ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಟರ್ಕಿಯಲ್ಲಿ ನೀರಜ್ ಚೋಪ್ರ ತರಬೇತಿ ಮುಂದುವರಿಕೆ: 5.5 ಲಕ್ಷ ಆರ್ಥಿಕ ನೆರವಿಗೆ ಒಪ್ಪಿಗೆ

Olympics Gold medalist Neeraj Chopra to continue training in Turkey

ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದು ಇತಿಹಾಸ ಬರೆದಿರುವ ನೀರಜ್ ಚೋಪ್ರಾ ಟರ್ಕಿಯಲ್ಲಿ ತರಬೇತಿಯನ್ನು ಪಡೆಯುತ್ತಿದ್ದಾರೆ. ಇದೀಗ ಈ ತರಬೇತಿಗೆ ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ ಟಾರ್ಗೆಟ್ ಒಲಿಂಪಿಕ್ಸ್ ಪೋಡಿಯಂ ಸ್ಕೀಮ್‌(TOPS)ನ ಅಡಿಯಲ್ಲಿ ಆರ್ಥಿಕ ನೆರವು ನೀಡಲು ಮುಂದಾಗಿದ್ದು ನೀರಜ್ ಚೋಪ್ರ ತಮ್ಮ ತರಬೇತಿಯನ್ನು ಟರ್ಕಿಯಲ್ಲಿ ಮುಂದುವರಿಸಲಿದ್ದಾರೆ. ಸುಮಾರು ಐದೂವರೆ ಲಕ್ಷ ಆರ್ಥಿಕ ನೆರವು ಪಡೆಯಲಿದ್ದಾರೆ ನೀರಜ್ ಚೋಪ್ರ.

ಭಾರತದ ಸ್ಟಾರ್ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಈ ತರಬೇತಿಗೆ ಆರ್ಥಿಕ ನೆರವಿಗಾಗಿ TOPS ಜೊತೆಗೆ ಅಥ್ಲೆಟಿಕ್ಸ್ ಫೆಡರೇಶನ್ ಆಫ್ ಇಂಡಿಯಾಗೆ ಕೂಡ ಜಂಟಿಯಾಗಿ ಮನವಿ ಸಲ್ಲಿಸಿದ್ದರು. ಪ್ರಸ್ತುತ ನೀರಜ್ ಚೋಪ್ರ ಆಂಟೆಲಿಯಾದ ಗ್ಲೋರಿಯಾ ಸ್ಪೋಟ್ಸ್ ಅರೇನಾದಲ್ಲಿ ತರಬೇತಿ ಪಡೆಯುತ್ತಿದ್ದಾರೆ.

ಎಂಎಸ್ ಧೋನಿ ಬದಲಿಗೆ ಜಡೇಜಾರನ್ನು ಕ್ಯಾಪ್ಟನ್ ಮಾಡಿದ್ದು ತಪ್ಪು ನಿರ್ಧಾರ; CSKಗೆ ಬೆಂಡೆತ್ತಿದ ಸೆಹ್ವಾಗ್ಎಂಎಸ್ ಧೋನಿ ಬದಲಿಗೆ ಜಡೇಜಾರನ್ನು ಕ್ಯಾಪ್ಟನ್ ಮಾಡಿದ್ದು ತಪ್ಪು ನಿರ್ಧಾರ; CSKಗೆ ಬೆಂಡೆತ್ತಿದ ಸೆಹ್ವಾಗ್

ನೀರಜ್ ಚೋಪ್ರ ಹಾಗೂ ಅವರ ಕೋಚ್ ಡಾ. ಕ್ಲಾಸ್ ಬಾರ್ಟೋನಿಟ್ಜ್ ಕಳೆದ ಮಾರ್ಚ್ ಅಂತ್ಯದ ಬಳಿಕ ಟರ್ಕಿಯಲ್ಲಿದ್ದು ತರಬೇತಿಯಲ್ಲಿ ನಿರತವಾಗಿದ್ದಾರೆ. ಮತ್ತೆ 14 ದಿನಗಳ ಕಾಲ ನೀರಜ್ ಚೋಪ್ರಾ ಅಭ್ಯಾಸ ಮುಂದುವರಿಯಲಿದೆ. ನೀರಜ್ ಚೋಪ್ರಾ ಮುಂಬರುವ ಕಾಮನ್‌ವೆಲ್ತ್ ಗೇಮ್ಸ್, ಏಷ್ಯನ್ ಗೇಮ್ಸ್ ಹಾಗೂ ಆಥ್ಲೆಟಿಕ್ಸ್ ವಿಶ್ವ ಚಾಂಫಿಯನ್‌ಶಿಪ್‌ಗಾಗಿ ಅಭ್ಯಾಸದಲ್ಲಿ ನಿರತವಾಗಿದ್ದಾರೆ.

