WWE ಸೂಪರ್ ಸ್ಟಾರ್ ಸೀನಾ ಮತ್ತೆ ಕಣಕ್ಕಿಳಿಯಲು ಸಿದ್ಧ

By ರಾಜ
Will WWE super star John Cena return to the ring? | WWE | RAW | SMACKDOWN

WWE ಸೂಪರ್ ಸ್ಟಾರ್ ಸೀನಾ ಮತ್ತೊಮ್ಮೆ ರಿಂಗ್ ಗೆ ಇಳಿದರೆ ಯಾರನ್ನು ಎದುರು ಹಾಕಿಕೊಳ್ಳಬಹುದು ಎಂಬ ಕುತೂಹಲ ಅಭಿಮಾನಿಗಳಿ ಮತ್ತೆ ಹುಟ್ಟಿಕೊಂಡಿದೆ. ಇದಕ್ಕೆ ಕಾರಣ, ಇತ್ತೀಚೆಗೆ ಸಂದರ್ಶನವೊಂದರಲ್ಲಿ ಜಾನ್ ಸೀನಾ ಅವರು ಮಾತನಾಡುತ್ತಾ ಮತ್ತೆ WWE ಅಂಗಳಕ್ಕೆ ಇಳಿಯುವ ಬಗ್ಗೆ ಸುಳಿವು ನೀಡಿದ್ದಾರೆ. ಈ ಹಿಂದೆ ಜಾನ್ ಸೀನಾ , ಅಂಡರ್ ಟೇಕರ್, ಆಂಡ್ರೆ ದಿ ಜೈಂಟ್ ಅವರ ವಿರುದ್ಧ ಸೆಣಸಾಟ ಆಯೋಜನೆಗೊಂಡಿದೆ ಎಂಬ ಸುದ್ದಿ ಹಬ್ಬಿತ್ತು.

WWE ರೆಸ್ಲಲ್ಮೇನಿಯಾದ ಮೆಗಾ ಪಂದ್ಯದ ಬಗ್ಗೆ ಚಾಂಪಿಯನ್ ಆಟಗಾರ ಜಾನ್ ಸೀನಾ ಸುಳಿವು ನೀಡಿದ್ದಾರೆ. ರೆಸ್ಲಲ್ಮೇನಿಯಾ 36 ನಡೆಯುತ್ತಿರುವ ಥಾಂಪಾ(ಫ್ಲೋರಿಡಾ) ಇರುವುದು ನನ್ನ ಮನೆಯ ಬಳಿಯಲ್ಲೇ, ಹೀಗಾಗಿ ನಾನು ಏಪ್ರಿಲ್ 05ರಂದು ಪಂದ್ಯಾವಳಿಗೆ ಹಾಜರಾಗುತ್ತೇನೆ ಎಂದಿದ್ದಾರೆ. ಆದರೆ ಪಂದ್ಯವಾಡುತ್ತಾರಾ? ಯಾರು ಎದುರಾಳಿ? ಎಂಬುದರ ಬಗ್ಗೆ ಯಾವುದೇ ಮಾಹಿತಿಯಿಲ್ಲ.

ವೈರಲ್ ವಿಡಿಯೋ : ನಿಕ್ಕಿಗೆ ಪ್ರಪೋಸ್ ಮಾಡಿದ ಜಾನ್ ಸೀನಾವೈರಲ್ ವಿಡಿಯೋ : ನಿಕ್ಕಿಗೆ ಪ್ರಪೋಸ್ ಮಾಡಿದ ಜಾನ್ ಸೀನಾ

16 ಬಾರಿ ವಿಶ್ವ ಚಾಂಪಿಯನ್ ಸೀನಾ ಅವರು ರಿಕ್ ಫ್ಲೇರ್ ಅವರ ದಾಖಲೆ ಮುರಿಯುತ್ತಾ ಸಾಗಿದ್ದಾರೆ ಎಂದು ಅಭಿಮಾನಿಗಳು ಶುಭಹಾರೈಸಿದ್ದಾರೆ.

ಸಟರ್ಡೇ ನೈಟ್ ಲೈವ್, ಅಮೆರಿಕನ್ ಗ್ರಿಟ್, ಇಎಸ್ ಪಿವೈ ಮುಂತಾದ ಕಾರ್ಯಕ್ರಮಗಳನ್ನು ನಿರೂಪಿಸಿ ಯಶಸ್ವಿಯಾಗಿ ವಿಶ್ವದೆಲ್ಲೆಡೆ ಜನಪ್ರಿಯತೆ ಗಳಿಸಿರುವ ಜಾನ್ ಸೀನಾ ಅವರು ನನಗೆ 42 ವರ್ಷ, WWEನನಗೆ ವಿಶ್ವದೆಲ್ಲೆಡೆ ಜನಪ್ರಿಯತೆ ತಂದುಕೊಟ್ಟಿದೆ. ಅದು ನನ್ನ ಫ್ಯಾಮಿಲಿ, ನಾನು ಕೋಚ್, ಮೆಂಟರ್, ಸ್ಪರ್ಧಿ ಹೀಗೆ ಯಾವುದೇ ಪಾತ್ರವಹಿಸಲು ಸಿದ್ಧ ಎಂದು ಹೇಳಿದರು.

ಬಹುಕಾಲದ ಗೆಳತಿ, ಪ್ರೇಯಸಿ ರೆಸ್ಲರ್ ನಿಕ್ಕೆಬೆಲ್ಲಾರಿಗೆ ಚಾಂಪಿಯನ್ ರೆಸ್ಲರ್ ಜಾನ್ ಸೀನಾ ಅವರು ರಿಂಗ್ ನಲ್ಲೇ ಪ್ರಪೋಸ್ ಮಾಡಿದ್ದ ವಿಡಿಯೋ ಸಕತ್ ವೈರಲ್ ಆಗಿತ್ತು. ಈಗ ಜಾನ್ ಸೀನಾ ಕಮ್ ಬ್ಯಾಕ್ ಗೇಮ್ ನಲ್ಲಿ ಆಡುವ ಮೊದಲ ಪಂದ್ಯ ಈ ದಾಖಲೆ ಮುರಿಯಬಹುದು ಎಂಬ ಚರ್ಚೆ ಆರಂಭವಾಗಿದೆ.

ಡಿಸೆಂಬರ್ 2018 ಹಾಗೂ ಜನವರಿ 2019ರಲ್ಲಿ ಅಂಗಳದಲ್ಲಿ ಕಾಣಿಸಿಕೊಂಡಿದ್ದ ಸೀನಾ ಸದ್ಯಕ್ಕೆ ಹಾಲಿವುಡ್ ಸಿನಿಮಾ ಫಾಸ್ಟ್ ಅಂಡ್ ಫ್ಯೂರಿಯಸ್ 9ರಲ್ಲಿ ಡೊಮೊನಿಕ್ ಟೊರೆಟ್ಟಿ (ವಿನ್ ಡೀಸೆಲ್) ವಿರುದ್ಧ ಸೆಣಸಾಡುವುದನ್ನು ಅಭಿಮಾನಿಗಳು ಕಾತುರದಿಂದ ಕಾದಿದ್ದಾರೆ.

ಐಸಿಸಿ ಟಿ20 ವಿಶ್ವಕಪ್ 2021 ಊಹಿಸು
Match 15 - October 24 2021, 03:30 PM
ಶ್ರೀಲಂಕಾ
ಬಾಂಗ್ಲಾದೇಶ್
Predict Now

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Monday, February 3, 2020, 13:01 [IST]
Other articles published on Feb 3, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X