ಆಸ್ಟ್ರೇಲಿಯನ್ ಓಪನ್ 2ನೇ ದಿನ: 2ನೇ ಸುತ್ತಿಗೆ ಲಗ್ಗೆಯಿಟ್ಟ ಜೊಕೊವಿಕ್, ಆಂಡಿ ಮರ್ರೆ, ಒನ್ಸ್ ಜಬೇರ್

ಆಸ್ಟ್ರೇಲಿಯನ್ ಓಪನ್‌ನ 2ನೇದಲ್ಲಿ 21 ಬಾರಿಯ ಗ್ರ್ಯಾಂಡ್ ಸ್ಲಾಮ್ ಚಾಂಪಿಯನ್ ನೊವಾಕ್ ಜೊಕೊವಿಕ್ ತನ್ನ ಅಭಿಯಾನವನ್ನು ಭರ್ಜರಿ ಗೆಲುವಿನೊಂದಿಗೆ ಪ್ರಾರಂಭಿಸಿದ್ದಾರೆ. ರಾಡ್ ಲೇವರ್ ಅರೆನಾದಲ್ಲಿ ಸರ್ಬಿಯನ್ ಆಟಗಾರ ಸ್ಪೇನ್‌ನ ರಾಬರ್ಟೊ ಕಾರ್ಬಲ್ಸ್ ಬೇನಾ ಅವರನ್ನು 6-3, 6-4, 6-0 ಸೆಟ್‌ಗಳಿಂದ ಸೋಲಿಸಿ ಮೆಲ್ಬೋರ್ನ್ ಪಾರ್ಕ್‌ನಲ್ಲಿ ತನ್ನ ಗೆಲುವಿನ ಓಟವನ್ನು 22ನೇ ಪಂದ್ಯಕ್ಕೆ ವಿಸ್ತರಿಸಿದ್ದಾರೆ.

ನೊವಾಕ್ ಜೊಕೊವಿಕ್ 2019, 2020 ಮತ್ತು 2021 ರಲ್ಲಿ ಆಸ್ಟ್ರೇಲಿಯನ್ ಓಪನ್‌ನಲ್ಲಿ ಚಾಂಪಿಯನ್ ಪಟ್ಟಕ್ಕೇರಿದ್ದರು. ಆದರೆ ಕೋವಿಡ್ ವ್ಯಾಕ್ಸಿನೇಷನ್ ನಿಯಮದ ಕಾರಣದಿಂದಾಗಿ 2022ರ ಆವೃತ್ತಿಯಿಂದಾಡುವ ಅವಕಾಶ ಕಳೆದುಕೊಂಡಿದ್ದರು. ಇದೀಗ ಮತ್ತೆ ರಾಡ್ ಲೇವರ್ ಅರೆನಾಗೆ ಮರಳಿದ ಜೊಕೊವಿಕ್ ಗೆಲುವಿನ ಅಭಿಯಾನ ಮುಂದುವರಿಸಿದ್ದಾರೆ.

IND vs NZ: ನ್ಯೂಜಿಲೆಂಡ್ ವಿರುದ್ಧದ ಪಂದ್ಯಕ್ಕೂ ಮುನ್ನ ಜೂ. ಎನ್‌ಟಿಆರ್ ಭೇಟಿಯಾದ ಟೀಂ ಇಂಡಿಯಾIND vs NZ: ನ್ಯೂಜಿಲೆಂಡ್ ವಿರುದ್ಧದ ಪಂದ್ಯಕ್ಕೂ ಮುನ್ನ ಜೂ. ಎನ್‌ಟಿಆರ್ ಭೇಟಿಯಾದ ಟೀಂ ಇಂಡಿಯಾ

"ಒಂದು ನಿರ್ದಿಷ್ಟ ಅಂಕಣದಲ್ಲಿ ನೀವು ಹೆಚ್ಚು ಗೆದ್ದರೆ ಅದು ಹೆಚ್ಚು ಆರಾಮದಾಯಕ ಅನುಭವ ನೀಡುತ್ತದೆ. ಈ ಅಂಕಣದಲ್ಲಿ ಅನೇಕ ಪಂದ್ಯಗಳನ್ನು ಗೆಲ್ಲಲು ಸಾಧ್ಯವಾಗಿರುವುದಕ್ಕೆ ನಾನು ಅದೃಷ್ಟಹೊಂದಿದ್ದೇನೆ. ವಿಶೇಷವಾಗಿ ರಾತ್ರಿ ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದೇನೆ" ಎಂದು ಪಂದ್ಯದ ನಂತರ ಜೊಕೊವಿಕ್ ಪ್ರತಿಕ್ರಿಯೆ ನೀಡಿದ್ದಾರೆ.

