ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಆಸ್ಟ್ರೇಲಿಯನ್ ಓಪನ್: ಥ್ರಿಲ್ಲರ್ ಫೈನಲ್‌ನಲ್ಲಿ ಗೆದ್ದ ನಡಾಲ್ ಮುಕುಟಕ್ಕೆ ವಿಶ್ವದಾಖಲೆಯ 21ನೇ ಗ್ರ್ಯಾಂಡ್‌ಸ್ಲ್ಯಾಮ್!

Australian Open: Rafael Nadal Creat History; won 21st grand slam, Medvedev Runner up

ಆಸ್ಟ್ರೇಲಿಯನ್ ಓಪನ್‌ನ ಪುರುಷರ ಫೈನಲ್ ಪಂದ್ಯದಲ್ಲಿ ಸ್ಪೇನ್‌ನ ರಾಫೆಲ್ ನಡಾಲ್ ಗೆದ್ದು ಐತಿಹಾಸಿಕ ಸಾಧನೆ ಮಾಡಿದ್ದಾರೆ. ವಿಶ್ವ ದಾಖಲೆಯ 21ನೇ ಗ್ರ್ಯಾಂಡ್‌ಸ್ಲ್ಯಾಮ್ ರಾಫಾ ಮುಡಿಗೇರಿದೆ. ಅತ್ಯಂತ ರೋಚಕವಾಗಿ ನಡೆದ ಸೆಣೆಸಾಟದಲ್ಲಿ ರಾಫೆಲ್ ನಡಾಲ್ ಈ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಈ ಮೂಲಕ ಟೆನಿಸ್ ಲೋಕದಲ್ಲಿ 21 ಗ್ರ್ಯಾಂಡ್‌ಸ್ಲ್ಯಾಮ್ ಗೆದ್ದ ಪ್ರಥಮ ಪುರುಷ ಟೆನಿಸಿಗ ಎಂಬ ಹೆಗ್ಗಳಿಕೆಯನ್ನು ನಡಾಲ್ ತಮ್ಮದಾಗಿಸಿಕೊಂಡಿದ್ದಾರೆ.

ನಂಬರ್ 2 ಶ್ರೇಯಾಂಕಿತ ರಷ್ಯಾದ ಡೇನೀಲ್ ಮಡ್ವಡೇವ್ ಹಾಗೂ 6ನೇ ಶ್ರೇಯಾಂಕದ ರಾಫೆಲ್ ನೆಡಾಲ್ ಮಧ್ಯೆ ನಡೆದ ಈ ಪಂದ್ಯದಲ್ಲಿ ಇಬ್ಬರು ಆಟಗಾರರು ಕೂಡ ತೀವ್ರ ಪೈಪೋಟಿಯನ್ನು ನಡೆಸಿದ್ದರು. ಇದರ ಪರಿಣಾಮವಾಗಿ ಪಂದ್ಯ ಐದು ಸೆಟ್‌ಗಳ ವರೆಗೆ ಸಾಗಿತ್ತು.ಸುಮಾರು ಐದೂವರೆ ಗಂಟೆಗೂ ಹೆಚ್ಚು ಕಾಲ ನಡೆದ ಪಂದ್ಯದಲ್ಲಿ ಅಂತಿಮವಾಗಿ ಸ್ಪೇನ್‌ನ ಅನುಭವಿ ಆಟಗಾರನ ಮುಂದೆ ರಷ್ಯಾದ ಮಡ್ವಡೇವ್ ಮಂಡಿಯೂರಿದರು. ರಫೆಲ್ ನಡಾಲ್ ವಿಶ್ವದಾಖಲೆ ಬರೆದರು.

U-19 ವಿಶ್ವಕಪ್: ಹಾಲಿ ಚಾಂಪಿಯನ್ ಬಾಂಗ್ಲಾದೇಶವನ್ನು ಮಣಿಸಿ ಸೆಮಿಫೈನಲ್ ಪ್ರವೇಶಿಸಿದ ಭಾರತU-19 ವಿಶ್ವಕಪ್: ಹಾಲಿ ಚಾಂಪಿಯನ್ ಬಾಂಗ್ಲಾದೇಶವನ್ನು ಮಣಿಸಿ ಸೆಮಿಫೈನಲ್ ಪ್ರವೇಶಿಸಿದ ಭಾರತ

ಮೊದಲ ಎರಡು ಸೆಟ್‌ಗಳನ್ನು ಕಳೆದುಕೊಂಡ ನಂತರ ರಾಫೆಲ್ ನಡಾಲ್ ಈ ಪ್ರಮಾಣದಲ್ಲಿ ತಿರುಗಿ ಬೀಳಲಿದ್ದಾರೆ ಎಂದು ಬಹುತೇಕ ಟೆನಿಸ್ ಪ್ರೇಮಿಗಳು ನಿರೀಕ್ಷಿಸಿರಲಿಲ್ಲ. ಆದರೆ ಹೋರಾಟಗಾರ ನಡಾಲ್ ಉಳಿದ ಮೂರು ಸೆಟ್‌ಗಳಲ್ಲಿ ಎದುರಾಳಿಯ ವಿರುದ್ಧ ರೋಮಾಂಚನಕಾರಿ ರೀತಿಯಲ್ಲಿ ತಿರುಗೇಟು ನೀಡುವಲ್ಲಿ ಯಶಸ್ವಿಯಾದರು. ಈ ಮೂಲಕ ಇತಿಹಾಸ ನಿರ್ಮಿಸಿದ್ದಾರೆ.

