ವಿನಯ್, ಅರವಿಂದ್ ದಾಳಿಗೆ ತತ್ತರಿಸಿ ಶರಣಾದ ತಮಿಳುನಾಡು

Posted By:

ಬೆಂಗಳೂರು, ಡಿ.10: ಹಾಲಿ ಚಾಂಪಿಯನ್ ಕರ್ನಾಟಕ ತಂಡ ಪ್ರಸಕ್ತ ಋತುವಿನ ರಣಜಿಯಲ್ಲಿ ಶುಭಾರಂಭ ಮಾಡಿದೆ. ಸಾಂಪ್ರದಾಯಿಕ ಎದುರಾಳಿ ತಮಿಳುನಾಡು ತಂಡದ ವಿರುದ್ಧ 285ರನ್ ಗಳ ಭರ್ಜರಿ ಗೆಲುವು ಸಾಧಿಸಿದೆ.

ನಾಯಕ ವಿನಯ್ ಕುಮಾರ್ ಹಾಗೂ ವೇಗಿ ಅರವಿಂದ್ ಶ್ರೀನಾಥ್ ಅವರ ದಾಳಿಗೆ ಸಿಲುಕಿ ನಲುಕಿದ ತಮಿಳುನಾಡು ತಂಡ ಎರಡನೇ ಇನ್ನಿಂಗ್ಸ್ ನಲ್ಲಿ 82 ಸ್ಕೋರಿಗೆ ಸರ್ವಪತನ ಕಂಡು ಕರ್ನಾಟಕಕ್ಕೆ ಶರಣಾಗಿದೆ.

ಕರ್ನಾಟಕದ ಗೆಲುವಿಗೇನು ಕಾರಣ?: ಸಂಘಟಿತ ಹೋರಾಟಕ್ಕೆ ಹೆಸರುವಾಸಿಯಾದ ಹಾಲಿ ಚಾಂಪಿಯನ್ ಗಳು ಈ ಪಂದ್ಯದಲ್ಲೂ ಕೊನೆ ಗಳಿಗೆಯಲ್ಲಿ ಬ್ಯಾಟಿಂಗ್, ಬೌಲಿಂಗ್ ನಲ್ಲಿ ಮಿಂಚಿ ತಮಿಳುನಾಡಿಗೆ ಮಣ್ಣು ಮುಕ್ಕಿಸಿದ್ದಾರೆ. ಮೊದಲ ಇನ್ನಿಂಗ್ಸ್ ನಲ್ಲಿ 290ಕ್ಕೆ ಕರ್ನಾಟಕ ಆಲೌಟ್ ಆಗಿ ತಮಿಳುನಾಡು ತಂಡಕ್ಕೆ ಮುಕುಂದ್ ನೆರವು ಸಿಕ್ಕಾಗ ಕೆಲ ಕಾಲ ಆತಂಕದ ವಾತಾವರಣವಿತ್ತು.

Holders Karnataka bowl out Tamil Nadu for 82, win by 285 runs

ಅದರೆ, ಎರಡನೇ ಇನ್ನಿಂಗ್ಸ್ ನಲ್ಲಿ ಸ್ಟುವರ್ಟ್ ಬಿನ್ನಿ, ಪಾಂಡೆ 15 ಓವರ್ ಗಳಲ್ಲಿ 106 ರನ್ ಕಲೆ ಹಾಕಿ ತಮಿಳುನಾಡಿಗೆ ಎರಡೂವರೆ ಸೆಷನ್ಸ್ ನಲ್ಲಿ 368 ರನ್ ಟಾರ್ಗೆಟ್ ನೀಡಿದರು.

ಅಭಿಮನ್ಯು ಮಿಥುನ್ ಬದಲಿಗೆ ಬೌಲಿಂಗ್ ಹೊಣೆ ಹೊತ್ತಿದ್ದ ಎಡಗೈ ವೇಗಿ ಶ್ರೀನಾಥ್ ಅರವಿಂದ್ ತಮಿಳುನಾಡಿನ ಪ್ರಮುಖ ಬ್ಯಾಟ್ಸ್ ಮನ್ ಗಳನ್ನು ಪೆವಿಲಿಯನ್ ಗೆ ಕಳಿಸಿದ ಮೇಲೆ ಮತ್ತೆ ಚೇತರಿಕೆ ಕಂಡು ಬರಲಿಲ್ಲ. ಶ್ರೀನಾಥ್ (8-3-9-4) ವಿನಯ್ 20/3, ಎಸ್ ಗೋಪಾಲ್ ಹಾಗೂ ಸ್ಟುವರ್ಟ್ ಬಿನ್ನಿ ತಲಾ ಒಂದು ವಿಕೆಟ್ ಕಿತ್ತು ಕರ್ನಾಟಕದ ಗೆಲುವಿಗೆ ಕಾರಣರಾದರು.

