ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಒಬ್ಬೊಬ್ಬ ಅಥ್ಲೀಟ್‌ಗೆ ಎಷ್ಟೆಷ್ಟು ಫ್ರೀ ಕಾಂಡೋಮ್ಸ್ ಗೊತ್ತಾ?!

Tokyo Olympics 2021: Organiser gave special offer to the athletes

ಟೋಕಿಯೋ: ವಿಶ್ವ ವಿಖ್ಯಾತ ಒಲಿಂಪಿಕ್ಸ್‌ ಆಯೋಜನೆಗೆ ಜಪಾನ್‌ನ ಟೋಕಿಯೋ ಸಿಟಿ ಸಜ್ಜಾಗಿದೆ. ಜುಲೈ 23ರ ಶುಕ್ರವಾರದಿಂದ ಆಗಸ್ಟ್ 8ರ ಭಾನುವಾರದ ವರೆಗೆ ಟೋಕಿಯೋ ಒಲಿಂಪಿಕ್ಸ್‌ ನಡೆಯಲಿದೆ. 2020ರಲ್ಲಿ ನಡೆಯಬೇಕಿದ್ದ ಈ ಪ್ರತಿಷ್ಠಿತ ಕ್ರೀಡಾಕೂಟ ಕೋವಿಡ್-19 ಕಾರಣ ಒಂದು ವರ್ಷ ಮುಂದೂಡಲ್ಪಟ್ಟಿತ್ತು. ಈ ಬಾರಿ ಕೋವಿಡ್-19 ಅಲ್ಲ, ತುರ್ತು ಪರಿಸ್ಥಿತಿ ಎದುರಾದರೂ ಒಲಿಂಪಿಕ್ಸ್ ನಡೆಸಿಯೇ ನಡೆಸುತ್ತೇವೆಂದು ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ ಹೇಳಿದೆ.

ಅತ್ಯಧಿಕ ಗೋಲ್ ಪಟ್ಟಿಯಲ್ಲಿ ಲಿಯೋನೆಲ್ ಮೆಸ್ಸಿ ಹಿಂದಿಕ್ಕಿದ ಸುನಿಲ್ ಛೆಟ್ರಿ!ಅತ್ಯಧಿಕ ಗೋಲ್ ಪಟ್ಟಿಯಲ್ಲಿ ಲಿಯೋನೆಲ್ ಮೆಸ್ಸಿ ಹಿಂದಿಕ್ಕಿದ ಸುನಿಲ್ ಛೆಟ್ರಿ!

ವರ್ಣರಂಚಿತ ಒಲಿಂಪಿಕ್ಸ್‌ ಆರಂಭವಾಗುವಾಗ ಪ್ರತೀ ವರ್ಷವೂ ಕ್ರೀಡಾಪಟುಗಳಿಗೆ ಉಚಿತ ಕಾಂಡೋಮ್‌ಗಳನ್ನು ವಿತರಿಸುವ ವಾಡಿಕೆಯಿದೆ. ಟೋಕಿಯೋ ಒಲಿಂಪಿಕ್ಸ್‌ ವೇಳೆಯೂ ಭಾಗವಹಿಸಲು ಬರುವ ಕ್ರೀಡಾಪಟುಗಳಿಗೆ ದೊಡ್ಡ ಸಂಖ್ಯೆಯ ಕಾಂಡೋಮ್‌ಗಳನ್ನು ವಿತರಿಸಲು ಆಯೋಜಕರು ನಿರ್ಧರಿಸಿದ್ದಾರೆ.

ಒಬ್ಬೊಬ್ಬರಿಗೆ ಎಷ್ಟು ಕಾಂಡೋಮ್‌ಗಳು?

ಒಬ್ಬೊಬ್ಬರಿಗೆ ಎಷ್ಟು ಕಾಂಡೋಮ್‌ಗಳು?

