ಹೆಣ್ಣು ಮಗುವಿಗೆ ಜನ್ಮವಿತ್ತ ಟೆನಿಸ್ ತಾರೆ ಸೆರೆನಾ ವಿಲಿಯಮ್ಸ್

Posted By:

ಲಾಸ್ ಏಂಜಲೀಸ್, ಸೆಪ್ಟೆಂಬರ್ 02 : 23 ಬಾರಿ ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿ ವಿಜೇತೆ ವಿಶ್ವದ ನಂ.1 ಟೆನಿಸ್ ತಾರೆ ಅಮೆರಿಕಾದ ಸೆರೆನಾ ವಿಲಿಯಮ್ಸ್ ತಾಯಿಯಾಗಿದ್ದಾರೆ.

ತಾಯಿ ಆಗ್ತಾ ಇದ್ದಾಳೆ ಸೆರೆನಾ ವಿಲಿಯಮ್ಸ್

35 ವರ್ಷದ ಸೆರೆನಾ ಶುಕ್ರವಾರ ಫ್ಲೋರಿಡಾದ ಆಸ್ಪತ್ರೆಯೊಂದರಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಸೆರೆನಾ ಮಗುವಿನ ಕುರಿತು ವೀನಸ್ ವಿಲಿಯಮ್ಸ್ ಪ್ರತಿಕ್ರಯಿಸಿದ್ದು, ನನಗೆ ತುಂಬಾ ಖುಷಿಯಾಗಿದೆ. ಸಂತೋಷವನ್ನು ಮಾತಿನಿಂದ ಹೇಳಲು ಸಾಧ್ಯವಿಲ್ಲ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

Serena Williams gives birth to baby girl

ಸಾಮಾಜಿಕ ಜಾಲತಾಣಗಳಲ್ಲಿ ಸೆರೆನಾ ತಾನು ಗರ್ಭಿಣಿಯಾದ ಸಂಗತಿಯನ್ನು ಅಭಿಮಾನಿಗಳ ಜತೆ ಹಂಚಿಕೊಂಡಿದ್ದರು. ಅಷ್ಟೇ ಅಲ್ಲದೇ ಗರ್ಭಿಣಿ ಸಂದರ್ಭದಲ್ಲಿ ನಿಯತಕಾಲಿಕೆಯೊಂದರ ಕವರ್ ಪೇಜ್ ಗಾಗಿ ಫೋಸ್ ನೀಡಿದ್ದರು.

ಈ ವರ್ಷ ಮೈದಾನದಿಂದ ದೂರ ಉಳಿಯಲಿದ್ದು, 2018ರಲ್ಲಿ ಅವರ ಪುನರಾಗಮನವಾಗಲಿದೆ'' ಎಂದು ಸೆರೆನಾ ಅವರ ವಕ್ತಾರ ಕೆಲ್ಲಿ ಬುಷ್ ನೊವಾಕ್ ತಿಳಿಸಿದ್ದರು.

Story first published: Saturday, September 2, 2017, 12:34 [IST]
Other articles published on Sep 2, 2017

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