಧ ಗೋವಾ ಭರ್ಜರಿ ಜಯಭೇರಿಐಎಸ್‌ಎಲ್ 2018: ಮುಂಬೈ ಸಿಟಿ ವಿರುದ್ಧ ಗೋವಾ ಭರ್ಜರಿ ಜಯಭೇರಿ

ಷಟೋರಿ ಪಡೆ ಗೋವಾ ವಿರುದ್ಧ ನಡೆದ ಮೊದಲ ಪಂದ್ಯದಲ್ಲಿ 2-2 ಗೋಲುಗಳಿಂದ ಡ್ರಾ ಸಾಧಿಸಿತ್ತು, ನಂತರ ಎಟಿಕೆ ವಿರುದ್ಧದ ಪಂದ್ಯದಲ್ಲಿ ಏಕೈಕ ಗೋಲಿನಿಂದ ಜಯ ಗಳಿಸಿತ್ತು. ಮೂರನೇ ಪಂದ್ಯದಲ್ಲಿ ಇಂಡಿಯನ್ ಸೂಪರ್ ಲೀಗ್‌ನ ಎಲ್ಲ ತಂಡಗಳನ್ನು ಅಚ್ಚರಿಗೊಳಿಸುವಂತೆ ನಾರ್ತ್ ಈಸ್ಟ್ ಯುನೈಟೆಡ್ ಹಾಲಿ ಚಾಂಪಿಯನ್ ಬಲಿಷ್ಠ ಚೆನ್ನೈಯಿನ್ ಎಫ್ಸಿ ವಿರುದ್ಧ ೪-೩ ಗೋಲುಗಳಿಂದ ಜಯ ಗಳಿಸಿತು.

ಚೆನ್ನೈ ಮನೆಯಂಗಣದಲ್ಲೇ ದಕ್ಕಿದ ಈ ಜಯ ಪರ್ವತ ಪ್ರದೇಶದ ತಂಡದ ಮನೋಬಲವನ್ನು ಹೆಚ್ಚಿಸಿದೆ. ನೈಜೀರಿಯಾ ಮೂಲದ ಆಟಗಾರ ಬಾರ್ತಲೋಮ್ಯೋ ಒಗ್ಪಚೆ ಜೆಮ್ಷೆಡ್ಪುರ ತಂಡದ ಪಾಲಿಗೆ ಅಪಾಯಕಾರಿ ಆಟಗಾರ. ಚೆನ್ನೆ'ಯಿನ್ ಎ್‌ಸಿ ವಿರುದ್ಧದ ಪಂದ್ಯದಲ್ಲಿ ಒಗ್ಬಚೆ ಹ್ಯಾಟ್ರಿಕ್ ಗೋಲಿನೊಂದಿಗೆ ಈಗಾಗಲೇ ನಾಲ್ಕು ಗೋಲು ಗಳಿಸಿದ ಸಾಧನೆ ಮಾಡಿದ್ದಾರೆ.

ಉರುಗ್ವೆ ಮೂಲದ ಆಟಗಾರ ಫೆಡರಿಕೊ ಗಲೆಗೋ ಕೂಡ ಉತ್ತಮ ಆಕ್ರಮಣಕಾರಿ ಆಟಗಾರರಾಗಿದ್ದು, ಇದುವರೆಗೂ ಉತ್ತಮ ಪ್ರದರ್ಶನ ತೋರಿದ್ದಾರೆ. ರೌಲಿಂಗ್ ಬೋರ್ಗಸ್ ಇದುವರೆಗೂ ಎರಡು ಗೋಲುಗಳನ್ನು ಗಳಿಸಿದ್ದು, ಎರಡು ಕೂಡ ಪಂದ್ಯಕ್ಕೆ ಜಯ ತಂದುಕೊಟ್ಟ ಗೋಲುಗಳು.

'ಯಾವಾಗಲೂ ಸಂಘಟಿತ ಹಾಗೂ ಒಗ್ಗಟ್ಟಿನ ಆಟದಲ್ಲಿ ನನಗೆ ನಂಬಿಕೆ. ಇದುವರೆಗೂ ಈ ರೀತಿಯ ಆಟ ಉತ್ತಮ ರೀತಿಯಲ್ಲಿ ಉಪಯೋಗವಾಗಿದೆ. ಇದುವರೆಗೂ ನಾವು ನೀಡಿರುವ ಗೋಲುಗಳು ವೈಯಕ್ತಿಕ ಪ್ರಮಾದದಿಂದ ಆಗಿರುವುದಾಗಿದೆ. ನಾವು ಎಲ್ಲಿಯವರೆಗೂ ಎದುರಳಿಗಿಂತ ಒಂದು ಗೋಲು ಹೆಚ್ಚು ಗಳಿಸುತ್ತೇವೆಯೋ ಅಲ್ಲಿಯವರೆಗೂ ಈ ರೀತಿಯ ಪ್ರಮಾದಗಳನ್ನು ಪರಿಗಣಿಸಲಾಗುವುದು' ಎಂದು ಷೆಟೋರಿ ಹೇಳಿದ್ದಾರೆ.

