ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್ 2018: ಡೆಲ್ಲಿ ವಿರುದ್ಧ ಗೆದ್ದು ಸೋಲಿನ ಕಹಿ ಮರೆತ ಮುಂಬೈ

By Isl Media
ISL: MCFC vs DD: Mumbai City FC heave a sigh of relief with 2-0 win

ಮುಂಬೈ ಅಕ್ಟೋಬರ್ 28: ಮೊಡೌ ಸೌಗೌ 30ನೇ ನಿಮಿಷ ಹಾಗೂ ಅರ್ನಾಲ್ಡ್ ಇಸೋಕೋ 77 ನೇ ನಿಮಿಷದಲ್ಲಿ ಗಳಿಸಿದ ಗೋಲಿನಿಂದ ಮುಂಬೈ ಸಿಟಿ ಎಫ್ ಸಿ ತಂಡ ಡೆಲ್ಲಿ ಡೈನಮೋಸ್ ವಿರುದ್ಧದ ಇಂಡಿಯನ್ ಸೂಪರ್ ಲೀಗ್ ಪಂದ್ಯದಲ್ಲಿ 2-0 ಗೋಲುಗಳ ಅಂತರದಲ್ಲಿ ಗೆದ್ದು ಗೋವಾ ವಿರುದ್ಧದ ಸೋಲಿನ ಕಹಿಯನ್ನು ಮರೆಯಿತು.

ಐಎಸ್‌ಎಲ್ 2018: ಚೆನ್ನೈಯಿನ್ ಎಫ್‌ಸಿ ವಿರುದ್ಧ ಜಯ ಸಾಧಿಸಿದ ಎಟಿಕೆಐಎಸ್‌ಎಲ್ 2018: ಚೆನ್ನೈಯಿನ್ ಎಫ್‌ಸಿ ವಿರುದ್ಧ ಜಯ ಸಾಧಿಸಿದ ಎಟಿಕೆ

ಡೆಲ್ಲಿ ಉತ್ತಮ ಹೋರಾಟ ನೀಡಿದರೂ ಮುಂಬೈ ವಿರುದ್ಧ ಗೋಲು ಗಳಿಸುವಲ್ಲಿ ವಿಫಲವಾಯಿತು. ಪಂದ್ಯದ 77 ನೇ ನಿಮಿಷದಲ್ಲಿ ಅರ್ನಾಲ್ಡ್ ಇಸೋಕೋ ಗಳಿಸಿದ ಗೋಲಿನಿಂದ ಮುಂಬೈ 2-0 ಅಂತರದಲ್ಲಿ ಮುಂದೆ ಸಾಗಿತು. ರಾಫೆಲ್ ಬಸ್ಟೋಸ್ ನೀಡಿದ ಪಾಸ್ ಮೂಲಕ ಡೆಲ್ಲಿಯ ಡಿಫೆನ್ಸ್ ವಿಭಾಗ ವನ್ನು ನಿಯಂತ್ರಿಸುವಲ್ಲಿ ಸಫಲರಾದ ಇಸೋಕೋ ತಂಡದ ಪರ ಎರಡನೇ ಗೋಲು ಗಳಿಸಿ ಜಯಕ್ಕೆ ಅಗತ್ಯ ಇರುವ ವೇದಿಕೆ ಸೃಷ್ಟಿಸಿದರು.

