ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್: ಒಡಿಶಾ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ ಬೆಂಗಳೂರು ಎಫ್‌ಸಿ

ISL 2021-22: match 97 BFC vs OFC, Bengaluru FC match won by 2-1 Highlights

ಇಂಡಿಯನ್ ಸೂಪರ್ ಲೀಗ್‌ನಲ್ಲಿ ಇಂದು 97ನೇ ಮುಖಾಮುಖಿ ನಡೆದಿದ್ದು ಈ ಪಂದ್ಯದಲ್ಲಿ ಒಡಿಶಾ ಎಫ್‌ಸಿ ಹಾಗೂ ಬೆಂಗಳೂರು ಎಫ್‌ಸಿ ತಂಡಗಳು ಪೈಪೋಟಿ ನಡೆಸಿದೆ. ಈ ಪಂದ್ಯದಲ್ಲಿ ಬೆಂಗಳುರು ಎಫ್‌ಸಿ ಭರ್ಜರಿ ಪ್ರದರ್ಶನ ನೀಡಿದ್ದು ಒಡಿಶಾ ವಿರುದ್ಧ 2-1 ಗೋಲುಗಳ ಅಂತರದ ಗೆಲುವು ಸಾಧಿಸಿದೆ. ಈ ಗೆಲುವಿನೊಂದಿಗೆ ಬೆಂಗಳೂರು ಎಫ್‌ಸಿ ಅಂಕಪಟ್ಟಿಯಲ್ಲಿ 5ನೇ ಸ್ಥಾನಕ್ಕೇರುವಲ್ಲಿ ಯಶಸ್ವಿಯಾಗಿದೆ.

ಈ ಪಂದ್ಯದ ಆರಂಭದಲ್ಲಿ ಒಡಿಶಶಾ ಎಫ್‌ಸಿ ಮೇಲುಗೈ ಸಾಧಿಸಿತ್ತು. ನಂತರ ಪಂದ್ಯಕ್ಕೆ ಮರಳಿದ ಬಿಎಫ್‌ಸಿ ಸಮಬಲಗೊಳಿಸುವಲ್ಲಿ ಯಶಸ್ವಿಯಾಯಿತು. ನಂತರ ದ್ವಿತಿಯಾರ್ಧದಲ್ಲಿ ಬೆಂಗಳುರು ಎಫ್‌ಸಿ ಪರವಾಗಿ ಮತ್ತೊಂದು ಗೋಲು ದಾಖಲಾದ ಪರಿಣಾಮವಾಗಿ ಬೆಂಗಳೂರು ಎಫ್‌ಸಿ ಪಂದ್ಯದಲ್ಲಿ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದೆ.

ವೃದ್ದಿಮಾನ್ ಸಾಹಾಗೆ ಪತ್ರಕರ್ತನಿಂದ ಬೆದರಿಕೆ: BCCI ತುರ್ತಾಗಿ ತನಿಖೆ ನಡೆಸಬೇಕು ಎಂದ ರವಿಶಾಸ್ತ್ರಿವೃದ್ದಿಮಾನ್ ಸಾಹಾಗೆ ಪತ್ರಕರ್ತನಿಂದ ಬೆದರಿಕೆ: BCCI ತುರ್ತಾಗಿ ತನಿಖೆ ನಡೆಸಬೇಕು ಎಂದ ರವಿಶಾಸ್ತ್ರಿ

ಪಂದ್ಯ ಆರಂಭವಾದ 8ನೇ ನಿಮಿಷದಲ್ಲಿಯೇ ಒಡಿಶಾ ಎಫ್‌ಸಿ ತಂಡ ಗೋಲು ಗಳಿಸುವ ಮೂಲಕ ಶುಭಾರಂಭ ಮಾಡಿತ್ತು. ಈ ಮೂಲಕ ಪಂದ್ಯದಲ್ಲಿ ಆರಂಭಿಕ ಮೇಲುಗೈ ಸಾಧಿಸಲು ಯಶಸ್ವಿಯಾಗಿತ್ತು. ನಂದಕುಮಾರ್ ಶೇಖರ್ ಈ ಗೋಲು ದಾಖಲಿಸಿದ್ದರು. ಆದರೆ ನಂತರ 31ನೇ ನಿಮಿಷದಲ್ಲಿ ಬೆಂಗಳುರು ಎಫ್‌ಸಿ ಕೂಡ ಗೋಲಿನ ಖಾತೆ ತೆರೆಯಿತು. ಡ್ಯಾನಿಶ್ ಫಾರೂಕ್ ಬಿಎಫ್‌ಸಿ ಪರವಾಗಿ ಈ ಗೋಲು ಸಿಡಿಸಿ ಸಮಬಲಗೊಳಿಸಿದ್ದರು. ಮೊದಲಾರ್ಧದ ಮುಕ್ತಾಯವಾಗುವರೆಗೂ ಈ ಸಮಬಲ ಮುಂದಿವರಿದಿತ್ತು.