CSK vs RCB: ಪಂದ್ಯದ ವೇಳೆ ಕೊಹ್ಲಿಗೆ ಚೆಂಡಿನಿಂದ ಹೊಡೆದು ಕ್ಷಮೆಯಾಚಿಸಿದ ಸಿಎಸ್‌ಕೆ ಯುವ ಆಟಗಾರCSK vs RCB: ಪಂದ್ಯದ ವೇಳೆ ಕೊಹ್ಲಿಗೆ ಚೆಂಡಿನಿಂದ ಹೊಡೆದು ಕ್ಷಮೆಯಾಚಿಸಿದ ಸಿಎಸ್‌ಕೆ ಯುವ ಆಟಗಾರ

ಸ್ಪೋರ್ಟ್ಸ್ ಅಥಾರಿಟಿ ಆಪ್ ಇಂಡಿಯಾ ಗುರುವಾರ ಆರ್ಥಿಕ ನೆರವು ನೀಡುವ ಬಗ್ಗೆ ಪ್ರಕಟಣೆ ಹೊರಡಿಸಿದೆ. ಇದು ನೀರಜ್ ಚೋಪ್ರಾ ಅವರ ಗ್ಲೋರಿಯಾ ಸ್ಪೋರ್ಟ್ಸ್ ಅರೇನಾದ ತರಬೇತಿ ಮೊತ್ತದ ಜೊತೆಗೆ ಚೋಪ್ರ ಹಾಗೂ ಅವರ ಕೋಚ್ ಕ್ಲೌಸ್ ಅವರ ವಾಸ್ತವ್ಯ, ಪ್ರಯಾಣ, ಆಹಾರ ಹಾಗೂ ವೈದ್ಯಕೀಯ ಇನ್ಶುರೆನ್ಸ್ ಖರ್ಚುಗಳನ್ನು ಕೂಡ ಒಳಗೊಂಡಿದೆ ಎಂದು ತಿಳಿಸಿದೆ. ಅಲ್ಲದೆ ಇಬ್ಬರ ನಿತ್ಯದ ಖರ್ಚು ತಲಾ 50 ಡಾಲರ್ ಕೂಡ ಇದರಲ್ಲಿ ಒಳಗೊಂಡಿದೆ.

ಕಳೆದ ವರ್ಷ ನಡೆದ ಒಲಿಂಪಿಕ್ಸ್ ಕ್ರೀಡಾಕೂಡದಲ್ಲಿ ಚಿನ್ನದ ಪದಕ ಗೆದ್ದಿದ್ದ ನೀರಜ್ ಚೋಪ್ರ ಭಾರತದ ಪರವಾಗಿ ಒಲಿಂಪಿಕ್ಸ್‌ನಲ್ಲಿ ವೈಯಕ್ತಿಕವಾಗಿ ಚಿನ್ನ ಗೆದ್ದ ಎರಡನೇ ಕ್ರೀಡಾಪಟು ಎನಿಸಿದ್ದರು. ಅಲ್ಲದೆ ಟ್ರ್ಯಾಕ್ ಆಂಡ್ ಫೀಲ್ಡ್ ವಿಭಾಗದಲ್ಲಿ ಭಾರತದ ಕ್ರೀಡಾಪಟು ಒಲಿಂಪಿಕ್ಸ್‌ನಲ್ಲಿ ಗೆದ್ದ ಮೊದಲ ವೈಯಕ್ತಿಕ ಚಿನ್ನದ ಪದಕವೂ ಇದಾಗಿದೆ.

Story first published: Thursday, May 5, 2022, 21:11 [IST]
Other articles published on May 5, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X