ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಕಟಕ್ ನಲ್ಲಿ ಲಂಕನ್ನರ ಕುಟ್ಟಿ ಕೆಡವಿದ ಭಾರತ

By Mahesh

ಕಟಕ್, ನ.3:ಪ್ರವಾಸಿ ಶ್ರೀಲಂಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲೇ ವಿರಾಟ್ ಕೊಹ್ಲಿ ನಾಯಕತ್ವದಭಾರತ ತಂಡ ಭರ್ಜರಿ ಗೆಲುವು ದಾಖಲಿಸಿ ವಿಜಯೋತ್ಸವ ಆಚರಿಸಿಕೊಂಡಿದೆ. ಆರಂಭಿಕ ಆಟಗಾರರ ಅಮೋಘ ಜೊತೆಯಾಟದ ನೆರವಿನಿಂದ ಬೃಹತ್ ಮೊತ್ತ ಕಲೆಹಾಕಿದ್ದ ಭಾರತ, ಲಂಕಾ ವಿರುದ್ಧ 169 ರನ್ ಗಳ ಜಯ ಗಳಿಸಿದೆ.

| ವೇಳಾಪಟ್ಟಿ

ಮೊದಲ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದರೂ ಭಾರತಕ್ಕೆ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ನೀಡಿದ್ದೇ ಶ್ರೀಲಂಕಾಕ್ಕೆ ಮುಳುವಾಯಿತು. ನಿಗದಿತ 50 ಓವರ್ ಗಳಲ್ಲಿ ಟೀಂ ಇಂಡಿಯಾ 363/5 ಸ್ಕೋರ್ ಮಾಡಿತು. ಈ ಬೃಹತ್ ಮೊತ್ತ ಬೆನ್ನು ಹತ್ತಿದ ಲಂಕನ್ ಪಡೆ ಆರಂಭದಿಂದಲೇ ಅಳುಕಿನಿಂದ ಆಟವಾಡಿ ಕೊನೆಗೆ 39.2 ಓವರ್ ಗಳಲ್ಲಿ 194 ರನ್ ಗಳಿಗೆ ಆಲೌಟ್ ಆಯಿತು.

ಲಂಕನ್ನರ ಪರ ಮಹೇಲ ಜಯವರ್ಧನೆ 43 ರನ್ ಗಳಿಸಿ ಕೊಂಚ ಪ್ರತಿರೋಧ ಒಡ್ಡಿದ್ದು ಬಿಟ್ಟರೆ ಶ್ರೀಲಂಕಾದ ಬ್ಯಾಟ್ಸ್ ಮನ್ ಗಳು ಭಾರತದ ಬೌಲರ್ ಗಳ ಕರಾರುವಾಕ್ ಬೌಲಿಂಗ್ ಎದುರಿಸಲು ತಿಣುಕಾಡಿದರು. ಇಶಾಂತ್ ಶರ್ಮ ಮಾರಕ ಬೌಲಿಂಗ್ ದಾಳಿ ನಡೆದ 8 ಓವರ್ ಗಳಲ್ಲಿ 1 ಮೇಡನ್ ಸಹಿತ 34 ರನ್ನಿತ್ತು 4 ವಿಕೆಟ್ ಕಿತ್ತರು.

ಭಾರತ ಇನ್ನಿಂಗ್ಸ್ : ಆರಂಭಿಕ ಬ್ಯಾಟ್ಸ್ ಮನ್ ಅಜಿಂಕ್ಯ ರಹಾನೆ(111) ಮತ್ತು ಶಿಖರ್ ಧವನ್ (113) ಅಮೋಘ ಶತಕ ಸಿಡಿಸಿದರು. 200ನೇ ಪಂದ್ಯವಾಡಿದ ಸುರೇಶ್ ರೈನಾ ಅರ್ಧಶತಕ ಸಿಡಿಸಿದರು. ರೈನಾ ಈ ಪಂದ್ಯದಲ್ಲಿ ತಮ್ಮ ವೃತ್ತಿ ಬದುಕಿನಲ್ಲಿ 5000 ರನ್ ಗಡಿ ದಾಟಿದರು.

