ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

WFI ವಿರುದ್ಧ ಮುಂದುವರಿದ ರೆಸ್ಲರ್‌ಗಳ ಪ್ರತಿಭಟನೆ: ಮಧ್ಯಸ್ಥಿಕೆಗೆ ಮುಂದಾದ ಕ್ರೀಡಾ ಸಚಿವಾಲಯ

Wrestlers Protest: Sports Ministry calls protesting Wrestlers for visit immediately to meditate

ರೆಸ್ಲಿಂಗ್ ಫೆಡರೇಶನ್ ಆಫ್ ಇಂಡಿಯಾ ಅಧ್ಯಕ್ಷರ ವಿರುದ್ಧ ಲೈಂಗಿಕ ದೌರ್ಜನ್ಯ ಸೇರಿದಂತೆ ಗಂಭೀರ ಆರೋಪಗಳನ್ನು ಮಾಡಿ ದೆಹಲಿಯ ಜಂತರ್‌-ಮಂತರ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆ 2ನೇ ದಿನವೂ ಮುಂದುವರಿದಿದೆ. ಭಾರತದ ಸ್ಟಾರ್ ರೆಸ್ಲರ್‌ಗಳು ತಮ್ಮ ಬೇಡಿಕೆಗಾಗಿ ಪಟ್ಟುಹಿಡಿದಿದ್ದು ಇದಕ್ಕೆ ಸಾಕಷ್ಟು ಬೆಂಬಲ ಕೂಡ ದೊರೆತಿದೆ. ಇದೀಗ ಕೇಂದ್ರ ಕ್ರೀಡಾ ಸಚಿವಾಲಯ ಈ ವಿಚಾರವಾಗಿ ಮಧ್ಯಸ್ಥಿಕೆ ವಹಿಸಿಕೊಳ್ಳಲು ನಿರ್ಧರಿಸಿದೆ.

ಅನುರಾಗ್ ಠಾಕೂರ್ ನೇತೃತ್ವದ ಕ್ರೀಡಾ ಸಚಿವಾಲಯ ತಕ್ಷಣವೇ ಪ್ರತಿಭಟನೆಯಲ್ಲಿ ತೊಡಗಿಸಿಕೊಂಡಿರುವ ಸ್ಟಾರ್ ಆಟಗಾರರ ಜೊತೆಗೆ ಮಾತುಕತೆಗೆ ಮುಂದಾಗಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕೆ ಪದಕ ಗೆದ್ದುಕೊಟ್ಟಿರುವ ರೆಸ್ಲರ್‌ಗಳಾದ ಬಜರಂಗ್ ಪೂನಿಯಾ, ನಿನೇಶ್ ಫೋಗಟ್, ಸಂಗೀತ ಫೋಗಟ್ ಸಾಕ್ಷಿ ಮಲಿಕ್ ಸೇರಿದಂತೆ 30ಕ್ಕೂ ಅಧಿಕ ರೆಸ್ಲರ್‌ಗಳು ದೆಹಲಿಯಲ್ಲಿ ಪ್ರತಿಭಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ.

Ind vs Nz 1st ODI: ಆ ವೇಗಿಯನ್ನು ಪ್ಲೇಯಿಂಗ್ XI ನಿಂದ ಹೊರಗಿಟ್ಟು ತಪ್ಪು ಮಾಡಿತಾ ಟೀಂ ಇಂಡಿಯಾ?Ind vs Nz 1st ODI: ಆ ವೇಗಿಯನ್ನು ಪ್ಲೇಯಿಂಗ್ XI ನಿಂದ ಹೊರಗಿಟ್ಟು ತಪ್ಪು ಮಾಡಿತಾ ಟೀಂ ಇಂಡಿಯಾ?

