ವಿಶ್ವಕಪ್ ಫೈನಲ್ಸ್: ಪಂದ್ಯ ಶ್ರೇಷ್ಠ ಪ್ರಶಸ್ತಿ ಗೆದ್ದ ವೀರರ ಪಟ್ಟಿ

Posted By:

ಬೆಂಗಳೂರು, ಫೆ.3: ವಿಶ್ವಕಪ್ ಎಂದರೆ ಹಾಗೆ ಬೇರೆ ಎಲ್ಲಾ ಟೂರ್ನಿಗಳಲ್ಲಿ ಮಿಂಚದ ಆಟಗಾರರೂ ಕೂಡಾ ವಿಶ್ವಕಪ್ ನಲ್ಲಿ ವೀರಾವೇಶದ ಹೋರಾಟ ನೀಡಿ ದೇಶಕ್ಕೆ ಕಪ್ ಗೆಲ್ಲಿಸಿಕೊಡುತ್ತಾರೆ.

ಆದರೆ, ಟೂರ್ನಿಯುದ್ದಕ್ಕೂ ಉತ್ತಮ ಪ್ರದರ್ಶನ ನೀಡಿ ಹಲವು ದಾಖಲೆ ಮುರಿದ ಶೂರರು ಕೂಡಾ ಅಂತಿಮ ಹಣಾಹಣಿಯಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿಯಿಂದ ವಂಚಿತರಾಗುತ್ತಾರೆ. ಇಂಥವರ ಪೈಕಿ ಸಚಿನ್, ಯುವರಾಜ್ ಹೆಸರಿಸಬಹುದು.

1975 ರಿಂದ 2011 ರ ತನಕದ ವಿಶ್ವಕಪ್ ಪಂದ್ಯಾವಳಿಗಳಲ್ಲಿ 10 ಪಂದ್ಯ ಶ್ರೇಷ್ಠ ಪ್ರದರ್ಶನಗಳನ್ನು ನೀಡಿದ ಆಟಗಾರರ ಪಟ್ಟಿ ಇಲ್ಲಿದೆ. ಅಂತಿಮ ಹಣಾಹಣಿಯ ಒತ್ತಡದ ಪಂದ್ಯದಲ್ಲಿ ನಿಜವಾದ ಪ್ರತಿಭೆಯನ್ನು ಹೊರಹಾಕಿ ತಂಡಕ್ಕೆ ಜಯತಂದಿತ್ತವರನ್ನೇ ಪಂದ್ಯ ಪುರುಷೋತ್ತಮ ಎನ್ನಲಾಗುತ್ತದೆ.

World Cup: Who were the Men-of-the-finals?

ನಾಯಕರ ಪೈಕಿ ಕ್ಲೈವ್ ಲಾಯ್ಡ್ (1975) ಹಾಗೂ ಎಂಎಸ್ ಧೋನಿ (2011) ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಪಂದ್ಯಶ್ರೇಷ್ಥ ಪ್ರಶಸ್ತಿ ಗಳಿಸಿದ ಗೌರವಕ್ಕೆ ಪಾತ್ರರಾಗಿದ್ದಾರೆ. ಕಳೆದ ಹತ್ತು ವಿಶ್ವಕಪ್ ಫೈನಲ್ ಗಳಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದವರೆಲ್ಲ ವಿಜೇತ ತಂಡದ ಆಟಗಾರರೇ ಆಗಿದ್ದಾರೆ.

1975 ರಿಂದ 2011ರ ತನಕದ ವಿಶ್ವಕಪ್ ಅಂತಿಮ ಹಣಾಹಣಿಯಲ್ಲಿ ಪಂದ್ಯ ಶ್ರೇಷ್ಠ ಪ್ರಶಸ್ತಿ ವಿಜೇತರು:

1975 :ಕ್ಲೈವ್ ಲಾಯ್ಡ್ (ವೆಸ್ಟ್ ಇಂಡೀಸ್) 102 vs ಆಸ್ಟ್ರೇಲಿಯಾ ()

1979 : ವಿವಿಯನ್ ರಿಚರ್ಡ್ಸ್ (ವೆಸ್ಟ್ ಇಂಡೀಸ್) 138* vs ಇಂಗ್ಲೆಂಡ್ ()

ಮೊಹಿಂದರ್ ಅಮರನಾಥ್ (ಭಾರತ) 26 ಹಾಗೂ 3/12 vs ವೆಸ್ಟ್ ಇಂಡೀಸ್

ಡೇವಿಡ್ ಬೂನ್ (ಆಸ್ಟ್ರೇಲಿಯಾ) 75 vs ಇಂಗ್ಲೆಂಡ್

ವಾಸೀಂ ಅಕ್ರಂ (ಪಾಕಿಸ್ತಾನ) 33 ಹಾಗೂ 3/49 vs ಇಂಗ್ಲೆಂಡ್

ಆರವಿಂದ ಡಿಸಿಲ್ವಾ (ಶ್ರೀಲಂಕಾ) 3/42 ಹಾಗೂ 107* vs ಆಸ್ಟ್ರೇಲಿಯಾ.

ಶೇನ್ ವಾರ್ನ್ (ಆಸ್ಟ್ರೇಲಿಯಾ) 4/33 vs ಪಾಕಿಸ್ತಾನ

ರಿಕಿ ಪಾಂಟಿಂಗ್ (ಆಸ್ಟ್ರೇಲಿಯಾ) 140* vs ಭಾರತ

ಆಡಂ ಗಿಲ್ ಕ್ರಿಸ್ಟ್ (ಆಸ್ಟೇಲಿಯಾ) 149 ಹಾಗೂ 3 ಕ್ಯಾಚ್ (ವಿಕೆಟ್ ಕೀಪರ್ ಆಗಿ) vs ಶ್ರೀಲಂಕಾ

ಎಂಎಸ್ ಧೋನಿ (ಭಾರತ) 91* ಹಾಗೂ 1 ಕ್ಯಾಚ್ ವಿಕೆಟ್ ಕೀಪರ್ ಆಗಿ vs ಶ್ರೀಲಂಕಾ

2015-?

ಒನ್ ಇಂಡಿಯಾ ಸುದ್ದಿ

Story first published: Tuesday, February 3, 2015, 12:54 [IST]
Other articles published on Feb 3, 2015

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