ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಪಿಕೆಎಲ್ ಹರಾಜು LIVE: ದಾಖಲೆ ಬರೆದ ಮೋನು, ರಾಹುಲ್ ಚೌಧರಿ

By Mahesh
Rishank Devadiga

ಬೆಂಗಳೂರು, ಮೇ 30: ಐಪಿಎಲ್ ನಂತರ ಅತ್ಯಂತ ಜನಪ್ರಿಯ ಕ್ರೀಡಾ ಲೀಗ್ ಎನಿಸಿಕೊಂಡಿರುವ ಪ್ರೋ ಕಬಡ್ಡಿ ಲೀಗ್ (ಪಿಕೆಎಲ್) ಸೀಸನ್ 6ರ ಹರಾಜು ಪ್ರಕ್ರಿಯೆಯ ಮೊದಲ ದಿನದ ಅಪ್ಡೇಟ್ಸ್ ಇಲ್ಲಿದೆ. ಪಿಕೆಎಲ್ 6 ಹರಾಜು ಪ್ರಕ್ರಿಯೆ ಮುಂಬೈನಲ್ಲಿ ಮೇ 30 ಹಾಗೂ ಮೇ 31ರಂದು ನಡೆಯಲಿದೆ.

ಐಪಿಎಲ್ 11 ಆಯ್ತು, ಪಿಕೆಎಲ್ 6ಗೆ ಸಜ್ಜಾಗಿ, ಹರಾಜು ಮುನ್ನೋಟಐಪಿಎಲ್ 11 ಆಯ್ತು, ಪಿಕೆಎಲ್ 6ಗೆ ಸಜ್ಜಾಗಿ, ಹರಾಜು ಮುನ್ನೋಟ

ಒಟ್ಟು 422 ಆಟಗಾರರು ಹರಾಜಿಗೆ ಒಳಪಡಲಿದ್ದಾರೆ. 58 ವಿದೇಶಿ ಆಟಗಾರರು, 87 ಆಟಗಾರರು(18 ರಿಂದ 22 ವರ್ಷ ವಯೋಮಿತಿ) ಫ್ಯೂಚರ್ ಕಬಡ್ಡಿ ಹೀರೋಸ್ ಕಾರ್ಯಕ್ರಮ(FKH) ದಡಿಯಲ್ಲಿ ಹರಾಜಿಗೆ ಲಭ್ಯರಾಗಿದ್ದಾರೆ.

ಆಟಗಾರರನ್ನು ನಾಲ್ಕು ವಿಭಾಗವಾಗಿ ವಿಂಗಡಿಸಲಾಗಿದೆ.
ಎ ವಿಭಾಗ: 20 ಲಕ್ಷ ರು
ಬಿ ವಿಭಾಗ : 12 ಲಕ್ಷ ರು
ಸಿ ವಿಭಾಗ : 8 ಲಕ್ಷ ರು
ಡಿ ವಿಭಾಗ : 5 ಲಕ್ಷ ರು

ಹೊಸ ಆಟಗಾರರಿಗೆ : 6.6 ಲಕ್ಷ ರು ನಿಗದಿಯಾಗಿದೆ.

Pro Kabaddi League season 6 Auction 2018 : Live updates

ಮುಖ್ಯಾಂಶಗಳು:
* ಮೋನು ಗೋಯತ್ (20 ಲಕ್ಷ ರು) 1.51 ಕೋಟಿ ರು ಹರ್ಯಾಣ ಸ್ಟೀಲರ್ಸ್ ಪಾಲು

* ಸೂಪರ್ ರೈಡರ್ ರಾಹುಲ್ ಚೌಧರಿಗೆ 1.29 ಕೋಟಿ ರು ನೀಡಿ ಖರೀದಿಸಿದ ಡೆಲ್ಲಿ
* ದೀಪಕ್ ನಿವಾಸ್ ಹೂಡಾ ಹಾಗೂ ನಿತಿನ್ ತೋಮರ್ : 1.15 ಕೋಟಿ ರು ಹಾಗೂ ರಿಷಾಂಕ್ ದೇವಾಡಿಗ 1.11 ಕೋಟಿ ರು ಇಲ್ಲಿ ತನಕದ ದುಬಾರಿ ಬೆಲೆಗೆ ಸೇಲ್ ಆದ ಆಟಗಾರರು

May 30, 2018, 9:14 pm IST

ದೀಪಕ್ ನರ್ವಾಲ್ (20 ಲಕ್ಷ ರು) : 57 ಲಕ್ಷ ರು ಗೆ ಪಟ್ನಾ ಪೈರೇಟ್ಸ್ ಪಾಲು

May 30, 2018, 9:09 pm IST

ಮೋನು ಗೋಯತ್ (20 ಲಕ್ಷ ರು) 1.51 ಕೋಟಿ ರು ಹರ್ಯಾಣ ಸ್ಟೀಲರ್ಸ್ ಪಾಲು

May 30, 2018, 9:03 pm IST

ಸೂಪರ್ ರೈಡರ್ ರಾಹುಲ್ ಚೌಧರಿಗೆ 1.29 ಕೋಟಿ ರು ನೀಡಿ ಖರೀದಿಸಿದ ಡೆಲ್ಲಿ ತಂಡ, ಆದರೆ, ತನ್ನ ಎಫ್ ಬಿಎಂ ಬಳಸಿ ಉಳಿಸಿಕೊಂಡ ತೆಲುಗು ಟೈಟಾನ್ಸ್

May 30, 2018, 8:58 pm IST

ಸೂಪರ್ ರೈಡರ್ ರಾಹುಲ್ ಚೌಧರಿ (20 ಲಕ್ಷ ರು ಮೂಲಬೆಲೆ) -ಪೈರೇಟ್ಸ್, ಯು ಮುಂಬಾ ನಡುವೆ ಪೈಪೋಟಿ

May 30, 2018, 8:57 pm IST

ಕಾಶಿಲಿಂಗ್ ಅಡಕೆ (ಮೂಲ ಬೆಲೆ 20 ಲಕ್ಷರು)-32 ಲಕ್ಷ ರುಗೆ ಬೆಂಗಳೂರು ಬುಲ್ಸ್ ಪಾಲು

May 30, 2018, 8:54 pm IST

28 ಲಕ್ಷ ರು ಗೆ ಸುಕೇಶ್ ಹೆಗ್ಡೆಯನ್ನು ಖರೀದಿಸಿದ ತಮಿಳು ತಲೈವಾಸ್

May 30, 2018, 8:54 pm IST

ಸುಕೇಶ್ ಹೆಗ್ಡೆ (ಮೂಲ ಬೆಲೆ 20 ಲಕ್ಷರು)- ಚೆನ್ನೈ ಹಾಗೂ ಬೆಂಗಳೂರು ನಡುವೆ ಬಿಡ್ಡಿಂಗ್ ಪೈಪೋಟಿ

May 30, 2018, 8:41 pm IST

ಪವನ್ ಕುಮಾರ್ 20 ಲಕ್ಷ ರು ಮೂಲಬೆಲೆಗೆ ದಬ್ಬಾಂಗ್ ಡೆಲ್ಲಿ ತಂಡಕ್ಕೆ ಸೇರ್ಪಡೆ

May 30, 2018, 8:40 pm IST

ಪ್ರಪಂಜನ್ (ಮೂಲ ಬೆಲೆ 20 ಲಕ್ಷರು) 38 ಲಕ್ಷ ರು ಗಳಿಗೆ ಫಾರ್ಚ್ಯೂನ್ ಜೈಂಟ್ ಗುಜರಾತ್ ಪಾಲು.

May 30, 2018, 8:40 pm IST

ದೀಪಕ್ ನಿವಾಸ್ ಹೂಡಾ ಹಾಗೂ ನಿತಿನ್ ತೋಮರ್ : 1.15 ಕೋಟಿ ರು ಹಾಗೂ ರಿಷಾಂಕ್ ದೇವಾಡಿಗ 1.11 ಕೋಟಿ ರು ಇಲ್ಲಿ ತನಕದ ದುಬಾರಿ ಬೆಲೆಗೆ ಸೇಲ್ ಆದ ಆಟಗಾರರು

May 30, 2018, 8:36 pm IST

ರಿಷಾಂಕ್ ದೇವಾಡಿಗ (ಮೂಲ ಬೆಲೆ 20 ಲಕ್ಷರು) -ಡೆಲ್ಲಿ,ಪಟ್ನಾ, ಹರ್ಯಾಣ, ಮುಂಬೈ ತಂಡದಿಂದ ಬಿಡ್ಡಿಂಗ್, -1.11 ಕೋಟಿ ರು ಗೆ ಖರೀದಿಸಿದರು. ಆದರೆ, ಎಫ್ ಬಿಎಂ ಯುಪಿ ಯೋಧಾ ತನ್ನ ಆಟಗಾರನನ್ನು ಉಳಿಸಿಕೊಂಡಿತು.

May 30, 2018, 8:30 pm IST

ವಜೀರ್ ಸಿಂಗ್ (ಮೂಲ ಬೆಲೆ 20 ಲಕ್ಷರು) ಮೂಲಬೆಲೆಗೆ ಹರ್ಯಾಣ ಸ್ಟೀಲರ್ಸ್ ಪಾಲು.