ಈ ಬಗ್ಗೆ ಬಜರಂಗಾ ಪೂನಿಯಾ ಪ್ರತುಭಟನಾ ಸ್ಥಳದಲ್ಲಿ ಮಾಹಿತಿ ನೀಡಿದ್ದಾರೆ. "ಕ್ರೀಡಾ ಸಚಿವಾಲಯ ನಮಗೆ ಈಗಷ್ಟೇ ಸಂದೇಶ ಕಳುಹಿಸಿದ್ದು ಅವರ ಕಚೇರಿಯಲ್ಲಿ ತಕ್ಷಣವೇ ಭೇಟಿಯಾಗುವಂತೆ ತಿಳಿಸಿದ್ದಾರೆ" ಎಂದು ಬಜರಂಗ್ ಪುನಿಯಾ ಮಾಹಿತಿ ನೀಡಿದ್ದಾರೆ. ಈ ಸಂದರ್ಭದಲ್ಲಿ ತಮ್ಮ ಪ್ರಮುಖ ಬೇಡಿಕೆಯಾದ WFI ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ರಾಜೀನಾಮೆ ಹಾಗೂ ಫೆಡರೇಶನ್ ವಿಸರ್ಜನೆಯ ಬೇಡಿಕೆಯಿಂದ ಹಿಂದಕ್ಕೆ ಸರಿಯುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಮತ್ತಷ್ಟು ರೆಸ್ಲರ್‌ಗಳ ಬೆಂಬಲ: ಇನ್ನು ಜನವರಿ 18ರಿಂದ ಆರಂಭವಾಗಿರುವ ರೆಸ್ಲರ್‌ಗಳ ಪ್ರತಿಭಟನೆ ಇಂದು ಎರಡನೇ ದಿನವೂ ಮುಂದುವರಿದಿದೆ. ಎರಡನೇ ದಿನವಾದ ಇಂದು ಈ ಪ್ರತಿಭಟನೆಗೆ ಮತ್ತಷ್ಟು ಸ್ಟಾರ್ ರೆಸ್ಲರ್‌ಗಳು ಬೆಂಬಲ ನೀಡಿದ್ದಾರೆ. ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ವಿಜೇತ ರವಿ ದಹಿಯಾ, ಕಾಮನ್‌ವೆಲ್ತ್ ಚಿನ್ನದ ಪದಕ ವಿಜೇತ ರೆಸ್ಲರ್ ನವೀನ್ ಮಲಿಕ್ ಮತ್ತು ದೀಪಕ್ ಪುನಿಯಾ ಕೂಡ ಇಂದು ಈ ಪ್ರತಿಭಟನೆಗೆ ಆಗಮಿಸಿ ಬೆಂಬಲ ನೀಡಿದ್ದಾರೆ.

ಏಕದಿನ ಕ್ರಿಕೆಟ್‌ನಲ್ಲಿ ವೇಗವಾಗಿ 1000 ರನ್ ಗಳಿಸಿದ ಐವರು ಭಾರತೀಯ ಬ್ಯಾಟ್ಸ್‌ಮನ್‌ಗಳುಏಕದಿನ ಕ್ರಿಕೆಟ್‌ನಲ್ಲಿ ವೇಗವಾಗಿ 1000 ರನ್ ಗಳಿಸಿದ ಐವರು ಭಾರತೀಯ ಬ್ಯಾಟ್ಸ್‌ಮನ್‌ಗಳು

ಇನ್ನು ಬುಧವಾರ ಪ್ರತಿಭಟನೆಯ ಸಂದರ್ಭದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿರುವ ಸ್ಟಾರ್ ರೆಸ್ಲರ್ ವಿನೀಶ್ ಫೋಗಟ್ ರೆಸ್ಲಿಂಗ್ ಫೆಡರೇಶನ್‌ನ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಮಹಿಳಾ ರೆಸ್ಲರ್‌ಗಳಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದರು ಎಂದು ಗಂಭೀರವಾಗಿ ಆರೋಪ ಮಾಡಿದ್ದಾರೆ. ಇನ್ನು ಇದೇ ಸಂದರ್ಭದಲ್ಲಿ ವಿನೇಶ್ ಫೋಗಟ್ ಸ್ವತಃ ತನಗೆ ಬ್ರಿಜ್ ಭೂಷಣ್ ಮಾನಸಿಕ ಹಿಂಸೆಯನ್ನು ಕೂಡ ನೀಡುತ್ತಿದ್ದು ಆತ್ಮಹತ್ಯೆಗೂ ತಾನು ಪ್ರಯತ್ನಿಸಿರುವುದಾಗಿ ಹೇಳಿಕೊಂಡಿದ್ದರು.

ಪ್ರಸ್ತುತ ಇಂಡಿಯನ್ ರೆಸ್ಲಿಂಗ್ ಫೆಡರೇಶನ್‌ನ ಮುಖ್ಯಸ್ಥರಾಗಿರುವ ಬ್ರಿಜ್ ಭೂಷಣ್ ಶರಣ್ ಸಿಂಗ್ ಲೋಕಸಭಾ ಸದಸ್ಯರೂ ಆಗಿದ್ದಾರೆ. ಉತ್ತರ ಪ್ರದೇಶದ ಕೈಸೆರ್ಗಿನಿ ಕ್ಷೇತ್ರವನ್ನು ಪ್ರತಿನಿಧಿಸುವ ಬ್ರಿಜ್ ಭೂಷಣ್ ಶರಣ್ ಸಿಂಗ್ ಭಾರತೀಯ ಜನತಾ ಪಾರ್ಟಿ(ಬಿಜೆಪಿ)ಯನ್ನು ಪ್ರತಿನಿಧಿಸುತ್ತಿದ್ದಾರೆ.

Story first published: Thursday, January 19, 2023, 15:56 [IST]
Other articles published on Jan 19, 2023
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X