ಪ್ರೊ ಕಬಡ್ಡಿ 2018: ಹರ್ಯಾಣ ಸ್ಟೀಲರ್ಸ್ ಸೋಲಿಸಿದ ಬೆಂಗಳೂರು ಬುಲ್ಸ್ಪ್ರೊ ಕಬಡ್ಡಿ 2018: ಹರ್ಯಾಣ ಸ್ಟೀಲರ್ಸ್ ಸೋಲಿಸಿದ ಬೆಂಗಳೂರು ಬುಲ್ಸ್

ಮುಂಬೈ ವಿರುದ್ಧದ ಮೊದಲ ಪಂದ್ಯದಲ್ಲಿ ಜೆಮ್ಷೆಡ್ಪುರ 2-0 ಅಂತರದಲ್ಲಿ ಜಯ ಗಳಿಸಿ ಉತ್ತಮ ಆರಂಭ ಕಂಡಿತ್ತು. ನಂತರ ಬೆಂಗಳೂರು ಹಾಗೂ ಎಟಿಕೆ ವಿರುದ್ಧದ ಪಂದ್ಯದಲ್ಲಿ ಡ್ರಾ ಗಳಿಸಿತ್ತು.
ಸ್ಪೇನ್ ಮೂಲದ ಕೋಚ್ ಸೆಸರ್ ಫೆರಾಂಡೋ ಅವರಲ್ಲಿ ಪಳಗಿರುವ ಜೆಮ್ಷೆಡ್ಪುರ ಸ್ಪೇನ್ ಫುಟ್ಬಾಲ್ ರೀತಿಯಲ್ಲಿ ಪ್ರದರ್ಶನ ನೀಡುತ್ತಿದ್ದು, ಯಶಸ್ಸಿನ ಹಾದಿಯಲ್ಲಿ ಸಾಗಿದೆ. ಮಾರಿಯೋ ಆರ್‌ಕ್ವಿಸ್ ಹಾಗೂ ಸರ್ಗಿಯೋ ಸಿಡೋಂಚ ತಂಡದ ಯಶಸ್ಸಿನಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಸಿಡೋಂಚ ಈಗಾಗಲೇ ಎರಡು ಗೋಲು ಗಳಿಸಿ ತಂಡಕ್ಕೆ ನೆರವಾಗಿದ್ದಾರೆ. ಭಾರತದ ವಿಂಗರ್ ಮೈಕಲ್ ಸುರೈರಾಜ್ ಹಾಗೂ ಜೆರ್ರಿ ಮಾಹ್ವಿಮ್ಮಿಂಗ್‌ತಾಂಗ್ ಕೂಡ ತಂಡದ ಪ್ರಮುಖ ಆಕರ್ಷಣೆ ಎನಿಸಿದ್ದಾರೆ.

'ಮೊದಲ ದಿನದಿಂದ ಹಿಡಿದು ಇಲ್ಲಿಯವರೆಗೂ ಭಾರತದ ಆಟಗಾರರು ಉತ್ತಮ ರೀತಿಯಲ್ಲಿ ಆಡುತ್ತಿದ್ದಾರೆ. ದಿನದಿಂದ ದಿನಕ್ಕೆ ಸುಧಾರಣೆ ಕಾಣುತ್ತಿದ್ದಾರೆ. ಜೆರ್ರಿ ಹಾಗೂ ಮೈಕಲ್ ಉತ್ತಮ ರೀತಿಯಲ್ಲಿ ಆಡಿದ್ದಾರೆ. ಆದರೂ ಆಟದಲ್ಲಿ ಸುಧಾರಣೆ ನಿರಂತರವಾಗಿಬೇಕು' ಎಂದು ಫೆರಾಂಡೋ ಹೇಳಿದ್ದಾರೆ.

'ಕೆಲವು ಬಾರಿ ಅವರು ಅಂಗಣದಲ್ಲಿ ಬಹಳವಾಗಿ ಓಡುತ್ತಾರೆ. ಫುಟ್ಬಾಲ್‌ನಲ್ಲಿ ಕೆಲವೊಮ್ಮೆ ನಿರಂತರ ಓಟ ಹಾಗೂ ಕೆಲವೊಮ್ಮೆ ನಿಧಾನವಾಗಿ ಓಡಬೇಕೆಂಬುದನ್ನು ತಿಳಿದುಕೊಳ್ಳಬೇಕು. ಯಾವಾಗ ಓಡಬೇಕು ಹಾಗೂ ಯಾವಾಗ ಓಡಬಾರದು ಎಂಬುದು ಗೊತ್ತಿರಬೇಕು' ಎಂದು ಅವರು ಹೇಳಿದರು.

ನಾಲ್ಕು ಬಾರಿ ವಿಶ್ವಕಪ್ ಆಡಿರುವ ಟಿಮ್ ಕಾಹಿಲ್ ಅವರು ತಮ್ಮ ನೈಜ ಪ್ರದರ್ಶನ ತೋರುವುದನ್ನು ಫೆರಾಂಡೋ ಅವರ ನಿರೀಕ್ಷೆಯಾಗಿದೆ. ಕೀಗನ್ ಪೆರೆರಾ ಅವರ ಸೇವೆಯಿಂದ ನಾರ್ತ್ ಈಸ್ಟ್ ತಂಡ ವೆಂಚಿತವಾಗಲಿದೆ. ಅದೇ ರೀತಿ ಸಿಮ್ರಾನ್‌ಜಿತ್ ಹಾಗೂ ಕಿವಿ ಜಿಮೋಮಿ ಅವರು ಕೂಡ ಗಾಯದ ಸಮಸ್ಯೆಯಿಂದ ಪಂದ್ಯದಿಂದ ಹೊರಗುಳಿಯಲಿದ್ದಾರೆ. ಆದರೆ ನಾರ್ತ್ ಈಸ್ಟ್ ತಂಡ ಟಾಟಾ ಪಡೆಯ ವಿರುದ್ಧ ಜಯ ಗಳಿಸಿ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರುವ ಗುರಿ ಹೊಂದಿದೆ.

Story first published: Wednesday, October 24, 2018, 23:50 [IST]
Other articles published on Oct 24, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X