May 30, 2018, 8:28 pm IST

ಶ್ರೀಕಾಂತ್ ಜಾಧವ್ ಮೂಲ ಬೆಲೆ 20 ಲಕ್ಷ ರು- 37 ಲಕ್ಷ ಯುಪಿ ಪಾಲು, ಎಫ್ ಬಿಎಂ ಬಳಸದ ಯು ಮುಂಬಾ

May 30, 2018, 8:27 pm IST

ಕ್ಯಾಪ್ಟನ್ ಕೂಲ್ ಅನುಪ್ ಕುಮಾರ್ ಪಿಂಕ್ ಪ್ಯಾಂಥರ್ಸ್ 30 ಲಕ್ಷ ರು ಗೆ ಮಾರಾಟ, ಎಫ್ ಬಿಎಂ ಬಳಸದ ಯು ಮುಂಬಾ

May 30, 2018, 8:27 pm IST

ರೈಡರ್ಸ್ ಹರಾಜು ಆರಂಭ: ನಿತಿನ್ ತೋಮಾರ್ (20 ಲಕ್ಷ ರು ಮೂಲಬೆಲೆ) 1.15 ಕೋಟಿ ರು ಗೆ ಪುಣೇರಿ ಪಲ್ಟನ್ ಗೆ ಮಾರಾಟ

May 30, 2018, 8:11 pm IST

ಫೈನಲ್ ಬಿಡ್ ಮ್ಯಾಚ್ (ಎಫ್ ಬಿಎಂ) ಬಳಸಿ ಕೊರಿಯಾದ ರೈಡರ್ ಜಂಗ್ ಕುನ್ ಲೀ ಖರೀದಿಸಿದ ಬೆಂಗಾಲ್ ವಾರಿಯರ್ಸ್

May 30, 2018, 8:11 pm IST

ವಿದೇಶಿ ಆಟಗಾರರ ಹರಾಜು : ಇರಾನ್ನಿನ ಫಜೆಲ್ ಅಟರಾಚಲಿ ದಾಖಲೆಯ ಮೊತ್ತಕ್ಕೆ ಯುಮುಂಬಾ ಪಾಲು (1 ಕೋಟಿ ರು)

May 30, 2018, 8:05 pm IST

ಹರ್ಯಾಣ ಸ್ಟೀಲರ್ಸ್ ತಂಡವು ಸುರೇಂದ್ರ ನಾಡಾರನ್ನು ರೀಟೈನ್ ಮಾಡಿಕೊಂಡಿದ್ದು ಈ ದಿನದ ಹರಾಜಿನ ವಿಶೇಷವಾಗಿತ್ತು

May 30, 2018, 8:03 pm IST

ಪರ್ವೇಶ್ ಭೈನ್ಸ್ ವಾಲ್ 35 ಲಕ್ಷ ರು ಗಳಿಗೆ ಗುಜರಾತ್ ಫಾರ್ಚ್ಯೂನ್ ಜೈಂಟ್ಸ್ ಪಾಲು

May 30, 2018, 8:02 pm IST

ರವೀಂದ್ರ ಪಹಾಲ್ (20 ಲಕ್ಷ ರು ಮೂಲ ಬೆಲೆ) - ಯಾರು ಖರೀದಿಸಲಿಲ್ಲ

May 30, 2018, 8:01 pm IST

* ಸಂದೀಪ್ ಧುಲ್ 20 ಲಕ್ಷ ಮೂಲ ಬೆಲೆ -55 ಲಕ್ಷಕ್ಕೆ ಜೈಪುರ ಪಿಂಕ್ ಪ್ಯಾಂಥರ್ಸ್ ಪಾಲು

May 30, 2018, 7:58 pm IST

ಬೆಂಗಳೂರು ಬುಲ್ಸ್ ತಂಡ ಸೇರಿದ ಮಹೇಂದ್ರ ಸಿಂಗ್, ಖರೀದಿಗೆ ಫೈನಲ್ ಬಿಡ್ ಮ್ಯಾಚ್ (ಎಫ್ ಬಿಎಂ) ಬಳಕೆ

May 30, 2018, 7:57 pm IST

* ಸುರೇಂದ್ರ ನಾಡಾ (20 ಲಕ್ಷ ಮೂಲಬೆಲೆ) 75 ಲಕ್ಷ ರು ಜೈಪುರ ಪಿಂಕ್ ಪ್ಯಾಂಥರ್ಸ್ ಪಾಲಾದರೂ ಹರ್ಯಾಣಾ ತಂಡದಿಂದ FBH ಬಳಸಿ ಮರು ಖರೀದಿ

May 30, 2018, 7:54 pm IST

* ಮಹೇಂದ್ರ ಸಿಂಗ್ -ಯು ಮುಂಬಾ (40 ಲಕ್ಷ ರು)- ಬೆಂಗಳೂರು ಬುಲ್ಸ್ ಎಫ್ ಬಿ ಎಚ್ ಕಾರ್ಡ್ ಬಳಸಿ ಖರೀದಿ

May 30, 2018, 7:54 pm IST

* ದರ್ಶನ್ 20 ಲಕ್ಷ ಮೂಲಬೆಲೆ 28 ಲಕ್ಷ ರುಗೆ ಸೇಲ್ ಆದರೂ FBM ಬಳಸಿದ ತಮಿಳ್ ತಲೈವಾಸ್ ತನ್ನ ಆಟಗಾರನನ್ನು ಉಳಿಸಿಕೊಂಡಿದೆ.

