ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್‌ 2019: ಪ್ಲೇ ಆಫ್ ಸ್ಥಾನ ಜೀವಂತಕ್ಕಾಗಿ ಎಟಿಕೆ ಹೋರಾಟ

By Isl Media
ISL 2019: Pune, ATK keep the faith

ಪುಣೆ, ಫೆಬ್ರವರಿ 9: ಇಂಡಿಯನ್ ಸೂಪರ್ ಲೀಗ್‌ನಲ್ಲಿ ಭಾನುವಾರ (ಫೆಬ್ರವರಿ 10) ನಡೆಯುವ ಪಂದ್ಯದಲ್ಲಿ ಎಫ್ ಸಿ ಪುಣೆ ಸಿಟಿ ಹಾಗೂ ಎಟಿಕೆ ತಂಡಗಳು ಮುಖಾಮುಖಿಯಾಗಲಿವೆ. ಇಲ್ಲಿ ಜಯದ ಹೊರತಾಗಿ ಬೇರೆ ಯಾವ ಫಲಿತಾಂಶವೂ ಇಲ್ಲಿ ಪ್ರಯೋಜನಕಾರಿಯಾಗದು. ಏಕೆಂದರೆ ಪ್ಲೇ ಆಫ್ ಗಾಗಿ ಈಗಾಗಲೇ ಹೋರಾಟ ಮುಕ್ತಾಯಗೊಳ್ಳಲಾರಂಭಿಸಿದೆ.

ವಿಶ್ವ ಬ್ಯಾಡ್ಮಿಂಟನ್‌ನಲ್ಲೆ ಐತಿಹಾಸಿಕ ಒಪ್ಪಂದಕ್ಕೆ ಸಹಿ ಹಾಕಿದ ಪಿವಿ ಸಿಂಧು!ವಿಶ್ವ ಬ್ಯಾಡ್ಮಿಂಟನ್‌ನಲ್ಲೆ ಐತಿಹಾಸಿಕ ಒಪ್ಪಂದಕ್ಕೆ ಸಹಿ ಹಾಕಿದ ಪಿವಿ ಸಿಂಧು!

ಇತ್ತಂಡಗಳಿಗೂ ಅವಕಾಶ ಇಲ್ಲವೆಂದು ಸುಲಭವಾಗಿ ಹೇಳಲಾಗದು, ಉಳಿದಿರುವ ಎಲ್ಲಾ ಪಂದ್ಯಗಳಲ್ಲಿ ಜಯ ಗಳಿಸಿದರೆ, ಇತರ ತಂಡಗಳ ಲಿತಾಂಶದಲ್ಲಿ ಏರುಪೇರಾದರೆ ಅವಕಾಶ ಸಿಗಬಹುದು. 14 ಪಂದ್ಯಗಳನ್ನಾಡಿರುವ ಎಟಿಕೆ ತಂಡ 20 ಅಂಕಗಳನ್ನು ಹೊಂದಿದ್ದು, ಆರನೇ ಸ್ಥಾನದಲ್ಲಿದೆ. ಅದೇ ರೀತಿ ಅದೇ ರೀತಿ ನಾಲ್ಕನೇ ಸ್ಥಾನ ತಲುಪಲು ನಾಲುಕ ಅಂಕಗಳಿಂದ ಹಿಂದೆ ಬಿದ್ದಿದೆ. 14 ಅಂಕಗಳಿಸಿರುವ ಪುಣೆ ಸಿಟಿ ಕೆಳ ಹತದಲ್ಲಿದ್ದು, ಇನ್ನೂ ಐದು ಪಂದ್ಯಗಳಲ್ಲಿ ಆಡುವ ಅವಕಾಶವನ್ನು ಹೊಂದಿದೆ. ಆದರೆ ಎಟಿಕೆಗೆ ಇರುವರಷ್ಟು ಸುಲಭ ಅವಕಾಶ ಇಲ್ಲ. ಭಾನುವಾರ ನಡೆಯುವ ಪಂದ್ಯದಲ್ಲಿ ಜಯದ ಹೊರತಾಗಿ ಯಾವುದೇ ಲಿತಾಂಶ ಬಂದರೂ ಇತ್ತಂಡಗಳಿಗೆ ಕಷ್ಟವೆನಿಸಲಿದೆ.

