Australia Open 2019: ಮುರಿದುಬಿತ್ತು ಸೆರೆನಾ ವಿಲಿಯಮ್ಸ್ ಕನಸು!

ಮೆಲ್ಬರ್ನ್, ಜನವರಿ 23: ಟೆನಿಸ್ ಅಂಗಣದ ಮಹಾರಾಣಿಯಾಗಿ ಮಿಂಚಬೇಕು, 24 ಗ್ರ್ಯಾಂಡ್‌ಸ್ಲ್ಯಾಮ್ ಪ್ರಶಸ್ತಿ ಜಯಿಸಿ ಮಾರ್ಗರೆಟ್ ಕೋರ್ಟ್ ವಿಶ್ವ ದಾಖಲೆಯನ್ನು ಸರಿದೂಗಿಸಬೇಕು ಎನ್ನುವ ಸೆರೆನಾ ವಿಲಿಮ್ಸ್ ಕನಸು ಮುರಿದುಬಿದ್ದಿದೆ. ಕಾರಣ, ಸೆರೆನಾ ಅವರು ಆಸ್ಟ್ರೇಲಿಯಾ ಓಪನ್ ಟೂರ್ನಿಯಲ್ಲಿ ಸೋತು ನಿರ್ಗಮಿಸಿದ್ದಾರೆ.
ಬುಧವಾರ (ಜನವರಿ 23) ನಡೆದ ಆಸ್ಟ್ರೇಲಿಯಾ ಓಪನ್ ಟೂರ್ನಿಯ ಮಹಿಳಾ ಸಿಂಗಲ್ಸ್ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಅಮೆರಿಕಾ ಬಲಾಡ್ಯೆ ಸೆರೆನಾ, ಝೆಕ್ ಸ್ಟಾರ್ ಆಟಗಾರ್ತಿ ಕರೋಲಿನಾ ಪ್ಲಿಸ್ಕೋವಾ ಎದುರು 6-4, 4-6, 7-5 ಅಂತರದಿಂದ ಹಿನ್ನಡೆ ಅನುಭವಿಸಿದರು.
37ರ ಹರೆಯದ ವಿಲಿಯಮ್ಸ್, ಹಿಂದಿನ ಪಂದ್ಯದಲ್ಲಿ ವಿಶ್ವ ನಂ. 1 ಆಟಗಾರ್ತಿ ವಿಶ್ವ ನಂ.1 ಆಟಗಾರ್ತಿ ಸಿಮೋನಾ ಹಾಲೆಪ್ ಸೋಲಿಸಿದ್ದರು. ಹೀಗಾಗಿ ಈ ಪಂದ್ಯದಲ್ಲಿ ಸೆರೆನಾ 24ನೇ ಗ್ರ್ಯಾಂಡ್‌ಸ್ಲ್ಯಾಮ್ ಜಯಿಸುವುದನ್ನು ನಿರೀಕ್ಷಿಲಾಗಿತ್ತು. ಆದರೆ ಸೆರೆನಾಗೆ ಆಸ್ಟ್ರೇಲಿಯಾ ಮಾಜಿ ಆಟಗಾರ್ತಿ ಮಾರ್ಗರೆಟ್ ದಾಖಲೆ ಸರಿದೂಗಿಸೋದು ಸಾಧ್ಯವಾಗಲಿಲ್ಲ. ಅತೀ ಹೆಚ್ಚು ಗ್ರ್ಯಾಂಡ್‌ಸ್ಲ್ಯಾಮ್ (24) ದಾಖಲೆ ಈಗಲೂ ಮಾರ್ಗರೆಟ್ ಕೋರ್ಟ್ ಹೆಸರಿನಲ್ಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications