'ತುರ್ತು ಪರಿಸ್ಥಿತಿ ಬಂದರೂ ಟೋಕಿಯೋ ಒಲಿಂಪಿಕ್ಸ್ ನಡೆಯುತ್ತದೆ'

ಟೋಕಿಯೋ: ಕೋವಿಡ್-19ನಿಂದಾಗಿ ನಗರದಲ್ಲಿ ತುರ್ತು ಪರಿಸ್ಥಿತಿಯ ಸಂದರ್ಭ ಬಂದರೂ ಟೋಕಿಯೋ ಒಲಿಂಪಿಕ್ಸ್ ನಡೆಯುತ್ತದೆ ಎಂದು ಒಲಿಂಪಿಕ್ಸ್ ಕಚೇರಿ ಹೇಳಿದೆ. ಕೊರೊನಾ ಕಾರಣ ಒಲಿಂಪಿಕ್ಸ್‌ಗೆ ಸಮಸ್ಯೆಯಾಗಬಹುದು ಎಂಬ ಮಾತುಗಳು ಕೇಳಿ ಬಂದಿದ್ದರಿಂದ ಒಲಿಂಪಿಕ್ಸ್ ಈ ಹೇಳಿಕೆ ನೀಡಿದೆ.
ಟೋಕಿಯೋ ಒಲಿಂಪಿಕ್ಸ್ ಶುರುವಾಗಲು ಇನ್ನು 9 ವಾರಗಳು ಬಾಕಿಯುಳಿದಿವೆ. ಜಪಾನ್‌ನಲ್ಲೂ ಕೊರೊನಾ ಪ್ರಕರಣಗಳು ಕಾಣಿಸಿಕೊಳ್ಳುತ್ತಿವೆ. ಆದರೆ ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ (ಐಒಸಿ) ಪಿಡುಗಿನ ಮಧ್ಯೆಯೂ ಗೇಮ್ಸ್ ನಡೆಸಿಯೇ ನಡೆಸುತ್ತೇವೆ ಎಂಬ ಭರವಸೆ ನೀಡಿದೆ.
2020ಕ್ಕೆ ನಡೆಯಬೇಕಿದ್ದ ಟೋಕಿಯೋ ಒಲಿಂಪಿಕ್ಸ್, ಕೋವಿಡ್-19 ಕಾರಣ ಒಂದು ವರ್ಷ ಮುಂದೂಡಲ್ಪಟ್ಟಿತ್ತು. ಒಲಿಂಪಿಕ್ಸ್ ಇತಿಹಾಸದಲ್ಲಿ ಗೇಮ್ಸ್ ಮುಂದೂಡಿದ್ದು ಇದೇ ಮೊದಲು. ಇದು ಬಿಟ್ಟರೆ ವಿಶ್ವಯುದ್ಧದ ಸಮಯದಲ್ಲಿ ಸಣ್ಣ ಹಿನ್ನಡೆಯಾದ ದಾಖಲೆಯಿದೆ.
ಟೋಕಿಯೋ ಒಲಿಂಪಿಕ್ಸ್ ಟೂರ್ನಿ ಜಪಾನ್‌ನ ಟೋಕಿಯೋದಲ್ಲಿ ಜುಲೈ 23ರಿಂದ ಆಗಸ್ಟ್ 8ರ ವರೆಗೆ ನಡೆಯಲಿದೆ. ಮುಂದಿನ ಒಲಿಂಪಿಕ್ಸ್ 2024ಕ್ಕೆ ಫ್ರಾನ್ಸ್‌ನಲ್ಲಿ ನಡೆಸಲು ಉದ್ದೇಶಿಸಲಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications