'ಖೇಲ್ ರತ್ನ'ಕ್ಕೆ ಟಿಟಿ ಸುಂದರಿ ಮಣಿಕಾ ಬಾತ್ರಾ ಹೆಸರು ಶಿಫಾರಸು

ನವದೆಹಲಿ, ಜೂನ್ 3: ಭಾರತದ ಟೆಬಲ್ ಟೆನಿಸ್ ಸ್ಟಾರ್ ಆಟಗಾರ್ತಿ ಮಣಿಕಾ ಬಾತ್ರಾ ಹೆಸರನ್ನು ಟೇಬಲ್ ಟೆನಿಸ್ ಫೆಡರೇಶನ್ ಆಫ್ ಇಂಡಿಯಾ (ಟಿಟಿಎಫ್‌ಐ) ಪ್ರತಿಷ್ಠಿತ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಗೆ ಎರಡನೇ ಬಾರಿಗೆ ಶಿಫಾರಸು ಮಾಡಿದೆ. ಕಳೆದ ವರ್ಷ ಮಣಿಕಾ ಇದೇ ಪ್ರಶಸ್ತಿ ಕಳೆದುಕೊಂಡಿದ್ದರು.

ಏಕದಿನದಲ್ಲಿ ವೇಗದ 10,000 ರನ್ ದಾಖಲೆ ಬರೆದ ಟಾಪ್ 5 ಬ್ಯಾಟ್ಸ್‌ಮನ್‌ಗಳುಏಕದಿನದಲ್ಲಿ ವೇಗದ 10,000 ರನ್ ದಾಖಲೆ ಬರೆದ ಟಾಪ್ 5 ಬ್ಯಾಟ್ಸ್‌ಮನ್‌ಗಳು

ಕಾಮನ್ವೆಲ್ತ್ ಗೇಮ್ಸ್‌ನ ಟೇಬಲ್ ಟೆನಿಸ್ ಸ್ಪರ್ಧೆಯಲ್ಲಿ ಭಾರತಕ್ಕೆ ಬಂಗಾರ ಗೆದ್ದ ಮೊದಲ ಮಹಿಳೆ ಎಂಬ ಹೆಗ್ಗಳಿಕೆ ಮಣಿಕಾ ಅವರದ್ದು. 2018ರ ಆವೃತ್ತಿಯಲ್ಲಿ ಮಣಿಕಾ ಈ ಸಾಧನೆ ತೋರಿದ್ದರು. ಇದೇ ವರ್ಷ ಮಣಿಕಾಗೆ 2 ಚಿನ್ನದ ಪದಕ ಸೇರಿ ಒಟ್ಟಿಗೆ 4 ಪದಕಗಳು ಲಭಿಸಿದ್ದವು.

ನೆಚ್ಚಿನ ಆಲ್‌ ಟೈಮ್ ಒಡಿಐ ತಂಡ ಪ್ರಕಟಿಸಿದ ಶ್ರೀಶಾಂತ್, ದಾದಾ ನಾಯಕನೆಚ್ಚಿನ ಆಲ್‌ ಟೈಮ್ ಒಡಿಐ ತಂಡ ಪ್ರಕಟಿಸಿದ ಶ್ರೀಶಾಂತ್, ದಾದಾ ನಾಯಕ

2018ರ ವರ್ಷದಲ್ಲಿ ಆಸ್ಟ್ರೇಲಿಯಾದ ಗೋಲ್ಡ್‌ಕೋಸ್ಟ್‌ನಲ್ಲಿ ನಡೆದಿದ್ದ ಕಾಮನ್ವೆಲ್ತ್ ಗೇಮ್ಸ್‌ನಲ್ಲಿ 24ರ ಹರೆಯದ ಬಾತ್ರಾ ಚೊಚ್ಚಲ ಬಾರಿಗೆ ಮಹಿಳಾ ಟಿಟಿ ತಂಡ ಸ್ಪರ್ಧೆಯಲ್ಲಿ ಭಾರತಕ್ಕೆ ಬಂಗಾರದ ಮೆರಗು ತಂದಿದ್ದರು. ಅದಾಗಿ 5 ತಿಂಗಳ ಬಳಿಕ ಸದ್ಯ 63ನೇ ವಿಶ್ವ ಶ್ರೇಯಾಂಕದಲ್ಲಿರುವ ಮಣಿಕಾ, ಜಕಾರ್ತಾದಲ್ಲಿ ನಡೆದಿದ್ದ ಏಷ್ಯನ್ ಗೇಮ್ಸ್‌ನಲ್ಲಿ ಶರತ್ ಕಮಲ್ ಜೊತೆ ಸೇರಿ ಕಂಚಿನ ಪದಕ ಜಯಿಸಿದ್ದರು.

ಜಾರ್ಜ್ ಅಂತ್ಯಕ್ರಿಯೆಯ ವೆಚ್ಚ ಭರಿಸಲು ಮುಂದಾದ ಬಾಕ್ಸರ್ ಫ್ಲಾಯ್ಡ್ ಮೇವೆದರ್ಜಾರ್ಜ್ ಅಂತ್ಯಕ್ರಿಯೆಯ ವೆಚ್ಚ ಭರಿಸಲು ಮುಂದಾದ ಬಾಕ್ಸರ್ ಫ್ಲಾಯ್ಡ್ ಮೇವೆದರ್

'ಆ ಗೌರವಕ್ಕೆ ಮಣಿಕಾ ಅರ್ಹಳು ಎಂದು ನಮಗನ್ನಿಸಿತು. ಇದಕ್ಕಾಗೇ ನಾವು ಎರಡನೇ ಬಾರಿ ಖೇಲ್ ರತ್ನಕ್ಕೆ ಅವಳ ಹೆಸರನ್ನು ಶಿಫಾರಸು ಮಾಡಿದ್ದೇವೆ,' ಎಂದು ಟಿಟಿಎಫ್‌ಐ ಮುಖ್ಯ ಕಾರ್ಯದರ್ಶಿ ಎಂಪಿ ಸಿಂಗ್ ಪಿಟಿಐ ಜೊತೆ ಹೇಳಿಕೊಂಡಿದ್ದಾರೆ.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Wednesday, June 3, 2020, 10:52 [IST]
Other articles published on Jun 3, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X