ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್ 2019: ಮನೆಯಂಗಣದಲ್ಲಿ ಬೆಂಗಳೂರಿನ ಜಯದ ಆರಂಭ

By Isl Media
ISL 2019: Bengaluru drub Chennaiyin for first win

ಬೆಂಗಳೂರು, ನವೆಂಬರ್ 10: ಮಾಜಿ ಚಾಂಪಿಯನ್ನರ ವಿರುದ್ಧ ನೈಜ ಚಾಂಪಿಯನ್ನರಂತೆ ಆಟ ಪ್ರದರ್ಶಿಸಿದ ಬೆಂಗಳೂರು ಎಫ್‌ಸಿ ಇಂಡಿಯನ್ ಸೂಪರ್ ಲೀಗ್ ನಲ್ಲಿ ಜಯದ ಖಾತೆ ತೆರೆದಿದೆ. ನಾಯಕ ಸುನಿಲ್ ಛೆಟ್ರಿ, ಎರಿಕ್ ಪಾರ್ತುಲು ಹಾಗೂ ಸಿಮೊಬಿ ಹಾಕಿಪ್ ಗಳಿಸಿದ ಗೋಲುಗಳ ಮೂಲಕ ಚೆನ್ನೈಯಿನ್ ಎಫ್ ಸಿ ವಿರುದ್ಧ ಬೆಂಗಳೂರು 3-0 ಗೋಲುಗಳ ಅಂತರದಲ್ಲಿ ಜಯ ಗಳಿಸಿ ಯಶಸ್ಸಿನ ಖಾತೆ ತೆರೆಯಿತು.

ಅಫ್ಘಾನಿಸ್ತಾನ ಸೋಲಿಸಿ 5 ವರ್ಷಗಳ ಕೆಟ್ಟ ದಾಖಲೆ ಕೊನೆಗೊಳಿಸಿದ ವಿಂಡೀಸ್!ಅಫ್ಘಾನಿಸ್ತಾನ ಸೋಲಿಸಿ 5 ವರ್ಷಗಳ ಕೆಟ್ಟ ದಾಖಲೆ ಕೊನೆಗೊಳಿಸಿದ ವಿಂಡೀಸ್!

ಎರಿಕ್ ಪಾರ್ತಲು (14ನೇ ನಿಮಿಷ), ಸುನಿಲ್ ಛೆಟ್ರಿ (25ನೇ ನಿಮಿಷ) ಹಾಗೂ ಸಿಮೊಬಿ ಹಾಕಿಪ್ (84ನೇ ನಿಮಿಷ) ಗೋಲು ಗಳಿಸಿ ಜಯದ ರೂವಾರಿ ಎನಿಸಿದರು. ಪ್ರಥಮಾರ್ಧದಲ್ಲಿ ಬೆಂಗಳೂರು ೨-೦ ಅಂತರದಲ್ಲಿ ಮುನ್ನಡೆ ಸಾಧಿಸಿ ಜಯಕ್ಕೆ ಅಗತ್ಯ ಇರುವ ವೇದಿಕೆ ನಿರ್ಮಿಸಿಕೊಂಡಿತ್ತು.

ಬೆಂಗಳೂರಿಗೆ ಮುನ್ನಡೆ
ನಿರೀಕ್ಷೆಯಂತೆ ಬೆಂಗಳೂರು ಎಫ್ ಸಿ ಪ್ರವಾಸಿ ಚೆನ್ನೈಯಿನ್ ವಿರುದ್ಧ ಪ್ರಥಮಾರ್ಧದಲ್ಲಿ 2-0 ಗೋಲುಗಳ ಅಂತರದಲ್ಲಿ ಮೇಲುಗೈ ಸಾಧಿಸಿತು, ಎರಿಕ್ ಪಾರ್ಥಲು ಹಾಗೂ ಸುನಿಲ್ ಛೆಟ್ರಿ ತಂಡಕ್ಕೆ ಮುನ್ನಡೆ ಕಲ್ಪಿಸಿದರು. 14ನೇ ನಿಮಿಷದಲ್ಲಿ ಎರಿಕ್ ಪಾರ್ಥಲು ಗಳಿಸಿದ ಗೋಲಿನಿಂದ ಬೆಂಗಳೂರು ಮುನ್ನಡೆ ಕಂಡಿತು. ಪಾರ್ಥಲು ಹಿಂದಿನ ಪಂದ್ಯಗಳಲ್ಲಿ ಆಡಿರಲಿಲ್ಲ. ಆಡಿದ ಮೊದಲ ಪಂದ್ಯದಲ್ಲೇ ಗೋಲು ಗಳಿಸಿ ಶುಭಾರಂಭ ಕಂಡರು. ಬೆಂಗಳೂರಿಗೆ ಈ ಮುನ್ನಡೆ ಅಗತ್ಯ ಇದ್ದಿತ್ತು. ಆ ಅಗತ್ಯವನ್ನು ಪಾರ್ಥಲು ಪೂರೈಸಿದರು. ನಾಯಕ ಛೆಟ್ರಿ ತಮ್ಮ ನೈಜ ಆಟ ಪ್ರದರ್ಶಿಸಲಿಲ್ಲ ಎಂಬ ಕೊರಗು ತಂಡವನ್ನು ಕಾಡಿತ್ತು. ಮೊದಲ ಪಂದ್ಯದಲ್ಲಿ ಗೋಲು ಗಳಿಸಿವಲ್ಲಿ ವಿಫಲವಾಗಿದ್ದರು. ಆದರೆ ಮನೆಯಂಗಣದ ಕೋಟೆಯಲ್ಲಿ ಛೆಟ್ರಿಯನ್ನು ನಿಯಂತ್ರಿಸುವುದು ಕಷ್ಟ. 25ನೇ ನಿಮಿಷದಲ್ಲಿ ರಫಾಯಲ್ ಅಗಸ್ಟೊ ನೀಡಿದ ಪಾಸ್ ಮೂಲಕ ಛೆಟ್ರಿ ಗೋಲು ಗಳಿಸಿ ತಂಡಕ್ಕೆ 2-0 ಮುನ್ನಡೆ ಕಲ್ಪಿಸಿದರು.

