ಯುಎಸ್ ಓಪನ್ : ಮಾರ್ಟಿನಾ ಹಿಂಗಿಸ್ ಗೆ ಡಬ್ಬಲ್ ಖುಷಿ

Posted By:

ನ್ಯೂಯಾರ್ಕ್, ಸೆ. 11: 20 ವರ್ಷಗಳ ಹಿಂದೆ ಆರ್ಥರ್‌ ಆಷೆ ಅಂಗಳದಲ್ಲಿ ವೀನಸ್ ವಿಲಿಯಮ್ಸ್ ಸೋಲಿಸಿ ಅಚ್ಚರಿ ಮೂಡಿಸಿದ್ದ ಮಾರ್ಟಿನಾ ಹಿಂಗಿಸ್ ಮತ್ತೊಮ್ಮೆ ದಾಖಲೆ ಬರೆದಿದ್ದಾರೆ.

ಮೂರನೇ ಬಾರಿಗೆ ಯುಎಸ್ ಓಪನ್ ಗೆದ್ದ ನಡಾಲ್

ಸ್ವಿಟ್ಜ ‌ಲೆಂಡ್ ನ ಮಾರ್ಟಿನಾ ಹಿಂಗಿಸ್‌ ಹಾಗೂ ಬ್ರಿಟನ್‌ನ ಜೆಮಿ ಮರೆ ಮತ್ತು ಅವರು ಮಿಶ್ರ ಡಬಲ್ಸ್‌ ವಿಭಾಗದಲ್ಲಿ ಮುಡಿಗೇರಿಸಿಕೊಂಡಿದ್ದಾರೆ.

Double delight for Swiss Miss Hingis

ಫೈನಲ್‌ ಹಣಾಹಣಿಯಲ್ಲಿ ಅಗ್ರಶ್ರೇಯಾಂಕದ ಜೆಮಿ ಮತ್ತು ಮಾರ್ಟಿನಾ 6-1, 4-6, 10-8ರಲ್ಲಿ ನ್ಯೂಜಿಲೆಂಡ್ ನ ಮೈಕಲ್‌ ವೀನಸ್ ಮತ್ತು ಚೀನಾ ತೈಪೆಯ ಚಾನ್ ಹಾವೊ ಚಿಂಗ್‌ ಅವರನ್ನು ಸೋಲಿಸಿದರು.

ಇದರ ಜತೆಗೆ ಮಾರ್ಟಿನಾ ಹಾಗೂ ತೈವಾನಿನ ಆನ್ ಯುಂಗ್ ಜಾನ್ ಅವರು ಜೆಕ್ ಜೋಡಿ ಲೂಸಿ ಹ್ರಾಡೆಕಾ ಹಾಗೂ ಕಾತೆರಿನಾ ಸಿನಿಯಾಕೋವಾರನ್ನು 6-3 ಹಾಗೂ 6-2ರಲ್ಲಿ ಸೋಲಿಸಿ ಮಹಿಳೆಯರ ಡಬಲ್ಸ್ ಗೆದ್ದರು.

ಮರೆ ಮತ್ತು ಹಿಂಗಿಸ್‌ ಅವರು ಜೊತೆಯಾಗಿ ಆಡಲು ಶುರುಮಾಡಿದ ನಂತರ ಗ್ರ್ಯಾನ್ ಸ್ಲಾಮ್ ನಲ್ಲಿ ಗೆದ್ದ ಎರಡನೇ ಪ್ರಶಸ್ತಿ ಇದಾಗಿದೆ. ಈ ಗೆಲುವಿನೊಂದಿಗೆ ಹಿಂಗಿಸ್ ತಮ್ಮ ವೃತ್ತಿ ಬದುಕಿನ 25ನೇ ಗ್ರ್ಯಾನ್ ಸ್ಲಾಮ್ ಪ್ರಶಸ್ತಿ ಗೆದ್ದರು. ಇದರಲ್ಲಿ 5 ಸಿಂಗಲ್ಸ್ ಹಾಗೂ 13 ಡಬಲ್ಸ್ ಮತ್ತು 7 ಮಿಶ್ರ ಡಬಲ್ಸ್ ಪ್ರಶಸ್ತಿಗಳಿವೆ.

ಮಹಿಳೆಯರ ಸಿಂಗಲ್ಸ್: ಸ್ಲೊವಾನೆ ಸ್ಟೀಫನ್ಸ್ ಅವರು ಶನಿವಾರದಂದು ಯುಎಸ್ ಓಪನ್‌ ಟೆನಿಸ್ ಟೂರ್ನಿಯ ಮಹಿಳೆಯರ ಸಿಂಗಲ್ಸ್ ನಲ್ಲಿ ಚೊಚ್ಚಲ ಕಿರೀಟ ಮುಡಿಗೇರಿಸಿಕೊಂಡರು.

ಫೈನಲ್‌ ಪಂದ್ಯದಲ್ಲಿ ಸ್ಟೀಫನ್ಸ್ 6-3, 6-0ರ ನೇರ ಸೆಟ್‌ಗಳಿಂದ ಅಮೆರಿಕದವರೇ ಆದ ಮ್ಯಾಡಿಸನ್‌ ಕೀಸ್ ಅವರನ್ನು ಸೋಲಿಸಿದರು.

Story first published: Monday, September 11, 2017, 7:15 [IST]
Other articles published on Sep 11, 2017

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