ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ವಿಶ್ವಕಪ್ ಗೆಲುವಿನ ಬೆನ್ನಲ್ಲೇ ಅಭಿಮಾನಿಗಳಲ್ಲಿ ಮತ್ತೊಂದು ಖುಷಿ ಸುದ್ದಿ ಹಂಚಿಕೊಂಡ ಮೆಸ್ಸಿ!

Lionel Messi statement on retirement said want to continue few more games being world champion

ಲಿಯೋನೆಲ್ ಮೆಸ್ಸಿ ನೇತೃತ್ವದಲ್ಲಿ ಅರ್ಜೆಂಟಿನಾ ತಂಡ ಈ ಬಾರಿಯ ಫಿಫಾ ವಿಶ್ವಕಪ್ ಫೈನಲ್ ಪಂದ್ಯವನ್ನು ಗೆದ್ದುಕೊಂಡಿದ್ದು ಚಾಂಪಿಯನ್ ಪಟ್ಟಕ್ಕೇರಿದೆ. 35ರ ಹರೆಯದ ವಿಶ್ವ ಫುಟ್ಬಾಲ್‌ನ ದಿಗ್ಗಜ ಆಟಗಾರ ಮೆಸ್ಸಿ ಈ ಅದ್ಭುತ ಕ್ಷಣವನ್ನು ಆನಂದಿಸುತ್ತಿದ್ದಾರೆ. ತಮ್ಮ ಸುದೀರ್ಘ ಕಾಲದ ವೃತ್ತಿ ಜೀವನದಲ್ಲಿ ಈವರೆಗೆ ಸಾಧ್ಯವಾಗದಿರುವುದನ್ನು ಈ ಬಾರಿ ಸಾಧಿಸಿರುವ ಮೆಸ್ಸಿ ಅಭಿಮಾಣಿಗಳಿಗೆ ಮತ್ತೊಂದು ಸಂತಸದ ಸುದ್ದಿಯನ್ನು ಹಂಚಿಕೊಂಡಿದ್ದಾರೆ.

ಲಿಯೋನೆಲ್ ಮೆಸ್ಸಿ ಈ ವಿಶ್ವಕಪ್‌ನ ಮುಕ್ತಾಯದ ಬಳಿಕ ನಿವೃತ್ತಿ ಘೋಷಿಸಬಹುದು ಎಂಬ ಸುದ್ದಿಗಳು ಹರಿದಾಡಿದ್ದವು. ಅದಕ್ಕೆ ಪೂರಕವಾಗಿ ಇತ್ತೀಚೆಗೆ ಅರ್ಜೆಂಟಿನಾದ ಮಾಧ್ಯಮಕ್ಕೆ ಮೆಸ್ಸಿ ನೀಡಿದ ಸಂದರ್ಶನದ ಹೆಲಿಕೆಗಳು ಕೂಡ ಅಭಿಮಾನಿಗಳಲ್ಲಿ ಗೊಂದಲ ಮೂಡಿಸಿದ್ದವು. ಆದರೆ ಇದೀಗ ಸ್ವತಃ ಲಿಯೋನೆಲ್ ಮೆಸ್ಸಿ ಪ್ರತಿಕ್ರಿಒಯೆ ನಿಡಿದ್ದು ಸದ್ಯಕ್ಕೆ ತಾನು ನಿವೃತ್ತಿ ಘೋಷಣೆ ಮಾಡುವುದಿಲ್ಲ ಎಂಬುದನ್ನು ಖಚಿತಪಡಿಸಿದ್ದಾರೆ. ವಿಶ್ವಕಪ್ ಗೆದ್ದ ಸಂಭ್ರಮವನ್ನು ಅರ್ಜೆಂಟಿನಾ ತಂಡದ ಜರ್ಸಿಯನ್ನು ಧರಿಸಿಕೊಂಡೇ ಮತ್ತಷ್ಟು ಸಮಯಗಳ ಕಾಲ ಆನಂದಿಸುವುದಾಗಿ ಹೇಳಿದ್ದಾರೆ.

ವಿಶ್ವ ಚಾಂಪಿಯನ್ ಆಗಿ ಮತ್ತಷ್ಟು ಪಂದ್ಯಗಳನ್ನು ಆಡುವ ಬಯಕೆ

ವಿಶ್ವ ಚಾಂಪಿಯನ್ ಆಗಿ ಮತ್ತಷ್ಟು ಪಂದ್ಯಗಳನ್ನು ಆಡುವ ಬಯಕೆ

"ನಾನು ನನ್ನ ವೃತ್ತಿ ಜೀವನವನ್ನು ಇದರೊಂದಿಗೆ ಅಂತ್ಯಗೊಳಿಸಲು ಬಯಸಿದ್ದೆ. ಸುದೀರ್ಘ ಕಾಲದಿಂದ ನಾನು ಮಿಸ್ ಮಾಡಿಕೊಂಡಿದ್ದ ಪ್ರಶಸ್ತಿ ಇದಾಗಿತ್ತು. ಇದನ್ನು ಬಿಟ್ಟು ಬೇರೆ ಏನನ್ನೂ ನಾನು ಬಯಸಿರಲಿಲ್ಲ. ಕೊಪಾ ಅಮೆರಿಕಾ ಪ್ರಶಸ್ತಿ ಪಡೆಯಲು ಸಾಧ್ಯವಾಗಿತ್ತು. ಈಗ ವಿಶ್ವಕಪ್‌ಗಾಗಿ ನಾನು ಸಾಕಷ್ಟು ಪರಿಶ್ರಮಪಟ್ಟಿದ್ದೇನೆ. ಆದರೆ ನಾನು ಫುಟ್‌ಬಾಲನ್ನು ಸಾಕಷ್ಟು ಪ್ರೀತಿಸುತ್ತೇನೆ. ಹಾಗಾಗಿ ವಿಶ್ವ ಚಾಂಪಿಯನ್ ಆಗಿ ಇನ್ನು ಕೆಲ ಪಂದ್ಯಗಳನ್ನು ಅರ್ಜೆಂಟಿನಾ ತಂಡದ ಪರವಾಗಿ ಆಡಲು ಬಯಸುತ್ತೇನೆ" ಎಂದಿದ್ದಾರೆ ಲಿಯೋನೆಲ್ ಮೆಸ್ಸಿ.

