ಅಜ್ಲಾನ್ ಶಾ ಕಪ್ ಹಾಕಿ, ಐರ್ಲೆಂಡ್ ವಿರುದ್ಧ ಭಾರತಕ್ಕೆ ಸೋಲು

Posted By:
Azlan Shah Cup hockey: Ireland stun India with 3-2 win; India ruled out of final

ಐಪೋಹಾ(ಮಲೇಷಿಯಾ), ಮಾರ್ಚ್ 09: 27ನೇ ಸುಲ್ತಾನ್ ಅಜ್ಲಾನ್ ಶಾ ಕಪ್ 2018ರ ಅಂತಿಮ ರೌಂಡ್ ರಾಬಿನ್ ಪಂದ್ಯದಲ್ಲಿ ಐರ್ಲೆಂಡ್ ವಿರುದ್ಧ 3-2ರಲ್ಲಿ ಸೋಲು ಕಂಡ ಭಾರತ, ಫೈನಲ್ ಹಂತ ತಲುಪುವ ಅವಕಾಶದಿಂದ ವಂಚಿತವಾಯಿತು.

ಪಂದ್ಯದ ಮೊದಲೆರಡು ಅವಧಿಯಲ್ಲಿ ಉತ್ತಮ ಆಟ ಪ್ರದರ್ಶಿಸಿದ ಭಾರತ, ಕೊನೆ ಅವಧಿಯಲ್ಲಿ ಸಮತೋಲನ ಕಳೆದುಕೊಂಡು ಸೋಲು ಕಂಡಿತು. 10ನೇನಿಮಿಷದಲ್ಲಿ 1-0 ಹಾಗೂ 26ನೇ ನಿಮಿಷದಲ್ಲಿ 2-1 ಸ್ಕೋರ್ ನಲ್ಲಿ ಭಾರತ ಮುನ್ನಡೆ ಸಾಧಿಸಿತ್ತು.

Azlan Shah Cup hockey: Ireland stun India with 3-2 win; India ruled out of final

ಮೊದಲ ಗೋಲು ರಮಣ್ ದೀಪ್ ಸಿಗ್ ಬಾರಿಸಿದರೆ, ಅಮಿತ್ ರೊಹಿದಾಸ್ ಎರಡನೇ ಗೋಲು ಗಳಿಸಿದರು. ಮಲೇಷಿಯಾ ಪರ ಶೆನ್ ಓ ಡೊನೊಘಿ(24ನೇ ನಿಮಿಷ), ಸೀನ್ ಮರೆ(36ನೇ ನಿಮಿಷ) ಹಾಗೂ ಲೀ ಕೋಲ್ (42ನೇ ನಿಮಿಷ) ಗಳಿಸಿ ಐರ್ಲೆಂಡ್ ಗೆ ಗೆಲುವು ತಂದರು.

ಈಗ ಫೈನಲ್ ತಲುಪಲು ಬೇಕಾದ ಅಂಕ ಗಳಿಸಿದ ಭಾರತವು ಮಾರ್ಚ್ 10ರಂದು 5/6ನೇ ಸ್ಥಾನಕ್ಕಾಗಿ ಸೆಣಸಲಿದೆ. ಅತಿಥೇಯ ಮಲೇಷಿಯಾ ವಿರುದ್ಧ 5-1 ರಲ್ಲಿ ಗೆಲುವು ಸಾಧಿಸಿದ್ದ ಭಾರತ ಪುರುಷರ ಹಾಕಿ ತಂಡದ ಮೇಲೆ ಅಭಿಮಾನಿಗಳು ಭಾರಿ ನಿರೀಕ್ಷೆ ಹೊಂದಿದ್ದರು.

Story first published: Friday, March 9, 2018, 19:35 [IST]
Other articles published on Mar 9, 2018

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