ಐದು ಏಕದಿನ ಪಂದ್ಯಗಳ ಸರಣಿಯಲ್ಲಿ ಭಾರತ 1-0 ಮುನ್ನಡೆ ಪಡೆದುಕೊಂಡಿದ್ದು ಮುಂದಿನ ಪಂದ್ಯ ಅಹಮದಾಬಾದಿನಲ್ಲಿ ನ.6 ರಂದು ನಡೆಯಲಿದೆ. ಪಂದ್ಯದ ವಿಶೇಷಗಳು, ಚಿತ್ರಗಳನ್ನು ಮುಂದೆ ವೀಕ್ಷಿಸಿ...

ಅಜಿಂಕ್ಯ ರಹಾನೆ ಅವರ ವೈಯಕ್ತಿಕ ಗರಿಷ್ಠ ಮೊತ್ತ

ಅಜಿಂಕ್ಯ ರಹಾನೆ ಅವರ ವೈಯಕ್ತಿಕ ಗರಿಷ್ಠ ಮೊತ್ತ

ಅಜಿಂಕ್ಯ ರಹಾನೆ ಅವರು ತಮ್ಮ ಏಕದಿನ ಕ್ರಿಕೆಟ್ ನಲ್ಲಿ ವೈಯಕ್ತಿಕ ಗರಿಷ್ಠ ಮೊತ್ತ ದಾಖಲಿಸಿದರು. 111 ರನ್ 108 ಎಸೆತ, ಇದಕ್ಕೂ ಮುನ್ನ ಇಂಗ್ಲೆಂಡ್ ವಿರುದ್ಧ ಬರ್ಮಿಂಗ್ ಹ್ಯಾಮ್ ನಲ್ಲಿ 106ರನ್ ಹೊಡೆದಿದ್ದರು.

* ಶ್ರೀಲಂಕಾ ವಿರುದ್ಧ ಪ್ರಥಮ ಶತಕ, ಪ್ರಥಮ ಬಾರಿಗೆ ಪಂದ್ಯಶ್ರೇಷ್ಠ ಪ್ರಶಸ್ತಿ ಗಳಿಸಿದರು. ಒಟ್ಟಾರೆ 4ನೇ ಪಂದ್ಯಶ್ರೇಷ್ಠ ಪ್ರಶಸ್ತಿ ಇದಾಗಿದೆ.

ಎರಡನೇ ಬೃಹತ್ ಜೊತೆಯಾಟ ದಾಖಲೆ

ಎರಡನೇ ಬೃಹತ್ ಜೊತೆಯಾಟ ದಾಖಲೆ

ರಹಾನೆ ಹಾಗೂ ಧವನ್ ಜೋಡಿ ಕಲೆ ಹಾಕಿದ 231ರನ್ ಗಳ ಆರಂಭಿಕ ವಿಕೆಟ್ ಜೊತೆಯಾಟ ಎರಡನೇ ಅತಿದೊಡ್ಡ ಜೊತೆಯಾಟ ಎನಿಸಿದೆ. ಮೊದಲನೆಯದ್ದು ಸಚಿನ್ ಹಾಗೂ ಗಂಗೂಲಿ 1998ರ ಜುಲೈ 7ರಲ್ಲಿ ಕೊಲೊಂಬೊದಲ್ಲಿ 252 ಅಜೇಯ ಜೊತೆಯಾಟ ದಾಖಲಿಸಿದ್ದರು.

