ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ನಾನು ಟೆನಿಸ್‌ನಿಂದ ನಿವೃತ್ತಿಗೊಂಡಿಲ್ಲ, ಕಂಬ್ಯಾಕ್ ಮಾಡಲಿದ್ದೇನೆ: ಸೆರೆನಾ ವಿಲಿಯಮ್ಸ್‌ ಅಚ್ಚರಿಯ ಹೇಳಿಕೆ

Serena williams

ಅಮೆರಿಕಾದ ಟೆನಿಸ್ ಆಟಗಾರ್ತಿ, 23 ಗ್ರ್ಯಾಂಡ್‌ಸ್ಲ್ಯಾಮ್ ಪ್ರಶಸ್ತಿಗಳ ಒಡತಿ ಸೆರೆನಾ ವಿಲಿಯಮ್ಸನ್ ಅಚ್ಚರಿಕೆಯ ಹೇಳಿಕೆ ನೀಡುವ ಮೂಲಕ ಟೆನಿಸ್ ಲೋಕಕ್ಕೆ ಶಾಕ್ ನೀಡಿದ್ದಾರೆ. ಇತ್ತೀಚೆಗಷ್ಟೇ ಟೆನಿಸ್‌ಗೆ ವಿದಾಯ ಘೋಷಿಸಿದ ಸೆರೆನಾ, ಇದೀಗ ತಾನು ಟೆನಿಸ್‌ನಿಂದ ನಿವೃತ್ತಿಗೊಂಡಿಲ್ಲ ಎಂದು ಹೇಳಿಕೆ ನೀಡಿದ್ದಾರೆ.

ಯುಎಸ್ ಓಪನ್ 2022 ಪಂದ್ಯಾವಳಿಯು ಅವರ ವೃತ್ತಿಜೀವನದ ಕೊನೆಯ ಪಂದ್ಯವಾಗಿದೆ ಎಂದು ನಂಬಲಾಗಿತ್ತು. ಆದರೆ ಇದೀಗ ತಮ್ಮ ನಿವೃತ್ತಿ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ''ತಾನು ಇನ್ನೂ ಟೆನಿಸ್‌ನಿಂದ ನಿವೃತ್ತಿಯಾಗಿಲ್ಲ'' ಎಂದು ಸೆರೆನಾ ವಿಲಿಯಮ್ಸ್ ಸೋಮವಾರ ಹೇಳಿದ್ದಾರೆ.

"ನಾನು ನಿವೃತ್ತಿಯಾಗಿಲ್ಲ. ನಾನು ಹಿಂತಿರುಗುವ ಸಾಧ್ಯತೆಗಳು ತುಂಬಾ ಹೆಚ್ಚಿವೆ'' ಎಂದು ಸೆರೆನಾ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಹೀಗಾಗಿ ಆಕೆ ಮತ್ತೆ ಟೆನಿಸ್ ಕೋರ್ಟ್‌ಗೆ ಮರಳುವ ಸಾಧ್ಯತೆಗಳಿವೆ.

ಯುಎಸ್ ಓಪನ್ 3ನೇ ಸುತ್ತಿನಲ್ಲೇ ಸೋತಿದ್ದ ಸೆರೆನಾ

ಯುಎಸ್ ಓಪನ್ 3ನೇ ಸುತ್ತಿನಲ್ಲೇ ಸೋತಿದ್ದ ಸೆರೆನಾ

ಯುಎಸ್ ಓಪನ್‌ನ ಮೂರನೇ ಸುತ್ತಿನಲ್ಲಿ ಸೋಲುವ ಮೂಲಕ ಅಮೆರಿಕದ ಟೆನಿಸ್ ಲೆಜೆಂಡ್ ಸೆರೆನಾ ವಿಲಿಯಮ್ಸ್ ಟೆನಿಸ್ ಅಂಗಳಕ್ಕೆ ವಿದಾಯ ಹೇಳಲು ಬಯಸಿದ್ದರು. ಈ ಟೂರ್ನಿಯು ತನ್ನ ಕೊನೆಯ ಗ್ರ್ಯಾಂಡ್‌ಸ್ಲ್ಯಾಮ್‌ ಫೈಟ್ ಆಗಿದ್ದು, ನಿವೃತ್ತಿ ಘೋಷಿಸುವುದಾಗಿ ಈ ಹಿಂದೆಯೇ ಸೆರೆನಾ ಘೋಷಿಸಿದ್ದರು.