ಎರಡನೇ ಬಾರಿಗೆ ಬೆಸ್ಟ್ ಪ್ಲೇಯರ್ ಎನಿಸಿಕೊಂಡ ಮೆಸ್ಸಿ

ಎರಡನೇ ಬಾರಿಗೆ ಬೆಸ್ಟ್ ಪ್ಲೇಯರ್ ಎನಿಸಿಕೊಂಡ ಮೆಸ್ಸಿ

ಇನ್ನು ಈ ಬಾರಿಯ ವಿಶ್ವಕಪ್‌ನಲ್ಲಿ ಲಿಯೋನೆಲ್ ಮೆಸ್ಸಿ ಅಮೋಘ ಪ್ರದರ್ಶನ ನೀಡಿ ವಿಶ್ವಕಪ್ ಗೆಲುವಿನಲ್ಲಿ ಮಹತ್ವದ ಪಾತ್ರವಹಿಸಿದರು. ಈ ಮೂಲಕ ಈ ಬಾರಿಯ ವಿಶ್ವಕಪ್‌ನಲ್ಲಿ ಅತ್ಯುತ್ತಮ ಆಟಗಾರನಿಗೆ ನೀಡುವ ಗೋಲ್ಡನ್ ಬಾಲ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಈ ಮೂಲಕ ವಿಶ್ವಕಪ್‌ನಲ್ಲಿ ಎರಡನೇ ಬಾರಿಗೆ ಈ ಸಾಧನೆ ಮಾಡಿದ್ದಾರೆ ಮೆಸ್ಸಿ. 2014ರಲ್ಲಿ ಅರ್ಜೆಂಟಿನಾ ಫೈನಲ್‌ಗೆ ಪ್ರವೇಶಿಸಿದ್ದಾಗಲೂ ಮೆಸ್ಸಿ ಅತ್ಯುತ್ತಮ ಆಟಗಾರ ಪ್ರಶಸ್ತಿ ತಮ್ಮ ಮುಡಿಗೇರಿಸಿಕೊಂಡಿದ್ದರು. ಈ ಮೂಲಕ ಫುಟ್ಬಾಲ್ ವಿಶ್ವಕಪ್ ಇತಿಹಾಸದಲ್ಲಿ ಎರಡನೇ ಬಾರಿಗೆ ಗೋಲ್ಡನ್ ಬಾಲ್ ಪಡೆದ ಮೊದಲ ಆಟಗಾರ ಎನಿಸಿಕೊಂಡಿದ್ದಾರೆ.

ಮೆಸ್ಸಿ ಅಮೋಘ ಆಟ

ಮೆಸ್ಸಿ ಅಮೋಘ ಆಟ

ಈ ಬಾರಿಯ ವಿಶ್ವಕಪ್‌ನಲ್ಲಿ ಸಹಜವಾಗಿಯೇ ದಿಗ್ಗಜ ಆಟಗಾರ ಲಿಯೋನೆಲ್ ಮೆಸ್ಸಿ ಮೇಲೆ ಭಾರೀ ನಿರೀಕ್ಷೆಯಿತ್ತು. ವಿಶ್ವಕಪ್ ಟ್ರೋಫಿ ಗೆಲ್ಲಲು ಮೆಸ್ಸಿಗೆ ಇದು ಅಂತಿಮ ಅವಕಾಶವೆಂದೇ ಬಿಂಬಿತವಾಗಿತ್ತು. ಈ ಎಲ್ಲಾ ಒತ್ತಡಗಳ ಮಧ್ಯೆಯೂ ಮೆಸ್ಸಿ ತಮ್ಮ ಅತ್ಯುತ್ತಮ ಪ್ರದರ್ಶನವನ್ನು ನೀಡುವಲ್ಲಿ ಯಶಸ್ವುಯಾದರು. ಈ ವಿಶ್ವಕಪ್‌ನ್ಲಲಿ ಮೆಸ್ಸು ಒಟ್ಟು 7 ಗೋಲುಗಳನ್ನು ಬಾರಿಸಿದ್ದು 4 ಅಸಿಸ್ಟ್‌ಗಳನ್ನು ಮಾಡಿದ್ದಾರೆ. ಈ ಮೂಲಕ ಅರ್ಜೆಂಟಿನಾ ಯಶಸ್ಸಿನಲ್ಲಿ ಮೆಸ್ಸಿ ಸಿಂಹಪಾಲಿದೆ ಎಂಬುದರಲ್ಲಿ ಅನುಮಾನವಿಲ್ಲ.

Story first published: Monday, December 19, 2022, 10:53 [IST]
Other articles published on Dec 19, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X