ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಏಷ್ಯನ್ ಗೇಮ್ಸ್ ಪದಕ ಗೆದ್ದು ಕ್ರಿಕೆಟರ್ಸ್ ಗಿಂತ ಮಿಂಚಿದ ಅಥ್ಲೀಟ್ ಗಳು!

Asian Games: Indian athletics gives bright portends ahead of sterner tests

ನವದೆಹಲಿ, ಸೆಪ್ಟೆಂಬರ್ 4: ನಾಟಿಂಗ್ಹ್ಯಾಮ್ ನ ಟ್ರೆಂಟ್ ಬ್ರಿಜ್ ನಲ್ಲಿ ಭಾರತ vs ಇಂಗ್ಲೆಂಡ್ 3ನೇ ಟೆಸ್ಟ್ ಪಂದ್ಯ ಆರಂಭಗೊಂಡ ದಿನವೇ (ಆಗಸ್ಟ್ 18) ಇಂಡೋನೇಷ್ಯಾದಲ್ಲಿ 18ನೇ ಏಷ್ಯನ್ ಗೇಮ್ಸ್ ಕ್ರೀಡಾಕೂಟ ಪ್ರಾರಂಭಗೊಂಡಿತ್ತು. ಕ್ರಿಕೆಟ್ ಪ್ರಿಯರು ನಾವು ಏಷ್ಯನ್ ಗೇಮ್ಸ್ ಗಿಂತ ಹೆಚ್ಚು ಕ್ರಿಕೆಟ್ ನತ್ತವೇ ಗಮನ ವಾಲಿದ್ದೆವು.

ಏಷ್ಯನ್ ಗೇಮ್ಸ್ 2018: ಭಾರತಕ್ಕೆ ಪದಕ ಗೆದ್ದ ಎಲ್ಲರ ಸಂಕ್ಷಿಪ್ತ ವಿವರಏಷ್ಯನ್ ಗೇಮ್ಸ್ 2018: ಭಾರತಕ್ಕೆ ಪದಕ ಗೆದ್ದ ಎಲ್ಲರ ಸಂಕ್ಷಿಪ್ತ ವಿವರ

ಟೆಸ್ಟ್ ಮುಗಿದಿದೆ. ಏಷ್ಯನ್ ಗೇಮ್ಸ್ ಕೂಡ ಮುಗಿದಿದೆ. ಟೆಸ್ಟ್ ನಲ್ಲಿ ಟೀಮ್ ಇಂಡಿಯಾ ಕ್ರಿಕೆಟರ್ಸ್ ಆಂಗ್ಲರೆದುರು ಸೋತು ಮಂಕಾದರೆ, ಗೇಮ್ಸ್ ನಲ್ಲಿ ದೇಸಿ ಕ್ರೀಡಾಪಟುಗಳು ಅಪೂರ್ವ ಸಾಧನೆ ಮೂಲಕ ವಿಶ್ವವನ್ನೇ ತನ್ನತ್ತ ಸೆಳೆದು ಹೊಳೆದರು.

ಏಷ್ಯನ್ ಗೇಮ್ಸ್ 2018 ವಿಶೇಷ ಪುಟಕ್ಕೆ ಕ್ಲಿಕ್ ಮಾಡಿಏಷ್ಯನ್ ಗೇಮ್ಸ್ 2018 ವಿಶೇಷ ಪುಟಕ್ಕೆ ಕ್ಲಿಕ್ ಮಾಡಿ

ಏಷ್ಯನ್ ಗೇಮ್ಸ್ ನಲ್ಲಿ ಈ ಬಾರಿ ಭಾರತದ ಕ್ರೀಡಾಪಟುಗಳು ಭರ್ಜರಿ ಸಾಧನೆ ತೋರಿದ್ದರ ಫಲವೇ ಭಾರತ ಏಷ್ಯನ್ ಇತಿಹಾಸದಲ್ಲೇ ಅತೀ ಹೆಚ್ಚಿನ ಪದಕ (69) ಗೆದ್ದು ದಾಖಲೆ ಬರೆದಿತ್ತು. ಅದರಲ್ಲೂ ಅಥ್ಲೆಟಿಕ್ಸ್ ವಿಭಾಗದಲ್ಲಂತೂ ಅತೀ (18 ಪದಕಗಳ) ಅಪರೂಪದ ಸಾಧನೆಯಾಗಿದ್ದು ಸುಳ್ಳಲ್ಲ.

ಒಟ್ಟಾರೆ ಕ್ರೀಡಾಕೂಟದ ವೇಳೆ ಅಥ್ಲೆಟಿಕ್ಸ್ ನಲ್ಲಿ ಆದ ಸಾಧನೆ ಒಮ್ಮೆಲೆ ಗಮನಕ್ಕೆ ಬಾರದಿದ್ದರೂ ಅನಂತರ ಮಾಹಿತಿ ಕೆದಕಿದಾಗ ಸಿಕ್ಕ ಸಂಗತಿಗಳು ಅಚ್ಚರಿ ಸಹಿತ ಖುಷಿ ಹುಟ್ಟಿಸುತ್ತವೆ. ಅಂಥ ಕೆಲವು ಸಂಗತಿಗಳು ಇಲ್ಲಿವೆ..

