ಏಪ್ರಿಲ್‌ 4ಕ್ಕೆ ಕಾಮನ್‌ವೆಲ್ತ್‌ ಆರಂಭ, ಪಿ.ವಿ.ಸಿಂಧು ಕೈಗೆ ತ್ರಿವರ್ಣ ಧ್ವಜ

Posted By:
PV Sindhu to lead Indian Athletes team in Commonwealth Games 2018

ಗೋಲ್ಡ್‌ ಕೋಸ್ಟ್‌, ಏಪ್ರಿಲ್ 04: ಆಸ್ಟ್ರೇಲಿಯಾದ ಕ್ವೀನ್ಸ್‌ಲ್ಯಾಂಡ್‌ನ ಗೋಲ್ಡ್‌ ಕೋಸ್ಟ್‌ನಲ್ಲಿ ಇಂದಿನಿಂದ (ಏಪ್ರಿಲ್ 04) ರಿಂದ 21ನೇ ಕಾಮನ್‌ವೆಲ್ತ್‌ ಗೇಮ್ಸ್ ಪ್ರಾರಂಭವಾಗಲಿದೆ.

ಉದ್ಘಾಟನೆ ಸಮಾರಂಭವು ಭಾರತೀಯ ಕಾಲಮಾನ ಮಧ್ಯಾಹ್ನ 2.30 ಪ್ರಾರಂಭವಾಗಲಿದೆ. ಪಥ ಸಂಚಲನದಲ್ಲಿ ಮೊದಲ ಬಾರಿಗೆ ಭಾರತದ ತ್ರಿವರ್ಣ ಧ್ವಜವನ್ನು ಹಿಡಿದು ಭಾರತದ ಅಥ್ಲೀಟ್‌ಗಳ ತಂಡವನ್ನು ಬ್ಯಾಡ್‌ಮಿಂಟನ್ ಆಟಗಾರ್ತಿ ಪಿ.ವಿ.ಸಿಂಧು ಅವರು ಮುನ್ನಡೆಸಲಿದ್ದಾರೆ.

ಭಾರತದ 221 ಕ್ರೀಡಾಪಟುಗಳು ಕಾಮನ್‌ವೆಲ್ತ್‌ ಗೇಮ್ಸ್‌ನ ವಿವಿಧ ಕ್ರೀಡೆಗಳನ್ನು ಭಾಗವಹಿಸಲಿದ್ದಾರೆ. ವಿವಿಧ 71 ದೇಶಗಳ ಒಟ್ಟು 6600 ಕ್ರೀಡಾಳುಗಳು ಈ ಬಾರಿಯ ಕಾಮನ್‌ವೆಲ್ತ್‌ನಲ್ಲಿ ತಮ್ಮ ಪ್ರತಿಭೆ ಪ್ರದರ್ಶಿಸಲಿದ್ದಾರೆ.

ಕಳೆದ ಬಾರಿ 2014ರಲ್ಲಿ ಗ್ಲಾಸ್ಗೊದಲ್ಲಿ ನಡೆದಿದ್ದ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಭಾರತವು 64 ಪದಕಗಳನ್ನು ಜಯಿಸಿತ್ತು. ಈ ಬಾರಿ ಇನ್ನೂ ಹೆಚ್ಚಿನ ಪದಕಗಳನ್ನು ಗೆಲ್ಲುವ ವಿಶ್ವಾದಲ್ಲಿದೆ.

ಏಪ್ರಿಲ್ 04ರಿಂದ ಏಪ್ರಿಲ್ 15ರವರೆಗೆ ಕಾಮನ್‌ವೆಲ್ತ್‌ ಕ್ರೀಡಾಕೂಟ ನಡೆಯಲಿದ್ದು, ಭದ್ರತೆಗೆ ಹೆಚ್ಚಿನ ಆದ್ಯತೆ ನಿಡಲಾಗಿದೆ. ಕ್ರೀಡಾಕೂಟವನ್ನು ಉದ್ದೀಪನ ಮದ್ದು ಮುಕ್ತ ಮಾಡುವ ಸಲುವಾಗಿ, ಸಿರಿಂಜ್‌ ಅನ್ನು ನಿಷೇಧಿಸಲಾಗಿದೆ.

Story first published: Wednesday, April 4, 2018, 11:56 [IST]
Other articles published on Apr 4, 2018

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