ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್‌ 2019: ಮೊದಲ ಜಯದ ನಿರೀಕ್ಷೆಯಲ್ಲಿ ನಾರ್ತ್ ಈಸ್ಟ್, ಒಡಿಶಾ

By Isl Media
ISL: NorthEast, Odisha FC hope to come good and grab first win

ಗುವಾಹಟಿ, ಅಕ್ಟೋಬರ್ 26: ಇಲ್ಲಿನ ಇಂದಿರಾ ಗಾಂಧಿ ಅಥ್ಲೆಟಿಕ್ ಕ್ರೀಡಾಂಗಣದಲ್ಲಿ ಶನಿವಾರ ನಡೆಯಲಿರುವ ಇಂಡಿಯನ್ ಸೂಪರ್ ಲೀಗ್ ಪಂದ್ಯದಲ್ಲಿ ನಾರ್ತ್ ಈಸ್ಟ್ ಯುನೈಟೆಡ್ ಹಾಗೂ ಒಡಿಶಾ ಎಫ್ ಸಿ ತಂಡಗಳು ತಮ್ಮ ಮೊದಲ ಜಯದ ನಿರೀಕ್ಷೆಯಲ್ಲಿವೆ.

ಹಾಲಿ ಚಾಂಪಿಯನ್ ಬೆಂಗಳೂರು ಎಫ್‌ಸಿ ವಿರುದ್ಧ ನಡೆದ ಪಂದ್ಯದಲ್ಲಿ ನಾರ್ತ್ ಈಸ್ಟ್ ಯುನೈಟೆಡ್ ಡ್ರಾ ಸಾಧಿಸಿತ್ತು. ಒಡಿಶಾ ಎಫ್ ಸಿ 1-2 ಗೋಲುಗಳ ಅಂತರದಲ್ಲಿ ಜೇಮ್ಶೆಡ್ಪುರ ಎಫ್ ಸಿ ವಿರುದ್ಧ ಸೋಲನುಭವಿಸಿತ್ತು. ಪರ್ವತಪ್ರದೇಶದ ತಂಡ ತನ್ನ ಮನೆಯಂಗಣದ ಪ್ರೇಕ್ಷಕರ ನೆರವಿನ ಬೆಂಬಲ ಪಡೆದು ಮೊದಲ ಜಯದ ನಿರೀಕ್ಷೆಯಲ್ಲಿದೆ.

ಹುಬ್ಬಳ್ಳಿಯಲ್ಲಿ ಒಳಾಂಗಣ ಕ್ರೀಡಾಂಗಣ ಉದ್ಘಾಟಿಸಿದ ಹಿಟ್‌ಮ್ಯಾನ್‌ ರೋಹಿತ್ಹುಬ್ಬಳ್ಳಿಯಲ್ಲಿ ಒಳಾಂಗಣ ಕ್ರೀಡಾಂಗಣ ಉದ್ಘಾಟಿಸಿದ ಹಿಟ್‌ಮ್ಯಾನ್‌ ರೋಹಿತ್

ಪ್ರಧಾನ ಕೋಚ್ ರಾಬರ್ಟ್ ಜರ್ನಿ, ಬಲಿಷ್ಠ ಬೆಂಗಳೂರು ವಿರುದ್ಧ ತಮ್ಮ ತಂಡ ತೋರಿದ ಸಾಧನೆಯ ಬಗ್ಗೆ ತೃಪ್ತಿ ವ್ಯಕ್ತಪಡಿಸಿದ್ದಾರೆ. ಕೇಂದ್ರ ವಿಭಾಗದ ಡಿಫೆನ್ಸ್ ನಲ್ಲಿ ಮಿಸ್ಲಾವ್ ಕೋಮಿರ್ಸ್ಕಿ ಮತ್ತು ಕಯ್ ಹೀರಿಂಗ್ಸ್ ತಂಡಕ್ಕೆ ಉತ್ತಮ ರೀತಿಯಲ್ಲಿ ನೆರವಾಗಿದ್ದಾರೆ. ಕೊಲಂಬಿಯಾದ ಮಿಡ್ ಫೀಲ್ಡರ್ ಜೋಸ್ ಲುಡೊ ಅವರ ಪ್ರಯತ್ನ ತಂಡಕ್ಕೆ ನೆರವವಾಗಿದೆ. ಎದುರಾಳಿ ತಂಡದ ಚೆಂಡಿನ ನಡೆಗೆ ಲುಡೊ ಉತ್ತಮ ರೀತಿಯಲ್ಲಿ ಪ್ರತಿತಂತ್ರ ಹೂಡಿದ್ದು ಬೆಂಗಳೂರಿಗೆ ಗೋಲು ಗಳಿಸಲಾಗಲಿಲ್ಲ.

