ಮಾಜಿ ಸಿಎಂ ಎಸ್‌ಎಂ ಕೃಷ್ಣ ಟೆನಿಸ್ ಕೃಷ್ಣ ಆಗಿದ್ದರ ಕತೆ ಬಿಚ್ಚಿಟ್ಟ 'ಸ್ಮೃತಿವಾಹಿನಿ'!

Smritivahini revealed SM Krishna and his love about Tennis

ಬೆಂಗಳೂರು, ಜನವರಿ 6: ಎಸ್ಎಂ ಕೃಷ್ಣ ಅವರು ಕರ್ನಾಟಕದ ಮುಖ್ಯಮಂತ್ರಿಯಾಗಿದ್ದರು, ವಿದೇಶಾಂಗ ಸಚಿವರಾಗಿದ್ದರು, ಮಹಾರಾಷ್ಟ್ರದ ಗವರ್ನರ್ ಆಗಿದ್ದರು ಎಂಬಿತ್ಯಾದಿ ಸಂಗತಿಗಳು ಹೆಚ್ಚಿನವರಿಗೆ ಗೊತ್ತೇಯಿದೆ. ಆದರೆ ಕೃಷ್ಣ ಅವರಿಗೆ 'ಟೆನಿಸ್ ಕೃಷ್ಣ' ಎಂಬ ಅಡ್ಡ ಹೆಸರೂ ಇತ್ತನ್ನೋ ವಿಚಾರ ಹೆಚ್ಚಿನವರಿಗೆ ಗೊತ್ತಿಲ್ಲ.

ಭಾರತ vs ಶ್ರೀಲಂಕಾ 2nd ಟಿ20: ಪಂದ್ಯಕ್ಕೂ ಮುನ್ನ ತಿಳಿಯಲೇಬೇಕಾದ ಪ್ರಮುಖಾಂಶಗಳು

ಎಂಎಸ್ ಕೃಷ್ಣ ಅವರಿಗೆ ಟೆನಿಸ್ ಕೃಷ್ಣ ಎಂಬ ಹೆಸರು ಬರಲು ಕಾರಣವಿದೆ. ಕೃಷ್ಣಾಗೆ ಟೆನಿಸ್‌ ಆಟದ ಬಗೆಯಿದ್ದ ಪ್ರೀತಿಗಾಗಿ ಅವರನ್ನ ಪ್ರೀತಿಯಿಂದ 'ಟೆನಿಸ್ ಕೃಷ್ಣ' ಎಂದು ಕರೆಯಲಾಗುತ್ತಿತ್ತಂತೆ. ಟೆನಿಸ್ ಕ್ರೀಡೆಯ ಬಗ್ಗೆ ಕೃಷ್ಣ ಅವರಿಗಿದ್ದ ಒಲವಿನ ಬಗ್ಗೆ ಕೃಷ್ಣ ಅವರ ಆತ್ಮಚರಿತ್ರೆ 'ಸ್ಮೃತಿವಾಹಿನಿ'ಯಲ್ಲಿ ಉಲ್ಲೇಖಿಸಲಾಗಿದೆ.

India vs Sri Lanka: ಇಂದೋರ್‌ನಲ್ಲಿ 2ನೇ ಟಿ20 ನಡೆಯುತ್ತಾ, ಇಲ್ವಾ?!

ಎಸ್‌ಎಂ ಕೃಷ್ಣ ಅವರಿಗೆ ಟೆನಿಸ್ ಆಟದ ಬಗೆಯಿದ್ದ ಆಸಕ್ತಿ, ಸ್ವತಃ ಅವರು ಟೆನಿಸ್‌ನಲ್ಲಿ ತೊಡಗಿಕೊಳ್ಳುತ್ತಿದ್ದ ಬಗ್ಗೆ ಹಲವಾರು ಕುತೂಹಲಕಾರಿ ಸಂಗತಿಗಳನ್ನು 'ಸ್ಮೃತಿವಾಹಿನಿ'ಯಲ್ಲಿ ಹೇಳಲಾಗಿದೆ. ಅಲ್ಲಿಂದ ಹೆಕ್ಕಿದ ಒಂದಿಷ್ಟು ವಿಚಾರಗಳು ಇಲ್ಲಿವೆ.

