ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಟೋಕಿಯೋ ಒಲಿಂಪಿಕ್ಸ್‌: ಚಿನ್ನದ ಪದಕ ಗೆದ್ದ ನೀರಜ್ ಚೋಪ್ರಾ ಹಿಂದಿನ ಶಕ್ತಿ ಓರ್ವ ಕನ್ನಡಿಗ!

Tokyo Olympics 2020: Coach Vishwnatha Naika wish Neeraj Chopra for winning gold medal

ಪ್ರಸ್ತುತ ನಡೆಯುತ್ತಿರುವ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಶನಿವಾರ ( ಆಗಸ್ಟ್ 7 ) ನಡೆದ ಪುರುಷರ ಜಾವೆಲಿನ್ ಥ್ರೋ ಫೈನಲ್ ಸುತ್ತಿನಲ್ಲಿ ಭಾರತದ ನೀರಜ್ ಚೋಪ್ರಾ ಚಿನ್ನದ ಪದಕ ಗೆಲ್ಲುವುದರ ಮೂಲಕ ಒಲಿಂಪಿಕ್ಸ್ ಇತಿಹಾಸದಲ್ಲಿಯೇ ಅಥ್ಲೆಟಿಕ್ಸ್ ವಿಭಾಗದಲ್ಲಿ ಚೊಚ್ಚಲ ಪದಕ ಗೆದ್ದ ಭಾರತೀಯ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.

'ನನಗೆ ಅವಕಾಶ ತಪ್ಪಿಸಿ ತಂಡದಿಂದ ಹೊರಗಿಟ್ಟ'; ಎಬಿ ಡಿವಿಲಿಯರ್ಸ್ ಮತ್ತೊಂದು ಮುಖ ಬಿಚ್ಚಿಟ್ಟ ಆಟಗಾರ!'ನನಗೆ ಅವಕಾಶ ತಪ್ಪಿಸಿ ತಂಡದಿಂದ ಹೊರಗಿಟ್ಟ'; ಎಬಿ ಡಿವಿಲಿಯರ್ಸ್ ಮತ್ತೊಂದು ಮುಖ ಬಿಚ್ಚಿಟ್ಟ ಆಟಗಾರ!

ಹೌದು ಒಲಿಂಪಿಕ್ಸ್ ಇತಿಹಾಸದಲ್ಲಿಯೇ ಇದುವರೆಗೂ ಭಾರತದ ಯಾವುದೇ ಅಥ್ಲೆಟಿ ಕೂಡ ಚಿನ್ನದ ಪದಕವನ್ನು ಗೆದ್ದು ಇರಲಿಲ್ಲ. ಇದೀಗ ಇದೇ ಮೊದಲ ಬಾರಿಗೆ ಅಥ್ಲೆಟಿಕ್ಸ್ ವಿಭಾಗದಲ್ಲಿ ನೀರಜ್ ಚೋಪ್ರಾ ಚಿನ್ನದ ಪದಕ ಗೆಲ್ಲುವುದರ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ಶನಿವಾರ ( ಆಗಸ್ಟ್ 7 ) ನಡೆದ ಪುರುಷರ ಜಾವೆಲಿನ್ ಥ್ರೋ ಸ್ಪರ್ಧೆಯ ಫೈನಲ್ ಸುತ್ತಿನಲ್ಲಿ ಪಾಲ್ಗೊಂಡಿದ್ದ ಭಾರತದ ನೀರಜ್ ಚೋಪ್ರಾ 87.58 ಮೀಟರ್ ಸಾಧನೆ ಮಾಡುವುದರ ಮೂಲಕ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ.

ಟೋಕಿಯೋ ಒಲಿಂಪಿಕ್ಸ್‌: ಬಂಗಾರದ ಹುಡುಗ ನೀರಜ್ ಚೋಪ್ರಾಗೆ ಟ್ವಿಟ್ಟರ್ ಜೈಕಾರಟೋಕಿಯೋ ಒಲಿಂಪಿಕ್ಸ್‌: ಬಂಗಾರದ ಹುಡುಗ ನೀರಜ್ ಚೋಪ್ರಾಗೆ ಟ್ವಿಟ್ಟರ್ ಜೈಕಾರ