ಮೊದಲ ಸೆಟ್‌ನಲ್ಲಿ ಡೇನಿಲ್ ಮಡ್ವಡೇವ್ ಸಂಪೂರ್ಣ ಮೇಲುಗೈ ಸಾಧಿಸಿದ್ದರು. ಇದರ ಪರಿಣಾಮವಾಗಿ ಮಡ್ವಡೇವ್ ವಿರುದ್ಧ ನಡಾಲ್ 2-6 ಅಂತರದ ಹಿನ್ನೆಡೆ ಅನುಭವಿಸಿದರು. ಆದರೆ ಎರಡನೇ ಸೆಟ್‌ನಲ್ಲಿ ರಾಫೆಲ್ ನಡಾಲ್ ತಿರುಗೇಟು ನೀಡುವ ಹಂತಕ್ಕೆ ಬಂದಿದ್ದರೂ ಮತ್ತೆ ಕೆಲ ತಮ್ಮದೇ ತಪ್ಪುಗಳ ಪರಿಣಾಮವಾಗಿ ಟೈಬ್ರೇಕರ್ ಕಾಣಬೇಕಾಯಿತು. ಟೈ ಬ್ರೇಕರ್‌ನಲ್ಲಿ ಮಡ್ವಡೇವ್ ಎರಡನೇ ಸೆಟ್ ಕೂಡ ಗೆದ್ದುಕೊಂಡರು. ಆದರೆ ಅಂತಿಮ ಮೂರು ಸೆಟ್‌ಗಳಲ್ಲಿ ಕೂಡ ರಾಫೆಲ್ ನಡಾಲ್ ಅಮೋಘ ಪ್ರದರ್ಶಮ ನೀಡಿದರು. ಈ ಮೂಲಕ ಕೊನೇಯ ಮೂರು ಸೆಟ್ ಕೂಡ ರಾಫೆಲ್ ನಡಾಲ್ ಪಾಲಾಯಿತು. 2-6, 6-7, 6-4, 6-4, 7-5 ಅಂತರದಿಂದ ನಡಾಲ್ ಇತಿಹಾಸ ನಿರ್ಮಿಸಿದ್ದಾರೆ.

ಈ ಗೆಲುವಿನೊಂದಿಗೆ ರಾಫೆಲ್ ನಡಾಲ್ ತಮ್ಮ ಸಮಕಾಲೀನ ಶ್ರೇಷ್ಠ ಆಟಗಾರರಾದ ರೋಜರ್ ಫೆಡರರ್ ಹಾಗೂ ನೊವಾಕ್ ಜೊಕೊವಿಕ್ ಅವರನ್ನು ಹಿಂದಿಕ್ಕಿದ್ದಾರೆ. ಈ ಆಸ್ಟ್ರೇಲಿಯನ್ ಓಪನ್ ಆರಂಭಕ್ಕೂ ಮುನ್ನ ಈ ಬಿಗ್ ತ್ರಿ ಆಟಗಾರರು 20 ಗ್ರ್ಯಾಂಡ್‌ಸ್ಲ್ಯಾಮ್ ಗೆದ್ದು ಸಮ ಸಾಧನೆ ಮಾಡಿದ್ದರು. ಆದರೆ ರಾಫೆಲ್ ನಡಾಲ್ ಈಗ ರೋಜರ್ ಫೆಡರರ್ ಹಾಗೂ ನೊವಾಕ್ ಜೊಕೊವಿಕ್ ಅವರನ್ನು ಹಿಂದಿಕ್ಕಿದ್ದು 21 ಗ್ರ್ಯಾಂಡ್ ಸ್ಲ್ಯಾಮ್ ತಮ್ಮ ಮುಡಿಗೇರಿಸಿಕೊಂಡಿದ್ದಾರೆ.

ಐಪಿಎಲ್ 2022: ಧೋನಿ ಬದಲು ಜಡೇಜಾಗೆ ಸಿಎಸ್‌ಕೆ ನಾಯಕ ಸ್ಥಾನ; ಸ್ಪಷ್ಟನೆ ಕೊಟ್ಟ ಫ್ರಾಂಚೈಸಿಐಪಿಎಲ್ 2022: ಧೋನಿ ಬದಲು ಜಡೇಜಾಗೆ ಸಿಎಸ್‌ಕೆ ನಾಯಕ ಸ್ಥಾನ; ಸ್ಪಷ್ಟನೆ ಕೊಟ್ಟ ಫ್ರಾಂಚೈಸಿ

ಇನ್ನು ರಾಫೆಲ್ ನಡಾಲ್‌ಗೆ ಇದು 2ನೇ ಆಸ್ಟ್ರೇಲಿಯನ್ ಓಪನ್ ಗ್ರ್ಯಾಂಡ್ ಸ್ಲ್ಯಾಮ್ ಆಗಿದೆ. ಇದಕ್ಕೂ ಮುನ್ನ 2009ರಲ್ಲಿ ಆಸ್ಟ್ರೇಲಿಯನ್ ಓಪನ್ ಗೆದ್ದು ಬೀಗಿದ್ದರು ನಡಾಲ್. ಅದಾದ 12 ವರ್ಷಗಳ ಬಳಿಕ ಮತ್ತೊಮ್ಮೆ ಚಾಂಪಿಯನ್ ಪಟ್ಟಕ್ಕೇರಿದ್ದಾರೆ.

Story first published: Sunday, January 30, 2022, 20:38 [IST]
Other articles published on Jan 30, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X