ಸ್ಮೃತಿವಾಹಿನಿ ಕೃತಿಯ ಬಗ್ಗೆ

ಸ್ಮೃತಿವಾಹಿನಿ ಕೃತಿಯ ಬಗ್ಗೆ

ಎಂಎಸ್ ಕೃಷ್ಣ ಅವರೊಡನೆ ಡಾ. ಪಾವಗಡ ಪ್ರಕಾಶ್ ರಾವ್ ನಡೆಸಿದ ಸಂದರ್ಶವನ್ನು ಆಧರಿಸಿ ರೂಪುಗೊಂಡಿರುವ ಕೃತಿ ಸ್ಮೃತಿವಾಹಿನಿ. ಡಾ. ಕೆಆರ್ ಕಮಲೇಶ್ ಅವರ ಸೊಗಸಾದ ನಿರೂಪಣೆ ಈ ಕೃತಿಯಲ್ಲಿದೆ. ಇಡೀ ಕೃತಿ ಎಂಎಸ್ ಕೃಷ್ಣ ಅವರ ಬದುಕಿನ ಪರಿ, ಅವರ ಆಸಕ್ತಿಯ ಕ್ಷೇತ್ರಗಳು, ಸಾಧನೆಗಳ ಮೆಟ್ಟಿಲುಗಳನ್ನು ಪರಿಚಯಿಸುತ್ತವೆ. ಅಲ್ಲದೆ ಕೃಷ್ಣ ಅವರು ಕರ್ನಾಟಕ ಮುಖ್ಯಮಂತ್ರಿಯಾಗಿದ್ದಾಗಿನ ಕೆಲ ಕುತೂಹಲಕಾರಿ ಸಂಗತಿಗಳನ್ನೂ ಬಿಚ್ಚಿಡುತ್ತದೆ.

ಟೆನಿಸ್ ಅಭಿವೃದ್ಧಿಗೆ ಸ್ಪಂದನೆ

ಟೆನಿಸ್ ಅಭಿವೃದ್ಧಿಗೆ ಸ್ಪಂದನೆ

ಸೋಮನಹಳ್ಳಿ ಮಲ್ಲಯ್ಯ ಕೃಷ್ಣ ಅವರು ವಿದ್ಯಾರ್ಥಿ ಜೀವನದಿಂದಲೂ ಟೆನಿಸ್ ಕ್ರೀಡೆಗೆ ತನ್ನನ್ನು ಅರ್ಪಿಸಿಕೊಂಡಿದ್ದವರು. ಕರ್ನಾಟಕದ ಮುಖ್ಯಮಂತ್ರಿಗಳಾಗಿದ್ದಾಗ ಕರ್ನಾಟಕ ಟೆನಿಸ್ ಅಸೋಸಿಯೇಷನ್ ಪದಾಧಿಕಾರಿಗಳಾದ ಎಸ್ ಸುಂದರ್‌ರಾಜ್‌, ಆರ್ ತಿಪ್ಪೇಸ್ವಾಮಿ ಮತ್ತಿತರರು ಕೃಷ್ಣ ಅವರನ್ನು ಭೇಟಿ ಮಾಡಿ ಬೆಂಗಳೂರಿನಲ್ಲಿ ಟೆನಿಸ್ ಕ್ರೀಡೆಯ ಅಭಿವೃದ್ಧಿಗಾಗಿ ಏನಾದರೂ ಮಾಡಬೇಕೆಂದು ಕೇಳಿಕೊಂಡಿದ್ದರು. ಸ್ವತಃ ಟೆನಿಸ್‌ ಆಟದಲ್ಲಿ ಆಸಕ್ತಿಯಿದ್ದಿದ್ದರಿಂದ ಕೃಷ್ಣ ಅವರು ಅದಕ್ಕೆ ಸ್ಪಂದಿಸಿದ್ದರು.

