ಕಾಮನ್‌ವೆಲ್ತ್‌: ಎರಡನೇ ದಿನ ಎರಡು ಪದಕ, ಹಲವು ಗೆಲುವು

Posted By:
India grab two medals on second day of commonwealth games 2018

ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್‌ ಗೇಮ್ಸ್‌ 2018ರ ಎರಡನೇ ದಿನವೂ ಭಾರತಕ್ಕೆ ಉತ್ತಮ ದಿನವಾಗಿಯೇ ಇತ್ತು. ಇಂದು ಭಾರತ ಎರಡು ಪದಕಗಳನ್ನು ತನ್ನ ಮುಡಿಗೇರಿಸಿತು.

ಭಾರತದ ವ್ಹೇಟ್‌ ಲಿಫ್ಟರ್‌ಗಳು ಕಾಮನ್‌ವೆಲ್ತ್‌ನಲ್ಲಿ ತಮ್ಮ ಅತ್ಯುತ್ತಮ ಪ್ರದರ್ಶನ ಮುಂದುವರೆಸಿದ್ದು, ಇಂದು ಮಹಿಳಾ ವಿಭಾಗದಲ್ಲಿ ಸಂಜಿತಾ ಚಾನು ಅವರು ಭಾರತಕ್ಕೆ ಎರಡನೇ ಚಿನ್ನ ತಂದು ಕೊಟ್ಟರು. ಹಾಗೂ ಪುರಷರ 69 ಕೆಜಿ ವಿಭಾಗದಲ್ಲಿ ಹರಿಯಾಣದ ದೀಪಕ್ ಲಥೇರ್ ಅವರು ಕಂಚಿನ ಪದಕ ಗೆದ್ದರು.

ಕಾಮನ್‌ವೆಲ್ತ್‌: ಎರಡು ಪದಕ, ಹಲವು ಜಯ, ಕೆಲವು ಸೋಲು

ಎರಡು ದಿನಗಳಲ್ಲಿ ಭಾರತವು 4 ಪದಕಗಳನ್ನು ಗೆದ್ದಿದ್ದು, ಎಲ್ಲಾ ಪದಕಗಳು ವ್ಹೇಟ್‌ ಲಿಫ್ಟಿಂಗ್‌ನಿಂದಲೇ ಬಂದಿರುವುದು ವಿಶೇಷ. ನಿನ್ನೆ ಕರ್ನಾಟಕದ ಗುರುರಾಜ್ ಅವರು ಬೆಳ್ಳಿ ಪದಕ ಗೆದ್ದಿದ್ದರೆ ಮೀರಾಬಾಯಿ ಚಾನು ಅವರು ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದರು.

ಹಾಕಿಯಲ್ಲಿ ಗೆದ್ದ ವನಿತೆಯರು

ಹಾಕಿಯಲ್ಲಿ ಗೆದ್ದ ವನಿತೆಯರು

ನಿನ್ನೆ ಕಳಪೆ ಆಟವಾಡಿ ದುರ್ಬಲ ವೇಲ್ಸ್‌ ವಿರುದ್ಧ ಸೋಲುಂಡಿದ್ದ ಭಾರತ ಮಹಿಳಾ ಹಾಕಿ ತಂಡ ಇಂದು ಮಲೇಷ್ಯಾ ವಿರುದ್ಧ ಭರ್ಜರಿ ಜಯ ಸಾಧಿಸಿದರು. ಸಂಘಟಿತ ಹೋರಾಟ ಪ್ರದರ್ಶಿಸಿದ ಭಾರತದ ವನಿತೆಯರು 4-1 ರಿಂದ ಮಲೇಷ್ಯಾವನ್ನು ಮಣಿಸಿದರು.

ಈಜಿನಲ್ಲಿ ಉತ್ತಮ ಸಾಧನೆ

ಈಜಿನಲ್ಲಿ ಉತ್ತಮ ಸಾಧನೆ

ಕಿರಣ್ ಟಾಕ್ ಅವರು ಮಹಿಳೆಯರ ಈಜು ಸ್ಪರ್ಧೆಯ ಎಸ್‌9 100 ಮೀಟರ್ ಬ್ಯಾಕ್‌ಸ್ಟ್ರೋಕ್‌ನ ಫೈನಲ್ಸ್‌ನಲ್ಲಿ ಕೊನೆಯದಾಗಿ ಗುರಿ ಮುಟ್ಟಿದರು. ಆದರೆ ಇದು ಉತ್ತಮ ಪ್ರದರ್ಶನವೇ ಏಕೆಂದರೆ ಯಾವ ಮಹಿಳೆ ಸಹ ಈ ವರೆಗೆ ಈಜು ಸ್ಪರ್ಧೆಯಲ್ಲಿ ಫೈನಲ್ ಪ್ರವೇಶಿಸಿಯೇ ಇರಲಿಲ್ಲ.

ಸೈಕ್ಲಿಂಗ್‌ನಲ್ಲಿ ಉತ್ತಮ ಪ್ರದರ್ಶನ

ಸೈಕ್ಲಿಂಗ್‌ನಲ್ಲಿ ಉತ್ತಮ ಪ್ರದರ್ಶನ

ಮಹಿಳೆಯರ ಸೈಕ್ಲಿಂಗ್‌ನಲ್ಲಿ ಕೂಡಾ ಭಾರತ ಇಂದು ಉತ್ತಮ ಪ್ರದರ್ಶನವನ್ನೇ ತೋರಿತಾದರೂ ಕ್ವಾಲಿಫೈ ಆಗಲಿಲ್ಲ. ಆದರೆ ಪುರುಷರು ಉತ್ತಮ ಪ್ರದರ್ಶನ ತೋರಿ ಕ್ವಾಟರ್‌ಫೈನಲ್ ಪ್ರವೇಶಿಸಿದ್ದಾರೆ.

ಕ್ವಾಟರ್‌ಫೈನಲ್‌ಗೆ ಎಂಟ್ರಿ

ಕ್ವಾಟರ್‌ಫೈನಲ್‌ಗೆ ಎಂಟ್ರಿ

ಬ್ಯಾಡ್‌ಮಿಂಟನ್‌ ತಂಡ ಪಂದ್ಯದಲ್ಲಿ ಭಾರತ ಇಂದು ಸ್ಕಾಟ್‌ಲೆಂಡ್‌ ಅನ್ನು 5-0 ಇಂದ ಮಣಿಸಿ ಕ್ವಾಟರ್‌ ಫೈನಲ್ ಪ್ರವೇಶಿಸಿತು. ನಿನ್ನೆ ಪಾಕಿಸ್ತಾನ ಹಾಗೂ ಶ್ರೀಲಂಕಾ ವಿರುದ್ಧ ಜಯ ಸಾಧಿಸಿತ್ತು. ಇಂದು ಸ್ಕಾಟ್‌ಲೆಂಡ್‌ ಅನ್ನು ಮಣಿಸಿ ಭಾರತವು ಕ್ವಾಟರ್‌ಫೈನಲ್ ಹಂತ ಪ್ರವೇಶಿಸಿತು.

ದಿನೇಶ್ ಕಾರ್ತಿಕ್‌ಗೆ ಪತ್ನಿಗೆ ಸೋಲು

ದಿನೇಶ್ ಕಾರ್ತಿಕ್‌ಗೆ ಪತ್ನಿಗೆ ಸೋಲು

ಕ್ರಿಕೆಟಿಗ ದಿನೇಶ್ ಕಾರ್ತಿಕ್ ಪತ್ನಿ ದೀಪಿಕಾ ಪಲ್ಲಿಕಲ್‌ಗೆ ಸ್ಕ್ವಾಶ್‌ ಪಂದ್ಯದಲ್ಲಿ ಸೋಲಾಗಿದೆ. ನಿನ್ನೆ ಉತ್ತಮ ಆಟ ಪ್ರದರ್ಶಿಸಿದ್ದ ಅವರು ಇಂದು ಅಲೀಸ್ ವೈಲ್ ವಿರುದ್ಧ ಸೋತರು. ಆದರೆ ಮತ್ತೊಬ್ಬ ಆಟಗಾರ್ತಿ ಜೋಷ್ನಾ ಚಿನ್ನಪ್ಪ ಅವರು ಗೆತಮಿಕಾ ಸ್ಯಾಕ್ಸ್ಬಿ ವಿರುದ್ಧ ಗೆದ್ದರು.

ಮೂರು ಆಟಗಾರರ ಗೆಲವು

ಮೂರು ಆಟಗಾರರ ಗೆಲವು

ಬಾಕ್ಸಿಂಗ್‌ನಲ್ಲಿ ಭಾರತದ ಅಮಿತ್ ಪಂಗಲ್, ಮನೋಜ್ ಕುಮಾರ್ ಮತ್ತು ನಮನ್ ತನ್ವಾರ್ ಅವರುಗಳು ಇಂದು ಜಯ ಸಾಧಿಸಿದರು. ನಮನ್ ತನ್ವಾರ್ ಅವರು ಕ್ವಾಟರ್‌ಫೈನಲ್ ಪ್ರವೇಶಿಸಿದರು. ಬಾಕ್ಸಿಂಗ್‌ನಲ್ಲಿ ಕನಿಷ್ಟ ಎರಡು ಪದಕದ ಭರವಸೆ ವ್ಯಕ್ತಪಡಿಸಲಾಗಿದೆ.

Story first published: Friday, April 6, 2018, 18:36 [IST]
Other articles published on Apr 6, 2018

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