30ನೇ ನಿಮಿಷದಲ್ಲಿ ಮೊಡೌ ಸೌಗೌ ಗಳಿಸಿದ ಗೋಲಿನಿಂದ ಆತಿಥೇಯ ಮುಂಬೈ ತಂಡ ಮುನ್ನಡೆ ಗಳಿಸಿತು. ಮುಂಬೈಗೆ ಮನೆಯಂಗಣದ ಪ್ರೇಕ್ಷಕರ ಬೆಂಬಲ ಒಂದೆಡೆಯಾದರೆ ಡೆಲ್ಲಿಯ ಡಿಫೆನ್ಸ್ ವಿಲವಾಗಿರವುದು ಮತ್ತೊಂದು ಅನುಕೂಲ. ಡೆಲ್ಲಿಯೂ ಉತ್ತಮವಾಗಿಯೇ ಆರಂಭ ಕಂಡಿತ್ತು. ಆದರೆ ಚೆಂಡು ಗೋಲ್‌ಬಾಕ್ಸ್‌ನ ಗುರಿ ತಲುಪಿಲ್ಲ. ಅಲ್ಲದೆ ಮುಂಬೈ ಗೋಲ್‌ಕೀಪರ್ ರವಿ ಕುಮಾರ್ ಎರಡು ಬಾರಿ ಉತ್ತಮ ರೀತಿಯಲ್ಲಿ ರಕ್ಷಣೆ ಮಾಡಿ ತಂಡಕ್ಕೆ ನೆರವಾದರು.

ಗೋಲ್ ಗೆ ಅವಕಾಶವಿತ್ತು

ಗೋಲ್ ಗೆ ಅವಕಾಶವಿತ್ತು

33ನೇ ನಿಮಿಷದಲ್ಲಿ ಮುಂಬೈಗೆ ಎರಡನೇ ಗೋಲು ಗಳಿಸುವ ಅವಕಾಶವಿದ್ದಿತ್ತು. ಆದರೆ ಡೊರಾನ್ಸೊರೊ ಅವರ ಮಿಂಚಿನ ಕೀಪಿಂಗ್‌ನಿಂದಾಗಿ ಅದು ಸಾಧ್ಯವಾಗಲಿಲ್ಲ. ಡೆಲ್ಲಿ ಸಿಕ್ಕ ಅವಕಾಶಕ್ಕೆ ಗೋಲಿನ ರೂಪು ನೀಡುವಲ್ಲಿ ವಿಫಲವಾಯಿತು. ಅರ್ನಾಲ್ಡೋ ಇಸಾಕೊ ಹಾಗೂ ಮೊಡೌ ಸೌಗೌ ಅವರ ಹೊಂದಾಣಿಕೆಯ ಆಟದಿಂದಾಗಿ ಮುಂಬೈ ಮೊದಲ ಗೋಲು ಗಳಿಸುವಲ್ಲಿ ಯಶಸ್ವಿಯಾಯಿತು. ಮುಂಬೈಯ ಪ್ರತಿಯೊಂದು ಪಂದ್ಯದಲ್ಲೂ ಮಿಂಚಿರುವುದು ವಿಶೇಷ. ಸೆನೆಗಲ್‌ನ ಆಟಗಾರ ಇಂಡಿಯನ್ ಸೂಪರ್ ಲೀಗ್‌ನಲ್ಲಿ ಉತ್ತಮ ಆಯ್ಕೆ.

ಜಯದ ಹಂಬಲ

ಜಯದ ಹಂಬಲ

ಇಂಡಿಯನ್ ಸೂಪರ್ ಲೀಗ್‌ನ 20ನೇ ಪಂದ್ಯಕ್ಕೆ ಮುಂಬೈ ಸಿಟಿ ಎಫ್ ಸಿ ಹಾಗೂ ಡೆಲ್ಲಿ ಡೈನಮೋಸ್ ತಂಡಗಳು ಮುಖಾಮುಖಿಯಾದವು. ಮನೆಯಂಗಣದಲ್ಲಿ ಪುಣೆ ವಿರುದ್ಧ ನಡೆದ ಪಂದ್ಯದಲ್ಲಿ ಮುಂಬೈ ತಂಡ 2-0 ಗೋಲುಗಳ ಅಂತರದಲ್ಲಿ ಗೆದ್ದು ಪ್ರೇಕ್ಷಕರಿಗೆ ಸಂಭ್ರಮದ ಸವಿ ನೀಡಿತ್ತು. ಈ ವರ್ಷ ಇದುವರೆಗೂ ಜಯ ಕಾಣದ ತಂಡ ಡೆಲ್ಲಿಯ ವಿರುದ್ಧ ಮುಂಬೈ ಮತ್ತೊಂದು ಜಯದ ಹಂಬಲದೊಂದಿಗೆ ಮುಂಬೈ ಫುಟ್ಬಾಲ್ ಅರೆನಾಕ್ಕೆ ಇಳಿಯಿತು.

