ಕ್ಷಯ ರೋಗದ ಬಗ್ಗೆ ಜಾಗೃತಿ ಮೂಡಿಸುವ ವೆಬ್ ಸಿರೀಸ್‌ನಲ್ಲಿ ಸಾನಿಯಾ ಮಿರ್ಜಾ ನಟನೆ

ಭಾರತೀಯ ಟೆನ್ನಿಸ್ ಲೋಕದ ತಾರೆ ಸಾನಿಯಾ ಮಿರ್ಜಾ ನಟನಾ ಕ್ಷೇತ್ರದತ್ತ ಮುಖಮಾಡಿದ್ದಾರೆ. ವೆಬ್ ಸಿರೀಸ್‌ನಲ್ಲಿ ಸಾನಿಯಾ ಮಿರ್ಜಾ ನಟಿಸಲಿದ್ದಾರೆ. ಆದರೆ ಈ ವೆಬ್‌ಸಿರೀಸ್ ಕ್ಷಯ ರೋಗದ ವಿರುದ್ಧ ಜಾಗೃತಿಯನ್ನು ಮೂಡಿಸುವ ಕಥಾಹಂದರವನ್ನು ಹೊಂದಿದೆ.

ಈ ಬಗ್ಗೆ ಸಾನಿಯಾ ಮಿರ್ಜಾ ಪ್ರತಿಕ್ರಿಯಿಸಿದ್ದಾರೆ. "ಕ್ಷಯ ರೋಗ ನಮ್ಮ ದೇಶದ ಅತ್ಯಂತ ದೀರ್ಘ ಕಾಲದ ಆರೋಗ್ಯ ಸಮಸ್ಯೆಗಳಲ್ಲಿ ಒಂದಾಗಿದೆ. ದೇಶದಲ್ಲಿ ಒಟ್ಟಾರೆ ಕ್ಷಯ ರೋಗಿಗಳಲ್ಲಿ 30 ವರ್ಷ ವಯಸ್ಸಿಗಿಂತ ಕಡಿಮೆ ವಯಸ್ಸಿನವರು ಅರ್ಧದಷ್ಟಿದ್ದಾರೆ. ಇದನ್ನು ನಿಯಂತ್ರಿಸಲು ಹಾಗೂ ಈ ಬಗ್ಗೆ ತಪ್ಪು ಭಾವನೆಯನ್ನು ಹೋಗಲಾಡಿಲು ಶೀಘ್ರವಾಗಿ ಕ್ರಮವನ್ನು ತೆಗೆದುಕೊಳ್ಳುವ ಅಗತ್ಯವಿದೆ" ಎಂದು ಸಾನಿಯಾ ಮಿರ್ಜಾ ಹೇಳಿದ್ದಾರೆ.

ಪರಸ್ಪರ ಗೌರವಿಸುವ ಫೆಡರರ್, ನಡಾಲ್‌ಗೆ ಸಾನಿಯಾ ಮಿರ್ಜಾ ಶ್ಲಾಘನೆ

ಇನ್ನು ಇದೇ ಸಂದರ್ಭದಲ್ಲಿ ಅವರು ಯುವ ಜನತೆಯನ್ನು ಕ್ಷಯ ರೋಗದ ಬಗ್ಗೆ ಎಚ್ಚರಿಕೆಯನ್ನು ನೀಡಲು ವೆಬ್ ಸಿರೀಸ್ ಭಿನ್ನವಾದ ಹಾಗೂ ಪರಿಣಾಮಕಾರಿ ಮಾಧ್ಯಮ ಎಂದು ಸಾನಿಯಾ ಮಿರ್ಜಾ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. 'ಎಂಟಿವಿ ನಿಶೇಧ್ ಅಲೋನ್ ಟುಗೆದರ್' ಎಂದು ವೆಬ್ ಸಿರೀಸ್‌ನಲ್ಲಿ ಸಾನಿಯಾ ಮಿರ್ಜಾ ನಟಿಸುತ್ತಿದ್ದಾರೆ.

ಕ್ಷಯ ರೋಗದ ಅಪಾಯಗಳು ಯಾವಾಗಲೂ ಇರುತ್ತದೆ. ಕೊರೊನಾ ವೈಸರ್‌ನಾ ಕಾರಣದಿಂದಾಗಿ ಈ ವೈರಸ್‌ನ ಪರಿಣಾಮ ಮತ್ತಷ್ಟು ಹೆಚ್ಚಾಗಿದೆ. ಈಗ ಕ್ಷಯ ರೋಗದ ವಿರುದ್ದ ಹೋರಾಡುವುದು ಹಿಂದೆಂದಿಗಿಂತಲೂ ಕಠಿಣವಾಗಿದೆ. ಹಾಗಾಗಿ ನಾನು ಈ ವೆಬ್‌ ಸರೀಸ್‌ನಲ್ಲಿ ನಟೆಸಲು ಪ್ರೇರನೆ ನೀಡಿತು. ನಾನು ಈ ಚಿತ್ರದ ಭಾಗವಾಗಿರುವುದು ಟಿಬಿ ವಿರುದ್ದದ ಈ ಹೋರಾಟದಲ್ಲಿ ಸ್ವಲ್ಪ ಮಟ್ಟಿಗಾದರೂ ನೆರವಾಗಬಹುದು ಹಾಗೂ ಸಕಾರಾತ್ಮಕ ಬದಲಾವಣೆಯನ್ನು ತರಬಹುದು ಎಂದು ಭಾವಿಸುತ್ತೇನೆ ಸಾನಿಯಾ ಮಿರ್ಜಾ ಹೇಳಿದ್ದಾರೆ.

ಫುಟ್ಬಾಲ್: 90 ವರ್ಷಗಳಲ್ಲಿ ಅತಿ ದೊಡ್ಡ ಸೋಲು ಕಂಡ ಜರ್ಮನಿ

ಈ ವೆಬ್ ಸಿರೀಸ್ 5 ಎಪಿಸೋಡ್‌ಗಳನ್ನು ಹೊಂದಿದೆ. ಎಂಟವಿ ಇಂಡಿಯಾ ಮತ್ತು ಎಂಟಿವಿ ನಿಶೇಧ್‌ನ ಸಾಮಾಜಿಕ ಜಾಲತಾಣಗಳಲ್ಲಿ ಇದು ಬಿಡುಗಡೆಯಾಗಲಿದೆ. ನವೆಂರ್ ತಿಂಗಳ ಕೊನೆಯ ವಾರದಲ್ಲಿ ಈ ವೆಬ್ ಸಿರೀಸ್ ಬಿಡುಗಡೆಗೊಳ್ಳುವ ಸಂಭವವಿದೆ.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Thursday, November 19, 2020, 16:06 [IST]
Other articles published on Nov 19, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X