ಜಪಾನ್‌ನಲ್ಲಿ ನಡೆಯಲಿರುವ ಒಲಿಂಪಿಕ್ಸ್‌ ವೇಳೆ ಪ್ರತೀ ಕ್ರೀಡಾಪಟುವಿಗೂ ತಲಾ 14 ಉಚಿತ ಕಾಂಡೋಮ್‌ಗಳಂತೆ ಒಟ್ಟಾರೆ 1,60,000 ಉಚಿತ ಕಾಂಡೋಮ್‌ಗಳನ್ನು ವಿತರಿಸಲು ಆಯೋಜಕರು ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ. ಹಿಂದಿನ ಸಾರಿಯ ಒಲಿಂಪಿಕ್ಸ್‌ ವೇಳೆ ಇನ್ನೂ ದೊಡ್ಡ ಸಂಖ್ಯೆಯಲ್ಲಿ ಕಾಂಡೋಮ್ಸ್ ವಿತರಿಸಲಾಗಿತ್ತು.

ರಿಯೋ ಒಲಿಂಪಿಕ್ಸ್‌ನಲ್ಲಿ ಕಾಂಡೋಮ್ಸ್

ರಿಯೋ ಒಲಿಂಪಿಕ್ಸ್‌ನಲ್ಲಿ ಕಾಂಡೋಮ್ಸ್

2016ರಲ್ಲಿ ಬ್ರಿಝಿಲ್‌ನಲ್ಲಿ ನಡೆದಿದ್ದ ರಿಯೋ ಒಲಿಂಪಿಕ್ಸ್‌ ವೇಳೆ ಸುಮಾರು 4,50,000 ಕಾಂಡೋಮ್‌ಗಳನ್ನು ವಿತರಿಸಲಾಗಿತ್ತು. ಇದನ್ನು ಒಬ್ಬೊಬ್ಬರಿಗೆ ವಿಭಾಜಿಸಿದರೆ ತಲಾ ಸುಮಾರು 42 ಕಾಂಡೋಮ್‌ಗಳು ಸಿಗುತ್ತವೆ. ಈ ಬಾರಿ ಕೋವಿಡ್-19 ಕಾರಣ ಬಹಳಷ್ಟು ಕಟ್ಟುನಿಟ್ಟಿನ ಕ್ರಮಗಳಿರುವುದರಿಂದ ವಾಡಿಕೆಯ ಪ್ರಕಾರ ಸಣ್ಣ ಮಟ್ಟಿಗೆ ಕಾಂಡೋಮ್ಸ್‌ ವಿತರಿಸಲು ನಿರ್ಧರಿಸಲಾಗಿದೆ.

ಕಾಂಡೋಮ್ಸ್ ವಿತರಣೆಯೇಕೆ?

ಕಾಂಡೋಮ್ಸ್ ವಿತರಣೆಯೇಕೆ?

