ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಏಷ್ಯನ್ ಗೇಮ್ಸ್ ಬಂಗಾರ ವಿಜೇತ ವಾಕ್ ರೇಸರ್ ಹಕಮ್ ಸಿಂಗ್ ನಿಧನ

Asian Games 1978 gold medalist race-walker Hakam Singh passes away

ಚಂಡೀಗಢ, ಆಗಸ್ಟ್ 14: ಏಷನ್ ಗೇಮ್ಸ್ ನಲ್ಲಿ ಚಿನ್ನದ ಪದಕ ಗೆದ್ದಿದ್ದ ಹಿರಿಯ ಅಥ್ಲೀಟ್ ಹಕಮ್ ಸಿಂಗ್ ಅವರು ಅನಾರೋಗ್ಯದ ಕಾರಣ ಇಂದು (ಆ.14) ಪಂಜಾಬ್ ನ ಸಾಂಗ್ರೂರ್ ನಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರಿಗೆ 64 ವರ್ಷ ವಯಸ್ಸಾಗಿತ್ತು.

ಇಂಚಿಯಾನ್ ಗೇಮ್ಸ್ ಬೆಳ್ಳಿ ವಿಜೇತೆ ಟಿಂಟು ಏಷ್ಯನ್ ಗೇಮ್ಸ್ ನಿಂದ ಔಟ್!ಇಂಚಿಯಾನ್ ಗೇಮ್ಸ್ ಬೆಳ್ಳಿ ವಿಜೇತೆ ಟಿಂಟು ಏಷ್ಯನ್ ಗೇಮ್ಸ್ ನಿಂದ ಔಟ್!

ಹಕಮ್ ಅವರು 1978ರಲ್ಲಿ ಬ್ಯಾಂಕಾಕ್ ನಲ್ಲಿ ನಡೆದಿದ್ದ ಏಷ್ಯನ್ ಗೇಮ್ಸ್ ನ 20 ಕಿ.ಮೀ. ಪುರುಷರ ವಾಕ್ ರೇಸ್ ನಲ್ಲಿ ಭಾರತ ಪರ ಚಿನ್ನದ ಪದಕ ಜಯಿಸಿದ್ದರು. ಇತ್ತೀಚೆಗೆ ಅವರು ಅನಾರೋಗ್ಯದ ಸಮಸ್ಯೆಯಿಂದ ಬಳಲುತ್ತಿದ್ದರು. ಅವರಿಗೆ ಲಿವರ್ ಮತ್ತು ಕಿಡ್ನಿಗೆ ಸಂಬಂಧಿಸಿದ ಖಾಯಿಲೆಯಿತ್ತು.

ಹಕಮ್ ಸಿಂಗ್ ಗೆ ದೇಶದ ಅತ್ಯುನ್ನತ ಕ್ರೀಡಾಗೌರವಗಳಲ್ಲಿ ಒಂದಾದ ಧ್ಯಾನ್ ಚಂದ್ ಪ್ರಶಸ್ತಿ ಲಭಿಸಿತ್ತು. ಜೊತೆಗೆ ಇವರು 6 ಸಿಕ್ಖ್ ರಜಿಮೆಂಟ್ ನಲ್ಲಿ ಹವಾಲ್ದಾರ ಜವಾಬ್ದಾರಿಯನ್ನೂ ನಿರ್ವಹಿಸಿದ್ದರು. ಏಷ್ಯನ್ ಕ್ರೀಡಾಕೂಟ ಆರಂಭಗೊಳ್ಳಲು ಇನ್ನು ನಾಲ್ಕು ದಿನಗಳಿರುವಾಗಲೇ ದೇಸಿ ಕ್ರೀಡಾಳುಗಳಿಗೆ ಸ್ಫೂರ್ತಿಯಾಗಬೇಕಿದ್ದ ಹಿರಿಜೀವ ಕಣ್ಮುಚ್ಚಿದ್ದಕ್ಕೆ ಕ್ರೀಡಾಲೋಕ ಕಂಬನಿ ಮಿಡಿದಿದೆ.

ಅನಾರೋಗ್ಯಕ್ಕೆ ತುತ್ತಾಗಿ ಆಸ್ಪತ್ರೆ ಸೇರಿದ್ದ ಹಕಮ್ ಅವರಿಗೆ ಕ್ರೀಡಾ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್ 10 ಲಕ್ಷ ರೂ., ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಮಾರೀಂದರ್ ಸಿಂಗ್ ಅವರು 5 ಲಕ್ಷ ರೂ. ಆರ್ಥಿಕ ನೆರವು ನೀಡಿದ್ದರು. ಆದರೆ ವೈದ್ಯಕೀಯ ಲೋಕಕ್ಕೆ ಸಿಂಗ್ ಅವರನ್ನು ಉಳಿಸಿಕೊಳ್ಳಲಾಗಲಿಲ್ಲ.

Story first published: Tuesday, August 14, 2018, 19:33 [IST]
Other articles published on Aug 14, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X