ನಂತರ 49ನೇ ನಿಮಿಷದಲ್ಲಿ ಬಿಎಫ್‌ಸಿ ಮತ್ತೊಂದು ಗೋಲು ದಾಖಲಿಸುವ ಮೂಲಕ ಪಂದ್ಯದಲ್ಲಿ ಮೊದಲ ಬಾರಿಗೆ ಮುನ್ನಡೆ ಸಾಧಿಸುವಲ್ಲಿ ಯಶಸ್ವಿಯಾಗಿತ್ತು. ಈ ಮೂಲಕ ಪಂದ್ಯದಲ್ಲಿ 2-1 ಅಂತರದ ಹಿಡಿತ ಸಾಧಿಸಿತ್ತು. ನಂತರ ಒಡಿಶಾ ತಂಡಕ್ಕೆ ಗೋಲು ಗಳಿಸುವ ಅವಕಾಶವನ್ನು ನೀಡದ ಬಿಎಫ್‌ಸಿ ಪಂದ್ಯವನ್ನು ಗೆದ್ದುಕೊಂಡಿದೆ.

ಈ ಗೆಲುವು ಬಿಎಫ್‌ಸಿ ಪಾಲಿಗೆ ಅತ್ಯಂತ ಮಹತ್ವದ್ದಾಗಿದ್ದು ಅಗ್ರ ನಾಲ್ಕರಲ್ಲಿ ಸ್ಥಾನ ಪಡೆಯುವ ಪ್ರಯತ್ನಕ್ಕೆ ಮತ್ತಷ್ಟು ಬಲಬಂದಂತಾಗಿದೆ. ಸದ್ಯ ಬಿಎಫ್‌ಸಿ ಅಂಕಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದ್ದು ಬಿಎಫ್‌ಸಿ 18 ಪಂದ್ಯಗಳನ್ನು ಈಗಾಗಲೇ ಮುಗಿಸಿದೆ. ಹೈದರಾಬಾದ್ ಎಫ್‌ಸಿ, ಜೆಮ್ಶೆಡ್ಪುರ ಎಫ್‌ಸಿ, ಎಟಿಕೆ ಮೋಹನ್ ಬಾಗನ್ ಹಾಗೂ ಕೇರಳ ಬ್ಲಾಸ್ಟರ್ಸ್ ಎಫ್‌ಸಿ ತಂಡಗಳು ಅಗ್ರ ನಾಲ್ಕರಲ್ಲಿರುವ ತಂಡಗಳಾಗಿದೆ.

ಕಾಂಟ್ರಾಕ್ಟ್ ಹಣ ನೀಡಿಲ್ಲ ಪಾಕಿಸ್ತಾನ್ ಸೂಪರ್ ಲೀಗ್: ಆಸಿಸ್ ಕ್ರಿಕೆಟಿಗನ ಗಂಭೀರ ಆರೋಪ; ಪಿಸಿಬಿ ಪ್ರತಿಕ್ರಿಯೆಕಾಂಟ್ರಾಕ್ಟ್ ಹಣ ನೀಡಿಲ್ಲ ಪಾಕಿಸ್ತಾನ್ ಸೂಪರ್ ಲೀಗ್: ಆಸಿಸ್ ಕ್ರಿಕೆಟಿಗನ ಗಂಭೀರ ಆರೋಪ; ಪಿಸಿಬಿ ಪ್ರತಿಕ್ರಿಯೆ

ಒಡಿಶಾ ಎಫ್‌ಸಿ ಆರಂಭಿಕ ಪ್ಲೇಯಿಂಗ್ XI: ಕಮಲ್ಜಿತ್ ಸಿಂಗ್ (ಗೋಲ್‌ ಕೀಪರ್), ವಿಕ್ಟರ್ ಮೊಂಗಿಲ್ (ನಾಯಕ), ಹೆಕ್ಟರ್ ರಾಮಿರೆಜ್, ಸಾಹಿಲ್ ಪನ್ವಾರ್, ಲಾಲ್ರುತ್ಥರಾ, ಜೇವಿಯರ್ ಹೆರ್ನಾಂಡೀಸ್, ತೊಯ್ಬಾ ಸಿಂಗ್, ಐಸಾಕ್ ಚಕ್ಚುವಾಕ್, ಜೊನಾಥಸ್ ಕ್ರಿಸ್ಟಿಯನ್, ನಂದಕುಮಾರ್ ಸೇಕರ್, ಜೆರ್ರಿ ಮಾವಿಹ್ಮಿಂಗ್ತಂಗ

ಬೆಂಗಳೂರು ಎಫ್‌ಸಿ ಆರಂಭಿಕ ಪ್ಲೇಯಿಂಗ್ XI: ಲಾರಾ ಶರ್ಮಾ (ಗೋಲ್‌ ಕೀಪರ್), ಪ್ರತೀಕ್ ಚೌಧರಿ, ಅಲನ್ ಕೋಸ್ಟಾ, ನಮ್ಗ್ಯಾಲ್ ಭುಟಿಯಾ, ರೋಷನ್ ನೌರೆಮ್, ಬ್ರೂನೋ ಸಿಲ್ವಾ, ಡ್ಯಾನಿಶ್ ಫಾರೂಕ್, ಅಜಯ್ ಛೆಟ್ರಿ, ಪ್ರಿನ್ಸ್ ಇಬಾರಾ, ಉದಾಂತ ಸಿಂಗ್, ಕ್ಲಿಟನ್ ಸಿಲ್ವಾ (ನಾಯಕ)

Story first published: Monday, February 21, 2022, 22:13 [IST]
Other articles published on Feb 21, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X