ಸೋತು ಕಂಗಾಲಾಗಿದ್ದ ಮುಂಬೈ

ಸೋತು ಕಂಗಾಲಾಗಿದ್ದ ಮುಂಬೈ

ಗೋವಾ ವಿರುದ್ಧ ಸೋತು ಕಂಗಾಲಾಗಿರುವ ಮುಂಬೈಗೆ ಆ ಹೀನಾಯ ಸೋಲಿನ ಕಹಿಯನ್ನು ಮರೆಯಲು ಇಲ್ಲೊಂದು ಜಯ ಅಗತ್ಯವಾಗಿ ಬೇಕಾಗಿದೆ. 5 ಗೋಲುಗಳನ್ನು ನೀಡಿರುವುದನ್ನು ಗಮನಿಸಿದಾಗ ಮುಂಬೈಯ ಡಿಫೆನ್ಸ್ ವಿಭಾಗ ಎಷ್ಟು ಬಲಿಷ್ಠವಾಗಿದೆ ಎಂಬುದು ಸ್ಪಷ್ಟವಾಗುತ್ತದೆ. ಫಾರ್ವರ್ಡ್ ವಿಭಾಗದಲ್ಲೂ ಮುಂಬೈಯ ಶಕ್ತಿ ಉತ್ತಮವಾಗಿಲ್ಲ. ಇದುವರೆಗೂ ತಂಡ ಗಳಿಸಿದ್ದು ಕೇವಲ ಮೂರು ಗೋಲು. ಈ ಕಾರಣಕ್ಕಾಗಿ ತಂಡದ ಮನೋಬಲ ಹೆಚ್ಚಬೇಕಾದರೆ ಡೆಲ್ಲಿ ವಿರುದ್ಧ ಜಯ ಗಳಿಸಬೇಕಿತ್ತು.

ಅಟ್ಯಾಕ್ ನಲ್ಲಿ ಡೆಲ್ಲಿ ಡಲ್ಲು

ಅಟ್ಯಾಕ್ ನಲ್ಲಿ ಡೆಲ್ಲಿ ಡಲ್ಲು

ಡೆಲ್ಲಿ ಕೂಡ ಅಟ್ಯಾಕ್ ವಿಭಾಗದಲ್ಲಿ ಹಿಂದೆ ಬಿದ್ದಿದೆ. ಗಳಿಸಿದ್ದು ಕೇವಲ ಮೂರು ಗೋಲು. ಆದರೆ ಡಿಫೆನ್ಸ್ ವಿಭಾಗ ಉತ್ತಮವಾಗಿದೆ. ಫ್ರಾನ್ಸಿಸ್ಕೋ ಡೊರಾನ್ಸೊರೊ ಗೋಲ್‌ಕೀಪಿಂಗ್‌ನಲ್ಲಿ ಉತ್ತಮ ಸಾಧನೆ ಮಾಡಿರುವುದು ತಂಡವನ್ನು ಇದುವರೆಗೂ ರಕ್ಷಣೆ ಮಾಡಿದೆ. ಚೆನ್ನೈಯಿನ್ ವಿರುದ್ಧದ ಪಂದ್ಯದಲ್ಲಿ ಹದಿನಾಲ್ಕು ಬಾರಿ ಗೋಲ್‌ಬಾಕ್ಸ್‌ಗೆ ಗುರಿ ಬಂದಿತ್ತು. ಅವೆಲ್ಲವನ್ನೂ ಡೊರಾನ್ಸೊರರೊ ತಡೆಯುವಲ್ಲಿ ಸಲರಾಗಿದ್ದರು. ಡೆಲ್ಲಿಗೆ ಇಲ್ಲಿ ಮೊದಲ ಜಯದ ಗುರಿ ಇದೆ.

Story first published: Sunday, October 28, 2018, 1:24 [IST]
Other articles published on Oct 28, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X