ಸಂಕ್ಷಿಪ್ತ ಸ್ಕೋರ್: ಕರ್ನಾಟಕ 290(ಗೌತಮ್ 94, ಕುನಾಲ್ ಕಪೂರ್ 87, ಕೌಶಿಕ್ 4/53)
ಹಾಗೂ 351/5 ಡಿಕ್ಲೇರ್ (ಮಾಯಾಂಕ್ 80, ಸ್ಟುವರ್ಟ್ ಬಿನ್ನಿ 77 ಔಟಾಗದೆ, ಉತ್ತಪ್ಪ 76, ಮನೀಶ್ ಪಾಂಡೆ 56 ಔಟಾಗದೆ)

ತಮಿಳುನಾಡು 274(ಅಭಿನವ್ ಮುಕುಂದ್ 84, ಪ್ರಸನ್ನ 59, ಅರವಿಂದ್ 4/52)
ಹಾಗೂ 82(ಎಸ್ ಅರವಿಂದ್ 4/9(ಹ್ಯಾಟ್ರಿಕ್ ಸಹಿತ), ವಿನಯ್ ಕುಮಾರ್ 3/20)
ಫಲಿತಾಂಶ: ಕರ್ನಾಟಕಕ್ಕೆ 285ರನ್ ಗೆಲುವು

ಕರ್ನಾಟಕ : ಆರ್ ವಿನಯ್ ಕುಮಾರ್ (ನಾಯಕ), ರಾಬಿನ್ ಉತ್ತಪ್ಪ, ಮಾಯಾಂಕ್ ಅಗರವಾಲ್, ಮನೀಶ್ ಪಾಂಡೆ, ಕರುಣ್ ನಾಯರ್, ಸ್ಟುವರ್ಟ್ ಬಿನ್ನಿ, ಗೌತಮ್ ಸಿಎಂ (ಉಪನಾಯಕ, ವಿಕೆಟ್ ಕೀಪರ್), ಕುನಾಲ್ ಕಪೂರ್, ಶ್ರೇಯಸ್ ಗೋಪಾಲ್, ಉದಿತ್ ಬಿ ಪಟೇಲ್, ಅಭಿಮನ್ಯು ಮಿಥುನ್, ಎಚ್ ಎಸ್ ಶರತ್, ಎಸ್ ಅರವಿಂದ್, ಅಬ್ರಾರ್ ಕಾಜಿ, ಶಿಶಿರ್ ಭವಾನೆ, ಸಮರ್ಥ್ ಆರ್.

ತಮಿಳುನಾಡು: ಆರ್ ಪ್ರಸನ್ನ(ನಾಯಕ), ಅಭಿನವ್ ಮುಕುಂದ್, ಎಂ ಕೌಶಿಕ್ ಗಾಂಧಿ, ಬಾಬಾ ಅಪರಾಜಿತ್, ದಿನೇಶ್ ಕಾರ್ತಿಕ್(ವಿಕೆಟ್ ಕೀಪರ್) ಬಿ ಇಂದ್ರಜೀತ್, ಎಂ ರಂಗರಾಜನ್, ಎಲ್ ಬಾಲಾಜಿ, ಜೆ ಕೌಶಿಕ್, ಎಂ ಮಹಮ್ಮದ್, ಎ ಶ್ರೀನಿವಾಸ್, ವಿಜಯ್ ಶಂಕರ್, ಯು ಸುಶೀಲ್(ವಿಕೆಟ್ ಕೀಪರ್), ಟಿ ನಟರಾಜನ್ ಹಾಗೂ ಎಂ ಶಾರುಖ್ ಖಾನ್

Story first published: Wednesday, December 10, 2014, 16:15 [IST]
Other articles published on Dec 10, 2014
POLLS

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