ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಫೀಫಾ: ರೋಚಕ ಪಂದ್ಯದಲ್ಲಿ ಆತಿಥೇಯ ರಷ್ಯಾ ಸೋಲಿಸಿದ ಕ್ರೋಷಿಯಾ

Rakitics penalty kick sends Croatia to World Cup semifinals

ಮಾಸ್ಕೋ, ಜು. 8: ರಷ್ಯಾದ ಫಿಶ್ಟ್ ಸ್ಟೇಡಿಯಂನಲ್ಲಿ ನಡೆದಿದ್ದ ಕುತೂಹಲಕಾರಿ ರಷ್ಯಾ-ಕ್ರೋಷಿಯಾ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಪೆನಾಲ್ಟಿ ಶೂಟೌಟ್ ಆಧಾರದಲ್ಲಿ ಆತಿಥೇಯ ರಷ್ಯಾಗೆ ಕ್ರೋಷಿಯಾ 4-3ರ ಸೋಲುಣಿಸುವ ಮೂಲಕ ಸೆಮಿಫೈನಲ್ ಗೆ ಪ್ರವೇಶಿಸಿದೆ. ಪಂದ್ಯದ ಹೆಚ್ಚುವರಿ ಅವಧಿ ಮುಕ್ತಾಯದ ಬಳಿಕವೂ ಇತ್ತಂಡಗಳ ಅಂಕ 2-2ಕ್ಕೆ ನಿಂತಿತ್ತು. ಆಗ ಪೆನಾಲ್ಟಿ ಶೂಟೌಟ್ ಗೆ ಅವಕಾಶ ನೀಡಲಾಯ್ತು.

ಪಂದ್ಯದ ಸ್ಕೋರ್ ಕಾರ್ಡ್

ಪಂದ್ಯಾರಂಭದಲ್ಲಿ ರಷ್ಯಾ ತಂಡವೇ ಮೊದಲು ಗೋಲ್ ಖಾತೆ ತೆರೆದಿತ್ತು. ರಷ್ಯಾದ ಡೆನಿಸ್ ಚೆರಿಶೆವ್ ಅವರು 31ನೇ ನಿಮಿಷದಲ್ಲಿ ಗೋಲ್ ಬಾರಿಸಿ ತಂಡಕ್ಕೆ ಮುನ್ನಡೆ ಕೊಟ್ಟಿದ್ದರು. ಆದರೆ ತೀವ್ರ ಪೈಪೋಟಿ ನಡೆಸಿದ ಕ್ರೋಷಿಯಾ ಕೂಡ 39ನೇ ನಿಮಿಷದಲ್ಲಿ ಗೋಲ್ ಬಾರಿಸಿತು. ಕ್ರೋಷಿಯಾದ ಆಂಡ್ರೆಜ್ ಕ್ರಮರಿಕ್ ಅವರು 39ನೇ ನಿಮಿಷದಲ್ಲಿ ಅಂಕವನ್ನು 1-1ಕ್ಕೆ ಸರಿದೂಗಿಸಿದ್ದರು.

ಪಂದ್ಯದ ದ್ವಿತೀಯಾರ್ಧ ಮುಕ್ತಾಯದವರೆಗೂ ಇತ್ತಂಡಗಳ ಅಂಕ 1-1ರಲ್ಲೇ ಉಳಿದಿದ್ದರಿಂದ ಪಂದ್ಯವನ್ನು ಹೆಚ್ಚುವರಿ ಕಾಲಾವಧಿ ನೀಡಿ ಮುಂದುವರೆಸಲಾಯ್ತು. ವಿಶೇಷವೆಂದರೆ ಹೆಚ್ಚುವರಿ ಕಾಲಾವಧಿಯಲ್ಲೂ ಇತ್ತಂಡಗಳು 2-2ರಿಂದ ಪಂದ್ಯ ಸಮಬಲ ಸಾಧಿಸಿದ್ದವು. ಕ್ರೋಷಿಯಾದ ಡೊಮಾಗೊಜ್ ವಿಡಾ 101ನೇ ನಿಮಿಷದಲ್ಲಿ ಸಿಡಿಸಿದ ಗೋಲ್ ಮತ್ತು ರಷ್ಯಾದ ಮಾರಿಯೋ ಫೆರ್ನಾಂಡಿಸ್ ಅವರು 115ನೇ ನಿಮಿಷದಲ್ಲಿ ಬಾರಿಸಿದ ಗೋಲ್ ಪಂದ್ಯದ ಫಲಿತಾಂಶವನ್ನು ಹಿಡಿದಿಟ್ಟುಕೊಂಡಿತು.

ಇತ್ತಂಡಗಳ ಕಾದಾಟ ಬರೋಬ್ಬರಿ 122 ನಿಮಿಷಗಳವರೆಗೆ ಮುಂದುವರೆದಿದ್ದು ಭರ್ಜರಿ ಕಾಳಗಕ್ಕೆ ಸಾಕ್ಷಿಯಾಗಿತ್ತು. ಇಷ್ಟಾಗಿಯೂ ಎರಡೂ ತಂಡಗಳ ಅಂಕ 2-2ರಲ್ಲೇ ಉಳಿದ ಕಾರಣ ಅಂತಿಮವಾಗಿ ಪೆನಾಲ್ಟಿ ಶೂಟೌಟ್ ಗೆ ಅವಕಾಶ ನೀಡಲಾಯ್ತು. ಈ ವೇಳೆಯೂ ಇತ್ತಂಡಗಳು ಗೋಲ್ ಗಾಗಿ ಭರ್ಜರಿ ಪೈಪೋಟಿ ನಡೆಸಿತಾದರೂ ಅಂತಿಮವಾಗಿ ಕ್ರೋಷಿಯಾ (2+4 ಗೋಲ್ ಗಳು) ತಂಡ ಆತಿಥೇಯರನ್ನು (2+3ಗೋಲ್ ಗಳು) ಸೋಲಿಸಿತು.

Story first published: Sunday, July 8, 2018, 4:37 [IST]
Other articles published on Jul 8, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X