ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಫೆಡರರ್ ವಿದಾಯದ ವೇಳೆ ನಡಾಲ್ ಕಣ್ಣೀರು: ಕ್ರೀಡೆಯ ಅತ್ಯಂತ ಸುಂದರ ಫೋಟೋ ಎಂದ ವಿರಾಟ್ ಕೊಹ್ಲಿ

Roger Federer retirement: Virat Kohli shares image of Rafael Nadal and Roger Federer said Most beautiful sporting picture

ಶುಕ್ರವಾರ ರಾತ್ರಿ ಟೆನಿಸ್ ಪ್ರೇಮಿಗಳ ಪಾಲಿಗೆ ಸಾಮಾನ್ಯ ದಿನವಲ್ಲ. ಅದು ಅತ್ಯಂತ ಭಾವನಾತ್ಮಕ ಕ್ಷಣಗಳಿಗೆ ಸಾಕ್ಷಿಯಾದ ಸಂದರ್ಭವದು. ಟೆನಿಸ್‌ನ ಲೋಕದ ದಿಗ್ಗಜ ಆಟಗಾರ ರೋಜರ್ ಫೆಡರರ್ ಅಂತಾರಾಷ್ಟ್ರೀಯ ಟೆನಿಸ್‌ನಲ್ಲಿ ತಮ್ಮ ಕಟ್ಟ ಕಡೆಯ ಪಂದ್ಯವನ್ನಾಡಿದರು. ಸುದೀರ್ಘ ಕಾಲದ ತಮ್ಮ ಎದುರಾಳಿ ಟೆನಿಸ್ ಲೋಕದ ಮತ್ತೋರ್ವ ಶ್ರೇಷ್ಠ ಆಟಗಾರ ರಾಫೆಲ್ ನಡಾಲ್ ಜೊತೆಯಾಗಿ ತಮ್ಮ ಅಂತಿಮ ಪಂದ್ಯವನ್ನಾಡಿದ ಫೆಡರರ್ ಭಾವನಾತ್ಮಕವಾಗಿ ವಿದಾಯ ಹೇಳಿದ್ದಾರೆ.

ಈ ಪಂದ್ಯದ ಮುಕ್ತಾಯದ ಬಳಿಕ ತಮ್ಮ ಸುದೀರ್ಘ ಕಾಲದ ವೃತ್ತಿ ಜೀವನವನ್ನು ನೆನಪಿಸಿಕೊಂಡು ದಿಗ್ಗಜ ರೋಜರ್ ಫೆಡರರ್ ಕಣ್ಣೀರು ಹಾಕಿದರು. ಈ ಸಂದರ್ಭದಲ್ಲಿ ಜೊತೆಯಲ್ಲಿಯೇ ಕುಳಿತಿದ್ದ ದೀರ್ಘ ಕಾಲದ ಎದುರಾಳಿ ರಾಫೆಲ್ ನಡಾಲ್ ಕೂಡ ಭಾವನಾತ್ಮಕವಾಗಿ ಸ್ಪಂದಿಸಿದ್ದು ಕಣ್ಣೀರು ಸುರಿಸಿದ್ದಾರೆ. ದಿಗ್ಗಜ ಆಟಗಾರರಿಬ್ಬರ ಈ ಭಾವನಾತ್ಮಕ ಸಂದರ್ಭಕ್ಕೆ ಟೆನಿಸ್ ಪ್ರೇಮಿಗಳು ಕೂಡ ಭಾವನಾತ್ಮಕವಾಗಿ ಪ್ರತಿಕ್ರಿಯೆ ನೀಡಿದ್ದಾರೆ.

ಅಂತಿಮ ಪಂದ್ಯದ ಬಳಿಕ ಕಣ್ಣೀರಿಟ್ಟ ಟೆನಿಸ್ ಲೆಜೆಂಡ್ ರೋಜರ್ ಫೆಡರರ್: ಗೆಳೆಯನನ್ನು ಬೀಳ್ಕೊಟ್ಟ ರಾಫಾಅಂತಿಮ ಪಂದ್ಯದ ಬಳಿಕ ಕಣ್ಣೀರಿಟ್ಟ ಟೆನಿಸ್ ಲೆಜೆಂಡ್ ರೋಜರ್ ಫೆಡರರ್: ಗೆಳೆಯನನ್ನು ಬೀಳ್ಕೊಟ್ಟ ರಾಫಾ

