ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಫ್ರೆಂಚ್ ಓಪನ್ ಫೈನಲ್: ಜೋಕೊವಿಕ್ ಮಣಿಸಿ ರೋಜರ್ ಫೆಡರರ್‌ಗೆ ಸಮನಾದ ರಫೆಲ್ ನಡಾಲ್

Nadal wins 13th French Open title, thrashes Djokovic to go level with Federer

ವಿಶ್ವ ಟೆನ್ನಿಸ್‌ನ ದಿಗ್ಗಜ ಆಟಗಾರ ಸ್ಪೇನ್‌ನ ರಾಫೆಲ್ ನಡಾಲ್ ಫ್ರೆಂಚ್ ಓಪನ್‌ ಫೈನಲ್ ಪಂದ್ಯವನ್ನು ಭರ್ಜರಿಯಾಗಿ ಗೆದ್ದುಕೊಂಡಿದ್ದಾರೆ. ಈ ಮೂಲಕ ನಡಾಲ್ ದಾಖಲೆಯ 13ನೇ ಬಾರಿಗೆ ಫ್ರೆಂಟ್ ಓಪನ್ ಟ್ರೋಫಿಗೆ ಮುತ್ತಿಕ್ಕಿದ್ದಾರೆ. ಮಾತ್ರವಲ್ಲ ಟೆನ್ನಿಸ್ ಇತಿಹಾಸದಲ್ಲಿ ಅತಿ ಹೆಚ್ಚು ಗ್ರ್ಯಾಂಡ್ ಸ್ಲ್ಯಾಮ್ ಗೆದ್ದ ದಾಖಲೆಗೆ ಪಾತ್ರರಾಗಿರುವ ಫೆಡರರ್ ಅವರ 20ನೇ ಗ್ರ್ಯಾಂಡ್ ಸ್ಲ್ಯಾಮ್ ಸಾಧನೆಯನ್ನು ಸರಿದೂಗಿಸಿದ್ದಾರೆ.

ರಾಫೆಲ್ ನಡಾಲ್‌ಗೆ ಫ್ರೆಂಚ್ ಓಪನ್‌ನಲ್ಲಿ ಟೆನ್ನಿಸ್‌ನ ನಂಬರ್‌ 1 ಆಟಗಾರ ಸರ್ಬಿಯಾದ ನೋವಾಕ್ ಜೊಕೋವಿಕ್ ಎದುರಾಳಿಯಾಗಿದ್ದರು. ಈ ಇಬ್ಬರು ದಿಗ್ಗಜ ಆಟಗಾರರ ನಡುವೆ ಜಿದ್ದಾಜಿದ್ದಿನ ಹೋರಾಟವನ್ನು ನಿರೀಕ್ಷಿಸಲಾಗಿತ್ತು. ಆದರೆ ಆವೆಯಂಗಳದಲ್ಲಿ ತಾನೇ ಸಾರ್ವಭೌಮ ಎಂಬಂತೆ ಆಡಿದ ನಡಾಲ್ ಜೊಕೋವಿಕ್ ಅವರನ್ನು ಭಾರೀ ಅಂತರದಿಂದ ಮಣಿಸಿದರು.

ಫೆಡರರ್‌ ದಾಖಲೆ ಸರಿಗಟ್ಟಲು ರಾಫೆಲ್ ನಡಾಲ್‌ಗೆ ಇನ್ನೊಂದೇ ಹೆಜ್ಜೆಫೆಡರರ್‌ ದಾಖಲೆ ಸರಿಗಟ್ಟಲು ರಾಫೆಲ್ ನಡಾಲ್‌ಗೆ ಇನ್ನೊಂದೇ ಹೆಜ್ಜೆ

