ಬೋಲ್ಟ್ ನಿಂದ ಮತ್ತೆ ಮಿಂಚಿನ ಓಟ, 9.88 ಸೆಕೆಂಡ್‌ಗಳಲ್ಲಿ 100 ಮೀಟರ್

Posted By:

ಕಿಂಗ್ ಸ್ಟನ್(ಜಮೈಕಾ), ಜೂನ್ 12: ಮುಂಬರುವ ರಿಯೋ ಒಲಿಂಒಪಿಕ್ಸ್ ಗೆ ಭರ್ಜರಿ ತಯಾರಿ ನಡೆಸಿರುವ ಅಥ್ಲೀಟ್ ಉಸೇನ್ ಬೋಲ್ಟ್ ಅವರು ಇಲ್ಲಿ ನಡೆದ ಗ್ರ್ಯಾನ್ ಪ್ರೀ ಸ್ಪರ್ಧೆಯಲ್ಲಿ 9.88 ಸೆಕೆಂಡ್‌ಗಳಲ್ಲಿ 100 ಮೀ ಕ್ರಮಿಸಿ ದಾಖಲೆ ಓಟದೊಂದಿಗೆ ಚಿನ್ನದ ಪದಕ ಕೊರಳಿಗೇರಿಸಿಕೊಂಡಿದ್ದಾರೆ.

ಕಿಂಗ್‌ಸ್ಟನ್ ನಲ್ಲಿ ಶನಿವಾರ ನಡೆದ ಸ್ಪರ್ಧೆಯಲ್ಲಿ ಫ್ರಾನ್ಸ್ ನ ಜಿಮ್ಮಿ ವಿಕಾಟೋ ಸ್ಥಾಪಿಸಿದ್ದ ದಾಖಲೆ (100 ಮೀಟರ್‍ ಅನ್ನು 9.86 ಸೆಕೆಂಡ್ ಗಳಲ್ಲಿ) ಯನ್ನು ಬೋಲ್ಟ್ ಮುರಿದರು.

ಪ್ರಸಕ್ತ ವರ್ಷದ ಓಟದ ಸ್ಪರ್ಧೆಗಳಲ್ಲಿ ಬೋಲ್ಟ್ ಅವರು ಅತ್ಯಂತ ತ್ವರಿತವಾಗಿ 100 ಮೀಟರ್ ಗೆರೆ ದಾಟಿದ ಅಥ್ಲೀಟ್ ಎನಿಸಿದ್ದಾರೆ. 2012ರಿಂದ ಒಲಿಂಪಿಕ್ ಸ್ಪರ್ಧೆಯ 100 ಮೀಟರ್ ಫೈನಲ್ ನಲ್ಲಿ ಸ್ಪರ್ಧೆಯೊಡ್ಡಿದ್ದ ಯೊಹಾನ್ ಬ್ಲೇಕ್ ಮತ್ತು ಅಸಾಫಾ ಪೊವೆಲ್ ಅವರು ಈ ಗ್ರಾನ್ ಪ್ರೀಯಲ್ಲೂ ಪೈಪೋಟಿ ನೀಡಿದರು. ನಿಕೆಲ್ ಅಶ್ ಮೀಡ್ ಎರಡನೇ ಸ್ಥಾನ(9.94 ಸೆಂಕಡುಗಳು), ಬ್ಲೇಕ್ ಮೂರನೇ(9.94ಸೆಂ) ಮತ್ತು ಪೊವೆಲ್(9.98 ಸೆಂ) ನಾಲ್ಕನೇ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು.

Story first published: Sunday, June 12, 2016, 20:00 [IST]
Other articles published on Jun 12, 2016

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