ವಿಶ್ವ ಮಟ್ಟದ ಕ್ರೀಡಾಕೂಟಗಳ ವೇಳೆ ಕಾಂಡೋಮ್ಸ್ ವಿತರಣೆಯೇಕೆ? ಅಲ್ಲಿಗೆ ಹೋಗುವ ಕ್ರೀಡಾಪಟುಗಳು ದೇಶಕ್ಕಾಗಿ ಪದಕ ಗೆಲ್ಲಲು ಹೋಗ್ತಾರಾ ಇಲ್ಲ ಸೆಕ್ಸ್‌ಗಾಗಿ ಹೋಗ್ತಾರಾ ಅನ್ನೋ ಪ್ರಶ್ನೆ ನಿಮ್ಮಲಿರಬಹುದು. ಸಾಮಾನ್ಯವಾಗಿ ಕ್ರೀಡಾಪಟುಗಳಿಗೆ ಸೆಕ್ಸ್‌ನಲ್ಲಿ ಆಸಕ್ತಿ ಕೊಂಚ ಜಾಸ್ತಿಯೇ ಇರುತ್ತದೆ. ದೈನಂದಿನ ಕ್ರೀಡಾಭ್ಯಾಸ, ವ್ಯಾಯಾಮ ಮಾಡುತ್ತ ದೈಹಿಕ ಆರೋಗ್ಯ ಚೆನ್ನಾಗಿರುವುದರಿಂದ ಕಾಮಾಸಕ್ತಿಯೂ ಹೆಚ್ಚಿರುವುದಕ್ಕೆ ಕಾರಣವಿರಬಹುದು. ದೊಡ್ಡ ಕ್ರೀಡಾಕೂಟಗಳ ವೇಳೆ ಕಾಮ ನಿಗ್ರಹಿಸಲು ಸಾಧ್ಯವಾಗದೆ ಸ್ಪರ್ಧೆಗೆ ತೊಂದರೆಯಾಗಲೂಬಹುದು. ಹಾಗಂತ ಮುನ್ನೆಚ್ಚರಿಕೆಯಿಲ್ಲದೆ ಸೆಕ್ಸ್ ಮಾಡಿ ಏಡ್ಸ್‌ನಂತ ಮಾರಕ ಸೋಂಕು ಹಬ್ಬುವ ಸಾಧ್ಯತೆಯೂ ಇರುತ್ತದೆ. ಎಚ್‌ಐವಿ ಸೋಂಕು ತಪ್ಪಿಸುವ ಉದ್ದೇಶದಿಂದ, ಜಾಗೃತಿ ಅರ್ಥವಾಗಿ ಒಲಿಂಪಿಕ್ಸ್ ವೇಳೆ ಕಾಂಡೋಮ್‌ಗಳನ್ನು ಉಚಿತವಾಗಿ ವಿತರಿಸಲಾಗುತ್ತಿದೆ.

ಕಾಂಡೋಮ್ಸ್ ಮನೆಗೆ ಕೊಂಡೊಯ್ಯಬಹುದು

ಕಾಂಡೋಮ್ಸ್ ಮನೆಗೆ ಕೊಂಡೊಯ್ಯಬಹುದು

ಕೋವಿಡ್ ಪಿಡುಗು ಜಗತ್ತನ್ನು ಕಾಡುತ್ತಿರುವುದರಿಂದ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುವ ಕ್ರೀಡಾಪಟುಗಳಿಗೆ ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ನೀಡಲಾಗಿದೆ. ಕ್ರೀಡಾ ವಿಲೇಜ್ ಒಳಗಿರುವ ಅಥ್ಲೀಟ್‌ಗಳು ಮತ್ತೊಬ್ಬ ಅಥ್ಲೀಟ್‌ನ ಸಂಪರ್ಕಕ್ಕೆ ಹೋಗುವುದು, ಶೇಕ್ ಹ್ಯಾಂಡ್, ಹಗ್ ಇತ್ಯಾದಿ ಮಾಡುವಂತಿಲ್ಲ. ಅಥ್ಲೀಟ್‌ಗಳು 2 ಮೀಟರ್ ಅಂತರ ಕಾಯಬೇಕೆಂದು ನಿಯಮ ರೂಪಿಸಲಾಗಿದೆ. ಹಾಗಾದರೆ ಕಾಂಡೋಮ್ಸ್ ಯಾಕೆ? ಮನುಷ್ಯರ ಕಳ್ಳಾಟಿಕೆ ಗೊತ್ತಿರುವುದರಿಂದ ಮುನ್ನೆಚ್ಚರಿಕೆಯಾಗಿ ಯಾವ್ದಕ್ಕೂ ಇರ್ಲೀಂತ ಆಯೋಜಕರು ಕಾಂಡೋಮ್ ವಿತರಿಸಲು ಯೋಚಿಸಿದ್ದಾರೆ. ಹಾಗೂ ಕಾಂಡೋಮ್ಸ್ ಉಳಿದರೆ ಅದನ್ನು ಕ್ರೀಡಾಕೂಟದ ಸ್ಮರಣಾರ್ಥ ಸ್ವದೇಶಕ್ಕೆ ಕೊಂಡೊಯ್ಯಬಹುದು ಎಂದು ಆಯೋಜಕರು ತಿಳಿಸಿದ್ದಾರೆ.

Story first published: Wednesday, June 9, 2021, 16:48 [IST]
Other articles published on Jun 9, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X