ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಕತಾರ್‌ 2022 ನನ್ನ ಅಂತಿಮ ಫಿಫಾ ವಿಶ್ವಕಪ್ ಎಂದ ಫುಟ್ಬಾಲ್ ದಿಗ್ಗಜ ಲಿಯೋನೆಲ್ ಮೆಸ್ಸಿ

Legendary Football player Lionel Messi announces Qatar 2022 will be his Final FIFA World Cup

ಫುಟ್ಬಾಲ್ ಲೋಕದ ದಿಗ್ಗಜ ಆಟಗಾರ ಲಿಯೋನೆಲ್ ಮೆಸ್ಸಿ ಮಹತ್ವದ ಘೋಷಣೆಯೊಂದನ್ನು ಮಾಡಿದ್ದಾರೆ. ಕತಾರ್ ವಿಶ್ವಕಪ್ ತಮ್ಮ ಫುಟ್ಬಾಲ್ ವೃತ್ತಿಜೀವನದ ಅಂತಿಮ ವಿಶ್ವಕಪ್ ಆಗಿರಲಿದೆ ಎಂಬುದನ್ನು ಲಿಯೋನೆಲ್ ಮೆಸ್ಸಿ ಬಹಿರಂಗಪಡಿಸಿದ್ದಾರೆ. ಈ ಮೂಲಕ 2026ರಲ್ಲಿ ಯುಎಸ್ಎ, ಕೆನಡಾ ಹಾಘೂ ಮೆಕ್ಸಿಕೋದಲ್ಲಿ ನಡೆಯಲಿರುವ ವಿಶ್ವಕಪ್‌ನಲ್ಲಿ ತಾನು ಭಾಗವಹಿಸುವದಿಲ್ಲ ಎಂಬುದನ್ನು ಖಚಿತಪಡಿಸಿದ್ದಾರೆ.

ಅರ್ಜೆಂಟೈನಾದ ಖ್ಯಾತ ಕ್ರೀಡಾ ಪತ್ರಕರ್ತ ಸೆಬಾಸ್ಟಿಯನ್ ವಿಗ್ನೋಲೋ ಅವರೊಂದಿಗೆ ನಡೆಸಿದ ಸಂವಾದದ ಸಂದರ್ಭದಲ್ಲಿ ಈ ವಿಚಾರವನ್ನು ಲಿಯೋನೆಲ್ ಮೆಸ್ಸಿ ಸ್ಪಷ್ಟವಾಗಿ ಹೇಳಿಕೊಂಡಿದ್ದಾರೆ. "ಖಂಡಿತವಾಗಿಯೂ ಇದು ನನ್ನ ಅಂತಿಮ ವಿಶ್ವಕಪ್ ಆಗಿರುತ್ತದೆ. ಈ ನಿರ್ಧಾರವನ್ನು ಅದಾಗಲೇ ತೆಗೆದುಕೊಂಡಾಗಿದೆ" ಎಂದು ಮಾತುಕತೆಯ ಸಂದರ್ಭದಲ್ಲಿ ಮೆಸ್ಸಿ ಹೇಳಿದ್ದಾರೆ.

ಟಿ20 ವಿಶ್ವಕಪ್ ಗೆಲ್ಲಬಲ್ಲ ಎರಡು ತಂಡಗಳನ್ನು ಊಹಿಸಿದ ಇಂಗ್ಲೆಂಡ್ ಸ್ಟಾರ್: ಭಾರತವೂ ಇದೆಯಾ?ಟಿ20 ವಿಶ್ವಕಪ್ ಗೆಲ್ಲಬಲ್ಲ ಎರಡು ತಂಡಗಳನ್ನು ಊಹಿಸಿದ ಇಂಗ್ಲೆಂಡ್ ಸ್ಟಾರ್: ಭಾರತವೂ ಇದೆಯಾ?