ಇನ್ನು ಮತ್ತೊಂದೆಡೆ ಬ್ರಿಟನ್‌ನ ಸ್ಟಾರ್ ಆಟಗಾರ ಆಂಡಿ ಮರ್ರೆ ಪ್ರಯಾಸದ ಗೆಲುವು ಸಾಧಿಸಿದ್ದಾರೆ. ಮ್ಯಾಟಿಯೊ ಬೆರೆಟ್ಟಿನಿ ವಿರುದ್ಧದ ಪಂದ್ಯದಲ್ಲಿ ಮರ್ರೆ ಐದು ಸೆಟ್‌ಗಳ ಕಾದಾಟವನ್ನು ನಡೆಸಿದರು. ಅಂತಿಮವಾಗಿ 6-3, 6-3, 4-6, 6-7 (7-9), 7-6 (10-6) ಗೆಲುವು ಸಾಧಿಸಿದ್ದಾರೆ. ಈ ಪಂದ್ಯ ಬರಿಬ್ಬರಿ ಐದು ಗಂಟೆಗಳ ಕಾಲ ನಡೆಯಿತು.

ಇನ್ನು ಟ್ಯುನೀಶಿಯಾದ ಸ್ಟಾರ್ ಆಟಗಾರ್ತಿ ಓನ್ಸ್ ಜಬೇರ್ ಕೂಡ ಮೊದಲ ಸಯತ್ತಿನಲ್ಲಿ ಪೈಪೋಟಯ ಸವಾಲು ಸ್ವೀಕರಿಸಿದರು. ತಮಾರಾ ಜಿಡಾನ್ಸೆಕ್ ವಿರುದ್ಧದ ತನ್ನ ಮೊದಲ ಸುತ್ತಿನ ಪಂದ್ಯದ ಎರಡನೇ ಸೆಟ್‌ ಕಳೆದುಕೊಂಡ ನಂತರ ಸೋಲಿನ ಭಿತಿಗೆ ಒಳಗಾಗಿದ್ದರು. ಆದರೆ ಎರಡು ಬಾರಿಯ ಗ್ರ್ಯಾಂಡ್ ಸ್ಲಾಮ್ ಫೈನಲಿಸ್ಟ್ ಪಂದ್ಯವನ್ನು ಅಂತಿಮವಾಗಿ 7-6 (10-8) 4-6 6-1 ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ.

IND vs NZ: ಇದೀಗ ರಿಕಿ ಪಾಂಟಿಂಗ್, ವೀರೇಂದ್ರ ಸೆಹ್ವಾಗ್ ದಾಖಲೆ ಮೇಲೆ ಕಣ್ಣಿಟ್ಟ ವಿರಾಟ್ ಕೊಹ್ಲಿIND vs NZ: ಇದೀಗ ರಿಕಿ ಪಾಂಟಿಂಗ್, ವೀರೇಂದ್ರ ಸೆಹ್ವಾಗ್ ದಾಖಲೆ ಮೇಲೆ ಕಣ್ಣಿಟ್ಟ ವಿರಾಟ್ ಕೊಹ್ಲಿ

ಇನ್ನು ಜೆಕ್ ರಿಪಬ್ಲಿಕ್‌ನ ಲಿಂಡಾ ಫ್ರುಹ್ವಿರ್ಟೋವಾ ಮೊದಲ ಸುತ್ತಿನಲ್ಲಿ ಗೆಲುವು ಸಾಧಿಸುವ ಮೂಲಕ ಆಸ್ಟ್ರೇಲಿಯನ್ ಓಪನ್‌ನಲ್ಲಿ ವಿಶೇಷ ಇತಿಹಾಸವನ್ನು ಬರೆದಿದ್ದಾರೆ. 17ರ ಹರೆಯದ ಯುವ ಆಟಗಾರ್ತಿ 2019ರಲ್ಲಿ ಆಸ್ಟ್ರೇಲಿಯನ್ ಓಪನ್‌ನ ಮಹಿಳಾ ಸಿಂಗಲ್ಸ್‌ಲ್ಲಿ ಇಗಾ ಸ್ವಿಟೆಕ್ ಗೆದ್ದ ಬಳಿಕ ಆಸ್ಟ್ರೇಲಿಯನ್ ಓಪನ್ ಗೆದ್ದ ಅತ್ಯಂತ ಕಿರಿಯ ಆಟಗಾರ್ತಿ ಎನಿಸಿಕೊಂಡಿದ್ದಾರೆ. ಫ್ರುಹ್ವಿರ್ಟೋವಾ ಆಸ್ಟ್ರೇಲಿಯಾದ ಜೈಮೀ ಫೌರ್ಲಿಸ್ ವಿರುದ್ಧ 6-0, 6-4 ಅಂತರದಿಂದ ಗೆಲುವು ಸಾಧಿಸಿ ಎರಡನೇ ಸುತ್ತಿಗೆ ಪ್ರವೇಶಿಸಿದ್ದಾರೆ.

For Quick Alerts
ALLOW NOTIFICATIONS
For Daily Alerts
Story first published: Tuesday, January 17, 2023, 22:07 [IST]
Other articles published on Jan 17, 2023
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X