ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್ 2019: ಸೂಪರ್ ಫುಟ್ಬಾಲ್, ಚೆನ್ನೈಯಿನ್‌ಗೆ ಸೂಪರ್ ಜಯ

By Isl Media
ISL: Huge extra-time drama as Chennaiyin get first goal and first win

ಚೆನ್ನೈ, ನವೆಂಬರ್ 26: ಅತ್ಯಂತ ರೋಚಕವಾಗಿ ಸೋಮವಾರ (ನವೆಂಬರ್ 25) ನಡೆದ ಪಂದ್ಯದಲ್ಲಿ ಹೈದರಾಬಾದ್ ಎಫ್ ಸಿ ವಿರುದ್ಧ ನಡೆದ ಪಂದ್ಯದಲ್ಲಿ ಚೆನ್ನೈಯಿನ್ ಎಫ್ ಸಿ ತಂಡ 2-1 ಗೋಲುಗಳ ಅಂತರದಲ್ಲಿ ಜಯ ಗಳಿಸಿ ಇಂಡಿಯನ್ ಸೂಪರ್ ಲೀಗ್ ನಲ್ಲಿ ಮೊದಲ ಜಯ ಕಂಡಿದೆ.

ಬೆತ್ತಲೆದೆಗೆ ಪೈನಾಪಲ್ ಇಟ್ಟು ಪಡ್ಡೆಗಳ ಕೆಣಕಿದ ಹಾಕಿ ನಿರೂಪಕಿ: ವಿಡಿಯೋ!ಬೆತ್ತಲೆದೆಗೆ ಪೈನಾಪಲ್ ಇಟ್ಟು ಪಡ್ಡೆಗಳ ಕೆಣಕಿದ ಹಾಕಿ ನಿರೂಪಕಿ: ವಿಡಿಯೋ!

ಬದಲಿ ಆಟಗಾರ ಶೆಂಬ್ರಿ (90+) ಹಾಗೂ ವಾಲ್ಸ್ಕಿಸ್ (95ನೇ ನಿಮಿಷ) ಗಳಿಸಿದ ಗೋಲಿನಿಂದ ಚೆನ್ನೈಯಿನ್ ಮೊದಲ ಗೋಲು ಹಾಗೂ ಮೊದಲ ಜಯ ಗಳಿಸಿತು. ಉತ್ತಮ ಪೈಪೋಟಿ ನೀಡಿದ ಹೈದರಬಾದ್ ಪರ ಕೀಳ್ಗಲ್ಲೊನ್ (93ನೇ ನಿಮಿಷ) ಗಳಿಸಿದ ಗೋಲು ಮೊದಲಿಗೆ ಪಂದ್ಯವನ್ನು ಸಮಬಲಗೊಳಿಸಿತು, ನಂತರ ಸೋಲಿನ ಅಂತರವನ್ನು ಕಡಿಮೆ ಮಾಡಿತು. ಈ ಋತುವಿನಲ್ಲೇ ಇದುವರೆಗಿನ ಅತ್ಯಂತ ರೋಚಕ ಪಂದ್ಯ ಇದಾಗಿತ್ತು.

ಗೋಲಿಲ್ಲದ ಪ್ರಥಮಾರ್ಧ
ಚೆನ್ನೈ ತಂಡ ಪ್ರಥಮಾರ್ಧದ ಆರಂಭದಿಂದ ಅಂತ್ಯದ ವರೆಗೂ ಹಲವು ಅವಕಾಶಗಳನ್ನು ಪಡೆದಿತ್ತು, ಆದರೆ ಅದೃಷ್ಟ ಚೆನ್ನೈ ತಂಡಕ್ಕೆ ಇರಲಿಲ್ಲ. ತಪ್ಪಿದ ಗುರಿ, ಆಫ್ ಸೈಡ್ ಗೋಲ್ ಜತೆಯಲ್ಲಿ ಹೈದರಾಬಾದ್ ನಾಯಕ ಕಮಲ್ಜಿತ್ ಸಿಂಗ್ ಕೈ ಚಳಕ ಗೋಲಿಗೆ ಅಡ್ಡಿಯಾಯಿತು. ಗೋಲಿಲ್ಲದಿದ್ದರೂ ಪಂದ್ಯದಲ್ಲಿ ಕುತೂಹಲಕ್ಕೆ ಯಾವುದೇ ಅಡ್ಡಿ ಇರಲಿಲ್ಲ. ಚೆನ್ನೈ ತಂಡ ಆರಂಭದಿಂದಲೂ ಆಕ್ರಮಣಕಾರಿ ಆಟಕ್ಕೆ ಮನ ಮಾಡಿತ್ತು. ಅದೇ ರೀತಿ ಸಾಕಷ್ಟು ಅವಕಾಶಗಳನ್ನು ಗಳಿಸಿತ್ತು. ಎಲ್ಲಿಯೂ ಗೋಲಿಗೆ ಮಾತ್ರ ಅವಕಾಶ ಇರಲಿಲ್ಲ. 25ನೇ ನಿಮಿಷದಲ್ಲಿ ಲಾಲಿಯಂಜುವಲ ಚಾಂಗ್ತೆ ಹೆಡರ್ ಮೂಲಕ ಸುಲಭವಾಗಿ ಗೋಲು ಗಳಿಸಬಹುದಾಗಿತ್ತು. ಆದರೆ ಅದೃಷ್ಟ ಚೆನ್ನೈ ಪರ ಇರಲಿಲ್ಲ. ಹೈದರಬಾದ್ ಪರ ನಾಯಕ ಕಮಲ್ಜಿತ್ ಸಿಂಗ್ ಪ್ರಥಮಾರ್ಧದ ಹೀರೋ ಎನಿಸಿದರು. 32ನೇ ನಿಮಿಷದಲ್ಲಿ ಮ್ಯಾಥ್ಯೂ ಕೀಳ್ಗಲ್ಲೊನ್ ಚೆನ್ನೈಯಿನ್ ಎಫ್ ಸಿ ಗೋಲು ಗಳಿಸಿಯೇ ಬಿಟ್ಟಿತು ಎಂದು ಎಲ್ಲರೂ ಊಹಿಸಿದ್ದರು,.ಆದರೆ ಕಮಲ್ಜಿತ್ ಸಿಂಗ್ ಆತಿಥೇಯರ ಮುನ್ನಡೆಗೆ ಅವಕಾಶ ಕೊಡಲಿಲ್ಲ.

