ಫೀಫಾ ವಿಶ್ವಕಪ್: ಸೌದಿ ಅರೇಬಿಯಾ ವಿರುದ್ಧ ರಷ್ಯಾಕ್ಕೆ 2-0ರ ಮುನ್ನಡೆ

ಮಾಸ್ಕೊ, ಜೂನ್ 14: ಬಹು ಆಕರ್ಷಣೀಯ 2018ರ ಫೀಫಾ ಫುಟ್ಬಾಲ್ ಪಂದ್ಯಾಟದ ಸೌದಿ ಅರೇಬಿಯಾ ಮತ್ತು ಆತಿಥೇಯ ರಷ್ಯಾ ತಂಡಗಳ ಆರಂಭಿಕ ಪಂದ್ಯದ ಮೊದಲಾರ್ಧದಲ್ಲಿ ರಷ್ಯಾ 2-0 ಅಂತರದ ಮುನ್ನಡೆ ಸಾಧಿಸಿದೆ.

1
958022

ರಷ್ಯಾ ಎರಡು ಗೋಲುಗಳನ್ನು ದಾಖಲಿಸಿ ಮುನ್ನಡೆಯಲ್ಲಿದ್ದು, ಭವಿಷ್ಯಕಾರ ಬೆಕ್ಕು ಅಚಿಲ್ಸ್ ನುಡಿದಿದ್ದ ಭವಿಷ್ಯ ನಿಜವಾಗುವುದರಲ್ಲಿದೆ. ಅಚಿಲ್ಸ್ ಈ ಪಂದ್ಯಕ್ಕೂ ಮುನ್ನವೇ ಆರಂಭಿಕ ಪಂದ್ಯದಲ್ಲಿ ಆತಿಥೇಯ ರಷ್ಯಾ ಗೆಲ್ಲುವುದಾಗಿ ಭವಿಷ್ಯ ಹೇಳಿತ್ತು.

ಕುತೂಹಲ ಮೂಡಿಸಿದ್ದ ಆರಂಭಿಕ ಪಂದ್ಯದಲ್ಲಿ ಯೂರಿ ಗಜೀನ್ಸ್ಕಿ ಅವರು 12ನೇ ನಿಮಿಷದಲ್ಲಿ ಮೊದಲ ಗೋಲು ಬಾರಿಸಿ ರಷ್ಯಾಕ್ಕೆ 1-0 ಅಂತರದ ಮುನ್ನಡೆ ತಂದು ಕೊಟ್ಟರು. ಅನಂತರ 43ನೇ ನಿಮಿಷದಲ್ಲಿ ಡೆನಿಸ್ ಡಿಮಿಟ್ರಿಯಾವಿಚ್ ಚೆರಿಶೇವ್ ಅವರು ಎರಡನೇ ಗೋಲ್ ಸಿಡಿಸಿ ರಷ್ಯಾಕ್ಕೆ 2-0 ಅಂತರದ ಮುನ್ನಡೆ ತಂದುಕೊಟ್ಟರು.

ಫೀಫಾ ವಿಶ್ವಕಪ್ 2018 ಜಾಗತಿಕ ಸಮರದ ಉದ್ಘಾಟನಾ ಪಂದ್ಯದಲ್ಲಿ ಅತಿಥೇಯ ರಷ್ಯಾ ಹಾಗೂ ಸೌದಿ ಅರೇಬಿಯಾ ಮುಖಾಮುಖಿಯಾಗಿದ್ದು, ಈ ಪಂದ್ಯದ ಫಲಿತಾಂಶವನ್ನು ಬಿಳಿ ಬೆಕ್ಕು ಮೊದಲೇ ಹೇಳಿತ್ತು. ಅದರಂತೆ ಈಗ ರಷ್ಯಾ ಗೆಲುವಿನ ಹಾದಿಯಲ್ಲಿದೆ.

For Quick Alerts
ALLOW NOTIFICATIONS
For Daily Alerts
Story first published: Thursday, June 14, 2018, 21:47 [IST]
Other articles published on Jun 14, 2018

Latest Videos

  + More
  + ಇನ್ನಷ್ಟು
  POLLS
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Yes No
  Settings X