ಕೊರೊನಾ ವೈರಸ್‌ ಭೀತಿಯ ಮಧ್ಯೆ ನಡೆದ ಈ ಟೂರ್ನಿಯಲ್ಲಿ ಟೆನ್ನಿಸ್‌ನ ನಂಬರ್1 ಆಟಗಾರ ಹಾಗೂ ನಂಬರ್ 2 ಆಟಗಾರರೇ ಫೈನಲ್ ಪ್ರವೇಶಿಸಿದ್ದರು. ಹೀಗಾಗಿ ಟೆನ್ನಿಸ್ ಪ್ರೇಮಿಗಳು ಈ ಪಂದ್ಯದ ಮೇಲೆ ಸಾಕಷ್ಟು ಕುತೂಹಲದಿಂದ ಕಾಯುತ್ತಿದ್ದರು. ಆದರೆ ನಡಾಸ್ ಈ ಫೈನಲ್ ಪಂದ್ಯವನ್ನು ಕೇವಲ 2 ಗಂಟೆ 43 ನಿಮಿಷಗಳಲ್ಲಿ ಮುಕ್ತಾಯಗೊಳಿಸಿದರು. 6-0, 6-2, 7-5ರ ಭರ್ಜರಿ ಅಂತರದೊಂದಿಗೆ ರಾಫೆಲ್ ನಡಾಲ್ ಜಾಕೊವಿಕ್‌ಗೆ ಸೋಲಿನ ರುಚಿ ತೋರಿಸಿದರು.

ದಾಖಲೆಯ 13ನೇ ಬಾರಿಗೆ ಫ್ರೆಂಚ್ ಓಪನ್ ಗೆಲ್ಲುವ ಮೂಲಕ ಪ್ರೆಂಚ್ ಓಪನ್‌ನಲ್ಲಿ ಅತಿ ಹೆಚ್ಚು ಬಾರಿ ಟ್ರೋಫಿ ಗೆದ್ದ ದಾಖಲೆಯನ್ನು ನಡಾಲ್ ವಿಸ್ತರಿಸಿಕೊಂಡರು. ಈ ಮೂಲಕ ಟೆನ್ನಿಸ್ ಲೋಕದಲ್ಲಿ ವಿಶೇಷ ಸಾಧನೆಯನ್ನು ಮಾಡಿದ್ದಾರೆ.

ಟೆನಿಸ್ ಆಡುವಾಗ 7.3 ಕೋಟಿ ರೂ. ವಾಚ್ ಕಟ್ಟಿದ್ದ ರಾಫೆಲ್ ನಡಾಲ್, ಇನ್ನೂ ಡಿನ್ನರ್‌ಗೆ ಹೋಗುವಾಗ ಎಷ್ಟು ರೂ. ವಾಚ್!ಟೆನಿಸ್ ಆಡುವಾಗ 7.3 ಕೋಟಿ ರೂ. ವಾಚ್ ಕಟ್ಟಿದ್ದ ರಾಫೆಲ್ ನಡಾಲ್, ಇನ್ನೂ ಡಿನ್ನರ್‌ಗೆ ಹೋಗುವಾಗ ಎಷ್ಟು ರೂ. ವಾಚ್!

ಫ್ರೆಂಚ್ ಓಪನ್‌ ಗ್ರ್ಯಾಂಡ್ ಸ್ಲ್ಯಾಮ್ ಗೆಲ್ಲುವ ಮೂಲಕ ರಾಫೆಲ್ ನಡಾಲ್ ಟೆನ್ನಿಸ್ ಲೋಕದ ಅತಿ ದೊಡ್ಡ ದಾಖಲೆಯೊಂದನ್ನು ಸರಿದೂಗಿಸಿದ್ದಾರೆ. ಫ್ರಂಚ್ ಓಪನ್ ಗ್ರ್ಯಾಂಡ್ ಸ್ಲ್ಯಾಮ್ ಮುಡಿಗೇರಿಸಿಕೊಳ್ಳುವ ಮೂಲಕ ರಾಫೆಲ್ ನಡಾಲ್ 20 ಬಾರಿ ಗ್ರ್ಯಾಂಡ್ ಸ್ಲ್ಯಾಮ್ ಗೆದ್ದ ಸಾಧನೆ ಮಾಡಿದ್ದಾರೆ. ರೋಜರ್ ಫೆಡರರ್ ಮೊದಲ ಬಾರಿಗೆ ಈ ಸಾಧನೆಯನ್ನು ಟೆನ್ನಿಸ್ ಇತಿಹಾಸದಲ್ಲಿ ಮಾಡಿದ್ದರು. ಇದೇ ಸಮಕ್ಕೆ ನಡಾಲ್ ಈಗ ಬಂದು ನಿಂತಿದ್ದಾರೆ.

Story first published: Monday, October 12, 2020, 10:11 [IST]
Other articles published on Oct 12, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X