ಟೆನಿಸ್ ಬಗೆಗಿನ ಪ್ರೀತಿ

ಟೆನಿಸ್ ಬಗೆಗಿನ ಪ್ರೀತಿ

ಎಸ್‌ಎಂ ಕೃಷ್ಣ ಅವರು ಟೆನಿಸ್ ಕ್ರೀಡೆಯ ಮೂಲಕ ತಮ್ಮ ಪರಿಪೂರ್ಣ ವ್ಯಕ್ತಿತ್ವ ರೂಪಿಸಿಕೊಳ್ಳಲು ಪ್ರಯತ್ನ ಮಾಡಿದ್ದಾರೆ. ಟೆನಿಸ್ ಆಟಗಾರರಲ್ಲಿರಬೇಕಾದ ಏಕಾಗ್ರತೆ, ಶ್ರದ್ಧೆ, ಅಭ್ಯಾಸ ಹಾಗು ತನ್ಮಯತೆ ಅವರಲ್ಲಿತ್ತು. ಪ್ರತಿ ಭಾನುವಾರ ಬೆಂಗಳೂರಿನ ಕರ್ನಾಟಕ ಸ್ಟೇಟ್ ಲಾನ್ ಟೆನಿಸ್ ಅಸೋಸಿಯೇಶನ್ (ಕೆಎಸ್‌ಎಲ್‌ಟಿಎ) ಸ್ಟೇಡಿಯಂಗೆ ಬಂದು ಯಾವುದಾದರೂ ಮ್ಯಾಚ್‌ಗಳಲ್ಲಿ ಪಾಲ್ಗೊಳ್ಳುತ್ತಿದ್ದರು. ವಿಂಬಲ್ಡನ್ ಪಂದ್ಯಗಳು ಎಲ್ಲೇ ನಡೆದರೂ ಕೃಷ್ಣ ಅಲ್ಲಿಗೆ ತೆರಳಿ ಪಂದ್ಯ ವೀಕ್ಷಿಸುತ್ತಿದ್ದರು. ಸಮಯದ ಅಭಾವವಾದಾಗ ದೂರದರ್ಶನದ ಮೂಲಕವಾದರೂ ಪಂದ್ಯ ವೀಕ್ಷಿಸುವುದನ್ನು ಮರೆಯುತ್ತಿರಲಿಲ್ಲ.

ಗುಣಮಟ್ಟದ ಟೆನಿಸ್ ಕ್ರೀಡಾಂಗಣ

ಗುಣಮಟ್ಟದ ಟೆನಿಸ್ ಕ್ರೀಡಾಂಗಣ

2000ನೇ ಇಸವಿಯಲ್ಲಿ ಅಂದರೆ ಎಸ್‌ಎಂಕೆ ಕಾಲದಲ್ಲಿ ಬೆಂಗಳೂರಿನಲ್ಲಿ ಇಂಟರ್ ನ್ಯಾಷನಲ್ ಗುಣಮಟ್ಟದ ಟೆನಿಸ್ ಕ್ರೀಡಾಂಗಣ ಸಿದ್ಧವಾಯಿತು. ಏಷ್ಯಾ ಖಂಡದಲ್ಲಿಯೇ ಮೊದಲ ಬಾರಿಗೆ ATP World Doubles Championship-2000ನ್ನು ಬೆಂಗಳೂರಿನಲ್ಲಿ ಆಯೋಜಿಸಲಾಯಿತು. ಏಷ್ಯಾ ಖಂಡದಲ್ಲಿ ಮೊತ್ತ ಮೊದಲ ಬಾರಿಗೆ ದಕ್ಷಿಣ ಭಾರತದಲ್ಲಿ ಈ ಕ್ರೀಡಾಕೂಟ ಆಯೋಜನೆಗೊಂಡಿದ್ದು ಚರಿತ್ರಾರ್ಹ ವಿಷಯವಾಗಿದೆ. ಇದಕ್ಕೆ ಮುಖ್ಯ ಕಾರಣ ಆಗ ಕೆಎಸ್‌ಎಲ್‌ಟಿಎ ಅಧ್ಯಕ್ಷರಾಗಿದ್ದ ಎಸ್‌ಎಂ ಕೃಷ್ಣ ಅವರು. 90 ವರ್ಷಗಳಿಂದ ಆಗದ ಮಹತ್ಕಾರ್ಯವನ್ನು ಎಸ್‌ಎಂ ಕೃಷ್ಣ ಅಧ್ಯಕ್ಷರಾಗಿದ್ದಾಗ ನೆರವೇರಿಸಿದ್ದರು.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts

Story first published: Monday, January 6, 2020, 23:49 [IST]
Other articles published on Jan 6, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Mykhel sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Mykhel website. However, you can change your cookie settings at any time. Learn more