ಫೆಡರರ್ ಜೊತೆ ನಡಾಲ್ ಕಣ್ಣೀರು

ಫೆಡರರ್ ಜೊತೆ ನಡಾಲ್ ಕಣ್ಣೀರು

ರೋಜರ್ ಫೆಡರರ್ ಅವರ ವಿದಾಯದ ಪಂದ್ಯದ ಬಳಿಕ ಸ್ವತಃ ರೋಜರ್ ಫೆಡರರ್ ಹಾಗೂ ರಾಫೆಲ್ ನಡಾಲ್ ಕಣ್ಣೀರು ಹಾಕುತ್ತಿರುವ ಫೋಟೋ ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ. ಈ ಭಾವನಾತ್ಮಕ ಫೋಟೋವನ್ನು ಹಂಚಿಕೊಂಡ ವಿರಾಟ್ ಕೊಹ್ಲಿ ತಾವು ಕುಡ ಭಾವನಾತ್ಮಕವಾಗಿ ಬರವೊಂದನ್ನು ಬರೆದುಕೊಂಡಿದ್ದಾರೆ. ಈ ಸಂದರ್ಭದಲ್ಲಿ ಅವರು ದಿಗ್ಗಜ ಆಟಗಾರರ ವೈರಲ್ ಫೋಟೋವನ್ನು ಹಂಚಿಕೊಂಡಿರುವ ಕೊಹ್ಲಿ ತನ್ನ ಪ್ರಕಾರ ಕ್ರೀಡಾ ಲೋಕದ ಅತ್ಯಂತ ಸುಂದರ ಫೋಟೋ ಎಂದಿದ್ದಾರೆ.

ಕೊಹ್ಲಿ ಭಾವುಕ ನುಡಿ

"ಪರಸ್ಪರ ಎದುರಾಳಿಗಳಿಗಳು ಇಷ್ಟು ಭಾವನಾತ್ಮಕವಾಗಿರುತ್ತಾರೆ ಎಂಬುದನ್ನು ಯಾರು ಯೋಚಿಸಲು ಸಾಧ್ಯ. ಕ್ರೀಡೆಯ ಸೌಂದರ್ಯವೇ ಇದು. ನನ್ನ ಪಾಲಿಗೆ ಇದೇ ಕ್ರೀಡೆಯ ಅತ್ಯಂತ ಸುಂದರವಾದ ಫೋಟೋ. ಎದುರಾಳಿ ಕೂಡ ನಿಮಗಾಗಿ ಕಣ್ಣೀರಿಡುತ್ತಾನೆ ಎಂದಾದರೆ ದೇವರು ನೀಡಿದ ಪ್ರತಿಭೆಯಲ್ಲಿ ಏನು ಮಾಡಲು ಸಾಧ್ಯ ಎಂಬುದು ತಿಳಿಯುತ್ತದೆ. ಹೇಳಲು ಬೆರೇನಿಲ್ಲ, ಆದರೆ ಇಬ್ಬರ ಮೇಲೂ ಬಹಳ ಗೌರವವಿದೆ" ಎಂದು ವಿರಾಟ್ ಕೊಹ್ಲಿ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ವೈಭವದ ಟೆನಿಸ್ ವೃತ್ತಿ ಜೀವನಕ್ಕೆ ತೆರೆ ಎಳೆದ ಫೆಡರರ್

ವೈಭವದ ಟೆನಿಸ್ ವೃತ್ತಿ ಜೀವನಕ್ಕೆ ತೆರೆ ಎಳೆದ ಫೆಡರರ್

ಶುಕ್ರವಾರ ರಾತ್ರಿ ರೋಜರ್ ಫಡರರ್ ವೃತ್ತಿ ಜೀವನದ ಅಂತಿಮ ಟೆನಿಸ್ ಪಂದ್ಯವನ್ನಾಡಿದ್ದು ಈ ಸಂದರ್ಭದಲ್ಲಿ ಟೆನಿಸ್ ಲೋಕದ ಕೋಟ್ಯಂತರ ಅಭಿಮಾನಿಗಳು ಈ ಪಂದ್ಯವನ್ನು ಕಣ್ತುಂಬಿಕೊಂಡಿದ್ದಾರೆ . ಲೇವರ್ ಕಪ್‌ನಲ್ಲಿ ರಾಫೆಲ್ ನಡಾಲ್ ಜೊತೆಗೂಡಿ ಫೆಡರರ್ ಆಡಿದ್ದರೂ ಈ ಪಂದ್ಯದಲ್ಲಿ ಸೋಲುವ ಮೂಲಕ ಅಂತಿಮ ಪಂದ್ಯದಲ್ಲಿ ನಿರಾಸೆ ಅನುಭವಿಸಿದರು. ಆದರೆ ಕ್ರೀಡಾಂಗಣದಲ್ಲಿ ಕಿಕ್ಕಿರಿದು ತುಂಬಿದ್ದ ಪ್ರೇಕ್ಷಕರು ಫೆಡರರ್‌ಗೆ ವಿಶೇಷ ರೀತಿಯಲ್ಲಿ ವಿದಾಯವನ್ನು ಹೇಳುವ ಮೂಲಕ ಈ ಕ್ಷಣವನ್ನು ವಿಶೇಷವಾಗಿಸಿದರು.

Story first published: Saturday, September 24, 2022, 17:42 [IST]
Other articles published on Sep 24, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X