ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್ 2019: ಗುವಾಹಟಿಯಲ್ಲಿ ಅದೃಷ್ಟ ಪರೀಕ್ಷಿಸಲಿದೆ ಗೋವಾ ಎಫ್‌ಸಿ

By Isl Media
ISL 2019: FC Goa out to break Guwahati jinx

ಗುವಾಹಟಿ, ನವೆಂಬರ್ 1: 2019-20 ಹೀರೋ ಇಂಡಿಯನ್ ಸೂಪರ್ ಲೀಗ್ ನಲ್ಲಿ ಇದುವರೆಗೂ ಸೋಲು ಅರಿಯದ ನಾರ್ತ್ ಈಸ್ಟ್ ಯುನೈಟೆಡ್ ಹಾಗೂ ಗೋವಾ ತಂಡಗಳು ಶುಕ್ರವಾರ ಇಲ್ಲಿನ ಇಂದಿರಾ ಗಾಂಧಿ ಅಥ್ಲೆಟಿಕ್ ಕ್ರೀಡಾಂಗಡದಲ್ಲಿ ಮುಖಾ ಮುಖಿಯಾಗಲಿವೆ.

ರಾಬರ್ಟ್ ಜರ್ನಿ ಅವರ ಪಡೆ ಎರಡು ಪಂದ್ಯಗಳಲ್ಲಿ ನಾಲ್ಕು ಅಂಕ ಗಳಿಸುವ ಮೂಲಕ ಈ ಬಾರಿಯ ಇಂಡಿಯನ್ ಸೂಪರ್ ಲೀಗ್ ನಲ್ಲಿ ಉತ್ತಮ ಆರಂಭ ಕಂಡಿದೆ. ಹಾಲಿ ಚಾಂಪಿಯನ್ ಬೆಂಗಳೂರು ವಿರುದ್ಧ ಬೆಂಗಳೂರಿನಲ್ಲಿ ಅಂಕ ಗಳಿಸಿ ಆತ್ಮ ವಿಶ್ವಾಸ ಹೆಚ್ಚಿಸಿಕೊಂಡ ತಂಡ ಒಡಿಶಾ ವಿರುದ್ಧ ರೋಚಕ ಜಯ ಗಳಿಸಿತ್ತು.

ಟೆಸ್ಟ್ ಮ್ಯಾಚ್ ಸೆಂಟರ್‌ಗಳಾಗಲು ಬೆಸ್ಟ್ 5 ಸ್ಟೇಡಿಯಂಗಳು ಇವು!ಟೆಸ್ಟ್ ಮ್ಯಾಚ್ ಸೆಂಟರ್‌ಗಳಾಗಲು ಬೆಸ್ಟ್ 5 ಸ್ಟೇಡಿಯಂಗಳು ಇವು!

ಪಂದ್ಯದ ಪರಿಸ್ಥಿತಿಗೆ ತಕ್ಕಂತೆ ಹೊಂದಿಕೊಂಡು ಆಡುವುದು ನಾರ್ತ್ ಈಸ್ಟ್ ತಂಡ ರೂಡಿಸಿಕೊಂಡು ಬಂದಿದೆ. ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಆತಂಕಗೊಂಡಿದ್ದ ತಂಡ ಒಡಿಶಾ ವಿರುದ್ಧದ ಪಂದ್ಯದಲ್ಲಿ ನಿಯಂತ್ರಣ ಕಾಯ್ದುಕೊಂಡಿತು. ಒಡಿಶಾ ವಿರುದ್ಧದ ಪಂದ್ಯದಲ್ಲಿ ನಾರ್ತ್ ಈಸ್ಟ್ ಒಂದು ಹಂತದಲ್ಲಿ ಒತ್ತಡಕ್ಕೆ ಸಿಲುಕಿತ್ತು, ಅಂತಿಮ ಹಂತದಲ್ಲಿ ಗಳಿಸಿದ ಗೋಲು ತಂಡಕ್ಕೆ ಜಯ ತಂದುಕೊಟ್ಟಿತು. ಒಡಿಶಾದ ಕಾರ್ಲೋಸ್ ಡೆಲ್ಗಡೊ ರೆಡ್ ಕಾರ್ಡ್ ಪಡೆದು ಹೊರ ನಡೆಯುತ್ತಿದ್ದಂತೆ ನಾರ್ತ್ ಈಸ್ಟ್ ಗೋಲು ಗಳಿಸುವಲ್ಲಿ ಯಶಸ್ವಿಯಾಯಿತು.

ಐಎಸ್‌ಎಲ್: ಗೋವಾ vs ನಾರ್ತ್ ಈಸ್ಟ್ ಯುನೈಟೆಡ್, Live ಸ್ಕೋರ್‌ಕಾರ್ಡ್

1
2026437

ನಾರ್ತ್ ಈಸ್ಟ್ ತಂಡ ಗೋವಾದ ವಿರುದ್ಧ ಉತ್ತಮ ದಾಖಲೆಯನ್ನು ಹೊಂದಿಲ್ಲ. ಕಾಡೆತ್ತುಗಳೆಂದು ಖ್ಯಾತಿ ಪಡೆದಿರುವ ಗೋವಾ ವಿರುದ್ಧ ನಾರ್ತ್ ಈಸ್ಟ್ ಆಡಿರುವ ಹತ್ತು ಪಂದ್ಯಗಳಲ್ಲಿ ಗೆದ್ದಿರುವುದು ಕೇವಲ ಎರಡು. ಅದೇ ರೀತಿ ಗೋವಾ ತಂಡ 2017 ರಲ್ಲಿ ಸೆರ್ಗಿಯೋ ಲೊಬೆರಾ ಕೋಚ್ ಆದಾಗಿನಿಂದ ಗುವಾಹಟಿಯಲ್ಲಿ ಪಂದ್ಯ ಗೆದ್ದಿರಲಿಲ್ಲ.

ಅನುಷ್ಕಾ ಶರ್ಮಾ ಕೆಂಗಣ್ಣಿಗೆ ಬೆದರಿ ಯೂ ಟರ್ನ್ ಹೊಡೆದ ಇಂಜಿನಿಯರ್!ಅನುಷ್ಕಾ ಶರ್ಮಾ ಕೆಂಗಣ್ಣಿಗೆ ಬೆದರಿ ಯೂ ಟರ್ನ್ ಹೊಡೆದ ಇಂಜಿನಿಯರ್!

''ಈ ಅಂಕಿ ಅಂಶಗಳು ಇರುವುದೇ ಮುರಿಯುವುದಕ್ಕಾಗಿ, ಆ ಕೆಲಸವನ್ನು ನಾವು ಈ ವರ್ಷ ಮಾಡಿ ತೋರಿಸಲು ಯತ್ನಿಸುತ್ತೇವೆ. (ಗೋವಾ ವಿರುದ್ಧದ ಕಳಪೆ ಪ್ರದರ್ಶನದ ದಾಖಲೆ ಮುರಿಯಲು) ಪ್ರತಿಯೊಂದು ಪಂದ್ಯಕ್ಕೂ ಒಂದೊಂದು ಯೋಜನೆ ಇರುತ್ತದೆ. ಕೇವಲ ಗೋವಕ್ಕಾಗಿ ಮಾತ್ರವಲ್ಲ, ನಾವು ಇದಕ್ಕಿಂತಲೂ ಮೊದಲು ಉತ್ತಮ ತಂಡಗಳ ವಿರುದ್ಧ ಆಡಿದ್ದೇವೆ. ಅದಕ್ಕೊಂದು ಯೋಜನೆ ಇರುತ್ತದೆ. ನಾವು ಏಕಾಗ್ರತೆಯನ್ನು ಕಾಯ್ದುಕೊಂಡು ಉತ್ತಮ ಗುಣಮಟ್ಟದ ಆಟ ಆಡಬೇಕಾಗಿದೆ.'' ಎಂದು ಜರ್ಮಿ ಹೇಳಿದ್ದಾರೆ.

ISL 2019: FC Goa out to break Guwahati jinx

ಇನ್ನೂ ಸಂಪೂರ್ಣ ಫಿಟ್ ಆಗಿರದ ನಾರ್ತ್ ಈಸ್ಟ್ ನ ಸ್ಟ್ರೈಕರ್ ಅಸಮೊಹ್ ಗ್ಯಾನ್ ಈಗಾಗಲೇ ಎದುರಾಳಿ ತಂಡಕ್ಕೆ ತನ್ನ ಸಾಮರ್ಥ್ಯ ಏನೆಂಬುದನ್ನು ತೋರಿಸಿದ್ದಾರೆ. ರೀಡಿಮ್ ತ್ಲ್ಯಾಂಗ್ ಮತ್ತು ಡಿಫೆಂಡರ್ ಕಾಯ್ ಹೀರಿಂಗ್ಸ್ ಇದುವರೆಗೂ ಉತ್ತಮ ಪ್ರದರ್ಶನ ತೋರಿದ್ದಾರೆ. ಉತ್ತಮ ದಾಳಿ ಮಾಡಬಲ್ಲ ಪಡೆಯನ್ನು ಹೊಂದಿರುವ ಗೋವಾದ ವಿರುದ್ಧ ಈ ಆಟಗಾರರು ಉತ್ತಮ ಪ್ರದರ್ಶನ ತೋರಬೇಕಾಗಿದೆ.

ಎಫ್ ಸಿ ಗೋವಾ ತಂಡ ಈ ಬಾರಿಯ ಋತುವಿನಲ್ಲಿ ಉತ್ತಮ ಆರಂಭ ಕಂಡಿದೆ. ಮೊದಲ ಪಂದ್ಯದಲ್ಲೇ ಚೆನ್ನೈಯಿನ್ ಎಫ್ ಸಿ ತಂಡವನ್ನು ಮಣಿಸಿದ ಗೋವಾ, ಮನೆಯಂಗಣದಲ್ಲಿ ಬೆಂಗಳೂರು ವಿರುದ್ಧ ನಡೆದ ಪಂದ್ಯದಲ್ಲಿ ಹಿಡಿತ ಕಳೆದುಕೊಂಡಿದ್ದು, ಕೊನೆಯ ಕ್ಷಣದಲ್ಲಿ ಫರಾನ್ ಕೊರೊಮಿನಾಸ್ ಗಳಿಸಿದ ಗೋಲಿನಿಂದ ಡ್ರಾ ಸಾಧಿಸಿತ್ತು,.

ಕ್ರಿಕೆಟ್ ನಿಂದ ತಾತ್ಕಾಲಿಕ ವಿರಾಮ ಪಡೆದ ಆಲ್ ರೌಂಡರ್ ಮ್ಯಾಕ್ಸ್ ವೆಲ್ಕ್ರಿಕೆಟ್ ನಿಂದ ತಾತ್ಕಾಲಿಕ ವಿರಾಮ ಪಡೆದ ಆಲ್ ರೌಂಡರ್ ಮ್ಯಾಕ್ಸ್ ವೆಲ್

''ಚೆನ್ನೈಯಿನ್ ಎಫ್ ಸಿ ವಿರುದ್ಧ ನಡೆದ ಪಂದ್ಯದಲ್ಲಿ ನಮ್ಮ ತಂಡದ ಪ್ರಯತ್ನ ಖುಷಿ ಕೊಟ್ಟಿದೆ, ಕಠಿಣ ಪಾರಿಸ್ಥಿತಿಯಲ್ಲಿ ತಂಡ ತೋರಿದ ಬದ್ಧತೆ ಮೆಚ್ಚುವಂತದ್ದು. ನಮ್ಮಲ್ಲಿ ಕೇವಲ ಇಬ್ಬರು ವಿದೇಶಿ ಆಟಗಾರರಿದ್ದರು,. ಕೆಲವರು ಗಾಯಗೊಂಡಿದ್ದಾರೆ. ಆದರೆ ಎರಡನೇ ಪಂದ್ಯ ನಮ್ಮ ಪಾಲಿಗೆ ಉತ್ತಮವಾಗಿರಲಿಲ್ಲ. ಬೆಂಗಳೂರು ವಿರುದ್ಧ ನಾವು ಸಾಕಷ್ಟು ದಣಿದೆವು. ಅತ್ಯಂತ ಕಠಿಣ ಎದುರಾಳಿ ವಿರುದ್ಧ ಒಂದು ಅಂಕ ಗಳಿಸಿರುವುದು ಖುಷಿಕೊಟ್ಟಿದೆ. ಪ್ರತಿಯೊಂದು ಪಂದ್ಯವೂ ಭಿನ್ನವಾಗಿರುತ್ತದೆ. ನಾಳೆಯು ಕೂಡ ಉತ್ತಮ ತಂಡದ ವಿರುದ್ಧದ ಪಂದ್ಯ ಕಠಿಣ ಎಣಿಸಬಹುದು,'' ಎಂದು ಲೊಬೆರಾ ಹೇಳಿದರು,

ಬೆಂಗಳೂರು ವಿರುದ್ಧದ ಪಂದ್ಯ ಗೋವಾ ಪಾಲಿಗೆ ಒಂದು ರೀತಿಯಲ್ಲಿ ಅಸಹಜ ಪಂದ್ಯವಾಗಿತ್ತು, ಉತ್ತಮ ದಾಳಿ ವಿಭಾಗವನ್ನು ಹೊಂದಿರುವ ಗೋವಾ ಶುಕ್ರವಾರ ಅದನ್ನೇ ಅಸ್ತ್ರವಾಗಿಸಲಿದೆ. ನಾರ್ತ್ ಈಸ್ಟ್ ತಂಡಕ್ಕೆ ಗೋವಾದಲ್ಲಿರುವ ವಿದೇಶಿ ಆಟಗಾರರು ಮಾತ್ರ ಆತಂಕ ತರುವವರಲ್ಲ, ಭಾರತದ ಆಟಗಾರರಾದ ಸೇಯ್ಮಿನ್ಲೆನ್ ದೌನ್ಗೆಲ್, ಬ್ರ್ಯಾಂಡನ್ ಫೆರ್ನಾಂಡೀಸ್ ಮತ್ತು ಸೇರಿಂಟಾ ಫೆರ್ನಾಂಡೀಸ್ ಕೂಡ ಆತಂಕ ತರಬಳ್ಳಿ ಆಟಗಾರರು.

Story first published: Friday, November 1, 2019, 13:09 [IST]
Other articles published on Nov 1, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X