ISL: Huge extra-time drama as Chennaiyin get first goal and first win

ತಳದಲ್ಲಿರುವವರ ಹೋರಾಟ
ಇಂಡಿಯನ್ ಸೂಪರ್ ಲೀಗ್ ನ 23ನೇ ಪಂದ್ಯದಲ್ಲಿ ಕೊನೆಯ ಸ್ಥಾನದಲ್ಲಿರುವ ತಂಡಗಳಾದ ಚೆನ್ನೈಯಿನ್ ಎಫ್ ಸಿ ಹಾಗೂ ಹೈದರಾಬಾದ್ ಎಫ್ ಸಿ ತಂಡಗಳು ಮುಖಾಮುಖಿಯಾದವು. ಚೆನ್ನೈಯಿನ್ ಎಫ್ ಸಿ ಇದೇ ಮೊದಲ ಬಾರಿಗೆ ಹೈದರಾಬಾದ್ ಗೆ ಆತಿಥ್ಯ ನೀಡಿತು. ಇದುವರೆಗೂ ಇತ್ತಂಡಗಳ ಪ್ರದರ್ಶನ ಉತ್ತಮವಾಗಿಲ್ಲ ಎಂಬುದಕ್ಕೆ ಅವುಗಳಿರುವ ಸ್ಥಾನವೇ ಸಾಕ್ಷಿ. ಇಲ್ಲಿ ಜಯಗಳಿಸಿದರೆ ಇತ್ತಂಡಗಳ ಮುಂದಿನ ಹಾದಿ ಉತ್ತಮ ರೀತಿಯಲ್ಲಿ ಸಾಗಬಹುದು. ಚೆನ್ನೈಯಿನ್ ಡಿಫೆನ್ಸ್ ಹಾಗೂ ಫಾರ್ವಾರ್ಡ್ ವಿಭಾಗಗಳಲ್ಲಿ ಸಮಸ್ಯೆಯನ್ನು ಎದುರಿಸುತ್ತಿದೆ. ಎರಡು ಬಾರಿ ಚಾಂಪಿಯನ್ ಚೆನ್ನೈಯಿನ್ ತಂಡಕ್ಕೆ ಗೆಲ್ಲಬೇಕಾಗಿರುವುದು ಪ್ರಮುಖ ಗುರಿಯಾದರೆ, ಇದುವರೆಗೂ ಗೋಲು ಗಳಿಸಲಿಲ್ಲವೆಂಬ ಚಿಂತೆ ಇನ್ನೊಂದೆಡೆ.

ಪಾಕ್ ಕ್ರಿಕೆಟಿಗರಿಂದ ಹಣ ಪಡೆಯಲು ನಿರಾಕರಿಸಿದ ಭಾರತದ ಟಾಕ್ಸಿ ಚಾಲಕ!ಪಾಕ್ ಕ್ರಿಕೆಟಿಗರಿಂದ ಹಣ ಪಡೆಯಲು ನಿರಾಕರಿಸಿದ ಭಾರತದ ಟಾಕ್ಸಿ ಚಾಲಕ!

ಇದುವರೆಗೂ ತಂಡ ಏಳು ಗೋಲುಗಳನ್ನು ನೀಡಿದೆ. ಮನೆಯಂಗಣದಲ್ಲಿ ಚೆನ್ನೈಯಿನ್ ತಂಡ ಅತ್ಯಂತ ಕಳಪೆ ದಾಖಲೆ ಹೊಂದಿದೆ. ಕಳೆದ ಋತುವಿನಿಂದ ಇದುವರೆಗೂ ಗೆದ್ದಿರುವುದು ಒಂದು ಪಂದ್ಯದಲ್ಲಿ ಮಾತ್ರ. ಪ್ರವಾಸಿ ಹೈದರಾಬಾದ್ ಕೂಡ ಉತ್ತಮ ಸ್ಥಿತಿಯಲ್ಲಿಲ್ಲ. ಆಡಿದ ನಾಲ್ಕು ಪಂದ್ಯಗಳಲ್ಲಿ ಗೆದ್ದಿರುವುದು ಕೇವಲ ಒಂದು. ಎದುರಾಳಿ ತಂಡಕ್ಕೆ ಅತಿ ಹೆಚ್ಚು ಗೋಲು ನೀಡಿದ ತಂಡ ಕೂಡ ಹೈದರಾಬಾದ್. ಗಾಯಗೊಂಡಿರುವ ಪ್ರಮುಖ ಆಟಗಾರರು ಚೇತರಿಸಿಕೊಂಡು ತಂಡವನ್ನು ಸೇರಿಕೊಂಡಿರುವುದು ಹೈದರಾಬಾದ್ ನ ಮನೋಬಲವನ್ನು ಹೆಚ್ಚಿಸಿದೆ.

Story first published: Tuesday, November 26, 2019, 0:23 [IST]
Other articles published on Nov 26, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X