May 30, 2018, 7:49 pm IST

ಜೈಪುರ ಪಿಂಕ್ ಪ್ಯಾಂಥರ್ಸ್ ಪಾಲಾದ ಮೋಹಿತ್ ಚಿಲ್ಲಾರ್ (48 ಲಕ್ಷ ರು ಗೆ ಖರೀದಿ)

May 30, 2018, 7:48 pm IST

ಮೋಹಿತ್ ಚಿಲ್ಲಾರ್ (ಡಿಫೆಂಡರ್) ಮೂಲ ಬೆಲೆ 20 ಲಕ್ಷ -ಡೆಲ್ಲಿ- ಜೈಪುರ ನಡುವೆ ಪೈಪೋಟಿ

May 30, 2018, 7:47 pm IST

ವಿದೇಶಿ ಆಟಗಾರರ ಹರಾಜಿನ ನಂತರ ತಂಡಗಳ ಬಳಿ ಇರುವ ಮೊತ್ತ

May 30, 2018, 7:46 pm IST

ಜೀವ ಕುಮಾರ್(ಡಿಫೆಂಡರ್)ಗೆ 45 ಲಕ್ಷಕ್ಕೆ ಯುಪಿ ಪಾಲು

May 30, 2018, 7:44 pm IST

ಜೀವ ಕುಮಾರ್(ಡಿಫೆಂಡರ್) ಮೂಲ ಬೆಲೆ 20 ಲಕ್ಷ- ಡೆಲ್ಲಿ ಹಾಗೂ ಯುಪಿ ಯಿಂದ ಬಿಡ್ಡಿಂಗ್

May 30, 2018, 7:41 pm IST

ಆಲ್ ರೌಂಡರ್ ರಣ್ ಸಿಂಗ್ ರನ್ನು FBM ಬಳಸಿ ಪಡೆದುಕೊಂಡ ಬೆಂಗಾಲ್ ವಾರಿಯರ್ಸ್

May 30, 2018, 7:34 pm IST

ಚೆನ್ನೈನ ತಮಿಳ್ ತಲೈವಾಸ್ ಪಾಲಾದ ಅನುಭವಿ ಆಟಗಾರ ಮಂಜೀತ್ ಚಿಲ್ಲಾರ್, 20 ಲಕ್ಷಕ್ಕೆ ಖರೀದಿ

May 30, 2018, 7:33 pm IST

ದಾಖಲೆಯ 1.15 ಕೋಟಿ ರು ಬೆಲೆಗೆ ದೀಪಕ್ ನಿವಾಸ್ ಹೂಡಾರನ್ನು ತಂಡಕ್ಕೆ ಸೇರಿಸಿಕೊಂಡ ಜೈಪುರ್ ಪಿಂಕ್ ಪ್ಯಾಂಥರ್ಸ್

May 30, 2018, 7:26 pm IST

ಅಕ್ಟೋಬರ್ 19 ರಂದು ಆರಂಭವಾಗಲಿರುವ 6ನೇ ಆವೃತ್ತಿಯ ಪಿಕೆಎಲ್ ಟೂರ್ನಿ 13 ವಾರಗಳ ಕಾಲ ನಡೆಯಲಿದೆ.

May 30, 2018, 7:26 pm IST

ಪ್ರತಿ ತಂಡದಲ್ಲಿ 18 ರಿಂದ 25 ಆಟಗಾರರಿರಬಹುದು, ಒಂದು ತಂಡದಲ್ಲಿ ಗರಿಷ್ಠ 2 ರಿಂದ 4 ವಿದೇಶಿ ಆಟಗಾರರನ್ನು ಹೊಂದಬಹುದು. ಫ್ಯೂಚರ್ ಕಬಡ್ಡಿ ಹೀರೋ ವಿಭಾಗದಿಂದ ಮೂರು ಆಟಗಾರರನ್ನು ಮಾತ್ರ ಆಯ್ಕೆ ಮಾಡಿಕೊಳ್ಳಬಹುದು.

Story first published: Thursday, May 31, 2018, 0:17 [IST]
Other articles published on May 31, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X