ಹೀಗೆ ನೀರಜ್ ಚೋಪ್ರಾ ಒಲಿಂಪಿಕ್ಸ್ ಇತಿಹಾಸದಲ್ಲಿ ಭಾರತದ ಪರ ನೂತನ ದಾಖಲೆಯನ್ನು ಬರೆಯುತ್ತಿದ್ದಂತೆ ದೇಶದಾದ್ಯಂತ ದೊಡ್ಡ ಮಟ್ಟದಲ್ಲಿ ಪ್ರಶಂಸೆಗಳ ಸುರಿಮಳೆ ಸುರಿದಿದೆ. ಕ್ರೀಡಾಭಿಮಾನಿಗಳಿಂದ ಹಿಡಿದು ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿವರೆಗೂ ಶುಭಾಶಯಗಳ ಮಹಾಪೂರವೇ ನೀರಜ್ ಚೋಪ್ರಾಗೆ ಲಭಿಸಿದೆ. ಇನ್ನು ನೀರಜ್ ಚೋಪ್ರಾಗೆ ಚಿನ್ನದ ಪದಕ ಲಭಿಸಿದ ಕೂಡಲೇ ಈ ಹಿಂದೆ ಸುಮಾರು ಐದಾರು ವರ್ಷಗಳ ಕಾಲ ನೀರಜ್ ಚೋಪ್ರಾಗೆ ತರಬೇತಿಯನ್ನು ನೀಡಿದ್ದ ಉತ್ತರಕನ್ನಡ ಜಿಲ್ಲೆಯ ಶಿರಸಿ ಮೂಲದ ತರಬೇತುದಾರ ವಿಶ್ವನಾಥ ನಾಯ್ಕ ಸಂತಸ ವ್ಯಕ್ತಪಡಿಸಿದ್ದಾರೆ. ನೀರಜ್ ಚೋಪ್ರಾ ಸಾಧನೆಯನ್ನು ಮೆಚ್ಚಿ ಕೊಂಡಾಡಿರುವ ವಿಶ್ವನಾಥ ನಾಯ್ಕ ಈ ಹಿಂದೆ ನೀರಜ್ ಚೋಪ್ರಾಗೆ ತಾವು ನೀಡಿದ ತರಬೇತಿಯ ಕುರಿತು ಮೆಲುಕು ಹಾಕಿದ್ದಾರೆ.

2015ರಿಂದ ನೀರಜ್ ಚೋಪ್ರಾಗೆ ವಿಶ್ವನಾಥ್ ನಾಯ್ಕ ತರಬೇತಿ

2015ರಿಂದ ನೀರಜ್ ಚೋಪ್ರಾಗೆ ವಿಶ್ವನಾಥ್ ನಾಯ್ಕ ತರಬೇತಿ


ಪ್ರಸ್ತುತ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದಿರುವ ನೀರಜ್ ಚೋಪ್ರಾ 2015ರಲ್ಲಿ ನ್ಯಾಶನಲ್ ಕ್ಯಾಂಪ್‍ಗೆ ಸೇರ್ಪಡೆಗೊಂಡಿದ್ದರಂತೆ. ಆಗಿನ್ನೂ 18 ವರ್ಷದ ಯುವಕನಾಗಿದ್ದ ನೀರಜ್ ಚೋಪ್ರಾ 70 ಮೀಟರ್ ಸ್ಪರ್ಧೆಯಲ್ಲಿ ಪಾಲ್ಗೊಳ್ಳುತ್ತಿದ್ದರಂತೆ. ಈ ಸಂದರ್ಭದಲ್ಲಿ ಉತ್ತಮ ಪ್ರದರ್ಶನವನ್ನು ತೋರುತ್ತಿದ್ದ ಕಾರಣ ನೀರಜ್ ಚೋಪ್ರಾಗೆ ನ್ಯಾಶನಲ್ ಕ್ಯಾಂಪ್ ಸೇರುವ ಅವಕಾಶ ಒದಗಿ ಬಂದಿತ್ತು. 2016ರಲ್ಲಿ ಇದೆ ವಿಶ್ವನಾಥ್ ನಾಯಕ್ ತರಬೇತಿಯಡಿಯಲ್ಲಿ ಪೋಲೆಂಡ್‌ನಲ್ಲಿ ನಡೆದಿದ್ದ ವಿಶ್ವ ಜೂನಿಯರ್ ಚಾಂಪಿಯನ್‍ಶಿಪ್ ಸ್ಪರ್ಧೆಯಲ್ಲಿ ನೀರಜ್ ಚೋಪ್ರಾ 86.48 ಸಾಧನೆಯನ್ನು ಮಾಡಿ ವಿಶ್ವದಾಖಲೆ ನಿರ್ಮಿಸಿದ್ದರಂತೆ. ಹಾಗೂ ವಿಶ್ವನಾಥ್ ನಾಯಕ್ ತರಬೇತಿಯಲ್ಲಿ ಸೌತ್ ಏಷಿಯನ್ ಗೇಮ್ಸ್‌ ಪಂದ್ಯಾವಳಿಯಲ್ಲಿಯೂ 82 ಮೀಟರ್ ಸಾಧನೆಯನ್ನು ನೀರಜ್ ಚೋಪ್ರಾ ಮಾಡಿದ್ದರಂತೆ. ಹೀಗೆ ನೀರಜ್ ಚೋಪ್ರಾಗೆ ತರಬೇತಿ ನೀಡಿದ ದಿನಗಳನ್ನು ಕನ್ನಡಿಗ ವಿಶ್ವನಾಥ ನಾಯ್ಕ ಮೆಲುಕು ಹಾಕಿ ಸಂತಸ ಪಟ್ಟಿದ್ದಾರೆ.

2019ರಲ್ಲಿ ಮೊಣಕೈ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ನೀರಜ್ ಚೋಪ್ರಾ

2019ರಲ್ಲಿ ಮೊಣಕೈ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ನೀರಜ್ ಚೋಪ್ರಾ

ಇಷ್ಟೆಲ್ಲಾ ಪಂದ್ಯಾವಳಿಗಳಲ್ಲಿ ಭಾಗವಹಿಸಿ ಯಶಸ್ಸು ಕಂಡಿದ್ದ ನೀರಜ್ ಚೋಪ್ರಾ 2019ರ ಮೇ ತಿಂಗಳ ಅವೇಳೆಯಲ್ಲಿ ಮೊಣಕೈ ಗಾಯಕ್ಕೆ ಒಳಗಾಗಿ ಶಸ್ತ್ರ ಚಿಕಿತ್ಸೆಯನ್ನು ಎದುರಿಸಿದ್ದರು. ಹೀಗೆ ಶಸ್ತ್ರಚಿಕಿತ್ಸೆ ಎದುರಿಸಿದ ಕೇವಲ ಎರಡು ವರ್ಷಗಳ ಅವಧಿಯಲ್ಲಿ ಮತ್ತೆ ಜಾವೆಲಿನ್ ಥ್ರೋ ಎಸೆಯುವಷ್ಟು ತರಬೇತಿಯನ್ನು ಪಡೆದುಕೊಂಡು ಬಂದು ಟೊಕಿಯೊ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದಿರುವುದು ನೀರಜ್ ಚೋಪ್ರಾ ಮಾಡಿರುವ ಮಹೋನ್ನತ ಸಾಧನೆಯೇ ಸರಿ.

ನೀರಜ್ ಚೋಪ್ರಾ ಸಾಧನೆಗೆ ಇಡೀ ದೇಶದ ಮೆಚ್ಚುಗೆ

ನೀರಜ್ ಚೋಪ್ರಾ ಸಾಧನೆಗೆ ಇಡೀ ದೇಶದ ಮೆಚ್ಚುಗೆ

ಇನ್ನು ನೀರಜ್ ಚೋಪ್ರಾ ಮಾಡಿರುವ ಈ ಮಹೋನ್ನತ ಸಾಧನೆಗೆ ಇಡೀ ದೇಶವೇ ಮೆಚ್ಚುಗೆಯನ್ನು ವ್ಯಕ್ತಪಡಿಸಿದೆ. ಭಾರತದ ಕ್ರೀಡಾಭಿಮಾನಿಗಳು, ಸಿನಿಮಾ ಕಲಾವಿದರು, ರಾಜಕೀಯ ವ್ಯಕ್ತಿಗಳು ಹಾಗೂ ಹೆಸರಾಂತ ಕ್ರೀಡಾಪಟುಗಳು ನೀರಜ್ ಚೋಪ್ರಾಗೆ ಶುಭಾಶೇಯವನ್ನು ಕೋರುವುದರ ಮೂಲಕ ಅವರ ಸಾಧನೆಯನ್ನು ಗೌರವಿಸಿದ್ದಾರೆ.

Story first published: Sunday, August 8, 2021, 23:04 [IST]
Other articles published on Aug 8, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X