For Quick Alerts
ALLOW NOTIFICATIONS  
For Daily Alerts

34 ವರ್ಷಗಳ ಹಿಂದೆ ಮೆಕೆನ್ರೋ ನಿರ್ಮಿಸಿದ್ದ ದಾಖಲೆ ಮುರಿದ ನಡಾಲ್

Rafael Nadal breaks John McEnroes 34-year-old set record

ಮ್ಯಾಡ್ರಿಡ್, ಮೇ 11: ಆವೆ ಮಣ್ಣಿನ ಅಂಕಣದಲ್ಲಿ ಜಾನ್ ಮೆಕೆನ್ರೋ ಅವರು 34 ವರ್ಷಗಳ ಹಿಂದೆ ನಿರ್ಮಿಸಿದ್ದ ದಾಖಲೆಯನ್ನು ವಿಶ್ವ ನಂ. 1 ಆಟಗಾರ ರಾಫೆಲ್ ನಡಾಲ್ ಮುರಿದಿದ್ದಾರೆ. ಈ ಸಾಧನೆಯೊಂದಿಗೆ ಅವರು ಗುರುವಾರ ನಡೆದ ಮ್ಯಾಡ್ರಿಡ್ ಓಪನ್ ಸ್ಪರ್ಧೆಯಲ್ಲಿ ಕ್ವಾರ್ಟರ್ ಫೈನಲ್ ಗೆ ಪ್ರವೇಶಿದ್ದಾರೆ.

31ರ ಹರೆಯದ ನಡಾಲ್ ಪ್ರಿ-ಕ್ವಾರ್ಟರ್ ಫೈನಲ್ ನಲ್ಲಿ ಅರ್ಜೆಂಟೀನಾ ಆಟಗಾರ ಡಿಯಾಗೋ ಶ್ವಾರ್ಟ್ಜ್ಮನ್ ಅವರನ್ನು 6-3, 6-4ರ ನೇರ ಸೆಟ್ ನಿಂದ ಮಣಿಸಿ ಮುನ್ನಡೆ ಸಾಧಿಸಿದರು. ಇದು ನಡಾಲ್ ಗೆ ಲಭಿಸಿದ 50ನೇ ನೇರ ಸೆಟ್ ಜಯವಾಗಿದೆ.

ಅಮೆರಿಕಾದ ಜಾನ್ ಮೆಕೆನ್ರೋ ಅವರು 1984ರಲ್ಲಿ 49ನೇ ನೇರ ಸೆಟ್ ಜಯದೊಂದಿಗೆ ದಾಖಲೆ ಸೃಷ್ಠಿಸಿದ್ದರು. ಆ ಸಂದರ್ಭ ಅವರು ಮ್ಯಾಡ್ರಿಡ್ ಇಂಡೋರ್ ಓಪನ್ ಪ್ರಶಸ್ತಿಯನ್ನೂ ಜಯಿಸಿದ್ದರು.

ನಡಾಲ್ ಜಯಿಸಿರುವ ಈ 50 ಸೆಟ್ ದಾಖಲೆಗಳಲ್ಲಿ ಬಾರ್ಸಿಲೋನಾ ಸ್ಪರ್ಧೆಯ ಜಯ, ಮೊಂಟೆಕಾರ್ಲೋ ಮತ್ತು ಕಳೆದ ವರ್ಷದ ಫ್ರೆಂಚ್ ಓಪನ್ ಗೆಲುವುಗಳು ಸೇರಿವೆ.
ಸ್ಪೇನ್ ಬಲಾಡ್ಯ ನಡಾಲ್ ಈ ಬಾರಿ ಪ್ರಶಸ್ತಿ ಗೆದ್ದರೆ ಇದು 6ನೇ ಮ್ಯಾಡ್ರಿಡ್ ಪ್ರಶಸ್ತಿ ಗೆದ್ದಂತಾಗುತ್ತದೆ.

ಪ್ರಿ-ಕ್ವಾರ್ಟರ್ ಸ್ಪರ್ಧೆಯ ಎರಡನೇ ಗೇಮ್ ನಲ್ಲಿ ಶ್ವಾರ್ಟ್ಜ್ಮನ್ 4-4 ಅಂತರದಿಂದ ಸಮಬಲ ಸಾಧಿಸಿದಾಗ ನಡಾಲ್ ಕೊಂಚ ಭೀತಿಗೊಳಗಾದರು. ಆದರೆ ಮರುಕ್ಷಣವೇ ಎದುರಾಳಿಯ ವಿರುದ್ಧ ತಿರುಗಿ ಬಿದ್ದ ನಡಾಲ್ ಪಂದ್ಯವನ್ನು ತನ್ನದಾಗಿಸಿಕೊಂಡರು.

Story first published: Friday, May 11, 2018, 15:18 [IST]
Other articles published on May 11, 2018
POLLS
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+