''ಬೆಂಗಳೂರು ಎಫ್ ಸಿ ವಿರುದ್ಧ ಗಳಿಸಿದ ಅಂಕದ ಬಗ್ಗೆ ನನಗೆ ತೃಪ್ತಿ ಇದೆ. ಹಾಲಿ ಚಾಂಪಿಯನ್ಸ್ ವಿರುದ್ಧ ತಂಡ ಕಠಿಣ ಪರಿಶ್ರಮ ನೀಡಿತ್ತು. ಈಗ ಮನೆಯಂಗಣದಲ್ಲಿ ನಾವು ಆಕ್ರಮಣಕಾರಿ ಫುಟ್ಬಾಲ್ ಆಡಲಿದ್ದೇವೆ. ಅದೇ ರೀತಿಯ ಫುಟ್ಬಾಲ್ ಗೆ ನಾವು ಸಿದ್ಧರಿದ್ದೇವೆ,'' ಜರ್ನಿ ಹೇಳಿದ್ದಾರೆ.

ISL: NorthEast, Odisha FC hope to come good and grab first win

ಫಾರ್ವಾರ್ಡ್ ಆಟಗಾರರು ಸಿಕ್ಕ ಅವಕಾಶವನ್ನು ಗೋಲಾಗಿ ಪರಿವರ್ತಿಸಬೇಕು ಎಂದು ಸ್ಪಷ್ಟ ಪಡಿಸಿದ್ದಾರೆ. ಉರುಗ್ವೆಯ ಆಕ್ರಮಣಕಾರಿ ಮಿಡ್ ಫೀಲ್ಡರ್ ಮಾರ್ಟಿನ್ ಚಾವೆಸ್ ಬೆಂಗಳೂರು ವಿರುದ್ಧ ಉತ್ತಮ ರೀತಿಯಲ್ಲಿ ಪ್ರದರ್ಶನ ತೋರಿದ್ದರು. ಅದೇ ರೀತಿ ಸ್ಟಾರ್ ಸ್ಟ್ರೈಕರ್ ಅಸಮಾಹ್ ಗ್ಯಾನ್ ಉತ್ತಮ ರೀತಿಯಲ್ಲಿ ಆಟ ಪ್ರದರ್ಶಿವಿಸುವ ಸಾಧ್ಯತೆ ಇದೆ.

''ಗ್ಯಾನ್ ಬೆಂಗಳೂರು ವಿರುದ್ಧ ಗೋಲು ಗಳಿಸಲು ಉತ್ತಮ ಅವಕಾಶ ಹೊಂದಿದ್ದರು, ಬೆಂಗಳೂರು ವಿರುದ್ಧ ಗೋಲು ಗಳಿಸುವುದು ಬಹಳ ಕಠಿಣ. ಇಲ್ಲಿ ಪ್ರತಿಯೊಬ್ಬರೂ ಅವರನ್ನು ಬಲ್ಲರು, ನಮಗೆ ಅವರು ಅತ್ಯಂತ ಪ್ರಮುಖ ಆಟಗಾರ, ಎಂದು ಕೋಚ್ ಹೇಳಿದರು.

ತಮಿಳುನಾಡು ಮಣಿಸಿ 4ನೇ ಬಾರಿಗೆ ವಿಜಯ್ ಹಜಾರೆ ಕಪ್‌ ಗೆದ್ದ ಕರ್ನಾಟಕ!ತಮಿಳುನಾಡು ಮಣಿಸಿ 4ನೇ ಬಾರಿಗೆ ವಿಜಯ್ ಹಜಾರೆ ಕಪ್‌ ಗೆದ್ದ ಕರ್ನಾಟಕ!

ಒಡಿಶಾ ತಂಡಕ್ಕೆ ಸಿಕ್ಕ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳುವುದೇ ಮುಖ್ಯವಾಗಿದೆ. ಜೇಮ್ಶೆಡ್ಪುರ ವಿರುದ್ಧದ ಪಂದ್ಯದಲ್ಲಿ ಒಡಿಶಾ ಸಾಕಷ್ಟು ಬಾರಿ ತಡೆಯನ್ನೆದುರಿಸಿತ್ತು, ಎದುರಾಳಿ ತಂಡದಲ್ಲಿ ಕೇವಲ ಹತ್ತು ಆಟಗಾರಿದ್ದರೂ, ಯಶಸ್ಸು ಸಿಕ್ಕಿರಲಿಲ್ಲ. ಎರಡನೇ ಗೋಲನ್ನು ಹೇಗೆ ನೀಡಿದರು ಎಂದು ಕೋಚ್ ಜೋಸೆಫ್ ಗೊಂಬಾವ್ ಹತಾಶೆಯಿಂದ ಯೋಚಿಸಿದ್ದಾರೆ. ಗ್ಯಾನ್ ಮತ್ತು ಚಾವೆಸ್ ಅವರಂತ ಆಟಗಾರರನ್ನು ಹೊಂದಿರುವ ಒಡಿಶಾದ ವಿರುದ್ಧ ಕಾರ್ಲಸ್ ಡೆಲ್ಗಡೊ ಅವರ ಡಿಫೆನ್ಸ್ ವಿಭಾಗ ಎಚ್ಚೆತ್ತುಕೊಳ್ಳಬೇಕಾಗಿದೆ.

