ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಟೆನಿಸ್‌: ಸ್ಯಾಮ್‌ ಸ್ಟಾಸರ್‌ಗೆ ಶಾಕ್‌ ನೀಡಿದ ಅಂಕಿತಾ ರೈನಾ

Ankita Raina stuns former US Open champion Samantha Stosur

ಆನ್ನಿಂಗ್‌ (ಚೀನಾ), ಏಪ್ರಿಲ್‌ 24: ಭಾರತದ ಅಗ್ರಮಾನ್ಯ ಸಿಂಗಲ್ಸ್‌ ಆಟಗಾರ್ತಿ ಅಂಕಿತಾ ರೈನಾ, ಇಲ್ಲಿ ನಡೆಯುತ್ತಿರುವ ಡಬ್ಲ್ಯುಟಿಎ ಕುನ್‌ಮಿಂಗ್‌ ಓಪನ್‌ ಟೆನಿಸ್‌ ಟೂರ್ನಿಯ ಮಹಿಳಾ ಸಿಂಗಲ್ಸ್‌ ವಿಭಾಗದ ಮೊದಲ ಸುತ್ತಿನಲ್ಲಿ ಮಾಜಿ ಯುಎಸ್‌ ಓಪನ್‌ ಚಾಂಪಿಯನ್‌ ಆಸ್ಟ್ರೇಲಿಯಾದ ಸಮಂತಾ ಸ್ಟಾಸರ್‌ಗೆ ಆಘಾತ ನೀಡಿದ್ದಾರೆ.

 ಕ್ಲೇ ಕಿಂಗ್‌ ನಡಾಲ್‌ಗೆ ಶಾಕ್‌ ನೀಡಿದ ಫಾಬಿಯೊ ಕ್ಲೇ ಕಿಂಗ್‌ ನಡಾಲ್‌ಗೆ ಶಾಕ್‌ ನೀಡಿದ ಫಾಬಿಯೊ

ಸಮಬಲದಿಂದ ಕೂಡಿದ್ದ ಪಂದ್ಯದಲ್ಲಿ ಮಿಂಚಿನ ಆಟವಾಡಿದ ಏಷ್ಯನ್‌ ಗೇಮ್ಸ್‌ ಕಂಚಿನ ಪದಕ ವಿಜೇತೆ 26 ವರ್ಷದ ಅಂಕಿತಾ, ಅಂತಿಮವಾಗಿ 7-5, 2-6, 7-5 ಅಂತರದ ಸೆಟ್‌ಗಳಿಂದ ಆಸ್ಟ್ರೇಲಿಯಾದ ಅನುಭವಿ ಆಟಗಾರ್ತಿಗೆ ಸೋಲುಣಿಸಿದರು. ಅಂಕಿತಾ ಮತ್ತು ಸ್ಟಾಸರ್‌ ಮುಖಾಮುಖಿಯಾಗುತ್ತಿರುವುದು ಇದು ಎರಡನೇ ಬಾರಿ. ಈ ಮೊದಲು ಸ್ಯಾಮ್‌ ಭಾರತೀಯ ಆಟಗಾರ್ತಿ ಎದುರು ನೇರ ಸೆಟ್‌ಗಳ ಜಯ ದಾಖಲಿಸಿದ್ದರು.

ಈ ಗೆಲುವಿನೊಂದಿಗೆ ಅಂತಿಮ 16ರ ಘಟ್ಟಕ್ಕೆ ಕಾಲಿಟ್ಟಿರುವ ಅಂಕಿತಾ, ಕ್ವಾರ್ಟರ್‌ಫೈನಲ್ಸ್‌ ಅರ್ಹತೆಗಾಗಿ ಆತಿಥೇಯ ಚೀನಾದ ಆಟಗಾರ್ತಿ ಕಾಯ್ಲಿನ್‌ ಝಾಂಗ್‌ ವಿರುದ್ಧ ಪೈಪೋಟಿ ನಡೆಸಲಿದ್ದಾರೆ.

ವಿಶ್ವದ 178ನೇ ಶ್ರೇಯಾಂಕ ಹೊಂದಿರುವ ಅಂಕಿತಾ ಇತ್ತೀಚೆಗಷ್ಟೇ ಇಸ್ತಾನ್‌ಬುಲ್‌ನಲ್ಲಿ ನಡೆದ ಐಟಿಎಫ್‌ ಟೆನಿಸ್‌ ಟೂರ್ನಿಯಲ್ಲಿ ರನ್ನರ್‌ಅಪ್‌ ಸ್ಥಾನ ಪಡೆದಿದ್ದರು. ಸಾನಿಯಾ ಮಿರ್ಝಾ ಮತ್ತು ನಿರುಪಮಾ ವೈದ್ಯನಾಥನ್‌ ಬಳಿಕ ಡಬ್ಲ್ಯುಟಿಎ ವಿಶ್ವ ಶ್ರೇಯಾಂಕದ ಅಗ್ರ 200ರ ಒಳಗೆ ಕಾಲಿಟ್ಟ ಭಾರತೀಯ ಆಟಗಾರ್ತಿ ಎಂಬ ಹೆಗ್ಗಳಿಕೆ ಅಂಕಿತಾ ಅವರದ್ದು.

ಟೆನಿಸ್‌: ಸ್ಟಟ್‌ಗಾರ್ಟ್‌ ಓಪನ್‌ನಿಂದ ಹಿಂದೆ ಸರಿದ ಸಿಮೋನಾಟೆನಿಸ್‌: ಸ್ಟಟ್‌ಗಾರ್ಟ್‌ ಓಪನ್‌ನಿಂದ ಹಿಂದೆ ಸರಿದ ಸಿಮೋನಾ

ಸ್ಟಾಸರ್‌, 2011ರ ಯುಎಸ್‌ ಓಪನ್‌ ಫೈನಲ್‌ನಲ್ಲಿ ಅಮೆರಿಕದ ಸೆರೆನಾ ವಿಲಿಯಮ್ಸ್‌ ಅವರನ್ನು ಮಣಿಸಿ ಚೊಚ್ಚಲ ಗ್ರ್ಯಾನ್‌ ಸ್ಲ್ಯಾಮ್‌ ಸಿಂಗಲ್ಸ್‌ ಪ್ರಶಸ್ತಿ ಗೆದ್ದಿದ್ದರು. ಇನ್ನು ಡಬಲ್ಸ್‌ ವಿಭಾಗದಲ್ಲಿ 6 ಗ್ರ್ಯಾನ್‌ ಸ್ಲ್ಯಾಮ್‌ ಗೆದ್ದಿರುವ ಸ್ಯಾಮ್‌, ಮಾಜಿ ನಂ.1 ಆಟಗಾರ್ತಿ ಕೂಡ.

Story first published: Wednesday, April 24, 2019, 17:42 [IST]
Other articles published on Apr 24, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X