ಉಷಾ, ಶೈನಿ ಕಾಲದ ನೆನಪು..

ಉಷಾ, ಶೈನಿ ಕಾಲದ ನೆನಪು..

ಈ ಬಾರಿಯ ಏಷ್ಯನ್ ಗೇಮ್ಸ್ ಕ್ರೀಡಾಕೂಟದ ವೇಳೆ ಅಥ್ಲೆಟಿಕ್ಸ್ ವಿಭಾಗ ಪಿಟಿ ಉಷಾ, ಶೈನಿ ವಿಲ್ಸನ್ ತಲೆಮಾರನ್ನು ನೆನಪಿಸಿತು. ಈ ಹಿಂದೆ ಅಂತಾರಾಷ್ಟ್ರೀಯ ಅಥ್ಲೆಟಿಕ್ಸ್ ನಲ್ಲಿ ಗುರುತಿಸಿಕೊಂಡಿದ್ದ ಉಷಾ, ಶೈನಿ, ರೋಸಾ ಕುಟ್ಟಿ, ಎಮ್ಡಿ ವಲ್ಸಮ್ಮ, ಮರ್ಸಿ ಕುಟ್ಟನ್, ಅಶ್ವಿನಿ ನಾಚಪ್ಪ ಅವರನ್ನು ಹಿಮಾ ದಾಸ್, ಸ್ವಪ್ನಾ ಬರ್ಮನ್, ಚಿತ್ರಾ ಪಿಯು, ದ್ಯುತೀ ಚಂದ್, ನೀನಾ ವರಾಕಿಲ್, ಸುಧಾ ಸಿಂಗ್ ನೆನಪಿಸಿದರು. ದ್ಯುತೀ 100 ಮೀ., 200 ಮೀ.ನಲ್ಲಿ ಬೆಳ್ಳಿ ಜಯಿಸಿದ್ದು 32 ವರ್ಷಗಳ ಬಳಿಕ. 1986ರಲ್ಲಿಉಷಾ ಇದೇ ಸಾಧನೆ ಮೆರದಿದ್ದರು.

ಒಲಿಂಪಿಕ್ಸ್ ನಲ್ಲೂ ಪದಕ ನಿರೀಕ್ಷೆ

ಒಲಿಂಪಿಕ್ಸ್ ನಲ್ಲೂ ಪದಕ ನಿರೀಕ್ಷೆ

ಒಲಿಂಪಿಕ್ಸ್ ನಲ್ಲಿ ಭಾರತಕ್ಕೆ ಬೆರಳೆಣಿಕೆಯ ಪದಕಗಳಷ್ಟೇ ಹೆಚ್ಚಿನ ಸಾರಿ ಲಭಿಸೋದು. ಆದರೆ ಮುಂದಿನ ಟೋಕಿಯೋ ಒಲಿಂಪಿಕ್ಸ್ ನಲ್ಲಿ ಭಾರತಕ್ಕೆ ಹೆಚ್ಚಿನ ಪದಕ ಲಭಿಸುವ ನಿರೀಕ್ಷೆಯಿದೆ. ಈ ಏಷ್ಯನ್ ಗೇಮ್ಸ್ ನಲ್ಲಿ ಅಥ್ಲೀಟ್ ನೀರಜ್ ಚೋಪ್ರಾ ಅವರು ಜೀವನ ಶ್ರೇಷ್ಠ ಸಾಧನೆ ತೋರಿದ್ದರು. ಜಾವೆಲಿನ್ ಥ್ರೋವರ್ ನೀರಜ್ 88.06 ಮೀ. ಸಾಧನೆ ತೋರಿದ್ದರು. ಇದು ಹೊಸ ರಾಷ್ಟ್ರೀಯ ದಾಖಲೆಯಾಗಿತ್ತು. ಇದೇ ಸಾಧನೆ ರಿಯೋ ಒಲಿಂಪಿಕ್ಸ್ ವೇಳೆ ನೀರಜ್ ತೋರಿದ್ದರೆ, ಅವರಿಗೆ ಕಂಚು ಲಭಿಸುತ್ತಿತ್ತು!. ಹೀಗಾಗಿ 2020ರ ಟೋಕಿಯೋ ಒಲಿಂಪಿಕ್ಸ್ ನಲ್ಲಿ ಹೆಚ್ಚಿನ ಪದಕ ನಿರೀಕ್ಷೆ ಹೆಚ್ಚಿದೆ.

