ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

PKL 2022: ಇಂದು ಬೆಂಗಳೂರು ಗೂಳಿಗಳಿಗೆ ತಮಿಳ್ ತಲೈವಾಸ್ ಸವಾಲು

PKL 2022: Bengaluru Bulls Clash With Tamil Thalaivas In Pro Kabaddi League Season 9

ತಮ್ಮ ಹಿಂದಿನ ಪಂದ್ಯದಲ್ಲಿ ಪುಣೇರಿ ಪಲ್ಟನ್ ವಿರುದ್ಧ ರೋಚಕ ಸೋಲು ಕಂಡ ತಮಿಳ್ ತಲೈವಾಸ್ ತಂಡ ಬಲಿಷ್ಠ ಬೆಂಗಳೂರು ಗೂಳಿಗಳ ವಿರುದ್ಧ ಸೆಣೆಸಲು ಮುಂದಾಗಿದೆ. ಬೆಂಗಳೂರು ಬುಲ್ಸ್ ವಿರುದ್ಧ ಗೆಲುವಿನ ಹಾದಿಗೆ ಮರಳುವ ವಿಶ್ವಾಸದಲ್ಲಿದೆ. ತಮಿಳ್ ತಲೈವಾಸ್ ಐದು ಗೆಲುವು, ಐದು ಸೋಲು, ಎರಡು ಪಂದ್ಯಗಳಲ್ಲಿ ಟೈ ಮಾಡಿಕೊಳ್ಳುವ ಮೂಲಕ ಪಾಯಿಂಟ್ ಪಟ್ಟಿಯಲ್ಲಿ ಎಂಟನೇ ಸ್ಥಾನದಲ್ಲಿದೆ.

ರೇಡಿಂಗ್ ವಿಭಾಗದಲ್ಲಿ, ನರೇಂದರ್ ಇದುವರೆಗೆ 12 ಪಂದ್ಯಗಳಲ್ಲಿ 125 ಪಾಯಿಂಟ್‌ಗಳನ್ನು ಕಲೆಹಾಕುವ ಮೂಲಕ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ರೈಡರ್‌ಗಳಾದ ಅಜಿಂಕ್ಯ ಪವಾರ್ 42 ರೇಡ್ ಪಾಯಿಂಟ್‌ಗಳು ಮತ್ತು ಹಿಮಾಂಶು ಸಿಂಗ್ 26 ರೇಡ್ ಪಾಯಿಂಟ್‌ಗಳೊಂದಿಗೆ ಉತ್ತಮವಾಗಿ ಸಾಥ್ ನೀಡುತ್ತಿದ್ದಾರೆ.

ಡಿಫೆಂಡಿಂಗ್ ವಿಭಾಗದಲ್ಲಿ ನಾಯಕ ಸಾಗರ್ 36 ಟ್ಯಾಕಲ್ ಪಾಯಿಂಟ್‌ಗಳೊಂದಿಗೆ ಉತ್ತಮ ಪ್ರದರ್ಶನ ನೀಡಿದ್ದಾರೆ. ಅವರಿಗೆ ಸಾಹಿಲ್ ಗುಲಿಯಾ 27 ಟ್ಯಾಕಲ್ ಪಾಯಿಂಟ್ ಮತ್ತು ಎಂ. ಅಭಿಷೇಕ್ 25 ಟ್ಯಾಕಲ್ ಪಾಯಿಂಟ್ ಗಳಿಸುವ ಮೂಲಕ ತಂಡಕ್ಕೆ ಸಹಾಯಕರಾಗಿದ್ದಾರೆ.

PKL 2022: Bengaluru Bulls Clash With Tamil Thalaivas In Pro Kabaddi League Season 9

ಜಯದ ಹಾದಿಗೆ ಮರಳಿರುವ ಗೂಳಿಗಳು

ಬೆಂಗಳೂರು ಬುಲ್ಸ್ ತನ್ನ ಕೊನೆಯ ಪಂದ್ಯದಲ್ಲಿ ಹರಿಯಾಣ ಸ್ಟೀಲರ್ಸ್ ಅನ್ನು ಸೋಲಿಸುವ ಎರಡು ಪಂದ್ಯಗಳ ಸೋಲಿನಿಂದ ಹೊರಬಂದಿದೆ. ಗೆಲುವಿನ ವಿಶ್ವಾಸದಲ್ಲಿರುವ ಬುಲ್ಸ್ ತಮಿಳ್ ತಲೈವಾಸ್ ವಿರುದ್ಧ ಹೋರಾಡಲು ಸಜ್ಜಾಗಿದೆ.

ಬೆಂಗಳೂರು ಬುಲ್ಸ್ ಇದುವರೆಗೂ ಏಳು ಗೆಲುವು, ನಾಲ್ಕು ಸೋಲು ಮತ್ತು ಒಂದು ಟೈನೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ, ತಮಿಳ್ ತಲೈವಾಸ್ ವಿರುದ್ಧ ಗೆಲುವು ಸಾಧಿಸಿದರೆ, ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಮರಳುತ್ತದೆ.

ಭರತ್ ಬೆಂಗಳೂರು ಬುಲ್ಸ್ ತಂಡದ ಅಗ್ರ ರೈಡರ್ ಆಗಿದ್ದಾರೆ. ಇದುವರೆಗೂ 129 ರೇಡ್ ಪಾಯಿಂಟ್ ಗಳಿಸಿದ್ದಾರೆ. ವಿಕಾಶ್ ಕಂಡೋಲ ಕೂಡ 76 ರೇಡ್ ಪಾಯಿಂಟ್‌ಗಳೊಂದಿಗೆ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಸೌರಭ್ ನಂದಲ್, 36 ಟ್ಯಾಕಲ್ ಪಾಯಿಂಟ್. ಅಮನ್, 20 ಟ್ಯಾಕಲ್ ಪಾಯಿಂಟ್ ಮತ್ತು ಮಹೇಂದರ್ ಸಿಂಗ್ 19 ಟ್ಯಾಕಲ್ ಪಾಯಿಂಟ್ ಪಡೆಯುವ ಮೂಲಕ ಬಲವಾದ ರಕ್ಷಣಾ ಕೋಟೆ ಕಟ್ಟಿದ್ದಾರೆ.

ಬೆಂಗಳೂರು ಬುಲ್ಸ್
ರೈಡರ್ಸ್: ವಿಕಾಶ್ ಕಾಂಡೋಲಾ, ಹರ್ಮನ್ಜಿತ್ ಸಿಂಗ್, ನಾಗೇಶೋರ್ ತಾರು, ಲಾಲ್ ಮೊಹರ್ ಯಾದವ್, ನೀರಜ್ ನರ್ವಾಲ್, ಮೋರ್ ಜಿ ಬಿ, ಭರತ್

ಡಿಫೆಂಡರ್‌ಗಳು: ಸೌರಭ್ ನಂದಲ್, ಮಹೇಂದರ್ ಸಿಂಗ್, ಅಮನ್, ರಜನೇಶ್, ಯಶ್ ಹೂಡಾ, ಮಯೂರ್ ಜಗನ್ನಾಥ್ ಕದಮ್, ವಿನೋದ್ ಲಚ್ಮಯ್ಯ ನಾಯಕ್, ರೋಹಿತ್ ಕುಮಾರ್

ಆಲ್ ರೌಂಡರ್ಸ್: ರಾಹುಲ್ ಖಟಿಕ್, ಸಚಿನ್ ನರ್ವಾಲ್

ತಮಿಳ್ ತಲೈವಾಸ್

ರೈಡರ್ಸ್: ಪವನ್ ಕುಮಾರ್ (ಸೆಹ್ರಾವತ್), ಅಜಿಂಕ್ಯ ಅಶೋಕ್ ಪವಾರ್, ಜತಿನ್, ಹಿಮಾಂಶು, ಹಿಮಾಂಶು, ನರೇಂದರ್

ಡಿಫೆಂಡರ್ಸ್: ಸಾಗರ್, ಅಂಕಿತ್, ಎಂ. ಅಭಿಷೇಕ್, ಆಶಿಶ್, ಎಂಡಿ ಆರಿಫ್ ರಬ್ಬಾನಿ, ಹಿಮಾಂಶು, ಮೋಹಿತ್, ಸಾಹಿಲ್, ಅರ್ಪಿತ್ ಸರೋಹಾ

ಆಲ್ ರೌಂಡರ್ಸ್: ವಿಶ್ವನಾಥ್ ವಿ., ತನುಶನ್ ಲಕ್ಷ್ಮಮೋಹ, ಕೆ.ಅಭಿಮನ್ಯು

Story first published: Sunday, November 13, 2022, 2:30 [IST]
Other articles published on Nov 13, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X