"ನಾನು ವಿಶ್ವಕಪ್‌ನ ಆರಂಭಕ್ಕೆ ಈಗ ದಿನಗಳನ್ನು ಎಣಿಸುತ್ತಿದ್ದೇನೆ. ನಿಜ ಹೆಳಬೇಕೆಂದರೆ ನನಗೆ ಸ್ವಲ್ಪ ಆತಂಕವಿದೆ. ಯಾಕೆಂದರೆ ಇದು ನನ್ನ ಕೊನೆಯ ವಿಶ್ವಕಪ್ ಆಗಿರಲಿದೆ. ಇದು ಯಾವ ರೀತಿ ನಡೆಯಲಿದೆ ಎಂಬುದು ಒಂದೆಡೆಯಾದರೆ, ವಿಶ್ವಕಪ್‌ನ ಆರಂಭಕ್ಕೆ ಕಾಯುವುದು ನನ್ನಿಂದ ಸಾಧ್ಯವಾಗುತ್ತಿಲ್ಲ. ಈ ಬಾರಿ ಅತ್ಯುತ್ತಮವಾಗಿ ನಡೆಯಬೇಕಿದೆ" ಎಂದು ಲಿಯೋನೆಲ್ ಮೆಸ್ಸಿ ಪ್ರತಿಕ್ರಿಯಿಸಿದ್ದಾರೆ.

"ಈಗ ನಾವು ಅತ್ಯುತ್ತಮ ಕ್ಷಣದಲ್ಲಿದ್ದೇದ್ದು ಅತ್ಯುತ್ತಮವಾದ ಆಟಗಾರರ ಪಡೆಯನ್ನು ಹೊಂದಿದ್ದೇವೆ. ಆದರೆ ವಿಶ್ವಕಪ್‌ನಂತಾ ವೇದಿಕೆಯಲ್ಲಿ ಏನು ಬೇಕಾದರೂ ನಡೆಯಬಹುದು. ಎಲ್ಲಾ ಪಂದ್ಯಗಳು ಕೂಡ ಕಠಿಣವಾಗಿರುತ್ತದೆ. ಇಲ್ಲಿ ಚಾಂಪಿಯನ್ ಆಗುವ ನೆಚ್ಚಿನ ತಂಡಗಳು ಯಾವಾಗಲೂ ಗೆಲ್ಲಲು ಸಾಧ್ಯವಾಗುವುದಿಲ್ಲ, ಅಥವಾ ನೀವು ನಿರೀಕ್ಷಿಸಿದಷ್ಟು ಉತ್ತಮವಾಗಿ ಪ್ರದರ್ಶನ ನೀಡುವುದಿಲ್ಲ. ಆ ಕಾರಣದ್ಇಂದಾಗಿಯೇ ವಿಶ್ವಕಪ್ ಎಂಬುವುದು ಯಾವಾಗಲೂ ವಿಶೇಷವಾಗಿರುತ್ತದೆ" ಎಂದಿದ್ದಾರೆ ಲಿಯೋನೆಲ್ ಮೆಸ್ಸಿ.

ಫಿಫಾ ವಿಶ್ವಕಪ್ ವೇದಿಕೆಯಲ್ಲಿ ಲಿಯೋನೆಲ್ ಮೆಸ್ಸಿ ಪ್ರದರ್ಶನ ಅವರ ಸಾಮರ್ಥ್ಯಕ್ಕೆ ತಕ್ಕನಾಗಿಲ್ಲ ಎಂಬುದನ್ನು ಅಂಕಿಅಂಶಗಳು ಹೇಳುತ್ತವೆ. ಅರ್ಜೆಂಟೀನಾದ ಸ್ಟಾರ್ ಆಟಗಾರ ವಿಶ್ವಕಪ್‌ನಲ್ಲಿ 19 ಪಂದ್ಯಗಳನ್ನು ಆಡಿದ್ದು ಈ ಪೈಕಿ ಆರು ಗೋಲುಗಳನ್ನು ಮಾತ್ರವೇ ಗಳಿಸಿದ್ದಾರೆ. 2006, 2010, 2014 ಮತ್ತು 2018ರ ಫಿಫಾ ವಿಶ್ವಕಪ್‌ನಲ್ಲಿ ಆಡಿರುವ ಮೆಸ್ಸಿಯ ಸ್ಕೋರಿಂಗ್ ರೇಟ್ ಪ್ರತಿ ಪಂದ್ಯಕ್ಕೆ ಕೇವಲ 0.32 ಗೋಲುಗಳು ಎಂದು ಅಂಕಿ ಅಂಶಗಳು ಹೇಳುತ್ತಿದೆ. ಹಾಗಿದ್ದರೂ ಇದು ಅನೇಕರಿಗೆ ಪ್ರಭಾವಶಾಲಿ ಅಂಕಿಅಂಶವಾಗಿದೆಯಾದರೂ ಅರ್ಜೆಂಟೀನಾ ತಂಡದ ಪರವಾಗಿ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಅವರ ಪ್ರತಿ ಪಂದ್ಯದ ಸ್ಕೋರಿಂಗ್ ರೇಟ್ 0.53 ಗೋಲುಗಳಿಗೆ ಹೋಲಿಸಿದರೆ ಫಿಫಾ ವಿಶ್ವಕಪ್‌ನಲ್ಲಿ ಕಡಿಮೆಯಿರುವುದು ಗಮನಿಸಬಹುದಾಗಿದೆ.