ಕಳೆದ ಐದು ವರ್ಷಗಳಲ್ಲೇ ಇದೆ ಮೊದಲು

ಕಳೆದ ಐದು ವರ್ಷಗಳಲ್ಲೇ ಇದೆ ಮೊದಲು

ಕಳೆದ ಐದು ವರ್ಷಗಳಲ್ಲೇ ಇದೆ ಮೊದಲ ಬಾರಿಗೆ ಆರಂಭಿಕ ವಿಕೆಟ್ ಗೆ ದ್ವಿಶತಕ ಜೊತೆಯಾಟ ಕಂಡು ಬಂದಿದ್ದು ಎಲ್ಲಾ ಪಂದ್ಯಗಳಲ್ಲಿ ಭಾರತ ವಿಜಯಶಾಲಿಯಾಗಿದೆ.

ಇದಕ್ಕೂ ಮುನ್ನ ಗೌತಮ್ ಗಂಭೀರ್ ಹಾಗೂ ವೀರೇಂದ್ರ ಸೆಹ್ವಾಗ್ ಜೋಡಿ 2009ರಲ್ಲಿ ಹ್ಯಾಮಿಲ್ಟನ್ ನಲ್ಲಿ ದ್ವಿಶತಕ ಜೊತೆಯಾಟ ಪ್ರದರ್ಶನ ನೀಡಿದ್ದರು

ಇಶಾಂತ್ ಶರ್ಮ ಶ್ರೇಷ್ಠ ಬೌಲಿಂಗ್

ಇಶಾಂತ್ ಶರ್ಮ ಶ್ರೇಷ್ಠ ಬೌಲಿಂಗ್

ಇಶಾಂತ್ ಶರ್ಮ ಶ್ರೇಷ್ಠ ಬೌಲಿಂಗ್ ಪ್ರದರ್ಶನ(4/34) ನೀಡಿದರು. ಈ ಮುಂಚೆ ಆಸ್ಟ್ರೇಲಿಯಾ ವಿರುದ್ಧ 4/38 ಅವರ ಶ್ರೇಷ್ಠ ಸಾಧನೆಯಾಗಿತ್ತು. ಶ್ರೀಲಂಕಾ ವಿರುದ್ಧ 23 ಪಂದ್ಯಗಳಲ್ಲಿ 24.58 ಸರಾಸರಿಯಂತೆ 41 ವಿಕೆಟ್ ಕಿತ್ತಿದ್ದಾರೆ.

ರೈನಾರಿಂದ 200 ಪಂದ್ಯ 5 ಸಾವಿರ ರನ್

ರೈನಾರಿಂದ 200 ಪಂದ್ಯ 5 ಸಾವಿರ ರನ್

ಸುರೇಶ್ ರೈನಾ ಅವರು 200 ಪಂದ್ಯ ಹಾಗೂ ವೈಯಕ್ತಿಕ 5 ಸಾವಿರ ರನ್ ಪೂರೈಸಿದರು. ಇದಕ್ಕಾಗಿ ಅವರನ್ನು ಪಂದ್ಯಕ್ಕೂ ಮುನ್ನ ಸನ್ಮಾನಿಸಲಾಯಿತು.

ಭಾರತದ ಆರಂಭಿಕ ವಿಕೆಟ್ ಸಾಧನೆ

ಭಾರತದ ಆರಂಭಿಕ ವಿಕೆಟ್ ಸಾಧನೆ

ಭಾರತ ತಂಡ 28 ಬಾರಿ ಆರಂಭಿಕ ವಿಕೆಟ್ ಗೆ 150 ರನ್ ಅಥವಾ ಅದಕ್ಕಿಂತ ಹೆಚ್ಚು ದಾಖಲಿಸಿದೆ. ದಕ್ಷಿಣ ಆಫ್ರಿಕಾ ತಂಡ 20ಬಾರಿ ಈ ಸಾಧನೆ ಮಾಡಿ ಎರಡನೇ ಸ್ಥಾನದಲ್ಲಿದೆ.