ISL 2019: Bengaluru drub Chennaiyin for first win

ಬೆಂಗಳೂರು ಎಫ್ ಸಿ ಹಾಗೂ ಚೆನ್ನೈಯಿನ್ ಎಫ್ ಸಿ ತಂಡಗಳು ಇಂಡಿಯನ್ ಸೂಪರ್ ಲೀಗ್ ನಲ್ಲಿ ಮುಖಾಮುಖಿಯಾಗುತ್ತಿದ್ದರೆ ಅಲ್ಲಿ ಫುಟ್ಬಾಲ್ ನ ನಿಜವಾದ ಸಂಭ್ರಮ ಮನೆಮಾಡುತ್ತದೆ. ಎರಡೂ ತಂಡಗಳಿಗೆ ಇಲ್ಲಿ ಜಯದ ಅನಿವಾರ್ಯತೆ ಇದೆ. ಬೆಂಗಳೂರು ಆಡಿರುವ ಮೂರು ಪಂದ್ಯಗಳಲ್ಲಿ ಬರೇ ಡ್ರಾದ ರುಚಿ ಕಂಡಿದ್ದರೆ, ಚೆನ್ನೈ ಡ್ರಾದ ಜತೆಯಲ್ಲಿ ಸೋಲಿನ ಕಹಿ ಅನುಭವಿಸಿದೆ. ಬೆಂಗಳೂರು ಇದುವರೆಗೂ ಉತ್ತಮ ತಂಡಗಳ ವಿರುದ್ಧ ಆಡಿದೆ, ಆದರೆ ಹಾಲಿ ಚಾಂಪಿಯನ್ ರೀತಿಯಲ್ಲಿ ಅದು ತನ್ನ ಪ್ರದರ್ಶನ ತೋರಿಲ್ಲ. ನಾಯಕ ಸುನಿಲ್ ಛೆಟ್ರಿ ಹಾಗೂ ಮ್ಯಾನುಯೆಲ್ ಒನ್ಯೂ ಇನ್ನೂ ನೈಜ ಆಟ ಪ್ರದರ್ಶಿಸಿಲ್ಲ. ತಂಡಕ್ಕೆ ಎರಿಕ್ ಪಾರ್ಥಲು ಸೇರಿಕೊಂಡಿರುವುದು ಬ್ಯಾಕ್ ಲೈನ್ ವಿಭಾಗದ ಶಕ್ತಿಯನ್ನು ಹೆಚ್ಚಿಸಿದೆ.

ಮಿಂಚು ಹರಿಸಿದ ಚಹಾರ್, ಬಾಂಗ್ಲಾ ಟೈಗರ್ಸ್ ಬೇಟೆಯಾಡಿದ ಬ್ಲೂ ಬಾಯ್ಸ್!ಮಿಂಚು ಹರಿಸಿದ ಚಹಾರ್, ಬಾಂಗ್ಲಾ ಟೈಗರ್ಸ್ ಬೇಟೆಯಾಡಿದ ಬ್ಲೂ ಬಾಯ್ಸ್!

ಮುಂಬೈ ಸಿಟಿ ಎಫ್ ಸಿ ವಿರುದ್ಧ ಡ್ರಾ ಸಾಧಿಸಿದ ನಂತರ ಸತತ ಎರಡು ಪಂದ್ಯಗಳಲ್ಲಿ ಸೋಲನುಭವಿಸಿತ್ತು. ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಎಲಿ ಸಾಬಿಯ ಹಾಗೂ ಲೂಸಿಯಾನ್ ಗೋಯನ್ ತಂಡದ ಪ್ರಮುಖ ಶಕ್ತಿ, ಆದರೆ ಅವರು ಇನ್ನೂ ತಮ್ಮ ನೈಜ ಆಟ ಪ್ರದರ್ಶಿಸಿಲ್ಲ. ಚೆನ್ನೈ ಇನ್ನೂ ಗೋಲು ಗಳಿಸಬೇಕಾಗಿದ್ದು. ಇದುವರೆಗೂ ಇತ್ತಂಡಗಳು ಐದು ಬಾರಿ ಮುಖಾಮುಖಿಯಾಗಿದ್ದು, ಚೆನ್ನೈ ಒಂದು ಪಂದ್ಯದಲ್ಲಿ ಮೇಲುಗೈ ಸಾಧಿಸಿದೆ. ಹಿಂದಿನದೆಲ್ಲ ಇತಿಹಾಸ, ಇಲ್ಲಿ ಇತ್ತಂಡಗಳಿಗೂ ಜಯದ ಅಗತ್ಯಇದೆ.

Story first published: Sunday, November 10, 2019, 23:46 [IST]
Other articles published on Nov 10, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X