T20 World Cup: ಜಸ್ಪ್ರೀತ್ ಬುಮ್ರಾ ಅನುಪಸ್ಥಿತಿ ಭಾರತ ತಂಡಕ್ಕೆ ದೊಡ್ಡ ಸಮಸ್ಯೆಯಲ್ಲ ಎಂದ ಮಾಜಿ ಆಟಗಾರT20 World Cup: ಜಸ್ಪ್ರೀತ್ ಬುಮ್ರಾ ಅನುಪಸ್ಥಿತಿ ಭಾರತ ತಂಡಕ್ಕೆ ದೊಡ್ಡ ಸಮಸ್ಯೆಯಲ್ಲ ಎಂದ ಮಾಜಿ ಆಟಗಾರ

ಕ್ರೀಡಾಲೋಕದ ಅನೇಕ ದಿಗ್ಗಜರಿಗೆ ಆಗಿರುವಂತೆಯೇ ಲಿಯೋನೆಲ್ ಮೆಸ್ಸಿಗೂ ವಿಶ್ವಕಪ್ ಎಂಬುದು ಈವರೆಗೂ ಗಗನಕುಸುಮವಾಗಿಯೇ ಉಳಿದುಕೊಂಡಿದೆ. ಪ್ರತಿ ನಾಲ್ಕುವರ್ಷಗಳಿಗೊಮ್ಮೆ ಟ್ರೋಫಿಗಾಗಿ ಸರ್ವಪ್ರಯತ್ನ ನಡೆಸಿದರೂ ಈವರೆಗೂ ಅದು ಸಾಧ್ಯವಾಗಿಲ್ಲ. 2014ರಲ್ಲಿ ರಷ್ಯಾದಲ್ಲಿ ನಡೆದ ವಿಶ್ವಕಪ್‌ನಲ್ಲಿ ಚಾಂಪಿಯನ್ ಪಟ್ಟಕ್ಕೇರುವ ಸನಿಹಕ್ಕೆ ಬಂದಿದ್ದರೂ ಜರ್ಮನಿ ತಂಡದ ವಿರುದ್ಧ ಸೋಲು ಅನುಭವಿಸುವ ಮೂಲಕ ಕನಸು ಭಗ್ನಗೊಂಡಿತ್ತು.

ಈ ಬಾರಿಯ ವಿಶ್ವಕಪ್‌ನಲ್ಲಿ ಅರ್ಜೆಂಟೈನಾ ನವೆಂಬರ್ 22ರಂದು ಸೌದಿ ಅರೇಬಿಯಾ ತಂಡದ ವಿರುದ್ಧ ಸೆಣೆಸಾಡುವ ಮೂಲಕ ಅಭಿಯಾನವನ್ನು ಆರಂಭಿಸಲಿದೆ

Story first published: Friday, October 7, 2022, 2:14 [IST]
Other articles published on Oct 7, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X