ಈ ಮೂಲಕ ತನ್ನ 24ನೇ ಗ್ರ್ಯಾಂಡ್‌ಸ್ಲ್ಯಾಮ್‌ ಪ್ರಶಸ್ತಿಯನ್ನ ಗೆಲ್ಲುವ ಕನಸನ್ನ ನನಸು ಮಾಡುವಲ್ಲಿ ಸಾಧ್ಯವಾಗಲಿಲ್ಲ ಎಂಬ ಕೊರಗು ಸೆರೆನಾ ವಿಲಿಯಮ್ಸನ್‌ ಕಾಡುತ್ತಿತ್ತು. ಹೀಗಾಗಿಯೇ ಸೆರೆನಾ ಹೇಗಾದ್ರೂ ಮಾಡಿ ಟೆನಿಸ್‌ಗೆ ಮರಳಬೇಕೆಂದು ಬಯಸಿದ್ದಾರೆ ಎನ್ನಲಾಗಿದೆ.

ನಾನು ನಿವೃತ್ತಿ ಎಂಬ ಪದವನ್ನು ಎಂದಿಗೂ ಇಷ್ಟಪಡಲಿಲ್ಲ ಎಂದು ಸೆರೆನಾ ವಿಲಿಯಮ್ಸ್ ಹೇಳಿದ್ದಾರೆ. ಇದು ನನಗೆ ಬದಲಾವಣೆಯಂತೆ ತೋರುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ನಾನು ಈ ಪದವನ್ನು ಹೇಗೆ ಬಳಸಬೇಕೆಂದು ಸೂಕ್ಷ್ಮವಾಗಿ ಯೋಚಿಸುತ್ತಿದ್ದೇನೆ ಎಂದಿದ್ದಾರೆ.

40ನೇ ವಯಸ್ಸಿನಲ್ಲೂ ಮಿಂಚಿನಂತೆ ಆಡಿದ ಸೆರೆನಾ

40ನೇ ವಯಸ್ಸಿನಲ್ಲೂ ಮಿಂಚಿನಂತೆ ಆಡಿದ ಸೆರೆನಾ

ಮಗುವಿಗೆ ಜನ್ಮ ನೀಡಿದರೂ ಮತ್ತೆ ಅಂಗಳಕ್ಕೆ ಬಂದು ಅಮೋಘ ಪ್ರದರ್ಶನ ನೀಡಿದ ಸೆರೆನಾ 40ರ ಹರೆಯದಲ್ಲಿ ಗ್ರ್ಯಾಂಡ್‌ಸ್ಲ್ಯಾಮ್ ಟೂರ್ನಿಗಳನ್ನ ಆಡಿದ್ದು ನಿಜಕ್ಕೂ ಹೆಮ್ಮೆಯ ವಿಷಯವಾಗಿದೆ.
ಸೆರೆನಾ ಆಸ್ಟ್ರೇಲಿಯನ್ ಓಪನ್‌ನಲ್ಲಿ ಏಳು, ಫ್ರೆಂಚ್ ಓಪನ್‌ನಲ್ಲಿ ಮೂರು, ವಿಂಬಲ್ಡನ್‌ನಲ್ಲಿ ಏಳು ಮತ್ತು ಯುಎಸ್ ಓಪನ್‌ನಲ್ಲಿ ಆರು ಪ್ರಶಸ್ತಿಗಳನ್ನು ಗೆದ್ದಿದ್ದಾರೆ.