1
1042960

ಆತಿಥೇ ತಂಡ ಸತತ ಮೂರು ಪಂದ್ಯಗಳಲ್ಲಿ ಜಯ ಗಳಿಸಿದ ನಂತರ ಈ ಹೋರಾಟಕ್ಕೆ ಸಜ್ಜಾಗಿದೆ. ಚೆನ್ನೆ'ಯಿನ್ ತಂಡದ ವಿರುದ್ಧ ಗಳಿಸಿರುವ ಜಯ ತಂಡದ ಮನೋಬಲವನ್ನು ಹೆಚ್ಚಿಸಿದೆ. ಪುಣೆ ತಂಡದ ನೂತನ ಕೋಚ್ ಫಿಲ್ ಬ್ರೌನ್ ಡಿಫೆನ್ಸ್ ವಿಭಾಗದ ಮೇಲೆ ಹೆಚ್ಚು ಗಮನ ಹರಿಸಿದ್ದು, ತಂಡಕ್ಕೆ ಸತತ ಮೂರು ಪಂದ್ಯಗಳಲ್ಲಿ ಜಯ ಕಾಣಲು ಸಾ'್ಯವಾಯಿತು.

ಬಿಬಿಎಲ್: ಬ್ರಿಸ್ಬೇನ್ ಹೀಟ್ ಕೋಚ್‌ ಸ್ಥಾನ ತೊರೆದ ಡೇನಿಯಲ್ ವೆಟೋರಿಬಿಬಿಎಲ್: ಬ್ರಿಸ್ಬೇನ್ ಹೀಟ್ ಕೋಚ್‌ ಸ್ಥಾನ ತೊರೆದ ಡೇನಿಯಲ್ ವೆಟೋರಿ

'ನಮ್ಮ ಪ್ರಮುಖ ಆಟಗಾರರು ಚೆಂಡಿನ ಮೇಲೆ ಹೆಚ್ಚು ಹಿಡಿತ ಸಾಧಿಸಬೇಕು ಎಂಬುದು ನನ್ನ ಮುಖ್ಯ ಯೋಜನೆ, ಪಂದ್ಯ ಗೆಲ್ಲಿಸಿಕೊಡುವ ಸಾಮರ್ಥ್ಯ ಇರುವವರು ಚೆಂಡಿನ ಕಡೆಗೆ ಹೆಚ್ಚಿನ ಗಮನ ಹರಿಸಬೇಕು. ಇದರಿಂದಾಗಿ ನಮಗೆ ಚೆನ್ನೆ' ವಿರುದ್ಧ ಜಯ ಗಳಿಸಲು ಸಾಧ್ಯವಾಯಿತು. ಪಂದ್ಯದ ಆರಂಭವೇ ಇರಲಿ, ಅಂತ್ಯವೇ ಇರಲಿ ನಮ್ಮ ಗುರಿ ಜಯವಾಗಿರಬೇಕು. ಉಳಿದಿರುವ ಪಂದ್ಯಗಳಲ್ಲಿ ನಾವು ಜಯ ಗಳಿಸಬೇಕು. ನಾವು ಆತ್ಮವಿಶ್ವಾಸದೊಂದಿಗೆ ಆಡಬೇಕಾಗಿದೆ,' ಎಂದು ಪುಣೆ ತಂಡದ ಕೋಚ್ ಫಿಲ್ ಬ್ರೌನ್ ಹೇಳಿದ್ದಾರೆ.

ಋತುವಿನ ಆರಭ'ದಲ್ಲಿ ಉತ್ತಮ ಪ್ರದರ್ಶನ ತೋರದ ಕಾರಣ ಸ್ಟೀಲ್ ಕೊಪ್ಪೆಲ್ ಪಡೆ ಈಗ ಅದರ ಪರಿಣಾಮವನ್ನು ಅನುಭವಿಸುತ್ತಿದೆ. ಪಂದ್ಯ ಗೆದ್ದರೂ ಅಂಕಗಳಲ್ಲಿ ಏರಿಕೆ ಕಾಣುತ್ತಿಲ್ಲ ಆಡಿರುವ 12 ಪಂದ್ಯಗಳಲ್ಲಿ ಗಳಿಸಿರುವುದು ಕೇವಲ 10 ಗೋಲುಗಳು. ಕಳೆದ ಎರಡು ಪಂದ್ಯಗಳಲ್ಲಿ ಎಟಿಕೆ ಮೂರು ಗೋಲುಗಳನ್ನು ಗಳಿಸಿತ್ತು. ಚಳಿಗಾಲದ ವರ್ಗಾವಣೆಯಲ್ಲಿ ಎರಡು ಗಾರ್ಸಿಯಾ ಅವರನ್ನು ತಂಡಕ್ಕೆ ಸೇರಿಸಿಕೊಂಡ ನಂತರ ಎಟಿಕೆ ಯಶಸ್ಸಿನ ಹೆಜ್ಜೆ ಇಟ್ಟಿದೆ. ಕಲು ಅಚೆ ಅವರ ಆಗಮನ ಕೂಡ ತಂಡದ ದಾಳಿ ವಿಭಾಗದ ಶಕ್ತಿಯನ್ನು ಹೆಚ್ಚಿಸಿದೆ.

ಮೆಲ್ವೆಲ್ ಲಾನ್ಜೆರೋಟ್ , ಗಾರ್ಸಿಯಾ ಹಾಗೂ ಎವರ್ಟನ್ ಸ್ಯಾಂಟೋಸ್ ಅವರ ಆಟ ಏಕಕಾಲದಲ್ಲಿ ಕಾರ್ಯರೂಪಕ್ಕೆ ಬಂದರೆ ಎಟಿಕೆಯನ್ನು ನಿಯಂತ್ರಿಸುವುದು ಕಷ್ಟ, ಇದೇ ರೀತಿಯ ಆಟ ಪ್ರದರ್ಶಿಸಿದ ಪರಿಣಾಮ ಎಟಿಕೆ ತಂಡ ಜೆಮ್ಷೆಡ್ಪುರ ವಿರುದ್ಧ ಜಯ ಗಳಿಸಿತ್ತು. ಪುಣೆ ವಿರುದ್ಧ ಜಯ ಗಳಿಸಿದರೆ ಎಟಿಕೆ ತಂಡ ನಾಲ್ಕನೇ ಸ್ಥಾನದಲ್ಲಿರುವ ನಾರ್ತ್ ಈಸ್ಟ್ ತಂಡಕ್ಕಿಂತ ಒಂದು ಅಂಕ ಹಿಂದೆ ಬೀಳಲಿದೆ. 'ಪ್ರತಿಯೊಬ್ಬರು ಕೂಡ ಈ ಜಯದ ಕಡೆಗೆ ಮುಖ ಮಾಡಿದ್ದಾರೆ. ಪ್ರತಿಯೊಂದು ಪಂದ್ಯದಲ್ಲೂ ನಾವು ಜಯ ಗಳಿಸಬೇಕಾಗಿದೆ. ನಾವು ನಾಲ್ಕನೇ ಸ್ಥಾನದ ಸನೀಹದಲ್ಲಿದ್ದೇವೆ. ಅಂತರವನ್ನು ಕಡಿಮೆ ಮಾಡಿಕೊಳ್ಳುವುದು ನಮ್ಮ ಗುರಿ, ನಾವು ಮೂರು ಪಂದ್ಯಗಳಲ್ಲಿ ಯಶಸ್ಸು ಕಂಡಿದ್ದೇವೆ, ಉಳಿದ ಪಂದ್ಯಗಳಲ್ಲಿ ಗೆದ್ದರೆ ಏನೂ ಬೇಕಾದರೂ ಆಗಬಹುದು,' ಎಂದು ಕೊಪ್ಪೆಲ್ ಹೇಳಿದ್ದಾರೆ.

Story first published: Saturday, February 9, 2019, 19:51 [IST]
Other articles published on Feb 9, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X