ಬದಲಿ ವಿಕೆಟ್ ಕೀಪರ್ ಸಾಧನೆ

ಬದಲಿ ವಿಕೆಟ್ ಕೀಪರ್ ಸಾಧನೆ

ಎಂಎಸ್ ಧೋನಿ ಬದಲಿಗೆ ತಂಡ ಸೇರಿರುವ ವೃದ್ಧಿಮಾನ್ ಸಹಾ ಅವರು ಎರಡನೇ ಬಾರಿಗೆ ನಾಲ್ಕು ವಿಕೆಟ್ ಬೀಳಿಸಿದ್ದಾರೆ. ಈ ಮುಂಚೆ ಢಾಕಾದಲ್ಲಿ ಬಾಂಗ್ಲಾದೇಶ ವಿರುದ್ಧ ಜೂ.17,2014ರಲ್ಲಿ ನಾಲ್ಕು ವಿಕೆಟ್ ಕಬಳಿಸಿದ್ದರು.

350 ಮೇಲಿನ ಮೊತ್ತ ದಾಖಲಿಸಿದಾಗೆಲ್ಲ ಗೆಲುವು

350 ಮೇಲಿನ ಮೊತ್ತ ದಾಖಲಿಸಿದಾಗೆಲ್ಲ ಗೆಲುವು

350 ರನ್ ಹಾಗೂ ಅಧಿಕ ಮೊತ್ತ ದಾಖಲಿಸಿದಾಗೆಲ್ಲ ಭಾರತ ಗೆಲುವು ಗಳಿಸಿದೆ. ಇದುವರೆವಿಗೂ 20ಕ್ಕೂ ಅಧಿಕ ಗೆಲುವು ಪಡೆದಿದ್ದು ಇದು ಏಕದಿನ ಕ್ರಿಕೆಟ್ ಇತಿಹಾಸದಲ್ಲೇ ಅತ್ಯಧಿಕ ಗೆಲುವು ಪಡೆದ ತಂಡ ಎಂಬ ಕೀರ್ತಿ ಭಾರತಕ್ಕೆ ಸಿಕ್ಕಿದೆ.

ಭಾರತದಿಂದ ಮೂರನೇ ಬೃಹತ್ ಮೊತ್ತ

ಭಾರತದಿಂದ ಮೂರನೇ ಬೃಹತ್ ಮೊತ್ತ

ಕಟಕ್ ನಲ್ಲಿ ಲಂಕಾ ವಿರುದ್ಧ ಭಾರತ 363/5 ಸ್ಕೋರ್ ಮಾಡಿತು. ಇದು ಜಂಟಿಯಾಗಿ ಮೂರನೇ ಅತ್ಯಧಿಕ ತಂಡದ ಸ್ಕೋರ್ ಆಗಿದೆ. ಮೊದಲ ಅತ್ಯಧಿಕ ಸ್ಕೋರ್ ರಾಜ್ ಕೋಟ್ ನಲ್ಲಿ ಡಿಸೆಂಬರ್ 15,2009ರಲ್ಲಿ 414/7 ಸ್ಕೋರ್.

ಗೆಲುವಿನ ಅಂತರವೂ ದಾಖಲೆಯಾಗಿದೆ

ಗೆಲುವಿನ ಅಂತರವೂ ದಾಖಲೆಯಾಗಿದೆ

ಶ್ರೀಲಂಕಾ ವಿರುದ್ಧ ವಿರಾಟ್ ಕೊಹ್ಲಿ ಪಡೆ ದಾಖಲಿಸಿದ 169 ರನ್ ಗಳ ಗೆಲುವು ಎರಡನೇ ಅತಿದೊಡ್ಡ ಗೆಲುವೆನಿಸಿದೆ. ಜೋಹಾನ್ಸ್ ಬರ್ಗ್ ನಲ್ಲಿ ಮಾರ್ಚ್ 10, 2003ರಲ್ಲಿ ಲಂಕನ್ನರ ವಿರುದ್ಧ 183 ರನ್ ಗಳ ಜಯ ದಾಖಲಿಸಲಾಗಿತ್ತು.

Story first published: Wednesday, January 3, 2018, 10:16 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X