ಹಲವು ಸಾಧನೆ ಮಾಡಿರುವ ಟೆನಿಸ್ ಲೆಜೆಂಡ್ ವಿಲಿಯಮ್ಸ್‌

ಹಲವು ಸಾಧನೆ ಮಾಡಿರುವ ಟೆನಿಸ್ ಲೆಜೆಂಡ್ ವಿಲಿಯಮ್ಸ್‌

ಟೆನಿಸ್ ಕಂಡ ಅಮೋಘ ಆಟಗಾರ್ತಿಯರಲ್ಲಿ ಸೆರೆನಾ ವಿಲಿಯಮ್ಸನ್ ಅಗ್ರಜರಾಗಿದ್ದಾರೆ. ಆಧುನಿಕ ಟೆನಿಸ್ ಯುಗದಲ್ಲಿ ಸೆರೆನಾ ದಂತಕತೆಯಾಗಿದ್ದಾರೆ. ತನ್ನ 27 ವರ್ಷಗಳ ವೃತ್ತಿಜೀವನದಲ್ಲಿ 23 ಗ್ರ್ಯಾಂಡ್ ಸ್ಲ್ಯಾಮ್ ಸಿಂಗಲ್ಸ್ ಪ್ರಶಸ್ತಿಗಳನ್ನು ಗಳಿಸಿದ ಏಕೈಕ ಆಟಗಾರ್ತಿಯಾಗಿದ್ದು, ಇವರ ಹತ್ತಿರಕ್ಕೂ ಯಾರೂ ಸುಳಿಯಲು ಸಾಧ್ಯವಾಗಿಲ್ಲ. ಅನೇಕ ಕಷ್ಟಗಳನ್ನು ದಾಟಿ ಸಾಧನೆ ಮೆರೆದಿರುವ ಸೆರೆನಾ ಟೆನಿಸ್ ಲೋಕದ ನಿಜವಾದ ಲೆಜೆಂಡ್.

ಗ್ರ್ಯಾಂಡ್‌ಸ್ಲಾಮ್ ಪ್ರಶಸ್ತಿಗೂ ಮುನ್ನ ಟೆನಿಸ್‌ನಲ್ಲಿ ಆಸ್ಟ್ರೇಲಿಯಾದ ಮಾರ್ಗರೇಟ್ ಕೋರ್ಟ್‌ ಅತಿ ಹೆಚ್ಚು ಪ್ರಶಸ್ತಿಗಳನ್ನ ಗೆದ್ದ ನಂಬರ್ ಒನ್ ಆಟಗಾರ್ತಿಯಾಗಿದ್ದಾರೆ. ಈಕೆ 24 ಪ್ರಶಸ್ತಿಗಳನ್ನ ಗೆದ್ದುಕೊಂಡಿದ್ದು ಮಹಿಳಾ ಟೆನಿಸ್ ಇತಿಹಾಸದಲ್ಲಿ ಯಾರೂ ತಲುಪದ ಸ್ಥಾನದಲ್ಲಿದ್ದಾರೆ. ಸೆರೆನಾ ಇನ್ನೊಂದು ಗ್ರ್ಯಾಂಡ್‌ಸ್ಲ್ಯಾಮ್‌ ಪ್ರಶಸ್ತಿ ಗೆದ್ದರೆ ಇವರ ಸಾಧನೆಗೆ ಸಮನಾಗಿ ನಿಲ್ಲುವ ಅವಕಾಶ ವಿದೆ. ಹೀಗಾಗಿಯೇ ಸೆರೆನಾ ವಿಲಿಯಮ್ಸನ್‌ ನಿವೃತ್ತಿ ನಿರ್ಧಾರದಿಂದ ಹಿಂದೆ ಸರಿಯಲು ಮುಂದಾಗಿದ್ದಾರೆಯೇ ಎಂಬ ಪ್ರಶ್ನೆ ಎದುರಾಗಿದೆ.

Story first published: Tuesday, October 25, 2022, 15:15 [IST]
Other articles published on Oct 25, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X