ಸ್ಪೇನ್ ಮಾದರಿಯ ಆಟವನ್ನು ಪ್ರದರ್ಶಿಸುತ್ತಿರುವ ಒಡಿಶಾ ಅತ್ಯಂತ ಎಚ್ಚರಿಕೆಯಿಂದ ಪ್ರತಿದಾಳಿಗೆ ಸಜ್ಜಾಗಬೇಕಿದೆ. '' ನಮಗೆ ನಮ್ಮದೇ ಆದ ಆಟದ ರೀತಿ ಇದೆ. ನಾವು ನಮ್ಮ ವಿರುದ್ಧ ಆಡುತ್ತಿರುವ ತಂಡವನ್ನು ಗೌರವಿಸುತ್ತೇವೆ. ನಮ್ಮ ಆಟಗಾರರ ಬಗ್ಗೆ ತೃಪ್ತಿ ಇದೆ. ಜೇಮ್ಶೆಡ್ಪುರ ವಿರುದ್ಧ ನಾವು ಕಂಡ ಫಲಿತಾಂಶದ ಬಗ್ಗೆ ಪ್ರತಿಯೊಂದು ಆಟಗಾರರೊಂದಿಗೆ ಚರ್ಚಿಸಿದ್ದೇವೆ. ನಮಗೆ ಕೆಲವು ಅವಕಾಶ ಇದ್ದಿತ್ತು, ಆದರೆ ಗೋಲು ಗಳಿಸಲು ಸಾಧ್ಯವಾಗಲಿಲ್ಲ,'' ಎಂದು ಗೊಂಬಾವ್ ಹೇಳಿದ್ದಾರೆ.

ಬಿಸಿಸಿಐ ಅಧ್ಯಕ್ಷರಾದ ಬೆನ್ನಲ್ಲೇ ಮಹತ್ವದ ಹೆಜ್ಜೆಯನ್ನಿಟ್ಟ ಸೌರವ್ ಗಂಗೂಲಿಬಿಸಿಸಿಐ ಅಧ್ಯಕ್ಷರಾದ ಬೆನ್ನಲ್ಲೇ ಮಹತ್ವದ ಹೆಜ್ಜೆಯನ್ನಿಟ್ಟ ಸೌರವ್ ಗಂಗೂಲಿ

ಅರಿಡ್ಯಾನ್ ಸ್ಯಾಂಟಾನ್ ತಂಡದ ಪರ ಗೋಲ್ ಗಳಿಸುವ ಸಾಮರ್ಥ್ಯ ಹೊಂದಿರುವ ಆಟಗಾರ, ಜೇಮ್ಶೆಡ್ಪುರ ವಿರುದ್ಧ ತೋರಿದ ಆಟವನ್ನೇ ಮುಂದುವರಿಸಿದರೆ, ಒಡಿಶಾ ಯಶಸ್ಸು ಖಚಿತ, ಅದೇ ಪಂದ್ಯದಲ್ಲಿ ಬೆಂಗಳೂರು ಎಫ್ ಸಿ ತಂಡದ ಮಾಜಿ ಆಟಗಾರ ಕ್ಸಿಸ್ಕೋ ಹೆರ್ನಾಂಡೀಸ್ ಕೂಡ ಅದೇ ಪಂದ್ಯದಲ್ಲಿ ಉತ್ತಮ ಪ್ರದರ್ಶನ ತೋರಿದ್ದರು. ಅದೇ ರೀತಿ ನಾಳೆ ಕಠಿಣ ತಂಡವೊಂದರ ವಿರುದ್ಧ ಪ್ರದರ್ಶನ ತೋರಬಹುದು ಎಂಬುದು ಒಡಿಶಾ ಕೋಚ್ ನಿರೀಕ್ಷೆ,

ಯಾವುದೇ ಫಿಟ್ನೆಸ್ ಸಮಸ್ಯೆಯನ್ನು ಕಾಣದ ಇತ್ತಂಡಗಳು ಮಿಖಾಮುಖಿಯಾಗುತ್ತಿದ್ದು, ತಮಗೆ ಅತಿ ಮುಖ್ಯವೆನಿಸಿರುವ ಮೊದಲ ಜಯದ ನಿರೀಕ್ಷೆಯಲ್ಲಿವೆ.

Story first published: Friday, October 25, 2019, 21:20 [IST]
Other articles published on Oct 25, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X