ಏಳು ಬಂಗಾರ ಅಥ್ಲೆಟಿಕ್ಸ್ ನಿಂದ

ಏಳು ಬಂಗಾರ ಅಥ್ಲೆಟಿಕ್ಸ್ ನಿಂದ

ಪಿಟಿ ಉಷಾ (100, 200 ಮೀ.), ಶೈನಿ ವಿಲ್ಸನ್ (800 ಮೀ.), ರೋಸಾ ಕುಟ್ಟಿ (800 ಮೀ.), ಎಮ್ಡಿ ವಲ್ಸಮ್ಮ (400 ಮೀ.), ಮರ್ಸಿ ಕುಟ್ಟನ್ (400 ಮೀ.), ಅಶ್ವಿನಿ ನಾಚಪ್ಪ (100, 400 ಮೀ. ರಿಲೇ) ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದ್ದರಾದರೂ ಅಮೆರಿಕಾ, ರಷ್ಯಾ, ಯುರೋಪ್ ಮತ್ತು ಚೀನಾದಂತ ಕ್ರೀಡಾಲೋಕದ ಬಲಿಷ್ಟ ರಾಷ್ಟ್ರಗಳೆದುರು ಪಾರಮ್ಯ ಮೆರೆದಿದ್ದು ಕಡಿಮೆ. ಆದರೆ ಈ ಏಷ್ಯನ್ ನಲ್ಲಿ ಏಳು ಬಂಗಾರದ ಪದಕಗಳು ಅಥ್ಲೆಟಿಕ್ಸ್ ವಿಭಾಗದಿಂದಲೇ ಬಂದಿದ್ದವು.

ಅಪರೂಪದ ಚಿನ್ನ

ಅಪರೂಪದ ಚಿನ್ನ

ಟ್ರ್ಯಾಕ್ ಆ್ಯಂಡ್ ಫೀಲ್ಡ್ ನಲ್ಲಿ ಚಿನ್ನ ಗೆಲ್ಲೋದು ಸುಲಭವಲ್ಲ. ಅದೂ ಪ್ರತಿಷ್ಠಿತ ಗೇಮ್ಸ್ ಗಳಲ್ಲಿ ಭಾರತ ಟ್ರ್ಯಾಕ್ ಆ್ಯಂಡ್ ಫೀಲ್ ಬಿಟ್ಟು ಉಳಿದೆಲ್ಲದರಲ್ಲಿ ಹೆಚ್ಚು ಪದಕ ಗೆಲ್ಲುತ್ತಿದ್ದುದು ಸಾಮಾನ್ಯವಾಗಿತ್ತು. ಆದರೆ ಈ ಬಾರಿಯ ಏಷ್ಯನ್ ಗೇಮ್ಸ್ ನಲ್ಲಿ ಅದಕ್ಕೆ ವಿರುದ್ಧ ಫಲಿತಾಂಶ ಬಂದಿತ್ತು. ಅಥ್ಲೆಟಿಕ್ಸ್ ನಲ್ಲಿ ಒಟ್ಟು 7 ಬಂಗಾರ ಲಭಿಸಿತ್ತು. ಮಿಡ್ಲ್ ಡಿಸ್ಟ್ಯಾನ್ಸ್ ರೇಸ್ ಗಳಾದ 800 ಮೀ. ನಲ್ಲಿ ಮನ್ಜೀತ್ ಸಿಂಗ್ ಬಂಗಾರ ಗೆದ್ದರೆ, 1500 ಮೀ. ನಲ್ಲಿ ಜಿನ್ಸನ್ ಜಾನ್ಸನ್ ಚಿನ್ನ ಗೆದ್ದು ಅಪೂರ್ವ ಸಾಧನೆ ಮಾಡಿದ್ದರು.

ಅಥ್ಲೆಟಿಕ್ಸ ಚಿನ್ನದೊಂದಿಗೆ ಮಿಂಚಿದವರು

ಅಥ್ಲೆಟಿಕ್ಸ ಚಿನ್ನದೊಂದಿಗೆ ಮಿಂಚಿದವರು

ಶಾಟ್ ಪುಟ್ ನಲ್ಲಿ ತೇಜೀಂದರ್ ಪಾಲ್ ಸಿಂಗ್, ಜಾವೆಲಿನ್ ಥ್ರೋ ನಲ್ಲಿ ನೀರಜ್ ಚೋಪ್ರಾ, 800 ಮೀ.ನಲ್ಲಿ ಮನ್ಜೀತ್ ಸಿಂಗ್, ಲಾಂಗ್ ಜಂಪ್ ನಲ್ಲಿ ಅರ್ಪೀಂದರ್ ಸಿಂಗ್, ಹೆಪ್ಟಾಥ್ಲಾನ್ ನಲ್ಲಿ ಸ್ವಪ್ನಾ ಬರ್ಮನ್, 1500 ಮೀ. ಜಿನ್ಸನ್ ಜಾನ್ಸನ್, 400 ಮೀ ಮಹಿಳಾ ರಿಲೇ (ಹಿಮಾ ದಾಸ್, ಎಂಆರ್ ಪೂವಮ್ಮ, ಸರಿತಾ ಬೆನ್ ಗಾಯಕ್ವಾಡ್, ವಿಸ್ಮಯ) ಚಿನ್ನದೊಂದಿಗೆ ಮಿಂಚಿದ್ದರು.

Story first published: Tuesday, September 4, 2018, 19:34 [IST]
Other articles published on Sep 4, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X